ಡೇಟಾ ವರ್ಗಾವಣೆಗಳಿಗಾಗಿ ಕಾನೂನು ಚೌಕಟ್ಟುಗಳು

ಜಾರಿಗೊಳ್ಳುವುದು ಸೆಪ್ಟೆಂಬರ್ 30, 2020

ಡೇಟಾ ಸಂರಕ್ಷಣೆಯ ಕಾನೂನುಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ, ಅಂದರೆ ಕೆಲವು ದೇಶಗಳು ಇತರ ದೇಶಗಳಿಗಿಂತ ಹೆಚ್ಚಿನ ಸಂರಕ್ಷಣೆಯನ್ನು ಒದಗಿಸುತ್ತವೆ. ನಿಮ್ಮ ಮಾಹಿತಿಯನ್ನು ಎಲ್ಲಿ ಪ್ರಕ್ರಿಯೆಗೊಳಪಡಿಸಿದರೂ ಕೂಡಾ, ನಾವು ಗೌಪ್ಯತೆ ಕಾರ್ಯನೀತಿಯಲ್ಲಿ ಹೇಳಿರುವ ಸಂರಕ್ಷಣೆಗಳನ್ನೇ ಅನ್ವಯಿಸುತ್ತೇವೆ. ಡೇಟಾ ವರ್ಗಾವಣೆಗೆ ಸಂಬಂಧಿಸಿದಂತೆ, ನಾವು ಕೆಲವು ಕಾನೂನು ಚೌಕಟ್ಟುಗಳನ್ನು ಅನುಸರಿಸುತ್ತೇವೆ, ಉದಾಹರಣೆಗೆ, ಕೆಳಗೆ ವಿವರಿಸಿರುವ ಯುರೋಪಿಯನ್ ಫ್ರೇಮ್‌ವರ್ಕ್ಸ್.

ಐರೋಪ್ಯ ವಾಣಿಜ್ಯ ಪ್ರದೇಶದ (EEA) ಹೊರಗೆ ಇರುವ ಕೆಲವು ದೇಶಗಳು ವೈಯಕ್ತಿಕ ಡೇಟಾಕ್ಕೆ ಸಾಕಷ್ಟು ಸಂರಕ್ಷಣೆಯನ್ನು ಒದಗಿಸುತ್ತವೆ ಎಂದು ಯುರೋಪಿಯನ್ ಕಮಿಷನ್ ತೀರ್ಮಾನಿಸಿದೆ. ಯುರೋಪಿಯನ್ ಕಮಿಷನ್‌ನ ಪ್ರಸ್ತುತ ಅರ್ಹತಾ ನಿರ್ಧಾರಗಳನ್ನು ನೀವು ಇಲ್ಲಿ ಪರಿಶೀಲಿಸಬಹುದು. EEA ನಿಂದ ಯುನೈಟೆಡ್ ಸ್ಟೇಟ್ಸ್‌ನಂತಹ ಇತರ ದೇಶಗಳಿಗೆ ಡೇಟಾವನ್ನು ವರ್ಗಾಯಿಸಲು, EU ಕಾನೂನಿಗೆ ಸಮಾನವಾಗಿರುವ ಮಟ್ಟದ ಸಂರಕ್ಷಣೆಯನ್ನು ಒದಗಿಸುವ ಕಾನೂನು ಚೌಕಟ್ಟುಗಳನ್ನು ನಾವು ಅನುಸರಿಸುತ್ತೇವೆ.

ಮಾದರಿ ಒಪ್ಪಂದ ಷರತ್ತುಗಳು

EEA ಹೊರಗಿನ ದೇಶಗಳಿಗೆ ಡೇಟಾ ವರ್ಗಾಯಿಸುವಾಗ, ಸಾಕಷ್ಟು ಸಂರಕ್ಷಣೆ ಒದಗಿಸುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ, ಮಾದರಿ ಒಪ್ಪಂದ ಷರತ್ತುಗಳ ಬಳಕೆಯನ್ನು ಯುರೋಪಿಯನ್ ಕಮಿಷನ್ ಅನುಮೋದಿಸಿದೆ. ಡೇಟಾವನ್ನು ವರ್ಗಾಯಿಸುವ ಪಕ್ಷಗಳ ನಡುವೆ ಸ್ಥಾಪಿಸಿರುವ ಒಪ್ಪಂದದಲ್ಲಿ ಮಾದರಿ ಒಪ್ಪಂದ ಷರತ್ತುಗಳನ್ನು ಅಳವಡಿಸುವ ಮೂಲಕ, ಸಮರ್ಪಕ ನಿರ್ಧಾರದಿಂದ ಒಳಗೊಳ್ಳದ EEA ಅಥವಾ ಯುನೈಟೆಡ್ ಕಿಂಗ್‌ಡಮ್ ಹೊರಗಿನ ದೇಶಗಳಿಗೆ ವರ್ಗಾಯಿಸಿದಾಗ ವೈಯಕ್ತಿಕ ಡೇಟಾವನ್ನು ಸಂರಕ್ಷಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಡೇಟಾ ವರ್ಗಾವಣೆಗಾಗಿ ನಾವು ಈ ಮಾದರಿ ಒಪ್ಪಂದದ ಷರತ್ತುಗಳನ್ನು ಅವಲಂಬಿಸಿದ್ದೇವೆ.

Google Workspace, Google Cloud Platform, Google ಜಾಹೀರಾತುಗಳು, ಮತ್ತು other ಜಾಹೀರಾತುಗಳು ಹಾಗೂ ಮಾಪನ ಉತ್ಪನ್ನಗಳು ಸೇರಿದಂತೆ, ತನ್ನ ವ್ಯಾಪಾರ ಸೇವೆಗಳ ಗ್ರಾಹಕರಿಗೆ Google, ಈ ಮಾದರಿ ಒಪ್ಪಂದ ಷರತ್ತುಗಳನ್ನು ಒದಗಿಸುತ್ತದೆ. ವ್ಯಾಪಾರ ಸೇವೆಗಳಿಗಾಗಿ ಮಾದರಿ ಒಪ್ಪಂದ ಷರತ್ತುಗಳನ್ನು Google ಬಳಸುವುದಕ್ಕೆ ಸಂಬಂಧಿಸಿದ ವಿವರಗಳನ್ನು privacy.google.com/businesses ನಲ್ಲಿ ಕಾಣಬಹುದು.

EU-U.S. Privacy Shield (EU-US ಗೌಪ್ಯತೆ ಶೀಲ್ಡ್) ಮತ್ತು Swiss-U.S. Privacy Shield (ಸ್ವಿಸ್-US ಗೌಪ್ಯತೆ ಶೀಲ್ಡ್) ಫ್ರೇಮ್‍‍ವರ್ಕ್‍ಗಳು

ನಮ್ಮ ಗೌಪ್ಯತೆ ಶೀಲ್ಡ್ ಪ್ರಮಾಣೀಕರಣದಲ್ಲಿ ವಿವರಿಸಿದಂತೆ, ಯುರೋಪಿಯನ್ ಒಕ್ಕೂಟದ ಸದಸ್ಯ ದೇಶಗಳು (EEA ಸದಸ್ಯ ದೇಶಗಳನ್ನು ಒಳಗೊಂಡಂತೆ), ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಿಂದ ವೈಯಕ್ತಿಕ ಮಾಹಿತಿಯ ಸಂಗ್ರಹಣೆ, ಬಳಕೆ ಮತ್ತು ಉಳಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ವಾಣಿಜ್ಯ ಇಲಾಖೆಯು ನಿಗದಿಪಡಿಸಿರುವಂತಹ EU-U.S. ಮತ್ತು Swiss-U.S. Privacy Shield framework ನಾವು ಅನುಸರಿಸುತ್ತೇವೆ. Google, Google LLC ಮತ್ತು ಅದರ ಸಂಪೂರ್ಣ ಸ್ವಾಧೀನದಲ್ಲಿರುವ ಯುನೈಟೆಡ್ ಸ್ಟೇಟ್ಸ್‌ ಅಂಗಸಂಸ್ಥೆಗಳೂ ಸೇರಿದಂತೆ (ಸ್ಪಷ್ಟವಾಗಿ ಹೊರಗಿಡದ ಹೊರತು), ಗೌಪ್ಯತೆ ಶೀಲ್ಡ್ ತತ್ವಗಳಿಗೆ ಬದ್ಧವಾಗಿದೆ ಎಂದು ಪ್ರಮಾಣೀಕರಿಸುತ್ತದೆ. "ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳುವುದು" ವಿಭಾಗದಲ್ಲಿ ವಿವರಿಸಿದಂತೆ, ನಮ್ಮ ಪರವಾಗಿ ಬಾಹ್ಯ ಪ್ರಕ್ರಿಯೆಗೊಳಪಡಿಸಲು, ಮುಂದುವರಿದ ವರ್ಗಾವಣೆ ತತ್ವದಡಿಯಲ್ಲಿ ಥರ್ಡ್ ಪಾರ್ಟಿಗಳೊಂದಿಗೆ ಹಂಚಿಕೊಳ್ಳುವ ನಿಮ್ಮ ಕುರಿತಾದ ಯಾವುದೇ ವೈಯಕ್ತಿಕ ಮಾಹಿತಿಯ ಜವಾಬ್ದಾರಿ Google ಗೆ ಸೇರಿರುತ್ತದೆ. ಗೌಪ್ಯತೆ ಶೀಲ್ಡ್ ಕಾರ್ಯಕ್ರಮದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು Google ನ ಪ್ರಮಾಣೀಕರಣವನ್ನು ವೀಕ್ಷಿಸಲು, ಗೌಪ್ಯತೆ ಶೀಲ್ಡ್ ವೆಬ್‌ಸೈಟ್‌‌ಗೆ ಭೇಟಿ ನೀಡಿ.

ನಮ್ಮ ಗೌಪ್ಯತೆ ಶೀಲ್ಡ್ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ನಮ್ಮ ಗೌಪ್ಯತೆ ಆಚರಣೆಗಳ ಕುರಿತು ನೀವು ವಿಚಾರಣೆಯನ್ನು ಹೊಂದಿದ್ದರೆ, ನಮ್ಮನ್ನು ಸಂಪರ್ಕಿಸಲು ನಿಮ್ಮನ್ನು ನಾವು ಪ್ರೋತ್ಸಾಹಿಸುತ್ತೇವೆ. US ಫೆಡರಲ್ ಟ್ರೇಡ್ ಕಮಿಷನ್‌ನ (FTC) ತನಿಖಾ ಮತ್ತು ಜಾರಿ ಅಧಿಕಾರಗಳಿಗೆ Google ಬದ್ಧವಾಗಿರುತ್ತದೆ. ನಿಮ್ಮ ಸ್ಥಳೀಯ ಡೇಟಾ ರಕ್ಷಣೆಯ ಪ್ರಾಧಿಕಾರಕ್ಕೂ ಸಹ ನೀವು ದೂರನ್ನು ನೀಡಬಹುದು ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಅವರೊಂದಿಗೆ ನಾವು ಕಾರ್ಯನಿರ್ವಹಿಸುತ್ತೇವೆ. ಕೆಲವು ಸಂದರ್ಭಗಳಲ್ಲಿ, ಗೌಪ್ಯತೆ ಶೀಲ್ಡ್ ತತ್ವಗಳ ಅನುಬಂಧ Iರಲ್ಲಿ ವಿವರಿಸಿದಂತೆ, ಇತರೆ ವಿಧಾನಗಳಿಂದ ಬಗೆಹರಿಸಲಾಗದ ದೂರನ್ನು ಪರಿಹರಿಸಲು ನಿರ್ಬಂಧದ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಅಧಿಕಾರವನ್ನು ಗೌಪ್ಯತೆ ಶೀಲ್ಡ್ ಫ್ರೇಮ್‌ವರ್ಕ್‌ ಒದಗಿಸುತ್ತದೆ.

ಜುಲೈ 16 ಜುಲೈ, 2020 ರ ಹೊತ್ತಿಗೆ, EEA ಅಥವಾ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಮೂಲ ಡೇಟಾವನ್ನು ಯುನೈಟೆಡ್ ಸ್ಟೇಟ್ಸ್‌ಗೆ ವರ್ಗಾಯಿಸಲು ನಾವು ಇನ್ನು ಮುಂದೆ EU-U.S. Privacy Shield (EU-US ಗೌಪ್ಯತೆ ಶೀಲ್ಡ್) ಅನ್ನು ಅವಲಂಬಿಸಿರುವುದಿಲ್ಲ.

Google Apps
ಪ್ರಮುಖ ಮೆನು