Chrome ಮತ್ತು Android ನಲ್ಲಿ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಉಪಕ್ರಮದ ಮೂಲಕ, ಆನ್‌ಲೈನ್‌ನಲ್ಲಿ ಜನರ ಗೌಪ್ಯತೆಯನ್ನು ಉತ್ತಮವಾಗಿ ರಕ್ಷಿಸುವ ರೀತಿಗಳಲ್ಲಿ ಡಿಜಿಟಲ್ ಜಾಹೀರಾತುಗಳ ಡೆಲಿವರಿ ಮತ್ತು ಮಾಪನವನ್ನು ಬೆಂಬಲಿಸುವ ಹೊಸ ವಿಧಾನಗಳನ್ನು Google ಜಾಹೀರಾತು ಸೇವೆಗಳು ಪ್ರಯೋಗಿಸಿ ನೋಡುತ್ತಿವೆ. Chrome ಅಥವಾ Android ನಲ್ಲಿ ಸೂಕ್ತ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿಕೊಂಡಿರುವ ಬಳಕೆದಾರರು ತಮ್ಮ ಬ್ರೌಸರ್ ಅಥವಾ ಮೊಬೈಲ್ ಸಾಧನದಲ್ಲಿ ಸಂಗ್ರಹಿಸಲಾಗಿರುವ ವಿಷಯಗಳು ಅಥವಾ ಸಂರಕ್ಷಿತ ಪ್ರೇಕ್ಷಕರ ಡೇಟಾವನ್ನು ಆಧರಿಸಿ Google ನ ಜಾಹೀರಾತು ಸೇವೆಗಳಿಗೆ ಸಂಬಂಧಿಸಿದ ಸೂಕ್ತ ಜಾಹೀರಾತುಗಳನ್ನು ನೋಡಬಹುದು. Google ನ ಜಾಹೀರಾತು ಸೇವೆಗಳು ತಮ್ಮ ಬ್ರೌಸರ್‌ನಲ್ಲಿ ಅಥವಾ ಮೊಬೈಲ್ ಸಾಧನದಲ್ಲಿ ಸಂಗ್ರಹಿಸಲಾಗಿರುವ ಆ್ಯಟ್ರಿಬ್ಯೂಶನ್ ವರದಿಗಾರಿಕೆ ಡೇಟಾವನ್ನು ಬಳಸಿ ಕೂಡ ಜಾಹೀರಾತಿನ ಕಾರ್ಯಕ್ಷಮತೆಯನ್ನು ಮಾಪನ ಮಾಡಬಹುದು. ಪ್ರೈವೆಸಿ ಸ್ಯಾಂಡ್‌ಬಾಕ್ಸ್‌ನ ಕುರಿತು ಇನ್ನಷ್ಟು ಮಾಹಿತಿ.

ನಮ್ಮ ಸೇವೆಗಳನ್ನು ಬಳಸುವ ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳಿಂದ ಮಾಹಿತಿಯನ್ನು Google ಹೇಗೆ ಬಳಸಿಕೊಳ್ಳುತ್ತದೆ

ಹಲವಾರು ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ತಮ್ಮ ವಿಷಯವನ್ನು ಸುಧಾರಿಸಲು ಮತ್ತು ಉಚಿತವಾಗಿ ಒದಗಿಸಲು, Google ಸೇವೆಗಳನ್ನು ಬಳಸುತ್ತವೆ. ಅವು ನಮ್ಮ ಸೇವೆಗಳನ್ನು ಸಂಯೋಜಿಸಿದಾಗ, ಈ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು Google ನೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತವೆ.

ಉದಾಹರಣೆಗೆ, AdSense ನಂತಹ ಜಾಹೀರಾತು ಸೇವೆಗಳನ್ನು ಬಳಸುವ, Google Analytics ನಂತಹ ವಿಶ್ಲೇಷಣಾ ಪರಿಕರಗಳನ್ನು ಹೊಂದಿರುವ ಅಥವಾ YouTube ಕಂಟೆಂಟ್ ಅನ್ನು ಎಂಬೆಡ್ ಮಾಡಿರುವ ವೆಬ್‌ಸೈಟ್‍ಗೆ ಭೇಟಿ ನೀಡಿದಾಗ, ನಿಮ್ಮ ವೆಬ್ ಬ್ರೌಸರ್ ಸ್ವಯಂಚಾಲಿತವಾಗಿ ಕೆಲವೊಂದು ಮಾಹಿತಿಯನ್ನು Google ಗೆ ಕಳುಹಿಸುತ್ತದೆ. ನೀವು ಮರು ಭೇಟಿ ನೀಡುತ್ತಿರುವ ಪುಟದ URL ಮತ್ತು ನಿಮ್ಮ IP ವಿಳಾಸವು ಇದರಲ್ಲಿ ಸೇರಿರುತ್ತದೆ. ನಾವು ನಿಮ್ಮ ಬ್ರೌಸರ್‌ನಲ್ಲಿ ಕುಕೀಗಳನ್ನು ಕೂಡಾ ಹೊಂದಿಸಬಹುದು ಅಥವಾ ಈಗಾಗಲೇ ಇರುವ ಕುಕೀಗಳನ್ನು ಓದಬಹುದು. Google ಜಾಹೀರಾತು ಸೇವೆಗಳನ್ನು ಬಳಸುವ ಅಪ್ಲಿಕೇಶನ್‌ಗಳು ಸಹ, ಅಪ್ಲಿಕೇಶನ್‌ನ ಹೆಸರು ಮತ್ತು ಜಾಹೀರಾತಿಗಾಗಿ ಅನನ್ಯ ಗುರುತಿನಂತಹ ಮಾಹಿತಿಯನ್ನು Google ನೊಂದಿಗೆ ಹಂಚಿಕೊಳ್ಳುತ್ತವೆ.

ನಮ್ಮ ಸೇವೆಗಳನ್ನು ವಿತರಿಸಲು, ಅವುಗಳನ್ನು ನಿರ್ವಹಿಸಲು ಮತ್ತು ಸುಧಾರಿಸಲು, ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು, ಜಾಹೀರಾತುಗಳ ಪರಿಣಾಮವನ್ನು ಅಳೆಯಲು, ವಂಚನೆ ಮತ್ತು ದುರ್ಬಳಕೆಯ ವಿರುದ್ಧ ರಕ್ಷಿಸಲು ಮತ್ತು Google ನಲ್ಲಿ ನೀವು ನೋಡುವ ವಿಷಯ ಹಾಗೂ ಜಾಹೀರಾತುಗಳನ್ನು ವೈಯಕ್ತೀಕರಿಸಲು, ಸೈಟ್‍ಗಳು ಮತ್ತು ಅಪ್ಲಿಕೇಶನ್‌ಗಳು ಹಂಚಿಕೊಳ್ಳುವ ಮಾಹಿತಿಯನ್ನು Google ಬಳಸುತ್ತದೆ. ಪ್ರತಿಯೊಂದು ಉದ್ದೇಶಕ್ಕಾಗಿ ನಾವು ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ ಎಂಬ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಗೌಪ್ಯತೆ ನೀತಿಯನ್ನು ನೋಡಿ. Google ಜಾಹೀರಾತುಗಳ ಕುರಿತು, ಜಾಹೀರಾತುಗಳಿಗೆ ಸಂಬಂಧಪಟ್ಟಂತೆ ನಿಮ್ಮ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಮತ್ತು ಈ ಮಾಹಿತಿಯನ್ನು Google ಎಷ್ಟು ಸಮಯದವರೆಗೆ ಸಂಗ್ರಹಣೆ ಮಾಡುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಲು ನಮ್ಮ ಜಾಹೀರಾತು ಪುಟವನ್ನು ನೋಡಿ.

ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸಲು Google ಅವಲಂಬಿಸಿರುವ ಕಾನೂನು ಆಧಾರಗಳನ್ನು ನಮ್ಮ ಗೌಪ್ಯತೆ ನೀತಿ ವಿವರಿಸುತ್ತದೆ — ಉದಾಹರಣೆಗೆ, ನಿಮ್ಮ ಮಾಹಿತಿಯನ್ನು ನಿಮ್ಮ ಸಮ್ಮತಿಯ ಮೂಲಕ ಅಥವಾ ನಮ್ಮ ಬಳಕೆದಾರರ ಅಗತ್ಯತೆಗಳನ್ನು ಪೂರೈಸಲು ನಮ್ಮ ಸೇವೆಗಳನ್ನು ಒದಗಿಸುವ, ನಿರ್ವಹಿಸುವ ಮತ್ತು ಸುಧಾರಿಸುವಂತಹ ಕಾನೂನುಬದ್ಧ ಆಸಕ್ತಿಗಳ ಅನ್ವೇಷಣೆಯಲ್ಲಿ ನಾವು ಪ್ರಕ್ರಿಯೆಗೊಳಿಸಬಹುದು.

ಕೆಲವೊಮ್ಮೆ ಸೈಟ್‌ಗಳು ಮತ್ತು ಆ್ಯಪ್‌ಗಳ ಮೂಲಕ ನಮ್ಮ ಜೊತೆಗೆ ಹಂಚಿಕೊಂಡ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವಾಗ, ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸಲು Google ಗೆ ಅನುಮತಿಸುವ ಮೊದಲು ಆ ಸೈಟ್‌ಗಳು ಮತ್ತು ಆ್ಯಪ್‌ಗಳು ನಿಮ್ಮ ಸಮ್ಮತಿಗಾಗಿ ಕೇಳುತ್ತವೆ. ಉದಾಹರಣೆಗೆ, ಸೈಟ್ ಸಂಗ್ರಹಿಸಿದ ಮಾಹಿತಿಯನ್ನು ಪ್ರಕ್ರಿಯೆಗೊಳಿಸಲು Google ಸಮ್ಮತಿ ಕೇಳುವ ಬ್ಯಾನರ್ ಅನ್ನು ಸೈಟ್‌ನಲ್ಲಿ ಕಾಣಬಹುದು. ಅದು ಸಂಭವಿಸಿದಾಗ, Google ಗೌಪ್ಯತೆ ನೀತಿಯಲ್ಲಿ ವಿವರಿಸಿದ ಕಾನೂನು ಆಧಾರಗಳಿಗಿಂತ ನೀವು ಸೈಟ್ ಅಥವಾ ಆ್ಯಪ್‌ಗೆ ನೀಡುವ ಸಮ್ಮತಿಯಲ್ಲಿ ವಿವರಿಸಿದ ಉದ್ದೇಶಗಳನ್ನು ನಾವು ಗೌರವಿಸುತ್ತೇವೆ. ನಿಮ್ಮ ಸಮ್ಮತಿಯನ್ನು ನೀವು ಬದಲಾಯಿಸಲು ಅಥವಾ ಹಿಂಪಡೆಯಲು ಬಯಸಿದರೆ, ಹಾಗೆ ಮಾಡಲು ನೀವು ಸಂಬಂಧಿತ ಸೈಟ್ ಅಥವಾ ಆ್ಯಪ್‌ಗೆ ಭೇಟಿ ನೀಡಬೇಕು.

ಜಾಹೀರಾತು ವೈಯಕ್ತೀಕರಣ

ಜಾಹೀರಾತು ವೈಯಕ್ತೀಕರಣವನ್ನು ಆನ್ ಮಾಡಿದರೆ, ನಿಮ್ಮ ಜಾಹೀರಾತುಗಳು ನಿಮಗೆ ಹೆಚ್ಚು ಉಪಯುಕ್ತವಾಗುವಂತೆ ಮಾಡಲು Google ನಿಮ್ಮ ಮಾಹಿತಿಯನ್ನು ಬಳಸುತ್ತದೆ. ಉದಾಹರಣೆಗೆ, ಮೌಂಟೇನ್ ಬೈಕ್‌ಗಳನ್ನು ಮಾರಾಟ ಮಾಡುವ ಒಂದು ವೆಬ್‌ಸೈಟ್, Google ನ ಜಾಹೀರಾತು ಸೇವೆಗಳನ್ನು ಬಳಸುತ್ತಿರಬಹುದು. ನೀವು ಆ ಸೈಟ್‌ಗೆ ಭೇಟಿ ನೀಡಿದ ಬಳಿಕ, Google ಒದಗಿಸುವ ಜಾಹೀರಾತುಗಳನ್ನು ತೋರಿಸುವ ಬೇರೊಂದು ಸೈಟ್‌ನಲ್ಲಿ ನೀವು ಮೌಂಟೇನ್ ಬೈಕ್‌ಗಳ ಜಾಹೀರಾತನ್ನು ಕಾಣಬಹುದು.

ಜಾಹೀರಾತು ವೈಯಕ್ತೀಕರಣ ಆಫ್ ಆಗಿದ್ದರೆ, ಜಾಹೀರಾತು ಪ್ರೊಫೈಲ್ ಅನ್ನು ರಚಿಸಲು ಅಥವಾ Google ನಿಮಗೆ ತೋರಿಸುವ ಜಾಹೀರಾತುಗಳನ್ನು ವೈಯಕ್ತೀಕರಿಸಲು, Google ನಿಮ್ಮ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಅಥವಾ ಬಳಸುವುದಿಲ್ಲ. ನಿಮಗೆ ಜಾಹೀರಾತುಗಳು ಕಾಣುತ್ತವೆ, ಆದರೆ ಅವು ಅಷ್ಟೊಂದು ಉಪಯುಕ್ತವಾಗಿರಲಾರವು. ನೀವು ನೋಡುತ್ತಿರುವ ವೆಬ್‌ಸೈಟ್ ಅಥವಾ ಅಪ್ಲಿಕೇಶನ್, ನಿಮ್ಮ ಪ್ರಸ್ತುತ ಹುಡುಕಾಟ ಪದಗಳು ಅಥವಾ ನಿಮ್ಮ ಸಾಮಾನ್ಯ ಸ್ಥಳವನ್ನು ಆಧರಿಸಿದ ಜಾಹೀರಾತುಗಳನ್ನು ನೀವು ಕಾಣಬಹುದು, ಆದರೆ ಅವು ನಿಮ್ಮ ಆಸಕ್ತಿಗಳು, ಹುಡುಕಾಟ ಇತಿಹಾಸ ಅಥವಾ ಬ್ರೌಸಿಂಗ್ ಇತಿಹಾಸವನ್ನು ಆಧರಿಸಿರುವುದಿಲ್ಲ. ನಿಮ್ಮ ಮಾಹಿತಿಯನ್ನು, ಮೇಲೆ ಹೇಳಿದ ಇತರ ಉದ್ದೇಶಗಳಿಗೂ ಬಳಸಬಹುದು. ಉದಾಹರಣೆಗೆ, ಜಾಹೀರಾತಿನ ಪರಿಣಾಮವನ್ನು ಅಳೆಯುವುದು ಮತ್ತು ವಂಚನೆ ಹಾಗೂ ದುರ್ಬಳಕೆಯ ವಿರುದ್ಧ ರಕ್ಷಣೆ ಒದಗಿಸುವುದು.

Google ಸೇವೆಗಳನ್ನು ಬಳಸುವ ವೆಬ್‌ಸೈಟ್‌ ಅಥವಾ ಅಪ್ಲಿಕೇಶನ್‌ನೊಂದಿಗೆ ನೀವು ಸಂವಹನ ನಡೆಸಿದಾಗ, Google ಸೇರಿದಂತೆ ಜಾಹೀರಾತು ಒದಗಿಸುವವರಿಂದ ವೈಯಕ್ತಿಕರಿಸಿದ ಜಾಹೀರಾತುಗಳನ್ನು ನೀವು ನೋಡಲು ಬಯಸುವಿರಾ ಎಂಬುದನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಬಹುದು. ನಿಮ್ಮ ಆಯ್ಕೆಯ ಹೊರತಾಗಿಯೂ, ನಿಮ್ಮ ಜಾಹೀರಾತು ವೈಯಕ್ತೀಕರಣ ಸೆಟ್ಟಿಂಗ್ ಆಫ್ ಆಗಿದ್ದರೆ ಅಥವಾ ನಿಮ್ಮ ಖಾತೆಯು ವೈಯಕ್ತಿಕರಿಸಿದ ಜಾಹೀರಾತುಗಳಿಗೆ ಅನರ್ಹವಾಗಿದ್ದರೆ ನೀವು ನೋಡುವ ಜಾಹೀರಾತುಗಳನ್ನು Google ವೈಯಕ್ತೀಕರಿಸುವುದಿಲ್ಲ.

ನಿಮಗೆ ಜಾಹೀರಾತುಗಳನ್ನು ತೋರಿಸಲು ನಾವು ಯಾವ ಮಾಹಿತಿಯನ್ನು ಬಳಸಬೇಕು ಎಂಬುದನ್ನು ನೀವು ಜಾಹೀರಾತು ಸೆಟ್ಟಿಂಗ್‌ಗಳಲ್ಲಿ ನೋಡಬಹುದು ಮತ್ತು ನಿಯಂತ್ರಿಸಬಹುದು.

ಈ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ Google ಸಂಗ್ರಹಿಸಿರುವ ಮಾಹಿತಿಯನ್ನು ನೀವು ಹೇಗೆ ನಿಯಂತ್ರಿಸಬಹುದು

Google ಸೇವೆಗಳನ್ನು ಬಳಸುವ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ನೀವು ಭೇಟಿ ನೀಡಿದಾಗ ಅಥವಾ ಅವುಗಳೊಂದಿಗೆ ಸಂವಹಿಸಿದಾಗ ನಿಮ್ಮ ಸಾಧನವು ಹಂಚಿಕೊಳ್ಳುವ ಮಾಹಿತಿಯನ್ನು ನಿಯಂತ್ರಿಸಲು ಕೆಲವು ವಿಧಾನಗಳು ಹೀಗಿವೆ:

  • Google ಸೇವೆಗಳಲ್ಲಿ (ಉದಾಹರಣೆಗೆ Google ಹುಡುಕಾಟ ಅಥವಾ YouTube) ಅಥವಾ Google ನ ಜಾಹೀರಾತು ಸೇವೆಗಳನ್ನು ಬಳಸುವ Google ಗೆ ಹೊರತಾದ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ನೀವು ನೋಡುವ ಜಾಹೀರಾತುಗಳನ್ನು ನಿಯಂತ್ರಿಸಲು ಜಾಹೀರಾತು ಸೆಟ್ಟಿಂಗ್‌ಗಳು ನಿಮಗೆ ಸಹಾಯ ಮಾಡುತ್ತವೆ. ಜಾಹೀರಾತುಗಳನ್ನು ವೈಯಕ್ತೀಕರಿಸುವುದು, ಜಾಹೀರಾತು ವೈಯಕ್ತೀಕರಣದಿಂದ ಹೊರಗುಳಿಯುವುದು ಮತ್ತು ನಿರ್ದಿಷ್ಟ ಜಾಹೀರಾತುದಾರರನ್ನು ನಿರ್ಬಂಧಿಸುವುದು ಹೇಗೆಂದು ತಿಳಿಯಿರಿ.
  • ನೀವು ಭೇಟಿ ನೀಡಿದ ಸೈಟ್‌ಗಳು ಮತ್ತು ಅಪ್ಲಿಕೇಶನ್‍ಗಳಿಂದ ನಾವು ಸಂಗ್ರಹಿಸುವ ಮಾಹಿತಿಯೂ ಸೇರಿದಂತೆ, ನೀವು Google ಸೇವೆಗಳನ್ನು ಬಳಸುವಾಗ ಉತ್ಪತ್ತಿಯಾಗುವ ಡೇಟಾವನ್ನು ಪರಿಶೀಲಿಸಲು ಮತ್ತು ನಿಯಂತ್ರಿಸಲು, ನನ್ನ ಚಟುವಟಿಕೆಯನ್ನು ಬಳಸಬಹುದು. ಇದಕ್ಕಾಗಿ ನೀವು Google ಖಾತೆಗೆ ಸೈನ್ ಇನ್ ಮಾಡಿರಬೇಕು ಮತ್ತು ಇದು ನಿಮ್ಮ ಖಾತೆಯ ಸೆಟ್ಟಿಂಗ್‌ಗಳನ್ನು ಆಧರಿಸಿರುತ್ತದೆ. ನೀವು ದಿನಾಂಕ ಮತ್ತು ವಿಷಯದ ಪ್ರಕಾರ ಬ್ರೌಸ್ ಮಾಡಬಹುದು ಮತ್ತು ನಿಮ್ಮ ಚಟುವಟಿಕೆಯನ್ನು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಅಳಿಸಬಹುದು.
  • ತಮ್ಮ ಸೈಟ್‍ಗಳು ಅಥವಾ ಅಪ್ಲಿಕೇಶನ್‌ಗಳಲ್ಲಿ ಸಂದರ್ಶಕರು ಹೇಗೆ ತೊಡಗಿಸಿಕೊಳ್ಳುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಹಲವಾರು ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು Google Analytics ಅನ್ನು ಬಳಸುತ್ತವೆ. ನಿಮ್ಮ ಬ್ರೌಸರ್‌ನಲ್ಲಿ ನೀವು Analytics ಅನ್ನು ಬಳಸಲು ಇಷ್ಟಪಡದಿದ್ದರೆ, ನೀವು Google Analytics ಬ್ರೌಸರ್ ಆಡ್-ಆನ್ ಇನ್‌ಸ್ಟಾಲ್ ಮಾಡಬಹುದು. Google Analytics ಮತ್ತು ಗೌಪ್ಯತೆ ಕುರಿತು ಇನ್ನಷ್ಟು ತಿಳಿಯಿರಿ.
  • ವೆಬ್‌ಪುಟಗಳು ಮತ್ತು ಫೈಲ್‍ಗಳನ್ನು ನಿಮ್ಮ ಬ್ರೌಸರ್ ಅಥವಾ ಖಾತೆಯ ಇತಿಹಾಸದಲ್ಲಿ ದಾಖಲಿಸದೆ ವೆಬ್ ಅನ್ನು ಬ್ರೌಸ್ ಮಾಡಲು Chrome ನಲ್ಲಿ ಅಜ್ಞಾತ ಮೋಡ್ ನಿಮಗೆ ಅವಕಾಶ ನೀಡುತ್ತದೆ (ನೀವು ಸೈನ್ ಇನ್ ಮಾಡಲು ಆಯ್ಕೆ ಮಾಡದ ಹೊರತು). ನೀವು ಅಜ್ಞಾತ ವಿಂಡೋಗಳು ಮತ್ತು ಟ್ಯಾಬ್‌ಗಳನ್ನು ಮುಚ್ಚಿದ ನಂತರ ಕುಕೀಗಳನ್ನು ಅಳಿಸಲಾಗುತ್ತದೆ. ನಿಮ್ಮ ಬುಕ್‌ಮಾರ್ಕ್‌ಗಳು ಹಾಗೂ ಸೆಟ್ಟಿಂಗ್‌ಗಳನ್ನು ನೀವು ಅಳಿಸುವವರೆಗೆ ಸಂಗ್ರಹಣೆ ಮಾಡಲಾಗುತ್ತದೆ. ಕುಕೀಗಳ ಕುರಿತು ಇನ್ನಷ್ಟು ತಿಳಿಯಿರಿ. Chrome ಅಥವಾ ಇತರ ಖಾಸಗಿ ಬ್ರೌಸಿಂಗ್ ಮೋಡ್‌ಗಳಲ್ಲಿ ಅಜ್ಞಾತ ಮೋಡ್ ಅನ್ನು ಬಳಸುವುದರಿಂದ ನೀವು Google ಸೇವೆಗಳನ್ನು ಬಳಸುವ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ಡೇಟಾ ಸಂಗ್ರಹಣೆಯನ್ನು ತಡೆಯುವುದಿಲ್ಲ ಮತ್ತು ಈ ಬ್ರೌಸರ್‌ಗಳನ್ನು ಬಳಸಿಕೊಂಡು ನೀವು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ Google ಆಗಲೂ ಡೇಟಾವನ್ನು ಸಂಗ್ರಹಿಸಬಹುದು.
  • Chrome ಸೇರಿದಂತೆ ಹಲವಾರು ಬ್ರೌಸರ್‌ಗಳು, ಥರ್ಡ್-ಪಾರ್ಟಿ ಕುಕೀಗಳನ್ನು ನಿರ್ಬಂಧಿಸಲು ನಿಮಗೆ ಅವಕಾಶ ನೀಡುತ್ತವೆ. ಅಸ್ತಿತ್ವದಲ್ಲಿರುವ ಕುಕೀಗಳನ್ನು ನಿಮ್ಮ ಬ್ರೌಸರ್‌ನಿಂದಲೇ ತೆರವುಗೊಳಿಸಬಹುದು. Chrome ನಲ್ಲಿ ಕುಕೀಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.
Google Apps
ಪ್ರಮುಖ ಮೆನು