Google ನ ಸಹಭಾಗಿಗಳು ಯಾರು?

ವ್ಯಾಪಾರಗಳು ಮತ್ತು ಸಂಸ್ಥೆಗಳೊಂದಿಗೆ Google ಹಲವಾರು ವಿಧಗಳಲ್ಲಿ ಕೆಲಸ ಮಾಡುತ್ತದೆ. ಈ ವ್ಯಾಪಾರಗಳು ಮತ್ತು ಸಂಸ್ಥೆಗಳನ್ನು ನಾವು “ಸಹಭಾಗಿಗಳು” ಎಂದು ಕರೆಯುತ್ತೇವೆ. ಉದಾಹರಣೆಗೆ, Google ಗೆ ಹೊರತಾದ, 2 ಮಿಲಿಯನ್‌ಗೂ ಹೆಚ್ಚಿನ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಜಾಹೀರಾತುಗಳನ್ನು ತೋರಿಸುವುದಕ್ಕಾಗಿ Google ಜೊತೆ ಪಾಲುದಾರಿಕೆ ಹೊಂದಿವೆ. ಮಿಲಿಯಗಟ್ಟಲೆ ಡೆವಲಪರ್ ಸಹಭಾಗಿಗಳು Google Play ನಲ್ಲಿ ತಮ್ಮ ಅಪ್ಲಿಕೇಶನ್‌ಗಳನ್ನು ಪ್ರಕಟಿಸುತ್ತಾರೆ. ಇತರ ಸಹಭಾಗಿಗಳು Google ನಲ್ಲಿ ನಮ್ಮ ಸೇವೆಗಳನ್ನು ಸುರಕ್ಷಿತಗೊಳಿಸಲು ನೆರವಾಗುತ್ತಾರೆ; ನಿಮ್ಮ ಖಾತೆಯ ಸುರಕ್ಷತೆಗೆ ಧಕ್ಕೆಯುಂಟಾಗಿದೆ ಎಂದು ನಾವು ಭಾವಿಸಿದರೆ (ಆ ಸಮಯದಲ್ಲಿ, ನಿಮ್ಮ ಖಾತೆಯನ್ನು ಸಂರಕ್ಷಿಸುವುದಕ್ಕಾಗಿ ಕ್ರಮ ಕೈಗೊಳ್ಳಲು ನಾವು ಸಹಾಯ ಮಾಡಬಹುದು), ಆ ಕುರಿತು ನಿಮಗೆ ಸೂಚನೆ ನೀಡುವುದಕ್ಕಾಗಿ ಸುರಕ್ಷತೆಗೆ ಇರುವ ಬೆದರಿಕೆಗಳ ಕುರಿತಾದ ಮಾಹಿತಿಯು ನಮಗೆ ಸಹಾಯ ಮಾಡಬಹುದು.

ನಾವು ವಿಶ್ವಾಸಾರ್ಹ ವ್ಯಾಪಾರಗಳೊಂದಿಗೆ “ಡೇಟಾ ಪ್ರಕ್ರಿಯೆಗೊಳಿಸುವವರು” ಎಂಬ ಅರ್ಥದಲ್ಲಿ ಕೆಲಸ ಮಾಡುತ್ತೇವೆಯೇ ಹೊರತು ಸಹಭಾಗಿಗಳು ಎಂದಲ್ಲ ಎಂಬುದನ್ನು ಗಮನಿಸಿ. ಇದರ ಅರ್ಥ, ನಮ್ಮ ಸೇವೆಗಳನ್ನು ಬೆಂಬಲಿಸುವುದಕ್ಕಾಗಿ, ನಮ್ಮ ಸೂಚನೆಗಳ ಮೇರೆಗೆ ಮತ್ತು ನಮ್ಮ ಗೌಪ್ಯತೆ ನೀತಿ ಹಾಗೂ ಇತರ ಸೂಕ್ತ ಗೌಪ್ಯತಾ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾ, ಅವರು ನಮ್ಮ ಪರವಾಗಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತಾರೆ. ನಾವು ಡೇಟಾ ಪ್ರಕ್ರಿಯೆಗೊಳಿಸುವವರನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬ ಕುರಿತು ಹೆಚ್ಚಿನ ಮಾಹಿತಿಯನ್ನು Google ಗೌಪ್ಯತೆ ನೀತಿಯಲ್ಲಿ ನೋಡಬಹುದು.

ನೀವು ವಿನಂತಿಸಿಕೊಳ್ಳದ ಹೊರತು, ನಿಮ್ಮ ಹೆಸರು ಅಥವಾ ಇಮೇಲ್‌ನಂತಹ, ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ನಮ್ಮ ಜಾಹೀರಾತು ಸಹಭಾಗಿಗಳೊಂದಿಗೆ ನಾವು ಹಂಚಿಕೊಳ್ಳುವುದಿಲ್ಲ. ಉದಾಹರಣೆಗೆ, ನೀವು ಸಮೀಪದ ಹೂವಿನಂಗಡಿಯ ಜಾಹೀರಾತನ್ನು ನೋಡಿ “ಕರೆ ಮಾಡಲು ಟ್ಯಾಪ್ ಮಾಡಿ” ಬಟನ್ ಅನ್ನು ಆಯ್ಕೆ ಮಾಡಿದರೆ, ನಿಮ್ಮ ಕರೆಗೆ ನಾವು ಸಂಪರ್ಕ ನೀಡುತ್ತೇವೆ ಮತ್ತು ಹೂವಿನಂಗಡಿಯೊಂದಿಗೆ ನಿಮ್ಮ ಫೋನ್ ಸಂಖ್ಯೆಯನ್ನು ನಾವು ಹಂಚಿಕೊಳ್ಳಬಹುದು.

ತಮ್ಮ ಸಹಭಾಗಿಗಳಿಂದಲೂ ಸೇರಿದಂತೆ, Google ಸಂಗ್ರಹಿಸುವ ಮಾಹಿತಿಯ ಕುರಿತು ಗೌಪ್ಯತೆ ನೀತಿಯಲ್ಲಿ ನೀವು ಇನ್ನಷ್ಟು ಓದಬಹುದು.

Google Apps
ಪ್ರಮುಖ ಮೆನು