ನನ್ನ ಗೌಪ್ಯತೆಯನ್ನು Google ಹೇಗೆ ರಕ್ಷಿಸುತ್ತದೆ ಹಾಗೂ ನನ್ನ ಮಾಹಿತಿಯನ್ನು ಹೇಗೆ ಸುರಕ್ಷಿತವಾಗಿರಿಸುತ್ತದೆ?

ಸುರಕ್ಷತೆ ಹಾಗೂ ಗೌಪ್ಯತೆ ಎಂಬುದು ನಿಮಗೆ ಅತ್ಯವಶ್ಯಕ ಎಂಬುದು ನಮಗೆ ತಿಳಿದಿದೆ – ಹಾಗೆಯೇ ಅವು ನಮಗೂ ಅಷ್ಟೇ ಮುಖ್ಯವಾದವುಗಳು. ಅಭೇದ್ಯ ಭದ್ರತೆ ಒದಗಿಸುವುದು, ನಿಮ್ಮ ಮಾಹಿತಿ ಸುರಕ್ಷಿತವಾಗಿದೆ ಎಂಬ ಭರವಸೆ ಒದಗಿಸುವುದು ಹಾಗೂ ನಿಮಗೆ ಬೇಕಾದ ಸಮಯದಲ್ಲಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುವುದು ನಮ್ಮ ಆದ್ಯತೆ.

ಪ್ರಬಲ ಭದ್ರತೆ, ನಿಮ್ಮ ಗೌಪ್ಯತೆ ರಕ್ಷಣೆಯನ್ನು ಖಚಿತಪಡಿಸಲು ಮತ್ತು Google ಅನ್ನು ನಿಮಗಾಗಿ ಇನ್ನೂ ಹೆಚ್ಚು ಪರಿಣಾಮಕಾರಿ ಮತ್ತು ಸಮರ್ಥವಾಗಿಸಲು ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಭದ್ರತೆಯ ಸಲುವಾಗಿ ಪ್ರತಿ ವರ್ಷ ನೂರಾರು ಮಿಲಿಯನ್ ಡಾಲರ್‌ಗಳನ್ನು ವಿನಿಯೋಗಿಸುತ್ತೇವೆ ಮತ್ತು ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳಲು ಡೇಟಾ ಭದ್ರತೆಯಲ್ಲಿ ವಿಶ್ವ ಪ್ರಸಿದ್ಧ ತಜ್ಞರನ್ನು ನೇಮಿಸಿಕೊಳ್ಳುತ್ತೇವೆ. ಹಾಗೆಯೇ, Google ಡ್ಯಾಶ್‌ಬೋರ್ಡ್, 2-ಹಂತದ ಪರಿಶೀಲನೆ ಮತ್ತು ವೈಯಕ್ತೀಕರಿಸಿದ ಜಾಹೀರಾತು ಸೆಟ್ಟಿಂಗ್‌ಗಳಂತಹ ಬಳಸಲು ಸುಲಭವಾದ ಗೌಪ್ಯತೆ ಮತ್ತು ಭದ್ರತೆ ಪರಿಕರಗಳನ್ನು ಸಹ ನಾವು ರಚಿಸಿದ್ದೇವೆ. ಇದರಿಂದ ನೀವು Google ಜೊತೆಗೆ ಹಂಚಿಕೊಳ್ಳುವ ಮಾಹಿತಿಗೆ ಬಂದಾಗ, ನೀವು ನಿಯಂತ್ರಣದಲ್ಲಿರುತ್ತೀರಿ.

ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ಆನ್‌ಲೈನ್‌ನಲ್ಲಿ ಹೇಗೆ ರಕ್ಷಿಸಬಹುದು ಎಂಬುದು ಸೇರಿದಂತೆ ಆನ್‌ಲೈನ್ ಸುರಕ್ಷತೆ ಹಾಗೂ ಭದ್ರತೆ ಕುರಿತು ನೀವು Google ಸುರಕ್ಷತೆ ಕೇಂದ್ರದಲ್ಲಿ ತಿಳಿದುಕೊಳ್ಳಬಹುದು.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ಖಾಸಗಿ ಹಾಗೂ ಸುರಕ್ಷಿತವಾಗಿರಿಸುತ್ತೇವೆ — ಮತ್ತು ನಿಮ್ಮನ್ನು ಹೇಗೆ ನಿಯಂತ್ರಣದಲ್ಲಿ ಇರಿಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಖಾತೆಯು ಪ್ರದೇಶವೊಂದರ ಜೊತೆಗೆ ಏಕೆ ಸಂಯೋಜನೆಗೊಂಡಿದೆ?

ನಿಮ್ಮ ಖಾತೆಯು ಸೇವಾ ನಿಯಮಗಳಲ್ಲಿನ ಪ್ರದೇಶವೊಂದರ (ಅಥವಾ ಭೂಪ್ರದೇಶವೊಂದರ) ಜೊತೆಗೆ ಸಂಯೋಜನೆಗೊಂಡಿದೆ, ಇದರಿಂದ ನಾವು ಹಲವಾರು ವಿಷಯಗಳ ಕುರಿತು ನಿರ್ಧರಿಸಬಹುದು:

  1. ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ಸೇವೆಗಳನ್ನು ಒದಗಿಸುವ ಮತ್ತು ಅನ್ವಯವಾಗುವ ಗೌಪ್ಯತೆ ಕಾನೂನುಗಳನ್ನು ಅನುಸರಿಸುವುದಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ಹೊಂದಿರುವ Google ಅಂಗಸಂಸ್ಥೆ. ಸಾಮಾನ್ಯವಾಗಿ, Google ತನ್ನ ಗ್ರಾಹಕ ಸೇವೆಗಳನ್ನು ಎರಡು ಕಂಪನಿಗಳ ಮೂಲಕ ನೀಡುತ್ತದೆ:
    1. ನೀವು ಯುರೋಪಿಯನ್ ವಾಣಿಜ್ಯ ಪ್ರದೇಶದಲ್ಲಿ (EU ದೇಶಗಳ ಜೊತೆಗೆ ಐಸ್‌ಲ್ಯಾಂಡ್, ಲಿಸ್ಟೆನ್‌ಸ್ಟೈನ್ ಮತ್ತು ನಾರ್ವೆ) ವಾಸಿಸುತ್ತಿದ್ದರೆ ಅಥವಾ ಸ್ವಿಟ್ಜರ್‌ಲ್ಯಾಂಡ್
    2. ಪ್ರಪಂಚದ ಉಳಿದ ಭಾಗಗಳಿಗೆ ಯುನೈಟೆಡ್ ಸ್ಟೇಟ್ಸ್ ಮೂಲದ Google LLC
  2. ನಮ್ಮ ಸಂಬಂಧವನ್ನು ನಿಯಂತ್ರಿಸುವ ನಿಯಮಗಳ ಆವೃತ್ತಿ, ಇದು ಸ್ಥಳೀಯ ಕಾನೂನುಗಳ ಆಧಾರದ ಮೇಲೆ ಬದಲಾಗಬಹುದು
  3. ನೀವು ವಾಸಿಸುವ ಸ್ಥಳದಲ್ಲಿನ Google ಸೇವೆಗಳಿಗಾಗಿ ಪ್ರದೇಶ-ನಿರ್ದಿಷ್ಟ ಅವಶ್ಯಕತೆಗಳ ಅನ್ವಯಿಸುವಿಕೆ

ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಪ್ರದೇಶದ ನಿರ್ಧರಿಸುವಿಕೆ

ನೀವು ಹೊಸ ಖಾತೆಯನ್ನು ರಚಿಸಿದಾಗ, ನಿಮ್ಮ Google ಖಾತೆಯನ್ನು ಎಲ್ಲಿ ರಚಿಸಿದ್ದೀರಿ ಎಂಬುದನ್ನು ಆಧರಿಸಿ ನಿಮ್ಮ ಖಾತೆಯನ್ನು ಪ್ರದೇಶವೊಂದರ ಜೊತೆಗೆ ಸಂಯೋಜಿಸುತ್ತೇವೆ. ಕನಿಷ್ಠ ಒಂದು ವರ್ಷದ ಹಿಂದೆ ರಚಿಸಲಾದ ಖಾತೆಗಳಿಗಾಗಿ, ನೀವು ಸಾಮಾನ್ಯವಾಗಿ Google ಸೇವೆಗಳನ್ನು ಆ್ಯಕ್ಸೆಸ್ ಮಾಡುವ ಪ್ರದೇಶವನ್ನು ಬಳಸುತ್ತೇವೆ — ಸಾಮಾನ್ಯವಾಗಿ, ಅಲ್ಲಿ ನೀವು ಕಳೆದ ವರ್ಷದಲ್ಲಿ ಹೆಚ್ಚು ಸಮಯವನ್ನು ಕಳೆದಿರುತ್ತೀರಿ.

ಆಗಾಗ್ಗೆ ಪ್ರಯಾಣಿಸುವುದರಿಂದ ಸಾಮಾನ್ಯವಾಗಿ ನಿಮ್ಮ ಖಾತೆಯ ಜೊತೆಗೆ ಸಂಯೋಜಿತವಾಗಿರುವ ಪ್ರದೇಶದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ನೀವು ಹೊಸ ಪ್ರದೇಶಕ್ಕೆ ಸ್ಥಳಾಂತರಗೊಂಡರೆ, ನಿಮ್ಮ ಸಂಯೋಜಿತ ಪ್ರದೇಶವನ್ನು ಅಪ್‌ಡೇಟ್‌ ಮಾಡಲು ಸುಮಾರು ಒಂದು ವರ್ಷವನ್ನು ತೆಗೆದುಕೊಳ್ಳಬಹುದು.

ನಿಮ್ಮ ಖಾತೆಯ ಜೊತೆಗೆ ಸಂಯೋಜಿತವಾಗಿರುವ ಪ್ರದೇಶವು ನೀವು ವಾಸಿಸುತ್ತಿರುವ ಪ್ರದೇಶಕ್ಕೆ ಹೊಂದಾಣಿಕೆಯಾಗದಿದ್ದರೆ, ಇದಕ್ಕೆ ನಿಮ್ಮ ಕೆಲಸದ ಪ್ರದೇಶ ಮತ್ತು ವಾಸಸ್ಥಳದ ನಡುವಿನ ವ್ಯತ್ಯಾಸ ಕಾರಣವಾಗಿರುತ್ತದೆ, ನಿಮ್ಮ IP ವಿಳಾಸವನ್ನು ಮರೆಮಾಚಲು ನೀವು ವರ್ಚುವಲ್‌‌ ಖಾಸಗಿ ನೆಟ್‌ವರ್ಕ್‌ (VPN) ಒಂದನ್ನು ಇನ್‌ಸ್ಟಾಲ್ ಮಾಡಿರುವುದು ಅಥವಾ ಪ್ರಾದೇಶಿಕ ಗಡಿಯೊಂದರ ಬಳಿ ವಾಸಿಸುತ್ತಿರುವುದು ಕಾರಣವಾಗಿರಬಹುದು. ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ ಪ್ರದೇಶವನ್ನು ನೀವು ಒಪ್ಪದಿದ್ದರೆ, ನಿಮ್ಮ ಪ್ರದೇಶವನ್ನು ಬದಲಾಯಿಸಲು ವಿನಂತಿಯನ್ನು ಸಲ್ಲಿಸಿ.

Google ನ ಹುಡುಕಾಟ ಫಲಿತಾಂಶಗಳಿಂದ ನನ್ನ ಕುರಿತ ಮಾಹಿತಿಯನ್ನು ತೆಗೆದು ಹಾಕುವ ಬಗೆ ಹೇಗೆ?

Google ಹುಡುಕಾಟ ಫಲಿತಾಂಶಗಳು ವೆಬ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ವಿಷಯದ ಪ್ರತಿಫಲನವಾಗಿವೆ. ಹುಡುಕಾಟದ ಎಂಜಿನ್‌ಗಳು ವೆಬ್‌ಸೈಟ್‌ಗಳಲ್ಲಿರುವ ವಿಷಯವನ್ನು ನೇರವಾಗಿ ತೆಗೆದು ಹಾಕುವುದಿಲ್ಲ. ಆದ್ದರಿಂದ Google ನಿಂದ ಹುಡುಕಾಟದ ಫಲಿತಾಂಶಗಳನ್ನು ತೆಗೆದುಹಾಕುವುದರಿಂದ ವೆಬ್‌ನಲ್ಲಿರುವ ವಿಷಯ ತೆಗೆದು ಹಾಕಲಾವುದಿಲ್ಲ. ವೆಬ್‌ನಿಂದ ಯಾವುದನ್ನಾದರೂ ತೆಗೆದುಹಾಕಲು ನೀವು ಬಯಸುವುದಾದರೆ, ನೀವು ವಿಷಯವನ್ನು ಪೋಸ್ಟ್‌ ಮಾಡಲಾಗಿರುವ ಸೈಟ್‌ನ ವೆಬ್‌ಮಾಸ್ಟರ್ ಅನ್ನು ಸಂಪರ್ಕಿಸಬೇಕು ಹಾಗೂ ನಿಮ್ಮಿಚ್ಛೆಯ ಬದಲಾವಣೆಯನ್ನು ಮಾಡಲು ಅವರನ್ನು ಕೇಳಿಕೊಳ್ಳಬೇಕು. ವಿಷಯವನ್ನು ಒಮ್ಮೆ ತೆಗೆದುಹಾಕಿದ ಬಳಿಕ ಮತ್ತು ನವೀಕರಣವನ್ನು Google ಗುರುತಿಸಿಕೊಂಡ ಬಳಿಕ, Google ನ ಹುಡುಕಾಟ ಫಲಿತಾಂಶಗಳಲ್ಲಿ ಮಾಹಿತಿಯು ಹೆಚ್ಚು ಸಮಯ ಕಾಣಿಸಿಕೊಳ್ಳುವುದಿಲ್ಲ. ತುರ್ತಾಗಿ ವಿನಂತಿಯನ್ನು ತೆಗೆದುಹಾಕಬೇಕಿದ್ದರೆ, ನೀವು ಇನ್ನಷ್ಟು ಮಾಹಿತಿಗಾಗಿ ನಮ್ಮ ಸಹಾಯ ಪುಟಕ್ಕೆ ಭೇಟಿ ನೀಡಬಹುದು.

Google ಹುಡುಕಾಟ ಫಲಿತಾಂಶಗಳ ಮೇಲೆ ನಾನು ಕ್ಲಿಕ್ ಮಾಡಿದಾಗ ನನ್ನ ಹುಡುಕಾಟ ಪ್ರಶ್ನೆಗಳನ್ನು ವೆಬ್‌ಸೈಟ್‌ಗಳಿಗೆ ರವಾನಿಸಲಾಗುತ್ತದೆಯೇ?

ಸಾಮಾನ್ಯವಾಗಿ, ಇಲ್ಲ. ನೀವು Google Search ನಲ್ಲಿ ಹುಡುಕಾಟ ಫಲಿತಾಂಶದ ಮೇಲೆ ಕ್ಲಿಕ್ ಮಾಡಿದಾಗ, ನಿಮ್ಮ ವೆಬ್ ಬ್ರೌಸರ್ ಗಮ್ಯಸ್ಥಾನ ವೆಬ್‌ಪುಟಕ್ಕೆ ಕೆಲವು ಮಾಹಿತಿಯನ್ನು ಕಳುಹಿಸುತ್ತದೆ. ನಿಮ್ಮ ಹುಡುಕಾಟ ಪದಗಳು ಇಂಟರ್ನೆಟ್ ವಿಳಾಸದಲ್ಲಿ ಅಥವಾ ಹುಡುಕಾಟ ಫಲಿತಾಂಶಗಳ ಪುಟದ URL ನಲ್ಲಿ ಕಾಣಿಸಿಕೊಳ್ಳಬಹುದು, ಆದರೆ ಬ್ರೌಸರ್‌ಗಳು ಆ URL ಅನ್ನು ಗಮ್ಯಸ್ಥಾನದ ಪುಟಕ್ಕೆ ರೆಫರರ್ URL ಆಗಿ ಕಳುಹಿಸುವುದನ್ನು ತಡೆಯುವ ಉದ್ದೇಶವನ್ನು Google Search ಹೊಂದಿದೆ. ನಾವು Google Trends ಮತ್ತು Google Search Console ಮೂಲಕ ಹುಡುಕಾಟ ಪ್ರಶ್ನೆಗಳ ಕುರಿತು ಡೇಟಾವನ್ನು ಒದಗಿಸುತ್ತೇವೆ, ಆದರೆ ನಾವು ಹಾಗೆ ಮಾಡಿದಾಗ, ನಾವು ಪ್ರಶ್ನೆಗಳನ್ನು ಒಟ್ಟಿಗೆ ಒಟ್ಟುಗೂಡಿಸುತ್ತೇವೆ, ಇದರಿಂದ ನಾವು ಅನೇಕ ಬಳಕೆದಾರರು ನೀಡಿದ ಪ್ರಶ್ನೆಗಳನ್ನು ಮಾತ್ರ ಹಂಚಿಕೊಳ್ಳುತ್ತೇವೆ.

Google Apps
ಪ್ರಮುಖ ಮೆನು