ಮಾದರಿ ಗುರುತಿಸುವಿಕೆಯನ್ನು Google ಹೇಗೆ ಬಳಸುತ್ತದೆ.

ಚಿತ್ರಗಳ ಸಂವೇದನೆಯನ್ನು ಮಾಡಲು ಮಾದರಿ ಗುರುತಿಸುವಿಕೆಯನ್ನು Google ಹೇಗೆ ಬಳಸುತ್ತದೆ

ಮನುಷ್ಯರಂತೆ ಕಂಪ್ಯೂಟರ್‌ಗಳು ಪೋಟೋಗಳು ಮತ್ತು ವೀಡಿಯೊಗಳನ್ನು “ವೀಕ್ಷಿಸುವುದಿಲ್ಲ”. ನೀವು ಫೋಟೋವೊಂದನ್ನು ನೋಡಿದಾಗ, ಅದರಲ್ಲಿ ನಿಮ್ಮ ಆತ್ಮೀಯ ಸ್ನೇಹಿತರೊಬ್ಬರು ತಮ್ಮ ಮನೆಯ ಮುಂದೆ ನಿಂತಿರುವುದು ನಿಮಗೆ ಕಾಣಬಹುದು. ಕಂಪ್ಯೂಟರ್ ಪಾಲಿಗೆ ಅದು, ಚಿತ್ರವು ಬಣ್ಣದ ಮೌಲ್ಯಗಳ ಆಕಾರಗಳು ಮತ್ತು ಮಾಹಿತಿಯಂತೆ ವ್ಯಾಖ್ಯಾನಿಸಬಹುದಾದ ಡೇಟಾದ ಒಂದು ಸರಳ ಗುಂಪಾಗಿರಬಹುದು. ಆ ಫೋಟೋವನ್ನು ನೀವು ನೋಡಿದಾಗ ನೀವು ಮಾಡುವ ರೀತಿಯಲ್ಲಿ ಪ್ರತಿಕ್ರಿಯೆಯನ್ನು ಕಂಪ್ಯೂಟರ್ ವ್ಯಕ್ತಪಡಿಸದಿದ್ದರೂ, ಬಣ್ಣ ಮತ್ತು ಆಕಾರಗಳ ನಿರ್ದಿಷ್ಟ ಮಾದರಿಗಳನ್ನು ಗುರುತಿಸಲು ಕಂಪ್ಯೂಟರ್‌ಗೆ ತರಬೇತಿ ನೀಡಬಹುದಾಗಿದೆ. ಉದಾಹರಣೆಗೆ ಕಡಲತೀರ ಅಥವಾ ಕಾರಿನಂತಹ ವಸ್ತುವಿನ ಡಿಜಿಟಲ್ ಚಿತ್ರವನ್ನು ಮಾಡುವಂತಹ ಆಕಾರಗಳು ಮತ್ತು ಬಣ್ಣಗಳ ಸಾಮಾನ್ಯ ಮಾದರಿಗಳನ್ನು ಗುರುತಿಸುವ ತರಬೇತಿಯನ್ನು ಕಂಪ್ಯೂಟರ್‌ಗೆ ನೀಡಬಹುದು. ನಿಮ್ಮ ಫೋಟೋಗಳನ್ನು ಸಂಘಟಿಸಲು ಈ ತಂತ್ರಜ್ಞಾನವು Google ಫೋಟೋಗಳಿಗೆ ಸಹಾಯ ಮಾಡುತ್ತದೆ ಮತ್ತು ಸರಳ ಹುಡುಕಾಟದ ಮೂಲಕ ಯಾವುದೇ ಫೋಟೋವನ್ನು ಹುಡುಕಲು ಬಳಕೆದಾರರನ್ನು ಅನುಮತಿಸುತ್ತದೆ.

ಮುಖದ ಡಿಜಿಟಲ್ ಚಿತ್ರವನ್ನು ಮಾಡುವಂತಹ ಆಕಾರಗಳು ಮತ್ತು ಬಣ್ಣಗಳ ಸಾಮಾನ್ಯ ಮಾದರಿಗಳನ್ನು ಗುರುತಿಸುವ ತರಬೇತಿಯನ್ನು ಕಂಪ್ಯೂಟರ್‌ಗೆ ನೀಡಬಹುದು. ಈ ಪ್ರಕ್ರಿಯೆಯನ್ನು ಮುಖ ಪತ್ತೆ ಹಚ್ಚುವಿಕೆ ಎಂದು ಕರೆಯಲಾಗುತ್ತದೆ, ಮತ್ತು ಇದರ ತಂತ್ರಜ್ಞಾನವು ಗಲ್ಲಿ ವೀಕ್ಷಣೆಯಂತಹ ಸೇವೆಗಳಲ್ಲಿ ನಿಮ್ಮ ಗೌಪ್ಯತೆಯನ್ನು ರಕ್ಷಿಸಲುವಲ್ಲಿ Google ಗೆ ಸಹಾಯ ಮಾಡುತ್ತದೆ, ಈ ಸಂದರ್ಭದಲ್ಲಿ ಗಲ್ಲಿ ವೀಕ್ಷಣೆ ಕಾರು ಚಲಿಸಿದಂತೆ ಗಲ್ಲಿಯಲ್ಲಿ ನಿಂತಿರುವ ಜನರ ಮುಖಗಳನ್ನು ಪತ್ತೆ ಹಚ್ಚಿ ನಂತರ ಮಸುಕುಗೊಳಿಸಲು ಕಂಪ್ಯೂಟರ್‌ಗಳು ಪ್ರಯತ್ನಿಸುತ್ತವೆ.

ಇನ್ನಷ್ಟು ಹೆಚ್ಚು ಆಧುನಿಕೃತಗೊಂಡ ಕಂಪ್ಯೂಟರ್‌‌ ನಿಮ್ಮ ಬಳಿ ಇದ್ದರೆ, ಮುಖ ಪತ್ತೆ ಹಚ್ಚುವಿಕೆಯನ್ನು ಶಕ್ತಗೊಳಿಸುವ ಅದೇ ಮಾದರಿ ಗುರುತಿಸುವಿಕೆ ತಂತ್ರಜ್ಞಾನವು ಪತ್ತೆ ಮಾಡಲಾದ ಮುಖದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಕಂಪ್ಯೂಟರ್‌ಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನಗು ಮುಖ ಅಥವಾ ಕಣ್ಣು ಮುಚ್ಚಿದಂತೆ ಸೂಚಿಸುವ ನಿರ್ದಿಷ್ಟ ಮಾದರಿಗಳು ಇರಬಹುದು. Google ಫೋಟೋಗಳ ಚಲನಚಿತ್ರಗಳ ಸಲಹೆಗಳು ಮತ್ತು ನಿಮ್ಮ ಫೋಟೋಗಳು ಮತ್ತು ವೀಡಿಯೊಗಳಿಂದ ರಚಿಸಲಾದ ಇತರ ಪರಿಣಾಮಗಳಂತಹ ವೈಶಿಷ್ಟ್ಯಗಳೊಂದಿಗೆ ಸಹಾಯ ಮಾಡಲು ಈ ರೀತಿಯ ಮಾಹಿತಿಯನ್ನು ಬಳಸಬಹುದು.

ಮುಖ ಗುಂಪುಮಾಡುವಿಕೆ ವೈಶಿಷ್ಟ್ಯವನ್ನು ಶಕ್ತಗೊಳಿಸುವ ಅದೇ ರೀತಿಯ ತಂತ್ರಜ್ಞಾನ ಸಹ ನಿರ್ದಿಷ್ಟ ದೇಶಗಳಲ್ಲಿರುವ Google ಫೋಟೋಗಳಲ್ಲಿ ಲಭ್ಯವಿದ್ದು, ಒಂದೇ ರೀತಿಯ ಮುಖಗಳನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ಜೊತೆಯಾಗಿ ಗುಂಪು ಮಾಡಲು ಕಂಪ್ಯೂಟರ್‌ಗಳಿಗೆ ಇದು ಸಹಾಯ ಮಾಡುತ್ತದೆ, ಬಳಕೆದಾರರಿಗೆ ಅವರ ಫೋಟೋಗಳನ್ನು ಹುಡುಕಲು ಮತ್ತು ನಿರ್ವಹಿಸಲು ಸುಲಭಗೊಳಿಸುತ್ತದೆ. Google ಫೋಟೋಗಳ ಸಹಾಯ ಕೇಂದ್ರದಲ್ಲಿ ಮುಖ ಗುಂಪು ಮಾಡುವಿಕೆ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ಧ್ವನಿ ಹುಡುಕಾಟ ಹೇಗೆ ಕಾರ್ಯನಿರ್ವಹಿಸುತ್ತದೆ

ಸಾಧನದಲ್ಲಿರುವ Google ಹುಡುಕಾಟ ಕ್ಲೈಂಟ್ ಅಪ್ಲಿಕೇಶನ್‌ಗೆ ಪ್ರಶ್ನೆಯನ್ನು ಟೈಪ್ ಮಾಡುವ ಬದಲಾಗಿ ಒಂದು ಧ್ವನಿ ಪ್ರಶ್ನೆಯನ್ನು ಒದಗಿಸಲು ಧ್ವನಿ ಹುಡುಕಾಟವು ನಿಮ್ಮನ್ನು ಅನುಮತಿಸುತ್ತದೆ. ಇದು ಆಡುಮಾತುಗಳನ್ನು ಲಿಖಿತ ಪಠ್ಯಕ್ಕೆ ಲಿಪ್ಯಂತರ ಮಾಡಲು ಮಾದರಿ ಗುರುತಿಸುವಿಕೆಯನ್ನು ಬಳಸುತ್ತದೆ. ನೀವು ಏನನ್ನು ಹೇಳಿರುವಿರಿ ಎಂಬುದನ್ನು ಗುರುತಿಸುವ ಸಲುವಾಗಿ Google ಸರ್ವರ್‌ಗಳಿಗೆ ನಾವು ಹೇಳಿಕೆಗಳನ್ನು ಕಳುಹಿಸುತ್ತೇವೆ.

ಧ್ವನಿ ಹುಡುಕಾಟಕ್ಕೆ ಮಾಡಿರುವ ಪ್ರತಿ ಧ್ವನಿ ಪ್ರಶ್ನೆಗಾಗಿ, ನಾವು ಭಾಷೆ, ರಾಷ್ಟ್ರ, ಮತ್ತು ಏನು ಹೇಳಲಾಗಿದೆ ಎಂಬ ನಮ್ಮ ಸಿಸ್ಟಂ ಊಹೆಯನ್ನು ಸಂಗ್ರಹಿಸುತ್ತೇವೆ. ಡೇಟಾ ಸೇವೆಗೆ ನಿಮ್ಮ ಒಪ್ಪಿಗೆಯನ್ನು ನೀಡಿದ್ದರೆ ಸೂಕ್ತ ಹುಡುಕಾಟ ಪ್ರಶ್ನೆಯನ್ನು ಉತ್ತಮವಾಗಿ ಗುರುತಿಸಲು ಸಿಸ್ಟಂಗೆ ತರಬೇತಿ ನೀಡುವುದು ಸೇರಿದಂತೆ, ನಮ್ಮ ಸೇವೆಗಳನ್ನು ಉತ್ತಮಗೊಳಿಸಲು ನಾವು ಹೇಳಿಕೆಗಳನ್ನು ಇರಿಸಿಕೊಳ್ಳುತ್ತೇವೆ. ಧ್ವನಿ ಹುಡುಕಾಟ ವೈಶಿಷ್ಟ್ಯವನ್ನು ಬಳಸುವ ಉದ್ದೇಶವನ್ನು ನೀವು ಸೂಚಿಸದ ಹೊರತು Google ಗೆ ನಾವು ಯಾವುದೇ ಹೇಳಿಕೆಗಳನ್ನು ಕಳುಹಿಸುವುದಿಲ್ಲ (ಉದಾಹರಣೆಗೆ, ತ್ವರಿತ ಹುಡುಕಾಟ ಪಟ್ಟಿಯಲ್ಲಿ ಅಥವಾ ವರ್ಚುಯಲ್ ಕೀಬೋರ್ಡ್‌ನಲ್ಲಿ ಮೈಕ್ರೊಫೋನ್ ಐಕಾನ್ ಒತ್ತುವುದು ಅಥವಾ ತ್ವರಿತ ಹುಡುಕಾಟ ಪಟ್ಟಿಯು ಧ್ವನಿ ಹುಡುಕಾಟ ವೈಶಿಷ್ಟ್ಟ ಲಭ್ಯವಿದೆ ಎಂದು ಸೂಚಿಸಿದಾಗ “Google” ಎಂದು ಹೇಳುವುದು).

Google Apps
ಪ್ರಮುಖ ಮೆನು