ಜನರೇಟಿವ್ AI ನಿಷೇಧಿತ ಬಳಕೆಗೆ ಸಂಬಂಧಿಸಿದ ನೀತಿ

ಕೊನೆಯ ಬಾರಿ ಮಾರ್ಪಡಿಸಿರುವುದು: ಮಾರ್ಚ್ 14, 2023

ಹೊಸ ವಿಷಯಗಳನ್ನು ಅನ್ವೇಷಿಸಲು, ನಿಮ್ಮ ಸೃಜನಶೀಲತೆಯನ್ನು ಉತ್ತೇಜಿಸಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಜನರೇಟಿವ್ AI ಮಾದರಿಗಳು ನಿಮಗೆ ಸಹಾಯ ಮಾಡುತ್ತವೆ. ಆದರೂ, ನೀವು ಅವುಗಳನ್ನು ಜವಾಬ್ದಾರಿಯುತವಾಗಿ, ಕಾನೂನುಬದ್ಧವಾಗಿ ಬಳಸುತ್ತೀರಿ ಮತ್ತು ತೊಡಗಿಸಿಕೊಳ್ಳುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ. ಅಂತಿಮವಾಗಿ, ಈ ನೀತಿಯನ್ನು ಉಲ್ಲೇಖಿಸುವ Google ಸೇವೆಗಳನ್ನು ನೀವು ಈ ಕೆಳಗಿನವುಗಳಿಗಾಗಿ ಬಳಸಬಾರದು:

  1. ಈ ಕೆಳಗಿನವುಗಳನ್ನು ಒಳಗೊಂಡಂತೆ ಅಪಾಯಕಾರಿ, ಕಾನೂನುಬಾಹಿರ ಅಥವಾ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿರ್ವಹಿಸುವುದು ಅಥವಾ ಸೌಲಭ್ಯ ಒದಗಿಸುವುದು
    1. ಕಾನೂನುಬಾಹಿರ ಚಟುವಟಿಕೆಗಳು ಅಥವಾ ಕಾನೂನು ಉಲ್ಲಂಘನೆಗಳನ್ನು ಮಾಡಲು ಸೌಲಭ್ಯ ಒದಗಿಸುವುದು ಅಥವಾ ಪ್ರಚಾರ ಮಾಡುವುದು, ಉದಾಹರಣೆಗೆ
      1. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಶೋಷಣೆಗೆ ಸಂಬಂಧಿಸಿದ ವಿಷಯವನ್ನು ಪ್ರಚಾರ ಮಾಡುವುದು ಅಥವಾ ರಚಿಸುವುದು
      2. ಕಾನೂನುಬಾಹಿರ ವಸ್ತುಗಳು, ಸರಕುಗಳು ಅಥವಾ ಸೇವೆಗಳ ಮಾರಾಟಕ್ಕೆ ಉತ್ತೇನ ನೀಡುವುದು ಅಥವಾ ಸೌಲಭ್ಯ ಒದಗಿಸುವುದು ಅಥವಾ ಸಂಶ್ಲೇಷಿಸಲು ಅಥವಾ ಆ್ಯಕ್ಸೆಸ್ ಮಾಡಲು ಸೂಚನೆಗಳನ್ನು ಒದಗಿಸುವುದು
      3. ಯಾವುದೇ ರೀತಿಯ ಅಪರಾಧಗಳನ್ನು ಮಾಡಲು ಬಳಕೆದಾರರಿಗೆ ಸೌಲಭ್ಯ ಒದಗಿಸುವುದು ಅಥವಾ ಅವರಿಗೆ ಪ್ರೋತ್ಸಾಹ ನೀಡುವುದು
      4. ಹಿಂಸಾತ್ಮಕ ಉಗ್ರವಾದ ಅಥವಾ ಭಯೋತ್ಪಾದಕ ವಿಷಯವನ್ನು ಪ್ರಚಾರ ಮಾಡುವುದು ಅಥವಾ ರಚಿಸುವುದು
    2. ಸೇವೆಗಳನ್ನು ದುರುಪಯೋಗ ಮಾಡಿಕೊಳ್ಳುವುದು, ಹಾನಿ ಮಾಡುವುದು, ಹಸ್ತಕ್ಷೇಪ ಮಾಡುವುದು ಅಥವಾ ಅಡ್ಡಿಪಡಿಸುವುದು (ಅಥವಾ ಹಾಗೆ ಮಾಡಲು ಇತರರನ್ನು ಉತ್ತೇಜಿಸುವುದು), ಉದಾಹರಣೆಗೆ
      1. ಸ್ಪ್ಯಾಮ್‌ ಅನ್ನು ರಚಿಸುವುದು ಅಥವಾ ವಿತರಣೆ ಮಾಡಲು ಉತ್ತೇಜಿಸುವುದು ಅಥವಾ ಸೌಲಭ್ಯ ಒದಗಿಸುವುದು
      2. ಮೋಸಗೊಳಿಸುವ ಅಥವಾ ವಂಚನೆಯ ಚಟುವಟಿಕೆಗಳು, ಸ್ಕ್ಯಾಮ್‌ಗಳು, ಫಿಶಿಂಗ್ ಅಥವಾ ಮಾಲ್‌ವೇರ್‌ಗಾಗಿ ವಿಷಯವನ್ನು ರಚಿಸುವುದು.
    3. ಭದ್ರತಾ ಫಿಲ್ಟರ್‌ಗಳನ್ನು ಅತಿಕ್ರಮಿಸುವುದು ಅಥವಾ ಬೈಪಾಸ್ ಮಾಡಲು ಪ್ರಯತ್ನಿಸುವುದು ಅಥವಾ ಉದ್ದೇಶಪೂರ್ವಕವಾಗಿ ಮಾದರಿಯು ನಮ್ಮ ನೀತಿಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದು
    4. ವ್ಯಕ್ತಿಗಳು ಅಥವಾ ಗುಂಪಿಗೆ ಹಾನಿ ಉಂಟುಮಾಡುವ ಅಥವಾ ಉತ್ತೇಜಿಸುವ ವಿಷಯವನ್ನು ರಚಿಸುವುದು, ಉದಾಹರಣೆಗೆ
      1. ದ್ವೇಷಕ್ಕೆ ಉತ್ತೇಜನ ನೀಡುವ ಅಥವಾ ಪ್ರಚಾರ ಮಾಡುವ ವಿಷಯವನ್ನು ರಚಿಸುವುದು
      2. ಇತರರನ್ನು ಬೆದರಿಸಲು, ನಿಂದನೆ ಮಾಡಲು ಅಥವಾ ಅವಮಾನಿಸಲು ಕಿರುಕುಳ ಅಥವಾ ಬೆದರಿಸುವಿಕೆಯ ವಿಧಾನಗಳಿಗೆ ಉತ್ತೇಜನ ನೀಡುವುದು
      3. ಹಿಂಸೆಯನ್ನು ಉತ್ತೇಜಿಸುವ, ಪ್ರಚಾರ ಮಾಡುವ ಅಥವಾ ಪ್ರಚೋದಿಸುವ ವಿಷಯವನ್ನು ರಚಿಸುವುದು
      4. ಸ್ವಯಂ-ಹಾನಿಗೆ ಸೌಲಭ್ಯ ಒದಗಿಸುವ, ಪ್ರಚಾರ ಮಾಡುವ ಅಥವಾ ಉತ್ತೇಜಿಸುವ ವಿಷಯವನ್ನು ರಚಿಸುವುದು
      5. ವಿತರಣೆ ಅಥವಾ ಇತರ ಹಾನಿಕಾರಕ ಚಟುವಟಿಕೆಗಳನ್ನು ಮಾಡಲು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ರಚಿಸುವುದು
      6. ಜನರ ಒಪ್ಪಿಗೆ ಇಲ್ಲದೆ ಅವರನ್ನು ಟ್ರ್ಯಾಕ್ ಮಾಡುವುದು ಅಥವಾ ಮೇಲ್ವಿಚಾರಣೆ ಮಾಡುವುದು
      7. ವಿಶೇಷವಾಗಿ ಸೂಕ್ಷ್ಮ ಅಥವಾ ಸಂರಕ್ಷಿತ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಜನರನ್ನು ಅನ್ಯಾಯವಾಗಿ ಅಥವಾ ಪ್ರತಿಕೂಲವಾಗಿ ಪರಿಣಾಮ ಬೀರುವ ವಿಷಯವನ್ನು ರಚಿಸುವುದು
  2. ತಪ್ಪು ಮಾಹಿತಿ, ತಪ್ಪಾಗಿ-ಪ್ರತಿನಿಧಿಸುವ ಅಥವಾ ತಪ್ಪುದಾರಿಗೆಳೆಯುವ ಉದ್ದೇಶವನ್ನು ಹೊಂದಿರುವ ವಿಷಯವನ್ನು ರಚಿಸುವುದು ಮತ್ತು ವಿತರಿಸುವುದು
    1. ಇದು ಮಾನವ-ರಚಿತ ವಿಷಯವಾಗಿದೆ ಎಂದು ಹೇಳಿಕೊಳ್ಳುವ ಮೂಲಕ ವಿಷಯದ ಮೂಲವನ್ನು ತಪ್ಪಾಗಿ ನಿರೂಪಿಸುವುದು ಅಥವಾ ಮೋಸಗೊಳಿಸುವ ಉದ್ದೇಶದಿಂದ, ರಚಿತವಾದ ವಿಷಯವು ಮೂಲ ವಿಷಯವಾಗಿದೆ ಎಂದು ಹೇಳಿಕೊಳ್ಳುವುದು
    2. ಸತ್ಯವನ್ನು ಸ್ಪಷ್ಟವಾಗಿ ಬಹಿರಂಗಪಡಿಸದೆ ಇತರರನ್ನು ವಂಚಿಸುವ ಉದ್ದೇಶಕ್ಕಾಗಿ ವ್ಯಕ್ತಿಯನ್ನು (ಜೀವಂತ ಅಥವಾ ಸತ್ತ) ಸೋಗು ಹಾಕುವ ವಿಷಯವನ್ನು ರಚಿಸುವುದು
    3. ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ (ಉದಾ. ಆರೋಗ್ಯ, ಹಣಕಾಸು, ಸರ್ಕಾರಿ ಸೇವೆಗಳು ಅಥವಾ ಕಾನೂನಿನಂತಹ) ಪರಿಣತಿ ಅಥವಾ ಸಾಮರ್ಥ್ಯದ ಕುರಿತು ದಾರಿತಪ್ಪಿಸುವ ಕ್ಲೈಮ್‌ಗಳನ್ನು ಮಾಡುವುದು
    4. ಮಹತ್ವವಾದ ಅಥವಾ ವೈಯಕ್ತಿಕ ಹಕ್ಕುಗಳು ಅಥವಾ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಡೊಮೇನ್‌ಗಳಲ್ಲಿ ಸ್ವಯಂಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು (ಉದಾಹರಣೆಗೆ, ಹಣಕಾಸು, ಕಾನೂನು, ಉದ್ಯೋಗ, ಆರೋಗ್ಯ, ವಸತಿ, ವಿಮೆ ಮತ್ತು ಸಾಮಾಜಿಕ ಕಲ್ಯಾಣ)
  3. ಅಶ್ಲೀಲ ಅಥವಾ ಲೈಂಗಿಕ ತೃಪ್ತಿ ಉದ್ದೇಶಗಳಿಗಾಗಿ ರಚಿಸಲಾದ ವಿಷಯ ಸೇರಿದಂತೆ ಅಶ್ಲೀಲ ವಿಷಯವನ್ನು ರಚಿಸುವುದು (ಉದಾ, ಸೆಕ್ಸ್ ಚಾಟ್‌ಬಾಟ್‌ಗಳಂತಹವು). ಇದು ವೈಜ್ಞಾನಿಕ, ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ಕಲಾತ್ಮಕ ಉದ್ದೇಶಗಳಿಗಾಗಿ ರಚಿಸಲಾದ ವಿಷಯವನ್ನು ಒಳಗೊಂಡಿರುವುದಿಲ್ಲ ಎಂಬುದನ್ನು ಗಮನಿಸಿ.
Google Apps
ಪ್ರಮುಖ ಮೆನು