Google ಸೇವಾ ನಿಯಮಗಳು

ಜಾರಿಗೊಳ್ಳುವುದು ಮೇ 22, 2024 | ಆರ್ಕೈವ್ ಮಾಡಿರುವ ಆವೃತ್ತಿಗಳು | PDF ಡೌನ್‌ಲೋಡ್ ಮಾಡಿ

ದೇಶದ ಆವೃತ್ತಿ: ಯುನೈಟೆಡ್ ಸ್ಟೇಟ್ಸ್

ಈ ಪುಟವು, ಮೇ 22, 2024 ರಿಂದ ಜಾರಿಗೆ ಬರಲಿರುವ ನಮ್ಮ ಹೊಸ ಸೇವಾ ನಿಯಮಗಳ ಪೂರ್ವವೀಕ್ಷಣೆಯನ್ನು ಒದಗಿಸುತ್ತದೆ. ಅಲ್ಲಿಯವರೆಗೆ, ಈಗಿರುವ ಸೇವಾ ನಿಯಮಗಳು Google ನಿಂದ ಏನನ್ನು ನಿರೀಕ್ಷಿಸಬಹುದು ಮತ್ತು ನೀವು ನಮ್ಮ ಸೇವೆಗಳನ್ನು ಬಳಸುವಾಗ ನಾವು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತೇವೆ ಎಂಬುದನ್ನು ವಿವರಿಸುತ್ತವೆ.

ಈ ನಿಯಮಗಳು ಏನನ್ನೆಲ್ಲಾ ಒಳಗೊಂಡಿವೆ

ಈ ಸೇವಾ ನಿಯಮಗಳನ್ನು ಸ್ಕಿಪ್ ಮಾಡಬೇಕೆಂದು ಗಾಢವಾಗಿ ಅನ್ನಿಸುತ್ತಿರಬಹುದು. ಆದರೆ ನೀವು Google ಸೇವೆಗಳನ್ನು ಬಳಸುವಾಗ ನಮ್ಮಿಂದ ನೀವು ಹಾಗೂ ನಿಮ್ಮಿಂದ ನಾವು ಏನನ್ನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಇದನ್ನು ಓದುವುದು ಅತ್ಯವಶ್ಯಕ.

ಈ ಸೇವಾ ನಿಯಮಗಳು Google ನ ವ್ಯವಹಾರ ನಡೆಯು ಬಗೆ, ನಮ್ಮ ಕಂಪನಿಗೆ ಅನ್ವಯವಾಗುವ ಕಾನೂನುಗಳು ಮತ್ತು ನಾವು ಯಾವಾಗಲೂ ನಿಜವೆಂದು ನಂಬಿರುವ ಕೆಲವೊಂದು ವಿಷಯಗಳಿಗೆ ಕನ್ನಡಿ ಹಿಡಿಯುತ್ತವೆ. ಇದರ ಫಲವಾಗಿ, ನೀವು ನಮ್ಮ ಸೇವೆಗಳೊಂದಿಗೆ ಸಂವಹನ ನಡೆಸುವಾಗ ನಿಮ್ಮೊಂದಿಗಿನ Google ನ ಸಂಬಂಧವನ್ನು ರೂಪಿಸಲು ಈ ಸೇವಾ ನಿಯಮಗಳು ಸಹಾಯ ಮಾಡುತ್ತವೆ. ಉದಾಹರಣೆಗೆ, ಈ ನಿಯಮಗಳು ಈ ಕೆಳಗಿನ ವಿಷಯದ ಶೀರ್ಷಿಕೆಗಳನ್ನು ಒಳಗೊಂಡಿವೆ:

ಈ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಏಕೆಂದರೆ, ನಮ್ಮ ಸೇವೆಗಳನ್ನು ಆ್ಯಕ್ಸೆಸ್ ಮಾಡುವ ಮೂಲಕ ಅಥವಾ ಬಳಸುವ ಮೂಲಕ (ನೀವು Google ಖಾತೆಗೆ ಸೈನ್ ಇನ್ ಮಾಡಿದ್ದರೂ ಅಥವಾ ಮಾಡಿರದಿದ್ದರೂ), ನೀವು ಈ ನಿಯಮಗಳಿಗೆ ಸಮ್ಮತಿಸುತ್ತೀರಿ.

ಈ ನಿಯಮಗಳನ್ನಷ್ಟೇ ಅಲ್ಲದೇ, ನಾವು ಗೌಪ್ಯತೆ ನೀತಿಯನ್ನು ಸಹ ಪ್ರಕಟಿಸುತ್ತೇವೆ. ನಿಮ್ಮ ಮಾಹಿತಿಯನ್ನು ಅಪ್‌ಡೇಟ್‌ ಮಾಡುವುದು, ನಿರ್ವಹಿಸುವುದು, ರಫ್ತು ಮಾಡುವುದು ಹಾಗೂ ಅಳಿಸುವುದು ಹೇಗೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೀವಿದನ್ನು ಓದಿಕೊಳ್ಳುವಂತೆ ನಾವು ನಿಮಗೆ ಶಿಫಾರಸು ಮಾಡುತ್ತೇವೆ.

ನಿಯಮಗಳು

ಸೇವೆ ಪೂರೈಕೆದಾರರು

ಈ ಕೆಳಗಿನವರು Google ಸೇವೆಗಳನ್ನು ಒದಗಿಸಿದವರು, ಮತ್ತು ಇವರೊಂದಿಗೆ ನೀವು ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ:

Google LLC
ಡೆಲವೇರ್, USA ಯ ರಾಜ್ಯದ ಕಾನೂನುಗಳ ಅಡಿಯಲ್ಲಿ ಆಯೋಜಿಸಲಾಗಿದೆ ಮತ್ತು USA ಯ ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ

1600 Amphitheatre Parkway
Mountain View, California 94043
USA

ನಿರ್ದಿಷ್ಟ ವಯಸ್ಸಿನ ಅಗತ್ಯಗಳು

ನಿಮ್ಮ ಸ್ವಂತ Google ಖಾತೆಯನ್ನು ನಿರ್ವಹಿಸಲು ಅಗತ್ಯವಿರುವ ವಯಸ್ಸಿಗಿಂತ ನೀವು ಕಡಿಮೆ ವಯಸ್ಸಿನವರಾಗಿದ್ದರೆ, Google ಖಾತೆಯನ್ನು ಬಳಸಲು ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರ ಅನುಮತಿಯನ್ನು ನೀವು ಹೊಂದಿರಬೇಕು. ಈ ನಿಯಮಗಳನ್ನು ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರೊಂದಿಗೆ ಓದಿ.

ನೀವು ಪೋಷಕರು ಅಥವಾ ಕಾನೂನುಬದ್ಧ ಪೋಷಕರಾಗಿದ್ದರೆ, ಮತ್ತು ನಿಮ್ಮ ಮಗುವಿಗೆ ಸೇವೆಗಳನ್ನು ಬಳಸಲು ನೀವು ಅನುಮತಿಸಿದರೆ, ಈ ನಿಯಮಗಳು ನಿಮಗೆ ಅನ್ವಯಿಸುತ್ತವೆ ಮತ್ತು ಸೇವೆಗಳಲ್ಲಿನ ನಿಮ್ಮ ಮಗುವಿನ ಚಟುವಟಿಕೆಗೆ ನೀವು ಜವಾಬ್ದಾರರಾಗಿರುತ್ತೀರಿ.

ಕೆಲವು Google ಸೇವೆಗಳು ತಮ್ಮ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ನೀತಿಗಳಲ್ಲಿ ವಿವರಿಸಿದಂತೆ, ಹೆಚ್ಚುವರಿ "ನಿರ್ದಿಷ್ಟ ವಯಸ್ಸಿನ ಅಗತ್ಯಗಳನ್ನು" ಹೊಂದಿವೆ.

Google ಜೊತೆಗಿನ ನಿಮ್ಮ ಸಂಬಂಧ

ಈ ನಿಯಮಗಳು ನಿಮ್ಮ ಮತ್ತು Google ನಡುವಿನ ಸಂಬಂಧವನ್ನು ವ್ಯಾಖ್ಯಾನಿಸಲು ಸಹಾಯ ಮಾಡುತ್ತವೆ. ನಾವು “Google,” “ನಾವು”, “ನಮಗೆ” ಮತ್ತು “ನಮ್ಮ” ಎಂದು ಹೇಳಿದಾಗ, ನಾವು ಎಂದರೆ Google LLC ಮತ್ತು ಅದರ ಅಫಿಲಿಯೇಟ್‌ಗಳು. ವಿಶಾಲವಾಗಿ ಹೇಳುವುದಾದರೆ, Google ನ ವ್ಯಾಪಾರ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ನಾವು ಹಣವನ್ನು ಹೇಗೆ ಗಳಿಸುತ್ತೇವೆ ಎಂಬುದನ್ನು ಪ್ರತಿಬಿಂಬಿಸುವ ಈ ನಿಯಮಗಳನ್ನು ಅನುಸರಿಸಲು ನೀವು ಒಪ್ಪಿದರೆ, ನಮ್ಮ ಸೇವೆಗಳನ್ನು ಆ್ಯಕ್ಸೆಸ್ ಮಾಡಲು ಮತ್ತು ಬಳಸಲು ನಾವು ನಿಮಗೆ ಅನುಮತಿ ನೀಡುತ್ತೇವೆ.

ನೀವು ನಮ್ಮಿಂದ ಏನನ್ನು ನಿರೀಕ್ಷಿಸಬಹುದು

ಹಲವು ಬಗೆಯ ಉಪಯುಕ್ತ ಸೇವೆಗಳನ್ನು ಒದಗಿಸುವುದು

ಈ ನಿಯಮಗಳಿಗೆ ಒಳಪಟ್ಟ ಹಾಗೆ, ಈ ಕೆಳಗಿನವುಗಳನ್ನು ಒಳಗೊಂಡಂತೆ ನಾವು ವಿಶಾಲ ಶ್ರೇಣಿಯ ಸೇವೆಗಳನ್ನು ಒದಗಿಸುತ್ತೇವೆ:
  • ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾ., Search ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (ಉದಾ., Google Shopping)
  • ಸಂಯೋಜಿತ ಸೇವೆಗಳು (ಉದಾ., ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು (ಉದಾ., Google Nest ಮತ್ತು Pixel)

ಇವುಗಳಲ್ಲಿ ಹಲವು ಸೇವೆಗಳು ನೀವು ಸ್ಟ್ರೀಮ್ ಮಾಡಬಹುದಾದ ಅಥವಾ ಸಂವಹನ ನಡೆಸಬಹುದಾದ ವಿಷಯವನ್ನು ಸಹ ಒಳಗೊಂಡಿವೆ.

ನಮ್ಮ ಸೇವೆಗಳನ್ನು ಒಟ್ಟಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ನೀವು ಒಂದು ಚಟುವಟಿಕೆಯಿಂದ ಇನ್ನೊಂದಕ್ಕೆ ಹೋಗುವುದು ಸುಲಭವಾಗುತ್ತದೆ. ಉದಾಹರಣೆಗೆ, ನಿಮ್ಮ Calendar ಈವೆಂಟ್ ಒಂದು ವಿಳಾಸವನ್ನು ಒಳಗೊಂಡಿದ್ದರೆ, ನೀವು ಆ ವಿಳಾಸದ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿಗೆ ತಲುಪುವುದು ಹೇಗೆ ಎಂಬುದನ್ನು Maps ತೋರಿಸುತ್ತದೆ.

Google ಸೇವೆಗಳನ್ನು ಅಭಿವೃದ್ಧಿಪಡಿಸಿ, ಸುಧಾರಿಸಿ ಹಾಗೂ ಅಪ್‌ಡೇಟ್‌ ಮಾಡಿ

ನಮ್ಮ ಸೇವೆಗಳನ್ನು ಸುಧಾರಿಸಲು ನಾವು ಹೊಸ ತಂತ್ರಜ್ಞಾನಗಳು ಮತ್ತು ಫೀಚರ್‌ಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿರುತ್ತೇವೆ. ಉದಾಹರಣೆಗೆ, ನಿಮಗೆ ಏಕಕಾಲೀನ ಅನುವಾದಗಳನ್ನು ಒದಗಿಸಲು ಹಾಗೂ ಸ್ಪ್ಯಾಮ್ ಮತ್ತು ಮಾಲ್‌ವೇರ್ ಅನ್ನು ಇನ್ನೂ ಉತ್ತಮವಾಗಿ ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ನಾವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ಮಷಿನ್ ಲರ್ನಿಂಗ್ ಅನ್ನು ಬಳಸುತ್ತೇವೆ. ಈ ನಿರಂತರ ಸುಧಾರಣೆಯ ಭಾಗವಾಗಿ, ನಾವು ಕೆಲವೊಮ್ಮೆ ಫೀಚರ್‌ಗಳು ಮತ್ತು ಕಾರ್ಯಾಚರಣೆಗಳನ್ನು ಸೇರಿಸುತ್ತೇವೆ ಅಥವಾ ತೆಗೆದುಹಾಕುತ್ತೇವೆ, ನಮ್ಮ ಸೇವೆಗಳಿಗೆ ಮಿತಿಗಳನ್ನು ಹೆಚ್ಚಿಸುತ್ತೇವೆ ಅಥವಾ ಕಡಿಮೆ ಮಾಡುತ್ತೇವೆ ಮತ್ತು ಹೊಸ ಸೇವೆಗಳನ್ನು ಒದಗಿಸಲು ಪ್ರಾರಂಭಿಸುತ್ತೇವೆ ಅಥವಾ ಹಳೆಯವುಗಳನ್ನು ಒದಗಿಸುವುದನ್ನು ನಿಲ್ಲಿಸುತ್ತೇವೆ. ಸೇವೆಗಾಗಿ, ಡೌನ್‌ಲೋಡ್ ಮಾಡಬಹುದಾದ ಅಥವಾ ಪ್ರಿಲೋಡ್ ಮಾಡಲಾದ ಸಾಫ್ಟ್‌ವೇರ್‌ನ ಅಗತ್ಯವಿದ್ದಾಗ ಅಥವಾ ಅದನ್ನು ಒಳಗೊಂಡಿದ್ದಾಗ, ಹೊಸ ಆವೃತ್ತಿ ಅಥವಾ ಫೀಚರ್ ಲಭ್ಯವಾದ ನಂತರ ಆ ಸಾಫ್ಟ್‌ವೇರ್, ಕೆಲವೊಮ್ಮೆ ನಿಮ್ಮ ಸಾಧನದಲ್ಲಿ ಸ್ವಯಂಚಾಲಿತವಾಗಿ ಅಪ್‌ಡೇಟ್‌ ಆಗುತ್ತದೆ. ನಿಮ್ಮ ಸ್ವಯಂಚಾಲಿತ ಅಪ್‌ಡೇಟ್‌ ಸೆಟ್ಟಿಂಗ್‌ಗಳನ್ನು ಹೊಂದಾಣಿಕೆ ಮಾಡಲು ಕೆಲವು ಸೇವೆಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ.

ನಮ್ಮ ಸೇವೆಗಳ ನಿಮ್ಮ ಬಳಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಭೌತಿಕ ಬದಲಾವಣೆಗಳನ್ನು ನಾವು ಮಾಡಿದರೆ ಅಥವಾ ನಾವು ಸೇವೆಯನ್ನು ನೀಡುವುದನ್ನು ನಿಲ್ಲಿಸಿದರೆ, ದುರ್ಬಳಕೆಯನ್ನು ತಡೆಗಟ್ಟುವುದು, ಕಾನೂನು ಅವಶ್ಯಕತೆಗಳಿಗೆ ಸ್ಪಂದಿಸುವುದು ಅಥವಾ ಭದ್ರತೆ ಮತ್ತು ಕಾರ್ಯನಿರ್ವಹಣೆ ಸಮಸ್ಯೆಗಳನ್ನು ಪರಿಹರಿಸುವಂತಹ ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ನಿಮಗೆ ಸಮಂಜಸವಾದ ಮುಂಗಡ ಸೂಚನೆಯನ್ನು ನಾವು ನೀಡುತ್ತೇವೆ. Google Takeout ಬಳಸಿಕೊಂಡು ನಿಮ್ಮ Google ಖಾತೆಯಿಂದ ನಿಮ್ಮ ವಿಷಯವನ್ನು ರಫ್ತು ಮಾಡುವ ಅವಕಾಶವನ್ನು ಸಹ ನಿಮಗೆ ಒದಗಿಸುತ್ತೇವೆ, ಇದು ಅನ್ವಯವಾಗುವ ಕಾನೂನು ಮತ್ತು ನೀತಿಗಳಿಗೆ ಒಳಪಟ್ಟಿರುತ್ತದೆ.

ನಿಮ್ಮಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ

ಈ ನಿಯಮಗಳು ಮತ್ತು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಅನುಸರಿಸಿ

ನಮ್ಮ ಸೇವೆಗಳನ್ನು ಆ್ಯಕ್ಸೆಸ್ ಮಾಡಲು ಮತ್ತು ಬಳಸಲು ನಾವು ನಿಮಗೆ ನೀಡುವ ಅನುಮತಿಯು, ಈ ಕೆಳಗಿನವುಗಳಿಗೆ ಸಂಬಂಧಿಸಿದ ನಿಮ್ಮ ಜವಾಬ್ದಾರಿಗಳನ್ನು ನೀವು ಪೂರೈಸುವವರೆಗೂ ಮುಂದುವರಿಯುತ್ತದೆ:

ನಮ್ಮ ಸೇವೆಗಳನ್ನು ಬಳಸಲು ಅನ್ವಯವಾಗುವ ನಮ್ಮ ಗೌಪ್ಯತೆ ನೀತಿ ಗೆ ನೀವು ಸಮ್ಮತಿಸಬೇಕಾಗುತ್ತದೆ ಎಂಬುದನ್ನು ಸಹ ನೀವು ಒಪ್ಪಿಕೊಳ್ಳುತ್ತೀರಿ. ನಾವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲು ಹಾಗೂ ನಮ್ಮ ಸೇವೆಗಳ ಬಳಕೆಯ ಕುರಿತ ನಿರೀಕ್ಷೆಗಳನ್ನು ಗೊತ್ತುಪಡಿಸಲು, ನಾವು ಕೃತಿಸ್ವಾಮ್ಯ ಸಹಾಯ ಕೇಂದ್ರ, ಸುರಕ್ಷತಾ ಕೇಂದ್ರ, ಪಾರದರ್ಶಕತೆ ಕೇಂದ್ರ ರೀತಿಯ ಸಂಪನ್ಮೂಲಗಳನ್ನು ಒದಗಿಸುತ್ತೇವೆ, ಹಾಗೂ ನಮ್ಮ ನೀತಿಗಳ ಸೈಟ್‌ ಮೂಲಕ ನಮ್ಮ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿವರಣೆಗಳನ್ನು ಸಹ ಒದಗಿಸುತ್ತೇವೆ. ಅಂತಿಮವಾಗಿ, ನಮ್ಮ ಸೇವೆಗಳಲ್ಲಿ ನಾವು ನಿಮಗೆ ನಿರ್ದಿಷ್ಟ ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಒದಗಿಸಬಹುದು - ಉದಾಹರಣೆಗೆ, ನಿಮಗೆ ಮುಖ್ಯ ಮಾಹಿತಿಯ ಕುರಿತು ಎಚ್ಚರಿಕೆ ನೀಡುವ ಸಂವಾದ ಪೆಟ್ಟಿಗೆಗಳು.

ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ಅನುಮತಿ ನೀಡಿದ್ದರೂ, ನಾವು ಸೇವೆಗಳಲ್ಲಿ ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳುತ್ತೇವೆ.

ಇತರರನ್ನು ಗೌರವಿಸಿ

ನಾವು ಎಲ್ಲರಿಗೂ ಗೌರವಯುತವಾದ ಪರಿಸರವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ, ಇದರ ಅರ್ಥ, ನಡವಳಿಕೆಯ ಈ ಪ್ರಾಥಮಿಕ ನಿಯಮಗಳನ್ನು ನೀವು ಅನುಸರಿಸಬೇಕು:
  • ರಫ್ತು ನಿಯಂತ್ರಣ, ನಿರ್ಬಂಧಗಳು ಮತ್ತು ಮಾನವ ಕಳ್ಳಸಾಗಣೆಯ ಕಾನೂನುಗಳೂ ಸೇರಿದ ಹಾಗೆ ಅನ್ವಯಿಸುವ ಕಾನೂನುಗಳನ್ನು ಅನುಸರಿಸಿ
  • ಗೌಪ್ಯತೆ ಮತ್ತು ಬೌದ್ಧಿಕ ಸ್ವತ್ತಿನ ಹಕ್ಕುಗಳು ಸೇರಿದಂತೆ ಇತರರ ಹಕ್ಕುಗಳನ್ನು ಗೌರವಿಸಿ
  • ಇತರರನ್ನು ಅಥವಾ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳಬೇಡಿ ಅಥವಾ ಹಾನಿ ಮಾಡಬೇಡಿ (ಅಥವಾ ಅಂತಹ ದುರುಪಯೋಗ ಅಥವಾ ಹಾನಿಯ ಬೆದರಿಕೆಯೊಡ್ಡಬೇಡಿ ಅಥವಾ ಅದನ್ನು ಪ್ರೋತ್ಸಾಹಿಸಬೇಡಿ ) — ಉದಾಹರಣೆಗೆ, ಇತರರನ್ನು ದಾರಿ ತಪ್ಪಿಸುವ, ವಂಚಿಸುವ, ಕಾನೂನುಬಾಹಿರವಾಗಿ ಸೋಗು ಹಾಕುವ, ಮಾನಹಾನಿ ಮಾಡುವ, ನಿಂದಿಸುವ, ಕಿರುಕುಳ ನೀಡುವ ಅಥವಾ ಹಿಂಬಾಲಿಸುವ ಮೂಲಕ

ನಮ್ಮ ಜನರೇಟಿವ್ AI ನಿಷೇಧಿತ ಬಳಕೆಗೆ ಸಂಬಂಧಿಸಿದ ನೀತಿಗಳಂತಹ ನಮ್ಮ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ಕಾರ್ಯನೀತಿಗಳು, ಆ ಸೇವೆಗಳನ್ನು ಬಳಸುವ ಪ್ರತಿಯೊಬ್ಬರೂ ಅನುಸರಿಸಬೇಕಾದ ಸೂಕ್ತ ನಡವಳಿಕೆಯ ಕುರಿತು ಹೆಚ್ಚುವರಿ ವಿವರಗಳನ್ನು ಒದಗಿಸುತ್ತವೆ. ಇತರರು ಈ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ನಿಮಗೆ ಕಂಡುಬಂದರೆ, ನಮ್ಮ ಅನೇಕ ಸೇವೆಗಳು ದುರುಪಯೋಗವನ್ನು ವರದಿ ಮಾಡಲು ನಿಮಗೆ ಅನುಮತಿಸುತ್ತದೆ. ದುರುಪಯೋಗದ ವರದಿಯ ಕುರಿತು ನಾವು ಕ್ರಮ ಕೈಗೊಂಡರೆ, ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು ವಿಭಾಗದಲ್ಲಿ ವಿವರಿಸಿದಂತೆ ನಾವು ಪ್ರಕ್ರಿಯೆಯನ್ನು ಸಹ ಒದಗಿಸುತ್ತೇವೆ.

ನಮ್ಮ ಸೇವೆಗಳನ್ನು ದುರುಪಯೋಗ ಮಾಡಬೇಡಿ

ನಮ್ಮ ಸೇವೆಗಳನ್ನು ಆ್ಯಕ್ಸೆಸ್ ಮಾಡುವ ಅಥವಾ ಬಳಸುವ ಹೆಚ್ಚಿನ ಜನರು, ಇಂಟರ್ನೆಟ್ ಅನ್ನು ಸುರಕ್ಷಿತ ಮತ್ತು ಮುಕ್ತವಾಗಿರಿಸುವ ಸಾಮಾನ್ಯ ನಿಯಮಗಳನ್ನು ಅರ್ಥಮಾಡಿಕೊಂಡಿರುತ್ತಾರೆ. ದುರದೃಷ್ಟವಶಾತ್, ಕೆಲವು ಜನರು ಆ ನಿಯಮಗಳನ್ನು ಗೌರವಿಸುವುದಿಲ್ಲ, ಆದ್ದರಿಂದ ನಮ್ಮ ಸೇವೆಗಳು ಹಾಗೂ ಬಳಕೆದಾರರನ್ನು ದುರುಪಯೋಗದಿಂದ ರಕ್ಷಿಸಲು ಆ ನಿಯಮಗಳನ್ನು ಇಲ್ಲಿ ವಿವರಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ:

ನಮ್ಮ ಸೇವೆಗಳು ಅಥವಾ ಸಿಸ್ಟಂಗಳನ್ನು ನೀವು ದುರುಪಯೋಗ ಮಾಡಬಾರದು, ಅವುಗಳಿಗೆ ಹಾನಿ ಮಾಡಬಾರದು, ಅವುಗಳಲ್ಲಿ ಹಸ್ತಕ್ಷೇಪ ಮಾಡಬಾರದು ಅಥವಾ ಅವುಗಳಿಗೆ ಅಡಚಣೆ ಉಂಟುಮಾಡಬಾರದು — ಉದಾಹರಣೆಗೆ, ಈ ರೀತಿಯಲ್ಲಿ:
  • ಮಾಲ್‌ವೇರ್ ಅನ್ನು ಸೇರಿಸುವುದು
  • ನಮ್ಮ ಸಿಸ್ಟಂಗಳು ಅಥವಾ ರಕ್ಷಣಾತ್ಮಕ ಕ್ರಮಗಳನ್ನು ಸ್ಪ್ಯಾಮ್ ಮಾಡುವುದು, ಹ್ಯಾಕ್ ಮಾಡುವುದು ಅಥವಾ ಬೈಪಾಸ್ ಮಾಡುವುದು
  • ನಮ್ಮ ಸುರಕ್ಷತೆ ಹಾಗೂ ಬಗ್ ಪರೀಕ್ಷೆ ಪ್ರೋಗ್ರಾಂಗಳ ಭಾಗವಾಗಿರುವ ಪ್ರಕ್ರಿಯೆಗಳನ್ನು ಹೊರತುಪಡಿಸಿ ಜೈಲ್‌ಬ್ರೇಕಿಂಗ್, ದುರ್ವಿನಿಯೋಗ ಪ್ರಾಂಪ್ಟ್ ಮಾಡುವಿಕೆ ಅಥವಾ ಪ್ರಾಂಪ್ಟ್ ಸೇರಿಸುವಿಕೆ
  • ಈ ಕೆಳಗಿನವುಗಳ ಹಾಗೆ, ನಮ್ಮ ಸೇವೆಗಳು ಅಥವಾ ಕಂಟೆಂಟ್ ಅನ್ನು, ವಂಚಿಸುವ ಅಥವಾ ಮೋಸಗೊಳಿಸುವ ವಿಧಾನಗಳಲ್ಲಿ ಆ್ಯಕ್ಸೆಸ್ ಮಾಡುವುದು ಅಥವಾ ಬಳಸುವುದು:
    • ಫಿಶಿಂಗ್
    • ನಕಲಿ ಅಭಿಪ್ರಾಯಗಳು ಸೇರಿದಂತೆ ನಕಲಿ ಖಾತೆಗಳು ಅಥವಾ ಕಂಟೆಂಟ್ ಅನ್ನು ರಚಿಸುವುದು
    • ಜನರೇಟಿವ್ AI ಕಂಟೆಂಟ್ ಅನ್ನು ವ್ಯಕ್ತಿಯೊಬ್ಬರು ರಚಿಸಿದ್ದಾರೆ ಎಂದು ಇತರರು ಭಾವಿಸುವ ಹಾಗೆ ದಾರಿ ತಪ್ಪಿಸುವುದು
    • ಸೇವೆಗಳನ್ನು ಮೂಲತಃ ನಾವು ಒದಗಿಸಿದ್ದರೂ, ಅವುಗಳನ್ನು ನೀವು (ಅಥವಾ ಬೇರೆ ಯಾರೋ) ಒದಗಿಸಿದ್ದೀರಿ ಎಂದು ಭಾಸವಾಗುವಂತಹ ಸೇವೆಗಳನ್ನು ಒದಗಿಸುವುದು
  • ಸೇವೆಗಳನ್ನು ಮೂಲತಃ ನಾವು ಒದಗಿಸಿರದಿದ್ದರೂ, ಅವುಗಳನ್ನು ನಾವು ಒದಗಿಸಿದ್ದೇವೆ ಎಂದು ಭಾಸವಾಗುವಂತಹ ಸೇವೆಗಳನ್ನು ಒದಗಿಸುವುದು
  • ಯಾವುದೇ ವ್ಯಕ್ತಿಯ ಬೌದ್ಧಿಕ ಸ್ವತ್ತು ಅಥವಾ ಗೌಪ್ಯತೆಯ ಹಕ್ಕುಗಳಂತಹ ಕಾನೂನಾತ್ಮಕ ಹಕ್ಕುಗಳನ್ನು ಉಲ್ಲಂಘಿಸುವುದಕ್ಕಾಗಿ ನಮ್ಮ ಸೇವೆಗಳನ್ನು (ಅವುಗಳು ಒದಗಿಸುವ ಕಂಟೆಂಟ್ ಒಳಗೊಂಡಂತೆ) ಬಳಸುವುದು
  • ಅನ್ವಯಿಸುವ ಕಾನೂನು ಅನುಮತಿಸಿರುವುದನ್ನು ಹೊರತುಪಡಿಸಿ, ಟ್ರೇಡ್ ಸೀಕ್ರೆಟ್‌ಗಳು ಅಥವಾ ಇತರ ಒಡೆತನದ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಸೇವೆಗಳನ್ನು ಅಥವಾ ನಮ್ಮ ಮಷಿನ್ ಲರ್ನಿಂಗ್ ಮಾಡಲ್‌ಗಳಂತಹ ಅದರೊಳಗಿನ ತಂತ್ರಜ್ಞಾನವನ್ನು ರಿವರ್ಸ್ ಎಂಜಿನಿಯರಿಂಗ್ ಮಾಡುವುದು
  • ನಮ್ಮ ವೆಬ್ ಪುಟಗಳಲ್ಲಿರುವ, ಮಷಿನ್-ಓದಬಹುದಾದ ಸೂಚನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ನಮ್ಮ ಯಾವುದೇ ಸೇವೆಗಳಿಂದ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡುವುದಕ್ಕಾಗಿ ಸ್ವಯಂಚಾಲಿತ ವಿಧಾನಗಳನ್ನು ಬಳಸುವುದು (ಉದಾಹರಣೆಗೆ, ಕ್ರಾಲ್ ಮಾಡುವಿಕೆ, ತರಬೇತಿ ಅಥವಾ ಇತರ ಚಟುವಟಿಕೆಗಳನ್ನು ಅನುಮತಿಸದ robots.txt ಫೈಲ್‌ಗಳು)
  • ಮಷಿನ್ ಲರ್ನಿಂಗ್ ಮಾಡಲ್‌ಗಳು ಅಥವಾ ಸಂಬಂಧಿತ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ನಮ್ಮ ಸೇವೆಗಳಿಂದ AI-ಜನರೇಟೆಡ್ ಕಂಟೆಂಟ್ ಅನ್ನು ಬಳಸುವುದು
  • ಈ ನಿಯಮಗಳನ್ನು ಉಲ್ಲಂಘಿಸುವುದಕ್ಕಾಗಿ, ನೀವು ಯಾರು ಎಂಬುದನ್ನು ಮರೆಮಾಚುವುದು ಅಥವಾ ತಪ್ಪಾಗಿ ಪ್ರತಿನಿಧಿಸುವುದು
  • ಇತರರು ಈ ನಿಯಮಗಳನ್ನು ಉಲ್ಲಂಘಿಸಲು ಪ್ರೋತ್ಸಾಹ ನೀಡುವಂತಹ ಸೇವೆಗಳನ್ನು ಒದಗಿಸುವುದು

ನಿಮ್ಮ ವಿಷಯ ಬಳಕೆಗೆ ಅನುಮತಿ

ನಮ್ಮ ಕೆಲವು ಸೇವೆಗಳನ್ನು ನಿಮ್ಮ ವಿಷಯವನ್ನು ಅಪ್‌ಲೋಡ್ ಮಾಡಲು, ಸಲ್ಲಿಸಲು, ಸಂಗ್ರಹಿಸಲು, ಕಳುಹಿಸಲು, ಸ್ವೀಕರಿಸಲು ಅಥವಾ ಹಂಚಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಮ್ಮ ಸೇವೆಗಳಿಗೆ ಯಾವುದೇ ವಿಷಯವನ್ನು ಒದಗಿಸಲು ನೀವು ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ ಮತ್ತು ನೀವು ಒದಗಿಸಲು ಬಯಸುವ ವಿಷಯವನ್ನು ನೀವು ಮುಕ್ತವಾಗಿ ಆಯ್ಕೆಮಾಡಬಹುದು. ನೀವು ವಿಷಯವನ್ನು ಅಪ್‌ಲೋಡ್ ಮಾಡಲು ಅಥವಾ ಹಂಚಿಕೊಳ್ಳಲು ಆಯ್ಕೆಮಾಡಿದ್ದರೆ, ನೀವು ಹಾಗೆ ಮಾಡಲು ಅಗತ್ಯವಾದ ಹಕ್ಕುಗಳನ್ನು ಹೊಂದಿದ್ದೀರಿ ಮತ್ತು ವಿಷಯವು ಕಾನೂನುಬದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪರವಾನಗಿ

ನಿಮ್ಮ ವಿಷಯ ನಿಮ್ಮದಾಗಿದೆ, ನಿಮ್ಮ ವಿಷಯದಲ್ಲಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀವು ಉಳಿಸಿಕೊಳ್ಳುತ್ತೀರಿ. ಉದಾಹರಣೆಗೆ, ನೀವು ಸೃಷ್ಟಿಸುವ ಸೃಜನಾತ್ಮಕ ವಿಷಯಕ್ಕೆ ನೀವು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿರುತ್ತೀರಿ, ಉದಾಹರಣೆಗೆ ನೀವು ಬರೆಯುವ ವಿಮರ್ಶೆಗಳು. ಅಥವಾ ಬೇರೊಬ್ಬರು ನಿಮಗೆ ಅನುಮತಿ ನೀಡಿದರೆ, ಅವರ ಸೃಜನಾತ್ಮಕ ವಿಷಯವನ್ನು ಹಂಚಿಕೊಳ್ಳಲು ನಿಮಗೆ ಹಕ್ಕಿರುತ್ತದೆ.

ನಿಮ್ಮ ವಿಷಯದ ಬಳಕೆಯನ್ನು ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳು ನಿರ್ಬಂಧಿಸಿದರೆ ನಿಮ್ಮ ಅನುಮತಿ ನಮಗೆ ಬೇಕಿದೆ. ಆ ಅನುಮತಿಯನ್ನು ನೀವು ಈ ಪರವಾನಗಿಯ ಮೂಲಕ Google ಗೆ ನೀಡುತ್ತೀರಿ.

ಏನನ್ನು ಒಳಗೊಂಡಿದೆ

ಬೌದ್ಧಿಕ ಆಸ್ತಿ ಹಕ್ಕುಗಳ ಮೂಲಕ ನಿಮ್ಮ ವಿಷಯವನ್ನು ರಕ್ಷಿಸಿದ್ದರೆ, ಈ ಪರವಾನಗಿಯು ಆ ವಿಷಯವನ್ನು ರಕ್ಷಿಸುತ್ತದೆ.

ಇವುಗಳನ್ನು ಒಳಗೊಂಡಿಲ್ಲ

  • ನಿಮ್ಮ ಗೌಪ್ಯತೆ ಹಕ್ಕುಗಳ ಮೇಲೆ ಈ ಪರವಾನಗಿಯು ಪರಿಣಾಮ ಬೀರುವುದಿಲ್ಲ - ಇದು ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಮಾತ್ರ ಸಂಬಂಧಿಸಿದೆ
  • ಈ ಪರವಾನಗಿಯು ಈ ಪ್ರಕಾರಗಳ ವಿಷಯವನ್ನು ಒಳಗೊಂಡಿರುವುದಿಲ್ಲ:
    • ನೀವು ಒದಗಿಸುವ ಸಾರ್ವಜನಿಕವಾಗಿ ಲಭ್ಯವಿರುವ ನಿಜವಾದ ಮಾಹಿತಿ, ಉದಾಹರಣೆಗೆ ಸ್ಥಳೀಯ ವ್ಯಾಪಾರದ ವಿಳಾಸಕ್ಕೆ ಮಾಡುವ ತಿದ್ದುಪಡಿಗಳು. ಆ ಮಾಹಿತಿಗೆ ಪರವಾನಗಿಯ ಅಗತ್ಯವಿಲ್ಲ, ಏಕೆಂದರೆ, ಅದನ್ನು ಸಾಮಾನ್ಯ ಜ್ಞಾನವೆಂದು ಪರಿಗಣಿಸಲಾಗಿದ್ದು, ಪ್ರತಿಯೊಬ್ಬರೂ ಬಳಸಲು ಸ್ವತಂತ್ರರಾಗಿರುತ್ತಾರೆ.
    • ನೀವು ನೀಡುವ ಪ್ರತಿಕ್ರಿಯೆ, ಉದಾಹರಣೆಗೆ ನಮ್ಮ ಸೇವೆಗಳನ್ನು ಸುಧಾರಿಸಲು ನೀಡುವ ಸಲಹೆಗಳು. ಸೇವೆ-ಸಂಬಂಧಿತ ಸಂವಹನಗಳು ಎಂಬ ವಿಭಾಗವು ಪ್ರತಿಕ್ರಿಯೆಯನ್ನು ಒಳಗೊಂಡಿರುತ್ತದೆ.

ವ್ಯಾಪ್ತಿ

ಈ ಪರವಾನಗಿಯು:
  • ವಿಶ್ವವ್ಯಾಪಕ, ಅಂದರೆ ವಿಶ್ವದ ಎಲ್ಲೆಡೆಯೂ ಮಾನ್ಯವಾಗಿರುತ್ತದೆ
  • ಪ್ರತ್ಯೇಕವಲ್ಲದ್ದು, ಅಂದರೆ ನೀವು ನಿಮ್ಮ ವಿಷಯಕ್ಕೆ ಇತರರಿಗೆ ಪರವಾನಗಿ ನೀಡಬಹುದು
  • ರಾಯಲ್ಟಿ- ರಹಿತ, ಅಂದರೆ ಈ ಪರವಾನಗಿಗೆ ಯಾವುದೇ ಹಣಕಾಸಿನ ರೀತಿಯ ಶುಲ್ಕಗಳಿಲ್ಲ

ಹಕ್ಕುಗಳು

ಈ ಪರವಾನಗಿ Google ಗೆ ಇದನ್ನು ಮಾಡಲು ಅನುಮತಿಸುತ್ತದೆ:

  • ನಿಮ್ಮ ವಿಷಯವನ್ನು ಹೋಸ್ಟ್ ಮಾಡಲು, ಪುನರುತ್ಪಾದಿಸಲು, ವಿತರಿಸಲು, ಸಂವಹನ ಮಾಡಲು ಮತ್ತು ಬಳಸಲು — ಉದಾಹರಣೆಗೆ, ನಮ್ಮ ಸಿಸ್ಟಂಗಳಲ್ಲಿ ನಿಮ್ಮ ವಿಷಯವನ್ನು ಉಳಿಸಲು ಮತ್ತು ನೀವು ಎಲ್ಲಿಂದಲಾದರೂ ಅದನ್ನು ಪ್ರವೇಶಿಸಲು
  • ನಿಮ್ಮ ವಿಷಯವನ್ನು ನೀವು ಇತರರಿಗೆ ಗೋಚರಿಸುವಂತೆ ಮಾಡಿದ್ದರೆ, ಅದನ್ನು ಪ್ರಕಟಿಸಲು, ಸಾರ್ವಜನಿಕವಾಗಿ ನಿರ್ವಹಿಸಲು ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸಲು
  • ನಿಮ್ಮ ವಿಷಯವನ್ನು ಆಧರಿಸಿ ವ್ಯುತ್ಪನ್ನಗಳನ್ನು ಮಾರ್ಪಡಿಸಲು ಮತ್ತು ರಚಿಸಲು, ಉದಾಹರಣೆಗೆ ಅದನ್ನು ಮರುರೂಪಿಸಲು ಅಥವಾ ಅನುವಾದಿಸಲು
  • ಇವರಿಗೆ ಈ ಹಕ್ಕುಗಳ ಉಪಪರವಾನಗಿ ನೀಡಿ:
    • ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸಲು ಸೇವೆಗಳಿಗೆ ಇತರ ಬಳಕೆದಾರರು ಅನುಮತಿಸಲು, ಉದಾಹರಣೆಗೆ: ನೀವು ಆಯ್ಕೆ ಮಾಡುವ ಜನರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲು ನಿಮಗೆ ಅಧಿಕಾರ ನೀಡುವುದು
    • ನಮ್ಮ ಜೊತೆಗಿನ ಒಪ್ಪಂದಗಳಿಗೆ ಸಹಿ ಹಾಕಿದ ನಮ್ಮ ಗುತ್ತಿಗೆದಾರರು, ಕೆಳಗಿನ ಉದ್ದೇಶ ವಿಭಾಗದಲ್ಲಿ ವಿವರಿಸಿದ ಸೀಮಿತ ಉದ್ದೇಶಗಳಿಗಾಗಿ ಮಾತ್ರ ಈ ನಿಯಮಗಳನ್ನು ಅನುಸರಿಸುತ್ತಾರೆ

ಉದ್ದೇಶ

ಈ ಪರವಾನಗಿಯು ಇದರ ಸೀಮಿತ ಉದ್ದೇಶಕ್ಕಾಗಿ ಇದೆ:

  • ಸೇವೆಗಳನ್ನು ನಿರ್ವಹಿಸುವುದು ಮತ್ತು ಸುಧಾರಿಸುವುದು, ಅಂದರೆ ಸೇವೆಗಳನ್ನು ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸಲು ಅನುಮತಿಸುವುದು ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ಕಾರ್ಯಾತ್ಮಕತೆಗಳನ್ನು ರಚಿಸುವುದು. ನಿಮ್ಮ ವಿಷಯವನ್ನು ವಿಶ್ಲೇಷಿಸಲು ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಅಲ್ಗಾರಿದಮ್‌ಗಳನ್ನು ಬಳಸುವುದು ಇದರಲ್ಲಿ ಸೇರಿದೆ:
    • ಸ್ಪ್ಯಾಮ್, ಮಾಲ್‌ವೇರ್ ಮತ್ತು ಕಾನೂನುಬಾಹಿರ ವಿಷಯಕ್ಕಾಗಿ
    • Google Photos ನಲ್ಲಿ ಸಂಬಂಧಿತ ಫೋಟೋಗಳನ್ನು ಒಟ್ಟಿಗೆ ಇರಿಸಲು, ಹೊಸ ಆಲ್ಬಮ್ ಅನ್ನು ಯಾವಾಗ ಸೂಚಿಸಬೇಕು ಎಂಬುದನ್ನು ನಿರ್ಧರಿಸುವಂತಹ ಡೇಟಾದಲ್ಲಿನ ಪ್ಯಾಟರ್ನ್‌ಗಳನ್ನು ಗುರುತಿಸಲು
    • ಶಿಫಾರಸುಗಳು ಮತ್ತು ವೈಯಕ್ತಿಕಗೊಳಿಸಿದ ಹುಡುಕಾಟ ಫಲಿತಾಂಶಗಳು, ವಿಷಯಗಳು ಹಾಗೂ ಜಾಹೀರಾತುಗಳನ್ನು (ನೀವು ಅವುಗಳನ್ನು ಜಾಹೀರಾತುಗಳ ಸೆಟ್ಟಿಂಗ್‌ಗಳಲ್ಲಿ ಬದಲಾಯಿಸಬಹುದು ಅಥವಾ ಆಫ್ ಮಾಡಬಹುದು) ಒದಗಿಸುವಂತಹ ನಮ್ಮ ಸೇವೆಗಳನ್ನು ನಿಮಗಾಗಿ ಕಸ್ಟಮೈಸ್ ಮಾಡುವುದು
    ಈ ವಿಶ್ಲೇಷಣೆಯು ವಿಷಯವನ್ನು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಅದನ್ನು ಸಂಗ್ರಹಿಸಿಕೊಂಡಾಗ ಸಂಭವಿಸುತ್ತದೆ.
  • ಸೇವೆಗಳನ್ನು ಪ್ರಚಾರ ಮಾಡಲು ನೀವು ಸಾರ್ವಜನಿಕವಾಗಿ ಹಂಚಿಕೊಂಡ ವಿಷಯವನ್ನು ಬಳಸುವುದು. ಉದಾಹರಣೆಗೆ, Google ಆ್ಯಪ್ ಒಂದನ್ನು ಪ್ರಚಾರ ಮಾಡಲು, ನೀವು ಬರೆದ ವಿಮರ್ಶೆಯನ್ನು ನಾವು ಉಲ್ಲೇಖಿಸಬಹುದು. ಅಥವಾ Google Play ಅನ್ನು ಪ್ರಚಾರ ಮಾಡಲು, ನೀವು Play Store ನಲ್ಲಿ ಒದಗಿಸುವ ಆ್ಯಪ್‌ನ ಸ್ಕ್ರೀನ್‌ಶಾಟ್ ಒಂದನ್ನು ನಾವು ತೋರಿಸಬಹುದು.
  • ಈ ನಿಯಮಗಳಿಗೆ ಅನುಗುಣವಾಗಿ Google ಗೆ ಸಂಬಂಧಿಸಿದಂತೆ, ಹೊಸ ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವುದು

ಅವಧಿ

ಬೌದ್ಧಿಕ ಆಸ್ತಿ ಹಕ್ಕುಗಳು ನಿಮ್ಮ ವಿಷಯವನ್ನು ರಕ್ಷಿಸುವವರೆಗೆ ಈ ಪರವಾನಗಿ ಇರುತ್ತದೆ.

ಈ ಪರವಾನಗಿ ಒಳಗೊಳ್ಳುವ ಯಾವುದೇ ವಿಷಯವನ್ನು ನೀವು ನಮ್ಮ ಸೇವೆಗಳಿಂದ ತೆಗೆದುಹಾಕಿದರೆ, ನಮ್ಮ ಸಿಸ್ಟಂಗಳು ಸಮಂಜಸವಾದ ಸಮಯದಲ್ಲಿ ಆ ವಿಷಯವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವುದನ್ನು ನಿಲ್ಲಿಸುತ್ತವೆ. ಎರಡು ವಿನಾಯಿತಿಗಳಿವೆ:

  • ನಿಮ್ಮ ವಿಷಯವನ್ನು ತೆಗೆದುಹಾಕುವ ಮೊದಲು ನೀವು ಈಗಾಗಲೇ ಅದನ್ನು ಇತರರ ಜೊತೆಗೆ ಹಂಚಿಕೊಂಡಿದ್ದರೆ. ಉದಾಹರಣೆಗೆ, ನೀವು ಫೋಟೋವೊಂದನ್ನು ಸ್ನೇಹಿತರ ಜೊತೆಗೆ ಹಂಚಿಕೊಂಡಿದ್ದು, ಅವರು ಅದರ ನಕಲನ್ನು ಮಾಡಿದ್ದರೆ ಅಥವಾ ಅದನ್ನು ಪುನಃ ಹಂಚಿಕೊಂಡಿದ್ದರೆ, ನೀವು ಆ ಫೋಟೋವನ್ನು ನಿಮ್ಮ Google ಖಾತೆಯಿಂದ ತೆಗೆದುಹಾಕಿದ ನಂತರವೂ, ಅದು ನಿಮ್ಮ ಸ್ನೇಹಿತರ Google ಖಾತೆಯಲ್ಲಿ ಕಾಣಿಸಿಕೊಳ್ಳಬಹುದು.
  • ನಿಮ್ಮ ವಿಷಯವನ್ನು ಇತರ ಕಂಪನಿಗಳ ಸೇವೆಗಳ ಮೂಲಕ ಲಭ್ಯವಾಗುವಂತೆ ನೀವು ಮಾಡಿದರೆ, Google Search ಸೇರಿದಂತೆ, ಹುಡುಕಾಟ ಎಂಜಿನ್‌ಗಳು ಅವುಗಳ ಹುಡುಕಾಟ ಫಲಿತಾಂಶಗಳ ಭಾಗವಾಗಿ ನಿಮ್ಮ ವಿಷಯವನ್ನು ಹುಡುಕಲು ಮತ್ತು ಪ್ರದರ್ಶಿಸಲು ಮುಂದುವರಿಯುತ್ತವೆ.

Google ಸೇವೆಗಳನ್ನು ಬಳಸುವುದು

ನಿಮ್ಮ Google ಖಾತೆ

ನೀವು ಈ ನಿರ್ದಿಷ್ಟ ವಯಸ್ಸಿನ ಅಗತ್ಯಗಳನ್ನು ಪೂರೈಸಿದರೆ ನಿಮ್ಮ ಅನುಕೂಲಕ್ಕಾಗಿ ನೀವು Google ಖಾತೆಯೊಂದನ್ನು ರಚಿಸಬಹುದು. ಕೆಲವು ಸೇವೆಗಳು ಕಾರ್ಯ ಮಾಡಲು, ನೀವು Google ಖಾತೆಯೊಂದನ್ನು ಹೊಂದಿರಬೇಕು - ಉದಾಹರಣೆಗೆ, Gmail ಬಳಸಲು, ನಿಮಗೆ Google ಖಾತೆಯೊಂದರ ಅಗತ್ಯವಿರುತ್ತದೆ ಇದರಿಂದ ನಿಮ್ಮ ಇಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ಒಂದು ಸ್ಥಳವಿರುತ್ತದೆ.

ನಿಮ್ಮ Google ಖಾತೆಯನ್ನು ಸುರಕ್ಷಿತವಾಗಿರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದೂ ಸೇರಿದಂತೆ, ನಿಮ್ಮ Google ಖಾತೆಯನ್ನು ಹೇಗೆ ಬಳಸುತ್ತೀರಿ ಎಂಬುದಕ್ಕೂ ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಭದ್ರತಾ ಪರಿಶೀಲನೆಯನ್ನು ನಿಯಮಿತವಾಗಿ ಬಳಸಲು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.

ಸಂಸ್ಥೆ ಅಥವಾ ವ್ಯಾಪಾರವೊಂದರ ಪರವಾಗಿ Google ಸೇವೆಗಳನ್ನು ಬಳಸುವುದು

ವ್ಯಾಪಾರಗಳು, ಲಾಭರಹಿತ ಸಂಸ್ಥೆಗಳು ಮತ್ತು ಶಾಲೆಗಳಂತಹ ಹಲವಾರು ಸಂಸ್ಥೆಗಳು ನಮ್ಮ ಸೇವೆಗಳ ಲಾಭವನ್ನು ಪಡೆದುಕೊಳ್ಳುತ್ತವೆ. ಸಂಸ್ಥೆಯೊಂದರ ಪರವಾಗಿ ನಮ್ಮ ಸೇವೆಗಳನ್ನು ಬಳಸಲು:
  • ಆ ಸಂಸ್ಥೆಯ ಅಧಿಕೃತ ಪ್ರತಿನಿಧಿಯೊಬ್ಬರು ಈ ನಿಯಮಗಳನ್ನು ಒಪ್ಪಿಕೊಳ್ಳಬೇಕು
  • ನಿಮ್ಮ ಸಂಸ್ಥೆಯ ನಿರ್ವಾಹಕರು ನಿಮಗೆ Google ಖಾತೆಯೊಂದನ್ನು ನಿಯೋಜಿಸಬಹುದು. ಆ ನಿರ್ವಾಹಕರಿಗಾಗಿ ನೀವು ಹೆಚ್ಚುವರಿ ನಿಯಮಗಳನ್ನು ಪಾಲಿಸಬೇಕಾಗಬಹುದು ಮತ್ತು ನಿಮ್ಮ Google ಖಾತೆಯನ್ನು ಪ್ರವೇಶಿಸಲು ಅಥವಾ ನಿಷ್ಕ್ರಿಯಗೊಳಿಸಲು ಅವರಿಗೆ ಸಾಧ್ಯವಾಗಬಹುದು.

ಸೇವೆಗೆ ಸಂಬಂಧಿಸಿದ ಸಂವಹನಗಳು

ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು, ನಾವು ಕೆಲವೊಮ್ಮೆ ನಿಮಗೆ ಸೇವಾ ಪ್ರಕಟಣೆಗಳು ಮತ್ತು ಇತರ ಮಾಹಿತಿಯನ್ನು ಕಳುಹಿಸುತ್ತೇವೆ. ನಾವು ನಿಮ್ಮ ಜೊತೆಗೆ ಹೇಗೆ ಸಂವಹನ ಮಾಡುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಲು, Google ನ ಗೌಪ್ಯತೆ ನೀತಿಯನ್ನು ನೋಡಿ.

ನಮ್ಮ ಸೇವೆಗಳನ್ನು ಸುಧಾರಿಸುವುದಕ್ಕೆ ನೀವು ಸಲಹೆಗಳ ರೂಪದಲ್ಲಿ ನಮಗೆ ಪ್ರತಿಕ್ರಿಯೆಯನ್ನು ನೀಡಲು ಆಯ್ಕೆಮಾಡಿದರೆ, ನಿಮಗೆ ತಿಳಿಸದೆಯೇ ನಾವು ನಿಮ್ಮ ಪ್ರತಿಕ್ರಿಯೆಯ ಮೇಲೆ ಕಾರ್ಯನಿರ್ವಹಿಸಬಹುದು.

Google ಸೇವೆಗಳಲ್ಲಿರುವ ವಿಷಯ

ನಿಮ್ಮ ವಿಷಯ

ನಮ್ಮ ಕೆಲವು ಸೇವೆಗಳು, ಮೂಲ ಕಂಟೆಂಟ್ ಅನ್ನು ಜನರೇಟ್ ಮಾಡಲು ನಿಮಗೆ ಅವಕಾಶ ನೀಡುತ್ತವೆ. Google ಆ ಕಂಟೆಂಟ್‌ನ ಮೇಲೆ ಮಾಲೀಕತ್ವವನ್ನು ಕ್ಲೇಮ್ ಮಾಡುವುದಿಲ್ಲ.

ನಿಮ್ಮ ವಿಷಯವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು, ನಮ್ಮ ಕೆಲವು ಸೇವೆಗಳು ನಿಮಗೆ ಅವಕಾಶ ನೀಡುತ್ತವೆ - ಉದಾಹರಣೆಗೆ, ನೀವು ಬರೆದ ಉತ್ಪನ್ನ ಅಥವಾ ರೆಸ್ಟೋರೆಂಟ್ ಕುರಿತಾದ ವಿಮರ್ಶೆಯನ್ನು ನೀವು ಪೋಸ್ಟ್ ಮಾಡಬಹುದು, ಅಥವಾ ನೀವು ರಚಿಸಿದ ಬ್ಲಾಗ್ ಪೋಸ್ಟ್ ಒಂದನ್ನು ನೀವು ಅಪ್‌ಲೋಡ್ ಮಾಡಬಹುದು.

ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಯಾರಾದರೂ ಉಲ್ಲಂಘಿಸುತ್ತಿದ್ದಾರೆಂದು ನಿಮಗೆ ಅನಿಸಿದರೆ, ನೀವು ಉಲ್ಲಂಘನೆಯ ಕುರಿತಾದ ಸೂಚನೆಯನ್ನು ನಮಗೆ ಕಳುಹಿಸಬಹುದು ಮತ್ತು ನಾವು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ನಮ್ಮ ಹಕ್ಕುಸ್ವಾಮ್ಯ ಸಹಾಯ ಕೇಂದ್ರದಲ್ಲಿ ವಿವರಿಸಿದಂತೆ, ಪದೇ ಪದೇ ಹಕ್ಕುಸ್ವಾಮ್ಯ ಉಲ್ಲಂಘಿಸುವವರ Google ಖಾತೆಗಳನ್ನು ನಾವು ಅಮಾನತುಗೊಳಿಸುತ್ತೇವೆ ಅಥವಾ ಮುಚ್ಚುತ್ತೇವೆ.

Google ವಿಷಯ

ನಮ್ಮ ಕೆಲವು ಸೇವೆಗಳು Google ಗೆ ಸೇರಿದ ವಿಷಯವನ್ನು ಒಳಗೊಂಡಿವೆ - ಉದಾಹರಣೆಗೆ, Google Maps ನಲ್ಲಿ ನಿಮಗೆ ಕಾಣುವ ಹಲವಾರು ದೃಶ್ಯ ವಿವರಣೆಗಳು. ಈ ನಿಯಮಗಳು ಮತ್ತು ಯಾವುದೇ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಮೂಲಕ ಅನುಮತಿಸಲಾಗಿರುವಂತೆ, ನೀವು Google ನ ವಿಷಯವನ್ನು ಬಳಸಬಹುದು, ಆದರೆ ನಮ್ಮ ವಿಷಯದಲ್ಲಿ ನಾವು ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ನಮ್ಮ ಯಾವುದೇ ಬ್ರ್ಯಾಂಡಿಂಗ್, ಲೋಗೋಗಳು ಅಥವಾ ಕಾನೂನು ನೊಟೀಸ್‌ಗಳನ್ನು ತೆಗೆದುಹಾಕಬೇಡಿ, ಅಸ್ಪಷ್ಟಗೊಳಿಸಬೇಡಿ ಅಥವಾ ಬದಲಾಯಿಸಬೇಡಿ. ನಮ್ಮ ಬ್ರ್ಯಾಂಡಿಂಗ್ ಅಥವಾ ಲೋಗೋಗಳನ್ನು ಬಳಸಲು ನೀವು ಬಯಸಿದರೆ, Google ಬ್ರ್ಯಾಂಡ್ ಅನುಮತಿಗಳ ಪುಟವನ್ನು ನೋಡಿ.

ಇತರ ವಿಷಯ

ಅಂತಿಮವಾಗಿ, ನಮ್ಮ ಕೆಲವು ಸೇವೆಗಳು ಇತರ ಜನರಿಗೆ ಅಥವಾ ಸಂಸ್ಥೆಗಳಿಗೆ ಸೇರಿದ ವಿಷಯಕ್ಕೆ ಪ್ರವೇಶವನ್ನು ನೀಡುತ್ತದೆ — ಉದಾಹರಣೆಗೆ, ಅಂಗಡಿಯ ಮಾಲೀಕರದ್ದೇ ವ್ಯಾಪಾರದ ವಿವರಣೆ ಅಥವಾ Google News ನಲ್ಲಿ ಪ್ರದರ್ಶಿಸಲಾದ ಪತ್ರಿಕೆಯ ಲೇಖನ. ನೀವು ಈ ವಿಷಯವನ್ನು ಆ ವ್ಯಕ್ತಿಯ ಅಥವಾ ಸಂಸ್ಥೆಯ ಅನುಮತಿಯಿಲ್ಲದೆ ಅಥವಾ ಕಾನೂನಿನ ಪ್ರಕಾರ ಅನುಮತಿಸದ ಹೊರತು ಬಳಸಬಾರದು. ಇತರ ಜನರ ಅಥವಾ ಸಂಸ್ಥೆಗಳ ವಿಷಯದಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳು ಅವರದ್ದಾಗಿದ್ದು ಮತ್ತು Google ವೀಕ್ಷಣೆಗಳನ್ನು ಪ್ರತಿಬಿಂಬಿಸುವುದಿಲ್ಲ.

Google ಸೇವೆಗಳಲ್ಲಿರುವ ಸಾಫ್ಟ್‌ವೇರ್

ನಮ್ಮ ಕೆಲವು ಸೇವೆಗಳು, ಡೌನ್‌ಲೋಡ್ ಮಾಡಬಹುದಾದ ಅಥವಾ ಪ್ರಿಲೋಡ್ ಮಾಡಿರುವ ಸಾಫ್ಟ್‌ವೇರ್ ಅನ್ನು ಒಳಗೊಂಡಿರುತ್ತವೆ. ಸೇವೆಗಳ ಭಾಗವಾಗಿ ಆ ಸಾಫ್ಟ್‌ವೇರ್ ಅನ್ನು ಬಳಸಲು ನಾವು ನಿಮಗೆ ಅನುಮತಿಯನ್ನು ನೀಡುತ್ತೇವೆ.

ನಾವು ನಿಮಗೆ ನೀಡುವ ಪರವಾನಗಿಯು ಹೀಗಿದೆ:
  • ವಿಶ್ವವ್ಯಾಪಕ, ಅಂದರೆ ವಿಶ್ವದ ಎಲ್ಲೆಡೆಯೂ ಮಾನ್ಯವಾಗಿರುತ್ತದೆ
  • ಪ್ರತ್ಯೇಕವಲ್ಲದ್ದು, ಅಂದರೆ ಸಾಫ್ಟ್‌ವೇರ್‌ಗಾಗಿ ನಾವು ಇತರರಿಗೆ ಪರವಾನಗಿ ನೀಡಬಹುದು
  • ರಾಯಲ್ಟಿ-ರಹಿತ, ಅಂದರೆ ಈ ಪರವಾನಗಿಗೆ ಯಾವುದೇ ಹಣಕಾಸಿನ ರೀತಿಯ ಶುಲ್ಕಗಳಿಲ್ಲ
  • ವೈಯಕ್ತಿಕ, ಅಂದರೆ ಅದನ್ನು ಬೇರೆಯವರಿಗೆ ವಿಸ್ತರಿಸಲಾಗುವುದಿಲ್ಲ
  • ನಿಯೋಜಿಸಲಾಗದ್ದು, ಅಂದರೆ ಪರವಾನಗಿಯನ್ನು ಬೇರೆ ಯಾರಿಗೂ ನಿಯೋಜಿಸಲು ನಿಮಗೆ ಅನುಮತಿ ಇರುವುದಿಲ್ಲ

ನಮ್ಮ ಕೆಲವು ಸೇವೆಗಳು, ನಾವು ನಿಮಗೆ ಲಭ್ಯ ಮಾಡಿಕೊಡುವ ಓಪನ್ ಸೋರ್ಸ್ ಪರವಾನಗಿ ನಿಯಮಗಳ ಅಡಿಯಲ್ಲಿ ನೀಡಲಾಗುವ ಸಾಫ್ಟ್‌ವೇರ್ ಅನ್ನು ಒಳಗೊಂಡಿವೆ. ಕೆಲವೊಮ್ಮೆ ಓಪನ್ ಸೋರ್ಸ್ ಪರವಾನಗಿಯಲ್ಲಿರುವ ಉಪಬಂಧಗಳು ಈ ನಿಯಮಗಳ ಭಾಗಗಳನ್ನು ಸ್ಪಷ್ಟವಾಗಿ ಅತಿಕ್ರಮಿಸುತ್ತವೆ, ಆದ್ದರಿಂದ ಆ ಪರವಾನಗಿಗಳನ್ನು ಓದಲು ಮರೆಯದಿರಿ.

ನಮ್ಮ ಸೇವೆಗಳು ಅಥವಾ ಸಾಫ್ಟ್‌ವೇರ್‌ನ ಯಾವುದೇ ಭಾಗವನ್ನು ನೀವು ನಕಲಿಸಲು, ಮಾರ್ಪಡಿಸಲು, ವಿತರಿಸಲು, ಮಾರಾಟ ಮಾಡಲು ಅಥವಾ ಗುತ್ತಿಗೆ ನೀಡಲು ಸಾಧ್ಯವಾಗುವುದಿಲ್ಲ.

ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳು ಎದುರಾದ ಸಂದರ್ಭದಲ್ಲಿ

ಭರವಸೆ ಹಕ್ಕುನಿರಾಕರಣೆ

Google Search ಮತ್ತು Maps ನಂತಹ ಉಪಯುಕ್ತ, ವಿಶ್ವಾಸಾರ್ಹ ಸೇವೆಗಳನ್ನು ಒದಗಿಸುವುದರಲ್ಲಿ ನಮ್ಮ ಖ್ಯಾತಿಯನ್ನು ನಿರ್ಮಿಸಿದ್ದೇವೆ ಮತ್ತು ನಿಮ್ಮ ಅಗತ್ಯತೆಗಳನ್ನು ಪೂರೈಸಲು ನಾವು ನಿರಂತರವಾಗಿ ನಮ್ಮ ಸೇವೆಗಳನ್ನು ಸುಧಾರಿಸುತ್ತಿದ್ದೇವೆ. ಆದರೂ, ಕಾನೂನು ಉದ್ದೇಶಗಳಿಗಾಗಿ, ನಮ್ಮ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳಲ್ಲಿ ಸ್ಪಷ್ಟವಾಗಿ ಹೇಳದ ಹೊರತು, ನಮ್ಮ ಸೇವೆಗಳನ್ನು ನಾವು ಭರವಸೆ ಇಲ್ಲದೆಯೇ ನೀಡುತ್ತೇವೆ. ನಿರ್ದಿಷ್ಟ ಕಾನೂನಿನ ಭಾಷೆಯನ್ನು ಬಳಸಿ ನಾವು ಇದನ್ನು ವಿವರಿಸಬೇಕೆಂಬುದು ಕಾನೂನಿಗೆ ಅಗತ್ಯವಿದೆ ಮತ್ತು ನೀವು ಅದನ್ನು ನೋಡುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನಂತೆ ನಾವು ದೊಡ್ಡ ಅಕ್ಷರಗಳನ್ನು ಬಳಸಬೇಕು:

ಅನ್ವಯವಾಗುವ ಕಾನೂನಿನ ಮೂಲಕ ವಿಸ್ತೃತವಾಗಿ, ವಿಕ್ರಯ ಯೋಗ್ಯತೆಯ ಪರೋಕ್ಷವಾಗಿ ಸೂಚಿಸಿದ ಆಶ್ವಾಸನೆಗಳು, ನಿರ್ದಿಷ್ಟ ಉದ್ಧೇಶಕ್ಕಾಗಿ ಫಿಟ್‌ನೆಸ್ ಮತ್ತು ಅತಿಕ್ರಮಣವಿಲ್ಲದಿರುವುದು ಸೇರಿದಂತೆ, ನಾವು ನಮ್ಮ ಸೇವೆಗಳನ್ನು “ಇದ್ದದ್ದು ಇದ್ದಂತೆ”, ಯಾವುದೇ ರೀತಿಯ ಎಕ್ಸ್‌ಪ್ರೆಸ್ ಅಥವಾ ಪರೋಕ್ಷವಾಗಿ ಸೂಚಿಸಿದ ಆಶ್ವಾಸನೆಗಳು ಇಲ್ಲದೆಯೇ ಒದಗಿಸುತ್ತೇವೆ. ಉದಾಹರಣೆಗೆ, ಸೇವೆಗಳ ವಿಷಯ ಅಥವಾ ಫೀಚರ್‌ಗಳ ಕುರಿತು ಅವುಗಳ ನಿಖರತೆ, ಪ್ರಮಾಣೀಕತೆ, ಲಭ್ಯತೆ, ಅಥವಾ ನಿಮ್ಮ ಅಗತ್ಯತೆಗಳನ್ನು ಪೂರೈಸುವ ಸಾಮರ್ಥ್ಯ ಸೇರಿದಂತೆ ನಾವು ಯಾವುದೇ ಭರವಸೆಗಳನ್ನು ನೀಡುವುದಿಲ್ಲ.

ವೈದ್ಯಕೀಯ, ಕಾನೂನು, ಹಣಕಾಸು ಅಥವಾ ಇತರ ವೃತ್ತಿಪರ ಸಲಹೆಗಾಗಿ ಸೇವೆಗಳನ್ನು ಅವಲಂಬಿಸಬೇಡಿ. ಆ ವಿಷಯಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿರುತ್ತದೆ ಮತ್ತು ಅರ್ಹ ವೃತ್ತಿಪರರಿಂದ ಪಡೆದ ಸಲಹೆಗೆ ಬದಲಿಯಾಗಿ ಒದಗಿಸಿರುವುದಿಲ್ಲ.

ಬಾಧ್ಯತೆಗಳು

ಎಲ್ಲಾ ಬಳಕೆದಾರರಿಗಾಗಿ

ಸಮಸ್ಯೆಗಳಿದ್ದಾಗ, ನೀವು ಅಥವಾ Google ಪರಸ್ಪರರಿಂದ ಏನನ್ನು ಕ್ಲೇಮ್ ಮಾಡಬಹುದು ಎಂಬುದರ ಕುರಿತು ಸಮತೋಲನ ಸಾಧಿಸಲು ಈ ಕಾನೂನು ಮತ್ತು ನಿಯಮಗಳು ಪ್ರಯತ್ನಿಸುತ್ತವೆ. ಆದ್ದರಿಂದ, ಈ ನಿಯಮಗಳ ಅಡಿಯಲ್ಲಿ ನಿರ್ದಿಷ್ಟ ಬಾಧ್ಯಸ್ಥಿಕೆಗಳಿಗಾಗಿ — ಕೆಲವರನ್ನು ಹೊರತುಪಡಿಸಿ — ಎಲ್ಲರೂ ಹೊಣೆಗಾರರಾಗಿರಬೇಕಾದ ಅಗತ್ಯವಿರುತ್ತದೆ.

ಅನ್ವಯವಾಗುವ ಕಾನೂನುಗಳ ಅನುಮತಿಯ ಮೇರೆಗೆ, ಈ ನಿಯಮಗಳೇ ನಮ್ಮ ಜವಾಬ್ದಾರಿಗಳನ್ನು ಸೀಮಿತಗೊಳಿಸುತ್ತವೆ. ಈ ನಿಯಮಗಳು ಸಂಪೂರ್ಣ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ದುರ್ನಡತೆಗೆ ಬಾಧ್ಯಸ್ಥಿಕೆಯನ್ನು ಸೀಮಿತಗೊಳಿಸುವುದಿಲ್ಲ.

ಅನ್ವಯವಾಗುವ ಕಾನೂನಿನ ಮೂಲಕ ವಿಸ್ತೃತವಾಗಿ:
  • ಈ ನಿಯಮಗಳ ಉಲ್ಲಂಘನೆಗಳಿಗೆ ಅಥವಾ ಅನ್ವಯವಾಗುವ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳಿಗೆ Google ಬಾಧ್ಯಸ್ಥಿಕೆಯನ್ನು ಹೊಂದಿರುತ್ತದೆ
  • Google ಇವುಗಳಿಗೆ ಬಾಧ್ಯಸ್ಥಿಕೆಯನ್ನು ಹೊಂದಿರುವುದಿಲ್ಲ:
    • ಲಾಭಗಳು, ಆದಾಯಗಳು, ವ್ಯಾಪಾರ ಅವಕಾಶಗಳು, ಸದಾಶಯ ಅಥವಾ ನಿರೀಕ್ಷಿತ ಉಳಿತಾಯಗಳ ನಷ್ಟ
    • ಪರೋಕ್ಷ ಅಥವಾ ಪರಿಣಾಮವಾಗಿ ಆಗಿರುವ ನಷ್ಟಗಳು
    • ಶಿಕ್ಷಾರ್ಹ ಹಾನಿಗಳು
  • ಈ ನಿಯಮಗಳಿಂದ ಉಂಟಾಗುವ ಅಥವಾ ಸಂಬಂಧಿಸಿದ Google ನ ಸಂಪೂರ್ಣ ಬಾಧ್ಯಸ್ಥಿಕೆಯು (1) $೨೦೦ ಅಥವಾ (2) ವಿವಾದಕ್ಕೆ 12 ತಿಂಗಳ ಮೊದಲು ಸೂಕ್ತವಾದ ಸೇವೆಗಳನ್ನು ಬಳಸಲು ಪಾವತಿಸಿದ ಶುಲ್ಕಗಳಿಗೆ ಸೀಮಿತವಾಗಿದೆ.

ವ್ಯಾಪಾರ ಬಳಕೆದಾರರು ಮತ್ತು ಸಂಸ್ಥೆಗಳಿಗಾಗಿ ಮಾತ್ರ

ನೀವು ವ್ಯಾಪಾರ ಬಳಕೆದಾರರು ಅಥವಾ ಸಂಸ್ಥೆಯಾಗಿದ್ದರೆ:

  • ನಿಮ್ಮ ಕಾನೂನುಬಾಹಿರ ಸೇವೆಗಳ ಬಳಕೆ ಅಥವಾ ಈ ನಿಯಮಗಳ ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅಥವಾ ಸಂಬಂಧಿಸಿದ ಯಾವುದೇ ಥರ್ಡ್-ಪಾರ್ಟಿ ಕಾನೂನು ಕ್ರಮಗಳಿಗಾಗಿ (ಸರ್ಕಾರಿ ಅಧಿಕಾರಿಗಳ ಕ್ರಮಗಳು ಸೇರಿವೆ) ನೀವು Google ಮತ್ತು ಅದರ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಗುತ್ತಿಗೆದಾರರಿಗೆ ಅನ್ವಯವಾಗುವ ಕಾನೂನು ಅನುಮತಿಸುವ ಮಟ್ಟಕ್ಕೆ ಪರಿಹಾರವನ್ನು ನೀಡುತ್ತೀರಿ. ಈ ಪರಿಹಾರವು ಕ್ಲೈಮ್‌ಗಳು, ನಷ್ಟಗಳು, ಹಾನಿಗಳು, ತೀರ್ಪುಗಳು, ದಂಡಗಳು, ದಾವೆ ವೆಚ್ಚಗಳು ಮತ್ತು ಕಾನೂನು ಶುಲ್ಕಗಳಿಂದ ಉಂಟಾಗುವ ಯಾವುದೇ ಬಾಧ್ಯಸ್ಥಿಕೆ ಅಥವಾ ವೆಚ್ಚವನ್ನು ಒಳಗೊಂಡಿರುತ್ತದೆ.
  • ಪರಿಹಾರ ನೀಡುವಿಕೆಯೂ ಸೇರಿದಂತೆ, ಕೆಲವು ಜವಾಬ್ದಾರಿಗಳಿಂದ ನೀವು ಕಾನೂನುಬದ್ಧವಾಗಿ ವಿನಾಯಿತಿ ಪಡೆದಿದ್ದರೆ, ಈ ನಿಯಮಗಳ ಅಡಿಯಲ್ಲಿ ಆ ಜವಾಬ್ದಾರಿಗಳು ನಿಮಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ, ವಿಶ್ವಸಂಸ್ಥೆಯು ಕಾನೂನು ಹೊಣೆಗಾರಿಕೆಗಳಿಂದ ಕೆಲವು ವಿನಾಯಿತಿಗಳನ್ನು ಪಡೆದಿರುತ್ತದೆ ಮತ್ತು ಈ ನಿಯಮಗಳು ಆ ವಿನಾಯಿತಿಗಳನ್ನು ಅತಿಕ್ರಮಿಸುವುದಿಲ್ಲ.

ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು

ಈ ಕೆಳಗೆ ವಿವರಿಸಿದ ಹಾಗೆ ಕ್ರಮ ಕೈಗೊಳ್ಳುವುದಕ್ಕಿಂತ ಮೊದಲು, ಸಮಂಜಸವಾಗಿ ಸಾಧ್ಯವಿದ್ದಾಗ, ನಾವು ನಿಮಗೆ ಮುಂಗಡ ಸೂಚನೆಯನ್ನು ನೀಡುತ್ತೇವೆ, ನಮ್ಮ ಕ್ರಮದ ಕಾರಣವನ್ನು ವಿವರಿಸುತ್ತೇವೆ ಮತ್ತು ಸಮಸ್ಯೆಯನ್ನು ಸ್ಪಷ್ಟೀಕರಿಸಲು ಹಾಗೂ ಅದನ್ನು ಬಗೆಹರಿಸಲು ನಿಮಗೆ ಅವಕಾಶ ನೀಡುತ್ತೇವೆ, ಹಾಗೆ ಮಾಡುವುದರಿಂದ ಈ ಕೆಳಗಿನವುಗಳು ಉಂಟಾಗುವ ಸಂದರ್ಭಗಳನ್ನು ಹೊರತುಪಡಿಸಿ:

  • ಬಳಕೆದಾರ, ಮೂರನೇ ವ್ಯಕ್ತಿ ಅಥವಾ Google ಗೆ ಹಾನಿ ಅಥವಾ ಬಾಧ್ಯಸ್ಥಿಕೆಯನ್ನು ಉಂಟುಮಾಡುವುದು
  • ಕಾನೂನು ಅಥವಾ ಕಾನೂನು ಜಾರಿ ಪ್ರಾಧಿಕಾರದ ಆದೇಶವೊಂದನ್ನು ಉಲ್ಲಂಘಿಸುತ್ತದೆ
  • ತನಿಖೆಗೆ ಧಕ್ಕೆಯಾಗುತ್ತದೆ
  • ನಮ್ಮ ಸೇವೆಗಳ ಕಾರ್ಯಾಚರಣೆ, ಸಮಗ್ರತೆ ಅಥವಾ ಸುರಕ್ಷತೆಯನ್ನು ಹ್ಯಾಕ್‌ ಮಾಡುವುದು

ನಿಮ್ಮ ವಿಷಯವನ್ನು ತೆಗೆದುಹಾಕುವುದು

ನಿಮ್ಮ ಯಾವುದೇ ವಿಷಯವು, (1) ಈ ನಿಯಮಗಳು, ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಅಥವಾ ನೀತಿಗಳನ್ನು ಉಲ್ಲಂಘಿಸುತ್ತದೆ, (2) ಅನ್ವಯವಾಗುವ ಕಾನೂನನ್ನು ಉಲ್ಲಂಘಿಸುತ್ತದೆ ಅಥವಾ (3) ನಮ್ಮ ಬಳಕೆದಾರರಿಗೆ, ಥರ್ಡ್-ಪಾರ್ಟಿಗಳಿಗೆ ಅಥವಾ Google ಗೆ ಹಾನಿಯುಂಟು ಮಾಡಬಹುದು ಎಂದು ನಮಗೆ ಅನಿಸಿದರೆ, ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ಕೆಲವು ಅಥವಾ ಎಲ್ಲಾ ವಿಷಯವನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಮಕ್ಕಳ ಕುರಿತಾದ ಅಶ್ಲೀಲತೆ, ಮಾನವ ಕಳ್ಳಸಾಗಣೆ ಅಥವಾ ಕಿರುಕುಳವನ್ನು ಸುಗಮಗೊಳಿಸುವ ವಿಷಯ, ಭಯೋತ್ಪಾದಕ ವಿಷಯ ಮತ್ತು ಬೇರೊಬ್ಬರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅತಿಕ್ರಮಣ ಮಾಡುವ ವಿಷಯಗಳು ಉದಾಹರಣೆಗಳಲ್ಲಿ ಸೇರಿವೆ.

Google ಸೇವೆಗಳಿಗೆ ನಿಮ್ಮ ಪ್ರವೇಶವನ್ನು ಅಮಾನತುಗೊಳಿಸುವುದು ಅಥವಾ ಅಂತ್ಯಗೊಳಿಸುವುದು

ನಮ್ಮ ಯಾವುದೇ ಹಕ್ಕುಗಳನ್ನು ಸೀಮಿತಗೊಳಿಸದೆ, ಇವುಗಳಲ್ಲಿ ಯಾವುದಾದರೂ ಸಂಭವಿಸಿದರೆ, ಸೇವೆಗಳಿಗೆ ನಿಮ್ಮ ಆ್ಯಕ್ಸೆಸ್ ಅನ್ನು Google ಅಮಾನತುಗೊಳಿಸಬಹುದು ಅಥವಾ ನಿಮ್ಮ Google ಖಾತೆಯನ್ನು ಅಳಿಸಬಹುದು:

  • ನೀವು ಈ ನಿಯಮಗಳು, ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಅಥವಾ ನೀತಿಗಳನ್ನು ಭೌತಿಕವಾಗಿ, ಪದೇ ಪದೇ ಉಲ್ಲಂಘಿಸಿದರೆ
  • ಕಾನೂನು ಅವಶ್ಯಕತೆ ಅಥವಾ ನ್ಯಾಯಾಲಯದ ಆದೇಶದ ಅನುಸಾರ
  • ನಿಮ್ಮ ನಡವಳಿಕೆಯು ಬಳಕೆದಾರರಿಗೆ, ಥರ್ಡ್-ಪಾರ್ಟಿಗೆ ಅಥವಾ Google ಗೆ ಹಾನಿ ಅಥವಾ ಬಾಧ್ಯಸ್ಥಿಕೆಯನ್ನು ಉಂಟುಮಾಡಿದರೆ — ಉದಾಹರಣೆಗೆ, ಹ್ಯಾಕ್ ಮಾಡುವುದು, ಫಿಶಿಂಗ್, ಕಿರುಕುಳ ನೀಡುವುದು, ಸ್ಪ್ಯಾಮ್ ಮಾಡುವುದು, ಇತರರನ್ನು ದಾರಿ ತಪ್ಪಿಸುವುದು ಅಥವಾ ನಿಮ್ಮದಲ್ಲದ ವಿಷಯವನ್ನು ಸ್ಕ್ರ್ಯಾಪ್ ಮಾಡುವುದು

ನಾವು ಖಾತೆಗಳನ್ನು ಏಕೆ ನಿಷ್ಕ್ರಿಯಗೊಳಿಸುತ್ತೇವೆ ಮತ್ತು ಹಾಗೆ ಮಾಡಿದಾಗ ಏನಾಗುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಈ ಸಹಾಯ ಕೇಂದ್ರದ ಪುಟವನ್ನು ನೋಡಿ. ನಿಮ್ಮ Google ಖಾತೆಯನ್ನು ತಪ್ಪು ಗ್ರಹಿಕೆಯಿಂದಾಗಿ ಅಮಾನತುಗೊಳಿಸಲಾಗಿದೆ ಅಥವಾ ಕೊನೆಗೊಳಿಸಲಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.

ಖಂಡಿತವಾಗಿ, ನಮ್ಮ ಸೇವೆಗಳ ಬಳಕೆಯನ್ನು ನೀವು ಯಾವಾಗ ಬೇಕಾದರೂ ನಿಲ್ಲಿಸಬಹುದು. ನೀವು ಸೇವೆಯ ಬಳಕೆಯನ್ನು ನಿಲ್ಲಿಸಿದರೆ, ನಾವು ಅದರ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತೇವೆ, ಇದರಿಂದಾಗಿ ನಾವು ನಮ್ಮ ಸೇವೆಗಳನ್ನು ಸುಧಾರಿಸಲು ಮುಂದುವರಿಸಬಹುದು.

ವಿವಾದಗಳು, ಆಡಳಿತಾತ್ಮಕ ಕಾನೂನು ಮತ್ತು ನ್ಯಾಯಾಲಯ ಪ್ರಕರಣಗಳನ್ನು ಬಗೆಹರಿಸುವುದು

Google ಅನ್ನು ಸಂಪರ್ಕಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಂಪರ್ಕದ ಪುಟಕ್ಕೆ ಭೇಟಿ ನೀಡಿ.

ಈ ನಿಯಮಗಳು, ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು, ಅಥವಾ ಯಾವುದೇ ಸಂಬಂಧಿತ ಸೇವೆಗಳಿಂದ ಉದ್ಭವಿಸುವ ಅಥವಾ ಅವುಗಳಿಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು, ಕಾನೂನು ನಿಯಮಗಳ ಸಂಘರ್ಷವನ್ನು ಲೆಕ್ಕಿಸದೆ ಕ್ಯಾಲಿಫೋರ್ನಿಯಾ ಕಾನೂನು ನಿಯಂತ್ರಿಸುತ್ತದೆ. ಈ ವಿವಾದಗಳನ್ನು USA ಗೆ ಸೇರಿದ ಕ್ಯಾಲಿಫೋರ್ನಿಯಾದಲ್ಲಿರುವ ಸಾಂತಾ ಕ್ಲಾರಾ ಕೌಂಟಿಯಲ್ಲಿನ ಸಂಯುಕ್ತ ಅಥವಾ ರಾಜ್ಯ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ಪರಿಹರಿಸಲಾಗುವುದು ಮತ್ತು ಆ ನ್ಯಾಯಾಲಯಗಳಲ್ಲಿನ ವೈಯಕ್ತಿಕ ನ್ಯಾಯವ್ಯಾಪ್ತಿಗೆ ನೀವು ಮತ್ತು Google ಸಮ್ಮತಿಸುತ್ತೀರಿ.

ಈ ಸೇವೆಗಳ ಕುರಿತು

ಕಾನೂನಿನ ಪ್ರಕಾರ, ಈ ಸೇವಾ ನಿಯಮಗಳಂತಹ ಒಪ್ಪಂದದಿಂದ ಸೀಮಿತಗೊಳಿಸಲಾಗದ ಕೆಲವು ಹಕ್ಕುಗಳನ್ನು ನೀವು ಹೊಂದಿದ್ದೀರಿ. ಈ ನಿಯಮಗಳು ಯಾವುದೇ ರೀತಿಯಿಂದಲೂ ಆ ಹಕ್ಕುಗಳನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿಲ್ಲ.

ನಿಮ್ಮ ಮತ್ತು Google ನಡುವಿನ ಸಂಬಂಧವನ್ನು ಈ ನಿಯಮಗಳು ವಿವರಿಸುತ್ತವೆ. ಈ ನಿಯಮಗಳ ಅಡಿಯಲ್ಲಿ ಆ ಸಂಬಂಧದಿಂದಾಗಿ ಇತರರು ಪ್ರಯೋಜನ ಪಡೆದರೂ ಸಹ, ಅವರು ಇತರ ಜನರಿಗಾಗಿ ಅಥವಾ ಸಂಸ್ಥೆಗಳಿಗಾಗಿ ಯಾವುದೇ ಕಾನೂನು ಹಕ್ಕುಗಳನ್ನು ರಚಿಸುವುದಿಲ್ಲ.

ಈ ನಿಯಮಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದ ನಾವು ನಮ್ಮ ಸೇವೆಗಳಿಂದ ಉದಾಹರಣೆಗಳನ್ನು ಬಳಸಿದ್ದೇವೆ. ಆದರೆ ಪ್ರಸ್ತಾಪಿಸಲಾದ ಎಲ್ಲಾ ಸೇವೆಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು.

ಈ ನಿಯಮಗಳು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಜೊತೆಗೆ ಸಂಘರ್ಷಗೊಂಡರೆ, ಹೆಚ್ಚುವರಿ ನಿಯಮಗಳು ಆ ಸೇವೆಯನ್ನು ನಿಯಂತ್ರಿಸುತ್ತವೆ.

ನಿರ್ದಿಷ್ಟ ನಿಯಮವು ಮಾನ್ಯವಾಗಿಲ್ಲ ಅಥವಾ ಜಾರಿ ಮಾಡಲಾಗುವುದಿಲ್ಲ ಎಂದು ಸಾಬೀತಾದಲ್ಲಿ, ಇತರ ಯಾವುದೇ ನಿಯಮಗಳ ಮೇಲೆ ಅದು ಪರಿಣಾಮ ಬೀರುವುದಿಲ್ಲ.

ನೀವು ಈ ನಿಯಮಗಳು ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಅನುಸರಿಸದಿದ್ದರೆ ಮತ್ತು ನಾವು ತಕ್ಷಣವೇ ಕ್ರಮವನ್ನು ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಕ್ರಮ ತೆಗೆದುಕೊಳ್ಳುವಂತಹ ಯಾವುದೇ ಹಕ್ಕುಗಳನ್ನು ನಾವು ಬಿಟ್ಟುಕೊಡುತ್ತಿದ್ದೇವೆ ಎಂದಲ್ಲ.

ಈ ನಿಯಮಗಳು ಮತ್ತು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಮುಂದಿನ ಕಾರಣಗಳಿಗಾಗಿ ನಾವು ಅಪ್‌ಡೇಟ್ ಮಾಡಬಹುದು (1) ಹೊಸ ಸೇವೆಗಳು, ಫೀಚರ್‌ಗಳು, ತಂತ್ರಜ್ಞಾನಗಳು, ದರ ಅಥವಾ ಪ್ರಯೋಜನಗಳನ್ನು ಸೇರಿಸಿದಂತಹ (ಅಥವಾ ಹಳೆಯದ್ದನ್ನು ತೆಗೆದುಹಾಕಿದಾಗ) ಸಂದರ್ಭದಲ್ಲಿ, ನಮ್ಮ ಸೇವೆಗಳಲ್ಲಿನ ಬದಲಾವಣೆಯನ್ನು ಅಥವಾ ನಾವು ವ್ಯಾಪಾರವನ್ನು ಹೇಗೆ ಮಾಡುತ್ತೇವೆ ಎಂಬುದನ್ನು ತೋರಿಸಲು, (2) ಕಾನೂನು, ನಿಯಂತ್ರಣ ಅಥವಾ ಭದ್ರತಾ ಕಾರಣಗಳಿಗಾಗಿ, ಅಥವಾ (3) ನಿಂದನೆ ಅಥವಾ ಹಾನಿಯನ್ನು ತಡೆಯಲು.

ನಾವು ಈ ನಿಯಮಗಳನ್ನು ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಗಣನೀಯವಾಗಿ ಬದಲಾಯಿಸಿದರೆ, (1) ನಾವು ಹೊಸ ಸೇವೆ ಅಥವಾ ಫೀಚರ್ ಅನ್ನು ಪ್ರಾರಂಭಿಸುವಾಗ, ಅಥವಾ (2) ನಡೆಯುತ್ತಿರುವ ದುರುಪಯೋಗವನ್ನು ತಡೆಗಟ್ಟುವ ಅಥವಾ ಕಾನೂನು ಅವಶ್ಯಕತೆಗಳಿಗೆ ಸ್ಪಂದಿಸುವಂತಹ ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ನಾವು ನಿಮಗೆ ಸೂಕ್ತವಾದ ಮುಂಗಡ ಸೂಚನೆ, ಮತ್ತು ಬದಲಾವಣೆಗಳನ್ನು ಪರಿಶೀಲಿಸುವ ಅವಕಾಶವನ್ನು ಒದಗಿಸುತ್ತೇವೆ. ನೀವು ಹೊಸ ನಿಯಮಗಳಿಗೆ ಸಮ್ಮತಿಸದಿದ್ದರೆ, ನಿಮ್ಮ ಕಂಟೆಂಟ್ ಅನ್ನು ನೀವು ತೆಗೆದುಹಾಕಬೇಕು ಮತ್ತು ಸೇವೆಗಳನ್ನು ಬಳಸುವುದನ್ನು ನಿಲ್ಲಿಸಬೇಕು. ನಿಮ್ಮ Google ಖಾತೆಯನ್ನು ಮುಚ್ಚುವ ಮೂಲಕ ನೀವು ಯಾವಾಗ ಬೇಕಾದರೂ ನಮ್ಮ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಬಹುದು. ನಿಮ್ಮ Google ಖಾತೆಯನ್ನು ನೀವು ಮುಚ್ಚಿದರೆ ಮತ್ತು ಖಾತೆಯಿಲ್ಲದೆ ನಮ್ಮ ಸೇವೆಗಳನ್ನು ಆ್ಯಕ್ಸೆಸ್ ಮಾಡಿದರೆ ಅಥವಾ ಬಳಸಿದರೆ, ಆ ಆ್ಯಕ್ಸೆಸ್ ಮತ್ತು ಬಳಕೆಯು ಈ ನಿಯಮಗಳ ಅತ್ಯಂತ ಇತ್ತೀಚಿನ ಆವೃತ್ತಿಗೆ ಒಳಪಟ್ಟಿರುತ್ತದೆ.

ವ್ಯಾಖ್ಯಾನಗಳು

ಅಫಿಲಿಯೇಟ್

EU ನಲ್ಲಿ ಗ್ರಾಹಕ ಸೇವೆಗಳನ್ನು ಒದಗಿಸುವ ಈ ಕೆಳಗಿನ ಕಂಪನಿಗಳೂ ಸೇರಿದಂತೆ, Google ಕಂಪನಿಗಳ ಗುಂಪಿಗೆ ಸೇರಿದ ಒಂದು ಘಟಕ, ಅಂದರೆ Google LLC ಮತ್ತು ಅದರ ಅಧೀನ ಸಂಸ್ಥೆಗಳು: Google Ireland Limited, Google Commerce Limited ಮತ್ತು Google Dialer Inc.

ಒಂದು ಮೂಲ ಕೃತಿಯನ್ನು ಇತರರು ಬಳಸಿದರೆ ಮತ್ತು ಹೇಗೆ ಬಳಸಬಹುದು ಎಂಬುದನ್ನು ಮೂಲ ಕೃತಿಯ (ಬ್ಲಾಗ್ ಪೋಸ್ಟ್, ಫೋಟೋ, ಅಥವಾ ವೀಡಿಯೊ ರೀತಿ) ರಚನೆಕಾರರು ನಿರ್ಧರಿಸಲು ಅನುಮತಿಸುವ ಒಂದು ಕಾನೂನುಬದ್ಧ ಹಕ್ಕು, ಇದು ಕೆಲವು ಮಿತಿಗಳು ಮತ್ತು ಹೊರತುಪಡಿಸುವಿಕೆಗಳಿಗೆ (ಉದಾಹರಣೆ, "ನ್ಯಾಯಯುತ ಬಳಕೆ" ಮತ್ತು "ನ್ಯಾಯೋಚಿತ ವ್ಯವಹಾರ") ಒಳಪಟ್ಟಿರುತ್ತವೆ.

ಗ್ರಾಹಕರು

ತಮ್ಮ ಟ್ರೇಡ್, ವ್ಯಾಪಾರ, ಕ್ರಾಫ್ಟ್ ಅಥವಾ ವೃತ್ತಿಯ ಹೊರತಾಗಿ ವೈಯಕ್ತಿಕ, ವಾಣಿಜ್ಯೇತರ ಉದ್ದೇಶಗಳಿಗಾಗಿ Google ಸೇವೆಗಳನ್ನು ಬಳಸುವ ಒಬ್ಬ ವ್ಯಕ್ತಿ. (ವ್ಯಾಪಾರ ಬಳಕೆದಾರರನ್ನು ನೋಡಿ)

ಟ್ರೇಡ್‌ಮಾರ್ಕ್‌

ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸರಕುಗಳನ್ನು ಅಥವಾ ಸೇವೆಗಳನ್ನು ಒಬ್ಬರಿಂದೊಬ್ಬರಿಗೆ ಪ್ರತ್ಯೇಕಿಸಲು ಸಮರ್ಥವಾಗಿವೆ.

ದೇಶದ ಆವೃತ್ತಿ

ನೀವು Google ಖಾತೆಯನ್ನು ಹೊಂದಿದ್ದರೆ, ನಿಮ್ಮ ಖಾತೆಯನ್ನು ನಾವು ದೇಶದ (ಅಥವಾ ಪ್ರದೇಶ) ಜೊತೆಗೆ ಸಂಯೋಜಿಸುತ್ತೇವೆ, ಇದರಿಂದ ನಾವು ಕೆಳಗಿನವುಗಳ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು:

  • ನಿಮಗೆ ಸೇವೆಗಳನ್ನು ಒದಗಿಸುವ ಮತ್ತು ನೀವು ಸೇವೆಗಳನ್ನು ಬಳಸಿದಂತೆಲ್ಲಾ ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ Google ನ ಅಫಿಲಿಯೇಟ್
  • ನಿಯಮಗಳ ಆವೃತ್ತಿಯು ನಮ್ಮ ಸಂಬಂಧವನ್ನು ನಿಯಂತ್ರಿಸುತ್ತದೆ

ನೀವು ಸೈನ್ ಔಟ್ ಮಾಡಿದಾಗ, ನೀವು Google ಸೇವೆಗಳನ್ನು ಯಾವ ಸ್ಥಳದಲ್ಲಿ ಬಳಸುತ್ತಿರುವಿರಿ ಎಂಬುದರ ಆಧಾರದ ಮೇಲೆ ನಿಮ್ಮ ದೇಶದ ಆವೃತ್ತಿಯನ್ನು ನಿರ್ಧರಿಸಲಾಗುತ್ತದೆ. ನೀವು ಖಾತೆಯನ್ನು ಹೊಂದಿದ್ದರೆ, ಅದರ ಜೊತೆಗೆ ಸಂಯೋಜಿತವಾಗಿರುವ ದೇಶವನ್ನು ನೋಡಲು ನೀವು ಸೈನ್ ಇನ್ ಮಾಡಬಹುದು ಮತ್ತು ಈ ನಿಯಮಗಳನ್ನು ವೀಕ್ಷಿಸಬಹುದು.

ನಷ್ಟ ಪರಿಹಾರ ಅಥವಾ ಪರಿಹಾರ

ಮೊಕದ್ದಮೆಗಳಂತಹ ಕಾನೂನು ಕ್ರಮಗಳ ಸಹಾಯದಿಂದ ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದಾಗಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ವ್ಯಕ್ತಿ ಅಥವಾ ಸಂಸ್ಥೆಯ ಒಪ್ಪಂದದ ಬಾಧ್ಯತೆ.

ನಿಮ್ಮ ವಿಷಯ

ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ರಚಿಸುವ, ಅಪ್‌ಲೋಡ್ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ, ಸ್ವೀಕರಿಸುವ ಅಥವಾ ಹಂಚಿಕೊಳ್ಳುವ ವಿಷಯಗಳು, ಉದಾಹರಣೆಗೆ:

  • ನೀವು ರಚಿಸುವ Docs, Sheets ಮತ್ತು Slides
  • Blogger ಮೂಲಕ ನೀವು ಅಪ್‌ಲೋಡ್ ಮಾಡುವ ಬ್ಲಾಗ್ ಪೋಸ್ಟ್‌ಗಳು
  • Maps ನಲ್ಲಿ ನೀವು ಸಲ್ಲಿಸಿದ ವಿಮರ್ಶೆಗಳು
  • Drive ನಲ್ಲಿ ನೀವು ಸಂಗ್ರಹಿಸಿದ ವೀಡಿಯೊಗಳು
  • Gmail ಮೂಲಕ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು
  • Photos ಮೂಲಕ ಸ್ನೇಹಿತರ ಜೊತೆಗೆ ನೀವು ಹಂಚಿಕೊಳ್ಳುವ ಚಿತ್ರಗಳು
  • ನೀವು Google ಜೊತೆಗೆ ಹಂಚಿಕೊಳ್ಳುವ ಪ್ರಯಾಣದ ರೂಪುರೇಷೆಗಳು

ಬಾಧ್ಯಸ್ಥಿಕೆ

ಯಾವುದೇ ರೀತಿಯ ಕಾನೂನು ದಾವೆಯಿಂದ ಉಂಟಾಗುವ ನಷ್ಟಗಳು, ಆ ದಾವೆ ಒಪ್ಪಂದ, ಟಾರ್ಟ್‌ (ನಿರ್ಲಕ್ಷ್ಯವೂ ಸೇರಿದಂತೆ), ಅಥವಾ ಇತರ ಕಾರಣವನ್ನು ಆಧರಿಸಿರಬಹುದು ಮತ್ತು ಆ ನಷ್ಟಗಳನ್ನು ಸಮಂಜಸವಾಗಿ ನಿರೀಕ್ಷಿಸಿರಬಹುದು ಅಥವಾ ಪೂರ್ವಭಾವಿಯಾಗಿ ತಿಳಿದಿರಬಹುದು ಅಥವಾ ಇಲ್ಲದಿರಬಹುದು.

ಬೌದ್ಧಿಕ ಆಸ್ತಿ ಹಕ್ಕುಗಳು (IP ಹಕ್ಕುಗಳು)

ಆವಿಷ್ಕಾರಗಳು (ಸ್ವಾಮ್ಯದ ಹಕ್ಕುಗಳು); ಸಾಹಿತ್ಯ ಮತ್ತು ಕಲಾತ್ಮಕ ಕೃತಿಗಳು (ಹಕ್ಕುಸ್ವಾಮ್ಯ); ವಿನ್ಯಾಸಗಳು (ವಿನ್ಯಾಸ ಹಕ್ಕುಗಳು); ಮತ್ತು ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳಂತಹ (ಟ್ರೇಡ್‌ಮಾರ್ಕ್‌ಗಳು) ವ್ಯಕ್ತಿಯ ಬುದ್ದಿಶಕ್ತಿಯಿಂದ ಕಂಡುಹಿಡಿದ ಸೃಷ್ಟಿಗಳ ಮೇಲಿನ ಹಕ್ಕುಗಳು. IP ಹಕ್ಕುಗಳು ನಿಮಗೆ, ಬೇರೊಬ್ಬ ವ್ಯಕ್ತಿಗೆ ಅಥವಾ ಸಂಸ್ಥೆಯೊಂದಕ್ಕೆ ಸೇರಿರಬಹುದು.

ವಾರೆಂಟಿ

ಒಂದು ಉತ್ಪನ್ನ ಅಥವಾ ಸೇವೆಯು ಒಂದು ನಿರ್ದಿಷ್ಟ ಮಾನದಂಡದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆ.

ವ್ಯಾಪಾರ ಬಳಕೆದಾರರು

ಗ್ರಾಹಕರಲ್ಲದ (ಗ್ರಾಹಕರ ಹಾಗೆ ಕಾಣುವ) ವ್ಯಕ್ತಿ ಅಥವಾ ಘಟಕ.

ಸಂಸ್ಥೆ

ಒಂದು ಕಾನೂನು ಘಟಕ (ಉದಾಹರಣೆಗೆ ನಿಗಮ, ಲಾಭರಹಿತ ಅಥವಾ ಶಾಲೆ) ಆದರೆ ಪ್ರತ್ಯೇಕ ವ್ಯಕ್ತಿಯಲ್ಲ.

ಸೇವೆಗಳು

ಈ ನಿಯಮಗಳಿಗೆ ಅನುಸಾರವಾಗಿರುವ Google ಸೇವೆಗಳು https://policies.google.com/terms/service-specific ನಲ್ಲಿ ಪಟ್ಟಿ ಮಾಡಲಾಗಿರುವ ಉತ್ಪನ್ನಗಳು ಮತ್ತು ಸೇವೆಗಳಾಗಿದ್ದು, ಇವುಗಳನ್ನು ಒಳಗೊಂಡಿವೆ:

  • ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾಹರಣೆಗೆ, Search ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (ಉದಾಹರಣೆ, Google Shopping)
  • ಸಂಯೋಜಿತ ಸೇವೆಗಳು (ಉದಾ, ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು ಮತ್ತು ಇತರ ಸರಕುಗಳು (ಉದಾಹರಣೆ, Google Nest)

ಇವುಗಳಲ್ಲಿ ಹಲವು ಸೇವೆಗಳು ನೀವು ಸ್ಟ್ರೀಮ್ ಮಾಡಬಹುದಾದ ಅಥವಾ ಸಂವಹನ ನಡೆಸಬಹುದಾದ ವಿಷಯವನ್ನು ಸಹ ಒಳಗೊಂಡಿವೆ.

ಹಕ್ಕುನಿರಾಕರಣೆ

ಇನ್ನೊಬ್ಬರ ಕಾನೂನು ಜವಾಬ್ದಾರಿಗಳನ್ನು ಸೀಮಿತಗೊಳಿಸುವ ಹೇಳಿಕೆ.

Google Apps
ಪ್ರಮುಖ ಮೆನು