ಜಾಹೀರಾತು

ಜಾಹೀರಾತು ಮಾಡುವಿಕೆ, ನೀವು ಬಳಸುವ Google ಮತ್ತು ಹಲವಾರು ವೆಬ್‌ಸೈಟ್‌ಗಳು ಮತ್ತು ಸೇವೆಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಬಳಸುವಂತೆ ಮಾಡುತ್ತದೆ. ಜಾಹೀರಾತುಗಳು ಸುರಕ್ಷಿತವಾಗಿವೆಯೇ, ಅವುಗಳಿಗೆ ಯಾವುದಾದರೂ ಅಡೆತಡೆಗಳಿವೆಯೇ ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಸಕಾಲಿಕವಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತೇವೆ. ಉದಾಹರಣೆಗೆ, Google ನಲ್ಲಿ ನೀವು ಪಾಪ್-ಅಪ್ ಜಾಹೀರಾತುಗಳನ್ನು ವೀಕ್ಷಿಸುವುದಿಲ್ಲ ಮತ್ತು ಮಾಲ್‌ವೇರ್‌ ಜಾಹೀರಾತುಗಳು, ನಕಲಿ ವಸ್ತುಗಳ ಜಾಹೀರಾತುಗಳು ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶವುಳ್ಳ ಜಾಹೀರಾತುಗಳು ಸೇರಿದಂತೆ ನಮ್ಮ ನೀತಿಗಳನ್ನು ಉಲ್ಲಂಘಿಸುವಂತಹ ನೂರಾರು ಸಾವಿರಾರು ಪ್ರಕಾಶಕರ ಮತ್ತು ಜಾಹೀರಾತುದಾರರ ಖಾತೆಗಳನ್ನು ಪ್ರತಿ ವರ್ಷ ಮುಲಾಜಿಲ್ಲದೇ ಕಿತ್ತೊಗೆಯುತ್ತೇವೆ.

Chrome ಮತ್ತು Android ನಲ್ಲಿ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಉಪಕ್ರಮದ ಮೂಲಕ, ಆನ್‌ಲೈನ್‌ನಲ್ಲಿ ಜನರ ಗೌಪ್ಯತೆಯನ್ನು ಉತ್ತಮವಾಗಿ ರಕ್ಷಿಸುವ ರೀತಿಗಳಲ್ಲಿ ಡಿಜಿಟಲ್ ಜಾಹೀರಾತುಗಳ ಡೆಲಿವರಿ ಮತ್ತು ಮಾಪನವನ್ನು ಬೆಂಬಲಿಸುವ ಹೊಸ ವಿಧಾನಗಳನ್ನು Google ಜಾಹೀರಾತು ಸೇವೆಗಳು ಪ್ರಯೋಗಿಸಿ ನೋಡುತ್ತಿವೆ. Chrome ಅಥವಾ Android ನಲ್ಲಿ ಸೂಕ್ತ ಪ್ರೈವೆಸಿ ಸ್ಯಾಂಡ್‌ಬಾಕ್ಸ್ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿಕೊಂಡಿರುವ ಬಳಕೆದಾರರು ತಮ್ಮ ಬ್ರೌಸರ್ ಅಥವಾ ಮೊಬೈಲ್ ಸಾಧನದಲ್ಲಿ ಸಂಗ್ರಹಿಸಲಾಗಿರುವ ವಿಷಯಗಳು ಅಥವಾ ಸಂರಕ್ಷಿತ ಪ್ರೇಕ್ಷಕರ ಡೇಟಾವನ್ನು ಆಧರಿಸಿ Google ನ ಜಾಹೀರಾತು ಸೇವೆಗಳಿಗೆ ಸಂಬಂಧಿಸಿದ ಸೂಕ್ತ ಜಾಹೀರಾತುಗಳನ್ನು ನೋಡಬಹುದು. Google ನ ಜಾಹೀರಾತು ಸೇವೆಗಳು ತಮ್ಮ ಬ್ರೌಸರ್‌ನಲ್ಲಿ ಅಥವಾ ಮೊಬೈಲ್ ಸಾಧನದಲ್ಲಿ ಸಂಗ್ರಹಿಸಲಾಗಿರುವ ಆ್ಯಟ್ರಿಬ್ಯೂಶನ್ ವರದಿಗಾರಿಕೆ ಡೇಟಾವನ್ನು ಬಳಸಿ ಕೂಡ ಜಾಹೀರಾತಿನ ಕಾರ್ಯಕ್ಷಮತೆಯನ್ನು ಮಾಪನ ಮಾಡಬಹುದು. ಪ್ರೈವೆಸಿ ಸ್ಯಾಂಡ್‌ಬಾಕ್ಸ್‌ನ ಕುರಿತು ಇನ್ನಷ್ಟು ಮಾಹಿತಿ.

ಜಾಹೀರಾತುಗಳಲ್ಲಿ ಕುಕೀಗಳನ್ನು Google ಹೇಗೆ ಬಳಸುತ್ತದೆ

ಕುಕೀಗಳು, ಜಾಹೀರಾತನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಹಾಯ ಮಾಡುತ್ತವೆ. ಕುಕೀಗಳು ಇಲ್ಲದಿದ್ದರೆ, ಒಬ್ಬ ಜಾಹೀರಾತುದಾರರಿಗೆ ತನ್ನ ಪ್ರೇಕ್ಷಕರನ್ನು ತಲುಪಲು ಅಥವಾ ಎಷ್ಟು ಜಾಹೀರಾತುಗಳನ್ನು ತೋರಿಸಲಾಯಿತು ಹಾಗೂ ಎಷ್ಟು ಕ್ಲಿಕ್‌ಗಳನ್ನು ತಾವು ಸ್ವೀಕರಿಸಿದೆವು ಎಂಬುದನ್ನು ತಿಳಿಯುವುದು ತೀರಾ ಕಷ್ಟವಾಗುತ್ತಿತ್ತು.

ಸುದ್ದಿ ಸೈಟ್‌ಗಳು ಮತ್ತು ಬ್ಲಾಗ್‌ಗಳಂತಹ ಹಲವಾರು ವೆಬ್‌ಸೈಟ್‌ಗಳು ತಮ್ಮ ಭೇಟಿದಾರರಿಗೆ ಜಾಹೀರಾತುಗಳನ್ನು ತೋರಿಸಲು Google ಜೊತೆ ಪಾಲುದಾರಿಕೆಯನ್ನು ಹೊಂದಿವೆ. ನಮ್ಮ ಪಾಲುದಾರರೊಂದಿಗೆ ಕಾರ್ಯ ನಿರ್ವಹಿಸುವುದರಿಂದ ಒಂದು ಉಪಯೋಗವಿದೆ. ಅದೇನೆಂದರೆ, ಒಂದೇ ಜಾಹೀರಾತನ್ನು ನೀವು ಮತ್ತೆ ಮತ್ತೆ ನೋಡುವುದನ್ನು ತಪ್ಪಿಸಿಕೊಳ್ಳಲು, ವಂಚನೀಯ ಕ್ಲಿಕ್‌ಗಳನ್ನು ಪತ್ತೆಹಚ್ಚಲು ಮತ್ತು ನಿಲ್ಲಿಸಲು, ಮತ್ತು ಹೆಚ್ಚು ಸಂಬಂಧಿತ ಸಾಧ್ಯತೆಯುಳ್ಳ ಜಾಹೀರಾತುಗಳನ್ನು ತೋರಿಸುವಂತಹ (ನೀವು ಭೇಟಿ ನೀಡಿದ ವೆಬ್‌ಸೈಟ್‌ಗಳ ಆಧಾರದ ಮೇಲಿನ ಜಾಹೀರಾತುಗಳು), ಹಲವಾರು ಉದ್ದೇಶಗಳಿಗಾಗಿ ನಾವು ಕುಕೀಗಳನ್ನು ಬಳಸಬಹುದು.

ನಮ್ಮ ಲಾಗ್‌ಗಳಲ್ಲಿ ನಾವು ಸೇವೆ ನೀಡುವ ಜಾಹೀರಾತುಗಳ ದಾಖಲೆಯನ್ನು ನಾವು ಸಂಗ್ರಹಿಸಿಡುತ್ತೇವೆ. ಈ ಸರ್ವರ್‌ ಲಾಗ್‌ಗಳು ಸಾಮಾನ್ಯವಾಗಿ ನಿಮ್ಮ ವೆಬ್‌ ವಿನಂತಿ, IP ವಿಳಾಸ, ಬ್ರೌಸರ್‌ ವಿಧಾನ, ಬ್ರೌಸರ್‌ ಭಾಷೆ, ನಿಮ್ಮ ವಿನಂತಿಯ ದಿನಾಂಕ ಮತ್ತು ಸಮಯ, ಮತ್ತು ಒಂದು ಅಥವಾ ಹೆಚ್ಚು ಕುಕೀಗಳು ನಿಮ್ಮ ಬ್ರೌಸರ್‌ ಅನ್ನು ಅದು ಅನನ್ಯವಾಗಿ ಗುರುತಿಸಬಹುದಾಗಿರುವುದನ್ನು ಒಳಗೊಂಡಿರುತ್ತದೆ. ನಾವು ಹಲವಾರು ಕಾರಣಗಳಿಗೆ ಈ ಡೇಟಾವನ್ನು ಸಂಗ್ರಹಿಸುತ್ತೇವೆ, ಅವುಗಳಲ್ಲಿನ ಹೆಚ್ಚು ಪ್ರಮುಖವಾದದ್ದೆಂದರೆ ನಮ್ಮ ಸೇವೆಗಳನ್ನು ಸುಧಾರಿಸುವುದು ಮತ್ತು ನಮ್ಮ ಸಿಸ್ಟಂಗಳಲ್ಲಿನ ಭದ್ರತೆಯನ್ನು ನಿರ್ವಹಿಸುವುದಾಗಿರುತ್ತದೆ. ನಾವು ಈ ಡೇಟಾವನ್ನು IP ವಿಳಾಸ (9 ತಿಂಗಳು ನಂತರ) ಮತ್ತು ಕುಕೀ ಮಾಹಿತಿಯ (18 ತಿಂಗಳು ನಂತರ) ಭಾಗವನ್ನು ತೆಗೆದುಹಾಕುವ ಮೂಲಕ ಅನಾಮಧೇಯಗೊಳಿಸುತ್ತೇವೆ.

ನಮ್ಮ ಜಾಹೀರಾತು ಕುಕೀಗಳು

ನಮ್ಮ ಪಾಲುದಾರರು ತಮ್ಮ ಜಾಹೀರಾತು ಮತ್ತು ವೆಬ್‌ಸೈಟ್‌ಗಳನ್ನು ನಿರ್ವಹಿಸಲು ಸಹಾಯ ಮಾಡಲು, AdSense, AdWords, Google Analytics, ಮತ್ತು ಡಬಲ್‌ಕ್ಲಿಕ್-ಬ್ರ್ಯಾಂಡೆಡ್ ಸೇವೆಗಳ ವ್ಯಾಪ್ತಿಯು ಸೇರಿದಂತೆ ಹಲವಾರು ಉತ್ಪನ್ನಗಳನ್ನು ನಾವು ಒದಗಿಸುತ್ತೇವೆ. ನೀವು ಪುಟಕ್ಕೆ ಭೇಟಿ ನೀಡಿದಾಗ ಅಥವಾ Google ಸೇವೆಗಳು ಅಥವಾ ಇತರ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಈ ಉತ್ಪನ್ನಗಳಲ್ಲಿ ಒಂದನ್ನು ಬಳಸುವಂತಹ ಜಾಹೀರಾತನ್ನು ನೀವು ವೀಕ್ಷಿಸಿದರೆ, ನಿಮ್ಮ ಬ್ರೌಸರ್‌ಗೆ ಹಲವಾರು ಕುಕೀಸ್ ಅನ್ನು ಕಳುಹಿಸಲಾಗಬಹುದು.

ಇವುಗಳನ್ನು google.com, doubleclick.net, googlesyndication.com, ಅಥವಾ googleadservices.com ಅಥವಾ ನಮ್ಮ ಪಾಲುದಾರರ ಸೈಟ್‌ಗಳ ಡೊಮೇನ್‌ ಸೇರಿದಂತೆ ಇತರ ಕೆಲವು ಡೊಮೇನ್‌ಗಳಿಂದ ಹೊಂದಿಸಬಹುದು. ನಮ್ಮ ಕೆಲವೊಂದು ಜಾಹೀರಾತು ಉತ್ಪನ್ನಗಳು, ಇತರ ಸೇವೆಗಳ ಸಂಯೋಗದೊಂದಿಗೆ ನಮ್ಮ ಸೇವೆಗಳನ್ನು (ಜಾಹೀರಾತು ಅಳೆಯುವಿಕೆ ಮತ್ತು ವರದಿ ಸೇವೆಗಳಂಥವು) ಬಳಸಲು ನಮ್ಮ ಪಾಲುದಾರರಿಗೆ ಅನುವು ಮಾಡಿಕೊಡುತ್ತವೆ. ಈ ಸೇವೆಗಳು ನಿಮ್ಮ ಬ್ರೌಸರ್‌ಗೆ ಅವುಗಳದ್ದೇ ಕುಕೀಗಳನ್ನು ಕಳುಹಿಸಬಹುದು. ಈ ಕುಕೀಗಳನ್ನು ಅವುಗಳ ಡೊಮೇನ್‌ನಿಂದಲೇ ಹೊಂದಿಸಲಾಗಿರುತ್ತದೆ.

ನಮ್ಮ ಪಾಲುದಾರರು ಮತ್ತು Google ನಿಂದ ಬಳಸಲಾದ ಕುಕೀಗಳ ಪ್ರಕಾರಗಳು ಮತ್ತು ಅವುಗಳನ್ನು ನಾವು ಹೇಗೆ ಬಳಸುವುದು ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡಿ.

ಜಾಹೀರಾತು ಕುಕೀಗಳನ್ನು ನೀವು ಹೇಗೆ ನಿಯಂತ್ರಿಸಬಹುದು

ನೀವು ನೋಡುವ Google ಜಾಹೀರಾತುಗಳನ್ನು ನಿರ್ವಹಿಸಲು ಮತ್ತು ವೈಯಕ್ತೀಕರಿಸಿದ ಜಾಹೀರಾತುಗಳನ್ನು ಆಫ್ ಮಾಡಲು ನೀವು ಜಾಹೀರಾತು ಸೆಟ್ಟಿಂಗ್‌ಗಳನ್ನು ಬಳಸಬಹುದು. ನೀವು ವೈಯಕ್ತೀಕರಿಸಿದ ಜಾಹೀರಾತುಗಳನ್ನು ಆಫ್ ಮಾಡಿದರೂ ಸಹ, ನಿಮ್ಮ IP ವಿಳಾಸದಿಂದ ಪಡೆದ ನಿಮ್ಮ ಸಾಮಾನ್ಯ ಸ್ಥಳ, ನಿಮ್ಮ ಬ್ರೌಸರ್ ಪ್ರಕಾರ ಮತ್ತು ನಿಮ್ಮ ಹುಡುಕಾಟ ಪದಗಳಂತಹ ಅಂಶಗಳ ಆಧಾರದ ಮೇಲೆ ನೀವು ಜಾಹೀರಾತುಗಳನ್ನು ನೋಡಬಹುದು.

ಅನೇಕ ರಾಷ್ಟ್ರಗಳಲ್ಲಿ ಸ್ವಯಂ ನಿಯಂತ್ರಣ ಕಾರ್ಯಕ್ರಮಗಳ ಅಡಿಯಲ್ಲಿ ಸೃಷ್ಟಿಸಿದ ಗ್ರಾಹಕ ಆಯ್ಕೆಯ ಉಪಕರಣಗಳ ಮೂಲಕ ಆನ್‌ಲೈನ್ ಜಾಹೀರಾತುಗಳಿಗಾಗಿ ಬಳಸಿದ ಹಲವಾರು ಕಂಪನಿಗಳ ಕುಕೀಗಳನ್ನು ಸಹ ನೀವು ನಿರ್ವಹಿಸಬಹುದು, ಉದಾಹರಣೆಗಾಗಿ US-ಮೂಲದ aboutads.info ಆಯ್ಕೆಗಳ ಪುಟ ಅಥವಾ EU-ಮೂಲದ Your Online Choices.

ಅಂತಿಮವಾಗಿ, ನೀವು ನಿಮ್ಮ ವೆಬ್ ಬ್ರೌಸರ್‌ನಲ್ಲಿ ಕುಕೀಗಳನ್ನು ನಿರ್ವಹಿಸಬಹುದು.

ಜಾಹೀರಾತುಗಳಲ್ಲಿ ಬಳಸಲಾದ ಇತರ ತಂತ್ರಜ್ಞಾನಗಳು

Google ನ ಜಾಹಿರಾತು ವ್ಯವಸ್ಥೆಗಳು Flash ಮತ್ತು HTML5 ಸೇರಿದಂತೆ ಪರಸ್ಪರ ಕಾರ್ಯನಿರ್ವಹಿಸುವಂತಹ ಜಾಹೀರಾತು ಸ್ವರೂಪಗಳ ಪ್ರದರ್ಶನದಂತಹ ಕ್ರಿಯೆಗಳಿಗಾಗಿ ಇತರ ತಂತ್ರಜ್ಞಾನಗಳನ್ನು ಬಳಸಬಹುದಾಗಿದೆ. ನಾವು IP ವಿಳಾಸವನ್ನು ಬಳಸಬಹುದು, ಉದಾಹರಣೆಗೆ, ನಿಮ್ಮ ಸಾಮಾನ್ಯ ಸ್ಥಾನವನ್ನು ಗುರುತಿಸಲು. ನಿಮ್ಮ ಸಾಧನದ ಮಾದರಿ, ಬ್ರೌಸರ್ ಪ್ರಕಾರ ಅಥವಾ ಅಕ್ಸೆಲೆರೊಮೀಟರ್‌ನಂತಹ ನಿಮ್ಮ ಸಾಧನದಲ್ಲಿರುವ ಸಂವೇದಕಗಳಂತಹ ನಿಮ್ಮ ಕಂಪ್ಯೂಟರ್ ಅಥವಾ ಸಾಧನದ ಕುರಿತ ಮಾಹಿತಿಯನ್ನು ಆಧರಿಸಿ ಜಾಹೀರಾತನ್ನು ಸಹ ನಾವು ಆಯ್ಕೆ ಮಾಡಬಹುದಾಗಿದೆ.

ಸ್ಥಳ

Google ನ ಜಾಹೀರಾತು ಉತ್ಪನ್ನಗಳು ವಿವಿಧ ಮೂಲಗಳಿಂದ ನಿಮ್ಮ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಊಹಿಸಬಹುದು. ಉದಾಹರಣೆಗೆ, ನಿಮ್ಮ ಎಂದಿನ ಸ್ಥಳವನ್ನು ಗುರುತಿಸಲು ನಾವು ಐಪಿ ವಿಳಾಸ ಬಳಸಿಕೊಳ್ಳಬಹುದು; ನಿಮ್ಮ ಮೊಬೈಲ್ ಸಾಧನದಿಂದ ನಿಖರವಾದ ಸ್ಥಳವನ್ನು ನಾವು ಸ್ವೀಕರಿಸಬಹುದು; ನಿಮ್ಮ ಹುಡುಕಾಟ ಪ್ರಶ್ನೆಗಳಿಂದ ನೀವಿರುವ ಸ್ಥಳವನ್ನು ನಾವು ನಿರ್ಧರಿಸಬಹುದು; ಮತ್ತು ನೀವು ಬಳಸುವ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳು ನಿಮ್ಮ ಸ್ಥಳದ ಮಾಹಿತಿಯನ್ನು ನಮಗೆ ಒದಗಿಸಬಹುದು. ಜನಸಂಖ್ಯೆ ಮಾಹಿತಿಯನ್ನು ಊಹಿಸಲು, ನೀವು ನೋಡುವ ಜಾಹೀರಾತುಗಳ ಪ್ರಸ್ತುತತೆಯನ್ನು ಸುಧಾರಿಸಲು, ಜಾಹೀರಾತು ಕಾರ್ಯಕ್ಷಮತೆಯನ್ನು ಅಳೆಯಲು ಮತ್ತು ಜಾಹೀರಾತುದಾರರಿಗೆ ಒಟ್ಟು ಅಂಕಿಅಂಶಗಳನ್ನು ವರದಿ ಮಾಡಲು Google ನಮ್ಮ ಜಾಹೀರಾತುಗಳ ಉತ್ಪನ್ನಗಳಲ್ಲಿ ಸ್ಥಳ ಮಾಹಿತಿಯನ್ನು ಬಳಸುತ್ತದೆ.

ಮೊಬೈಲ್ ಅಪ್ಲಿಕೇಶನ್‌ಗಳಿಗಾಗಿ ಜಾಹೀರಾತು ಗುರುತಿಸುವಿಕೆಗಳು

ಕುಕೀ ತಂತ್ರಜ್ಞಾನವು ಲಭ್ಯವಿಲ್ಲದ ಸೇವೆಗಳಲ್ಲಿ (ಉದಾಹರಣೆಗೆ, ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ) ಜಾಹೀರಾತುಗಳನ್ನು ಒದಗಿಸಲು, ನಾವು ಕುಕೀಗಳಿಗೆ ಬದಲಾಗಿ ಅವುಗಳ ಕಾರ್ಯಗಳನ್ನು ನಿರ್ವಹಿಸಬಹುದಾದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬಹುದು. ಕೆಲವೊಮ್ಮೆ ನಿಮ್ಮ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಮೊಬೈಲ್ ಬ್ರೌಸರ್‌ನಾದ್ಯಂತ ಜಾಹೀರಾತುಗಳನ್ನು ಸಂಘಟಿಸುವುದಕ್ಕಾಗಿ, ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಜಾಹಿರಾತು ಮಾಡುವಿಕೆಗೆ ಬಳಸುವ ಗುರುತಿಸುವಿಕೆಯನ್ನು ಅದೇ ಸಾಧನದಲ್ಲಿನ ಜಾಹೀರಾತು ಕುಕೀಗಳಿಗೆ Google ಲಿಂಕ್ ಮಾಡುತ್ತದೆ. ಇದು ಸಂಭವಿಸಬಹುದು, ಉದಾಹರಣೆಗೆ, ನೀವು ಅಪ್ಲಿಕೇಶನ್‌ನಲ್ಲಿ ಒಂದು ಜಾಹೀರಾತು ನೋಡಿದಾಗ ಅದು ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ ಒಂದು ವೆಬ್ ಪುಟವನ್ನು ಪ್ರಾರಂಭಿಸುತ್ತದೆ. ನಮ್ಮ ಜಾಹೀರಾತುದಾರರಿಗೆ ಅವರ ಪ್ರಚಾರಗಳ ಪ್ರಭಾವ ಎಷ್ಟಿದೆ ಎಂಬ ಕುರಿತಾಗಿ ಅವರಿಗೆ ನಾವು ನೀಡುವ ವರದಿಗಳನ್ನು ಸುಧಾರಿಸಲು ಸಹ ನಮಗೆ ಇದು ಸಹಾಯ ಮಾಡುತ್ತದೆ.

ನಿಮ್ಮ ಸಾಧನದಲ್ಲಿ ನೀವು ನೋಡುವ ಜಾಹೀರಾತುಗಳನ್ನು ಅದರ ಜಾಹೀರಾತು ID ಯನ್ನು ಆಧರಿಸಿ ವೈಯಕ್ತೀಕರಿಸಬಹುದು. Android ಸಾಧನಗಳಲ್ಲಿ, ನೀವು ಇವುಗಳನ್ನು ಮಾಡಬಹುದು:

  • ನಿಮ್ಮ ಸಾಧನದ ಜಾಹೀರಾತು ID ಯನ್ನು ರೀಸೆಟ್ ಮಾಡಬಹುದು, ಇದು ಪ್ರಸ್ತುತ ID ಯನ್ನು ಹೊಸದರೊಂದಿಗೆ ಬದಲಾಯಿಸುತ್ತದೆ. ಆ್ಯಪ್‌ಗಳು ಈಗಲೂ ನಿಮಗೆ ವೈಯಕ್ತೀಕರಿಸಿದ ಜಾಹೀರಾತುಗಳನ್ನು ತೋರಿಸಬಹುದು, ಆದರೆ ಸ್ವಲ್ಪ ಸಮಯದವರೆಗೆ ಅವುಗಳು ನಿಮಗೆ ಪ್ರಸ್ತುತವಾಗಿಲ್ಲದಿರಬಹುದು ಅಥವಾ ಆಸಕ್ತಿದಾಯಕವಾಗಿರುವುದಿಲ್ಲ.
  • ನಿಮ್ಮ ಸಾಧನದ ಜಾಹೀರಾತು ID ಯನ್ನು ಅಳಿಸಬಹುದು, ಅದು ಜಾಹೀರಾತು ID ಯನ್ನು ಅಳಿಸುತ್ತದೆ ಮತ್ತು ಹೊಸದನ್ನು ನಿಯೋಜಿಸುವುದಿಲ್ಲ. ಆ್ಯಪ್‌ಗಳು ಈಗಲೂ ನಿಮಗೆ ಜಾಹೀರಾತುಗಳನ್ನು ತೋರಿಸಬಹುದು, ಆದರೆ ಅವುಗಳು ನಿಮಗೆ ಪ್ರಸ್ತುತವಾಗಿಲ್ಲದಿರಬಹುದು ಅಥವಾ ಆಸಕ್ತಿದಾಯಕವಾಗಿರುವುದಿಲ್ಲ. ಈ ಜಾಹೀರಾತು ID ಯನ್ನು ಆಧರಿಸಿ ನೀವು ಜಾಹೀರಾತುಗಳನ್ನು ನೋಡುವುದಿಲ್ಲ, ಆದರೆ ನೀವು ಆ್ಯಪ್‌ಗಳೊಂದಿಗೆ ಹಂಚಿಕೊಂಡಿರುವ ಮಾಹಿತಿಯಂತಹ ಇತರ ಅಂಶಗಳ ಆಧಾರದ ಮೇಲೆ ನೀವು ಈಗಲೂ ಜಾಹೀರಾತುಗಳನ್ನು ನೋಡಬಹುದು.

ನಿಮ್ಮ Android ಸಾಧನದಲ್ಲಿನ ಜಾಹೀರಾತು ID ಯಲ್ಲಿ ಬದಲಾವಣೆಗಳನ್ನು ಮಾಡಲು, ಕೆಳಗಿನ ಸೂಚನೆಗಳನ್ನು ಅನುಸರಿಸಿ.

Android

ನಿಮ್ಮ ಸಾಧನದ ಜಾಹೀರಾತು ID ಯನ್ನು ರೀಸೆಟ್ ಮಾಡಿ

ನಿಮ್ಮ ಸಾಧನದ ಜಾಹೀರಾತು ID ಯನ್ನು ರೀಸೆಟ್ ಮಾಡಲು:

  1. ನಿಮ್ಮ Android ಸಾಧನದಲ್ಲಿ, ಸೆಟ್ಟಿಂಗ್‌ಗಳಿಗೆ ಹೋಗಿ.
  2. ಗೌಪ್ಯತೆ > ಜಾಹೀರಾತುಗಳು ಟ್ಯಾಪ್ ಮಾಡಿ.
  3. ಜಾಹೀರಾತು ID ಯನ್ನು ರೀಸೆಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಬದಲಾವಣೆಗಳನ್ನು ದೃಢೀಕರಿಸಿ.
ನಿಮ್ಮ ಸಾಧನದ ಜಾಹೀರಾತು ID ಯನ್ನು ಅಳಿಸಿ

ನಿಮ್ಮ ಸಾಧನದ ಜಾಹೀರಾತು ID ಯನ್ನು ಅಳಿಸಲು:

  1. ನಿಮ್ಮ Android ಸಾಧನದಲ್ಲಿ, ಸೆಟ್ಟಿಂಗ್‌ಗಳಿಗೆ ಹೋಗಿ.
  2. ಗೌಪ್ಯತೆ > ಜಾಹೀರಾತುಗಳು ಟ್ಯಾಪ್ ಮಾಡಿ.
  3. ಜಾಹೀರಾತು ID ಯನ್ನು ಅಳಿಸಿ ಎಂಬುದನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಬದಲಾವಣೆಗಳನ್ನು ದೃಢೀಕರಿಸಿ.

ನಿಮ್ಮ ಜಾಹೀರಾತು ID ಯನ್ನು ರೀಸೆಟ್ ಮಾಡಲಾಗುತ್ತದೆ ಅಥವಾ ಅಳಿಸಲಾಗುತ್ತದೆ, ಆದರೆ ಇತರ ಪ್ರಕಾರದ ಗುರುತಿಸುವಿಕೆಗಳನ್ನು ಬಳಸಿಕೊಂಡು ಆ್ಯಪ್‌ಗಳು ತಮ್ಮದೇ ಆದ ಸೆಟ್ಟಿಂಗ್‌ಗಳನ್ನು ಹೊಂದಿರಬಹುದು, ಇದು ನೀವು ನೋಡುವ ಜಾಹೀರಾತುಗಳ ಪ್ರಕಾರಗಳ ಮೇಲೂ ಪರಿಣಾಮ ಬೀರಬಹುದು.

Android ನ ಕೆಲವು ಹಳೆಯ ಆವೃತ್ತಿಗಳಲ್ಲಿ

ನಿಮ್ಮ Android ಸಾಧನದ ಆವೃತ್ತಿಯು 4.4 ಅಥವಾ ಹಳೆಯದಾಗಿದ್ದರೆ:

  1. ಸೆಟ್ಟಿಂಗ್‌ಗಳನ್ನು ತೆರೆಯಿರಿ
  2. ಗೌಪ್ಯತೆ > ಸುಧಾರಿತ > ಜಾಹೀರಾತುಗಳು ಟ್ಯಾಪ್ ಮಾಡಿ
  3. ಜಾಹೀರಾತುಗಳ ವೈಯಕ್ತೀಕರಣದಿಂದ ಹೊರಗುಳಿಯುವುದನ್ನು ಆನ್ ಮಾಡಿ ಮತ್ತು ನಿಮ್ಮ ಬದಲಾವಣೆಗಳನ್ನು ದೃಢೀಕರಿಸಿ.

iOS

iOS ಹೊಂದಿರುವ ಸಾಧನಗಳು Apple ನ ಜಾಹೀರಾತು ಗುರುತಿಸುವಿಕೆಯನ್ನು ಬಳಸುತ್ತವೆ. ಈ ಗುರುತಿಸುವಿಕೆಯ ಬಳಸುವಿಕೆಗಾಗಿ ನಿಮ್ಮ ಆಯ್ಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಿಮ್ಮ ಸಾಧನದಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಭೇಟಿ ನೀಡಿ.

ಸಂಪರ್ಕಿಸಬಹುದಾದ ಟಿವಿ/ಓವರ್-ದ-ಟಾಪ್

ಸಂಪರ್ಕಿಸಬಹುದಾದ ಟಿವಿಗಾಗಿ ಜಾಹೀರಾತು ಗುರುತಿಸುವಿಕೆಗಳು

ಸಂಪರ್ಕಿಸಬಹುದಾದ ಟಿವಿಗಳು ಕುಕೀ ತಂತ್ರಜ್ಞಾನ ಲಭ್ಯವಿಲ್ಲದ ಮತ್ತೊಂದು ಪ್ರದೇಶವಾಗಿದೆ ಮತ್ತು ಬದಲಿಗೆ, ಜಾಹೀರಾತುಗಳನ್ನು ನೀಡಲು ಜಾಹೀರಾತುಗಳಲ್ಲಿ ಬಳಸಲು ವಿನ್ಯಾಸಗೊಳಿಸಲಾದ ಸಾಧನ ಗುರುತಿಸುವಿಕೆಗಳನ್ನು Google ಅವಲಂಬಿಸುತ್ತದೆ. ಅನೇಕ ಸಂಪರ್ಕಿಸಬಹುದಾದ ಟಿವಿ ಸಾಧನಗಳು ಮೊಬೈಲ್ ಸಾಧನ ಗುರುತಿಸುವಿಕೆಗಳಿಗೆ ಸಂಬಂಧಿಸಿದ ಫಂಕ್ಷನ್‌ನಲ್ಲಿ ಹೋಲುವ ಜಾಹೀರಾತುಗಾಗಿ ಗುರುತಿಸುವಿಕೆಯನ್ನು ಬೆಂಬಲಿಸುತ್ತವೆ. ಈ ಗುರುತಿಸುವಿಕೆಗಳನ್ನು ರೀಸೆಟ್ ಮಾಡುವ ಅಥವಾ ವೈಯಕ್ತಿಕಗೊಳಿಸಿದ ಜಾಹೀರಾತಿನಿಂದ ಸಂಪೂರ್ಣವಾಗಿ ಹೊರಗುಳಿಯುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲು ನಿರ್ಮಿಸಲಾಗಿದೆ.

ಕೆಳಗಿನ ಸ್ಥಿರವಾದ ಭಾಷೆಯಲ್ಲಿ, ಕೆಳಗಿನ “ಜಾಹೀರಾತುಗಳು” ಸೆಟ್ಟಿಂಗ್‌ಗಳು ಟಿವಿಗಳಲ್ಲಿ ಲಭ್ಯವಿವೆ:

  • ಜಾಹೀರಾತು ID ಯನ್ನು ರೀಸೆಟ್ ಮಾಡಿ
  • ಜಾಹೀರಾತು ID ಯನ್ನು ಅಳಿಸಿ
  • ಜಾಹೀರಾತುಗಳ ವೈಯಕ್ತೀಕರಣದಿಂದ ಹೊರಗುಳಿಯಿರಿ (ಆನ್ ಅಥವಾ ಆಫ್)
  • Google ನ ಜಾಹೀರಾತುಗಳು (Google ಜಾಹೀರಾತು ವೈಯಕ್ತೀಕರಣದ ಕುರಿತಾದ ಲಿಂಕ್‌ಗಳು)
  • ನಿಮ್ಮ ಜಾಹೀರಾತು ID (ಲಾಂಗ್ ಸ್ಟ್ರಿಂಗ್)

ಈ ಜಾಹೀರಾತುಗಳ ಸೆಟ್ಟಿಂಗ್‌ಗಳು Google TV ಮತ್ತು Android TV ಯಲ್ಲಿ ಕ್ರಮವಾಗಿ ಈ ಕೆಳಗಿನ ಮಾರ್ಗಗಳಲ್ಲಿ ಲಭ್ಯವಿವೆ.

Google TV

ಜಾಹೀರಾತುಗಳಿಗೆ ಸಂಬಂಧಿಸಿದ ಸ್ಥಿರವಾದ ಪಥ:

  1. ಸೆಟ್ಟಿಂಗ್‌ಗಳು
  2. ಗೌಪ್ಯತೆ
  3. ಜಾಹೀರಾತುಗಳು

Android ಟಿವಿ

ಟಿವಿ ತಯಾರಕರು/ಮಾಡೆಲ್ ಅನ್ನು ಅವಲಂಬಿಸಿ Android TV ಗಾಗಿ ಎರಡು ಸಾಮಾನ್ಯ ಪಥಗಳಲ್ಲಿ ಒಂದರಲ್ಲಿ ಜಾಹೀರಾತು ಸೆಟ್ಟಿಂಗ್‌ಗಳನ್ನು ತೋರಿಸಲಾಗುತ್ತದೆ. Android TV ನಲ್ಲಿ, ಪಾಲುದಾರರು ಸೆಟ್ಟಿಂಗ್‌ಗಳ ಪಥವನ್ನು ಅಳವಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಪಾಲುದಾರರು ತಮ್ಮ ಕಸ್ಟಮ್ ಟಿವಿ ಅನುಭವವನ್ನು ಉತ್ತಮವಾಗಿ ಹೊಂದಿಸಲು ಯಾವ ಪಥವನ್ನು ಬಳಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು, ಆದರೆ ಜಾಹೀರಾತು ಸೆಟ್ಟಿಂಗ್‌ಗಳ ಸಾಮಾನ್ಯ ಪಥಗಳನ್ನು ಕೆಳಗೆ ನೀಡಲಾಗಿದೆ.

ಪಥ A:

  1. ಸೆಟ್ಟಿಂಗ್‌ಗಳು
  2. ಕುರಿತು
  3. ಕಾನೂನು ಮಾಹಿತಿ
  4. ಜಾಹೀರಾತುಗಳು

ಪಥ B:

  1. ಸೆಟ್ಟಿಂಗ್‌ಗಳು
  2. ಸಾಧನಗಳ ಆದ್ಯತೆಗಳು
  3. ಕುರಿತು
  4. ಕಾನೂನು ಮಾಹಿತಿ
  5. ಜಾಹೀರಾತುಗಳು
Google-ಅಲ್ಲದ ಸಾಧನಗಳು

ಅನೇಕ ಸಂಪರ್ಕಿಸಬಹುದಾದ ಟಿವಿ ಸಾಧನಗಳು ಜಾಹೀರಾತಿಗಾಗಿ ಗುರುತಿಸುವಿಕೆಗಳನ್ನು ಬೆಂಬಲಿಸುತ್ತವೆ ಮತ್ತು ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಜಾಹೀರಾತಿನಿಂದ ಹೊರಗುಳಿಯುವ ಮಾರ್ಗಗಳನ್ನು ಒದಗಿಸುತ್ತವೆ. ಆ ಸಾಧನಗಳ ಸಂಪೂರ್ಣ ಪಟ್ಟಿ ಮತ್ತು ಬಳಕೆದಾರರು ಆಯ್ಕೆಯಿಂದ ಹೊರಗುಳಿಯುವ ವಿಧಾನಗಳನ್ನು ಇಲ್ಲಿ ನೆಟ್‌ವರ್ಕ್ ಜಾಹೀರಾತು ಇನಿಶಿಯೇಟಿವ್‌ನ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ: https://thenai.org/opt-out/connected-tv-choices/.

ನಾನು ನೋಡುವ Google ಜಾಹೀರಾತುಗಳು ಏನನ್ನು ನಿರ್ಧರಿಸುತ್ತವೆ?

ನೀವು ನೋಡುವ ಜಾಹೀರಾತುಗಳನ್ನು ನಿರ್ಧರಿಸಲು ಹಲವಾರು ತೀರ್ಮಾನಗಳನ್ನು ಮಾಡಲಾಗಿದೆ.

ಕೆಲವೊಮ್ಮೆ ನೀವು ನೋಡುವ ಜಾಹೀರಾತು ನಿಮ್ಮ ಪ್ರಸ್ತುತ ಅಥವಾ ಹಿಂದಿನ ಸ್ಥಳವನ್ನು ಆಧರಿಸಿರುತ್ತದೆ. ಸಾಮಾನ್ಯವಾಗಿ ನಿಮ್ಮ ಐಪಿ ವಿಳಾಸವು ನಿಮ್ಮ ಅಂದಾಜಿನ ಸ್ಥಳದ ಉತ್ತಮ ಸೂಚನೆಯಾಗಿರುತ್ತದೆ. ಅದ್ದರಿಂದ ನಿಮ್ಮ ದೇಶದಲ್ಲಿ ಮುಂಬರುವ ಚಲನಚಿತ್ರದ ಪ್ರಚಾರ ಮಾಡುವ ಜಾಹೀರಾತನ್ನು YouTube.com ನ ಮುಖಪುಟದಲ್ಲಿ ನೀವು ವೀಕ್ಷಿಸಬಹುದು ಅಥವಾ ‘ಪಿಜ್ಜಾ’ ಎಂಬ ಪದಕ್ಕೆ ಹುಡುಕಿದಾಗ ನಿಮ್ಮ ಪಟ್ಟಣದಲ್ಲಿನ ಪಿಜ್ಜಾ ಸ್ಥಳಗಳ ವಿವರಗಳು ಕಂಡುಬರಬಹುದು.

ಕೆಲವೊಮ್ಮೆ ನೀವು ನೋಡುವ ಜಾಹೀರಾತು ಪುಟದ ಸಂದರ್ಭಕ್ಕೆ ಅನುಸಾರವಾಗಿರುತ್ತದೆ. ನೀವು ತೋಟಗಾರಿಕೆ ಸಲಹೆಗಳ ಪುಟದಲ್ಲಿ ಹುಡುಕುತ್ತಿದ್ದರೆ, ತೋಟಗಾರಿಕೆ ಉಪಕರಣಗಳ ಜಾಹೀರಾತುಗಳನ್ನು ನೀವು ಕಾಣಬಹುದು.

ಕೆಲವೊಮ್ಮೆ ನಿಮ್ಮ ಅಪ್ಲಿಕೇಶನ್‌ನ ಚಟುವಟಿಕೆಯನ್ನು ಆಧರಿಸಿರುವ ಅಥವಾ Google ಸೇವೆಗಳ ಚಟುವಟಿಕೆಗಳ ಮೇಲೆ; ಅಥವಾ ನಿಮ್ಮ ವೆಬ್‌ ಚಟುವಟಿಕೆಯನ್ನು ಆಧರಿಸಿದ ಅಪ್ಲಿಕೇಶನ್‌ನಲ್ಲಿನ ಜಾಹೀರಾತನ್ನು; ಅಥವಾ ಬೇರೆ ಸಾಧನದಲ್ಲಿನ ನಿಮ್ಮ ಚಟುವಟಿಕೆಯನ್ನು ಆಧರಿಸಿದ ಜಾಹೀರಾತನ್ನು ನೀವು ವೆಬ್‌ನಲ್ಲಿ ಕೂಡಾ ನೋಡಬಹುದು.

ಕೆಲವೊಮ್ಮೆ ನಿಮಗೆ ಪುಟದಲ್ಲಿ ಕಾಣುವ ಜಾಹೀರಾತನ್ನು Google ಒದಗಿಸಿರುತ್ತದೆ. ಆದರೆ ಬೇರೊಂದು ಕಂಪನಿ ಆಯ್ಕೆ ಮಾಡಿಕೊಂಡಿರುತ್ತದೆ. ಉದಾಹರಣೆಗೆ, ನೀವು ಪತ್ರಿಕೆ ವೆಬ್‌ಸೈಟ್‌ನೊಂದಿಗೆ ನೋಂದಣಿ ಆಗಿರಬಹುದು. ನೀವು ಪತ್ರಿಕೆಗೆ ನೀಡಿರುವ ಮಾಹಿತಿಯಿಂದ, ನಿಮಗೆ ಯಾವ ಜಾಹೀರಾತುಗಳನ್ನು ತೋರಿಸಬೇಕು ಎಂಬುದರ ಕುರಿತ ನಿರ್ಧಾರಗಳನ್ನು ಇದು ತೆಗೆದುಕೊಳ್ಳಬಹುದು. ಅಂತಹ ಜಾಹೀರಾತುಗಳನ್ನು ಒದಗಿಸಲು ಇದು Google ನ ಜಾಹೀರಾತು ಸೇವಾ ಉತ್ಪನ್ನಗಳನ್ನು ಬಳಸಬಹುದು.

ನೀವು ಜಾಹೀರಾತುದಾರರಿಗೆ ಒದಗಿಸಿದ ಮತ್ತು ನಂತರ ಜಾಹೀರಾತುದಾರರು Google ನೊಂದಿಗೆ ಹಂಚಿಕೊಂಡ ನಿಮ್ಮ ಇಮೇಲ್‌ನಂತಹ ಮಾಹಿತಿಯನ್ನು ಆಧರಿಸಿ, ಹುಡುಕಾಟ, Gmail ಮತ್ತು YouTube ಸೇರಿದಂತೆ Google ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಸಹ ಜಾಹೀರಾತನ್ನು ನೀವು ನೋಡಬಹುದು.

ನಾನು ವೀಕ್ಷಿಸಿರುವ ಉತ್ಪನ್ನಗಳಿಗೆ ಸಂಬಂಧಿಸಿದ Google ಜಾಹೀರಾತುಗಳು ನನಗೇಕೆ ಬರುತ್ತಿವೆ?

ನೀವು ಈ ಹಿಂದೆಯೇ ವೀಕ್ಷಿಸಿರುವ ಉತ್ಪನ್ನಗಳ ಜಾಹೀರಾತುಗಳನ್ನು ನೋಡಬಹುದು. ಒಂದು ವೇಳೆ ನೀವು ಗಾಲ್ಫ್ ಕ್ಲಬ್ ಸಾಮಗ್ರಿಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ಗೆ ಭೇಟಿ ನೀಡಿದಿರಿ ಎಂದಿಟ್ಟುಕೊಳ್ಳೋಣ, ಮೊದಲ ಭೇಟಿಯಲ್ಲಿಯೇ ನೀವು ವಸ್ತುಗಳನ್ನು ಖರೀದಿಸುವುದಿಲ್ಲ ಅಲ್ಲವೇ? ಇದನ್ನು ಗಮನಿಸಿದ ವೆಬ್‌ಸೈಟ್ ಮಾಲೀಕರು ನೀವು ಮತ್ತೊಮ್ಮೆ ಭೇಟಿ ನೀಡಲಿ, ಖರೀದಿಯನ್ನು ಪೂರ್ಣಗೊಳಿಸಲಿ ಎಂದು ನಿಮಗೆ ಉತ್ತೇಜನ ನೀಡಬಹುದು. ವೆಬ್‌ಸೈಟ್ ಆಪರೇಟರ್‌ಗಳು ತಮ್ಮ ಪುಟಗಳಿಗೆ ಭೇಟಿ ನೀಡಿರುವ ಜನರನ್ನು ಗುರಿಯಾಗಿಸಿಕೊಂಡು ತಮ್ಮ ಜಾಹೀರಾತುಗಳನ್ನು ಒದಗಿಸಲು Google ಕೊಡುಗೆಗಳ ಸೇವೆಗಳು ಅವಕಾಶ ಮಾಡಿಕೊಡುತ್ತವೆ.

ಇದು ಕಾರ್ಯನಿರ್ವಹಿಸಲು, ಈಗಾಗಲೇ ನಿಮ್ಮ ಬ್ರೌಸರ್‌ನಲ್ಲಿರುವ ಕುಕೀಯನ್ನು Google ಓದುತ್ತದೆ ಅಥವಾ ನೀವು ಗಾಲ್ಫಿಂಗ್ ಸೈಟ್‌ಗೆ ಭೇಟಿ ನೀಡಿದಾಗ ನಿಮ್ಮ ಬ್ರೌಸರ್‌ನಲ್ಲಿ ಕುಕೀಯನ್ನು ಇರಿಸುತ್ತದೆ (ನಿಮ್ಮ ಬ್ರೌಸರ್ ಇದನ್ನು ಅನುಮತಿಸುತ್ತದೆ ಎಂದು ಊಹಿಸಿಕೊಂಡು).

ನೀವು ಗಾಲ್ಫಿಂಗ್‌ನೊಂದಿಗೆ ಏನೂ ಕಾರ್ಯ ನಿರ್ವಹಿಸದ Google ನೊಂದಿಗೆ ಕಾರ್ಯ ನಿರ್ವಹಿಸುವ ಬೇರೆಯದೇ ಸೈಟ್‌ಗೆ ಭೇಟಿ ನೀಡಿದಾಗ, ಅಂತಹ ಗಾಲ್ಫ್ ಕ್ಲಬ್‌ಗಳ ಜಾಹೀರಾತುಗಳನ್ನು ನೀವು ಕಾಣಬಹುದು. ನಿಮ್ಮ ಬ್ರೌಸರ್ Google ಗೆ ಅದೇ ಕುಕೀಯನ್ನು ಕಳುಹಿಸುವ ಕಾರಣ ಹೀಗಾಗುತ್ತದೆ. ಅದಕ್ಕೆ ಪ್ರತಿಯಾಗಿ, ಅಂತಹ ಗಾಲ್ಫ್ ಕ್ಲಬ್ ಸಾಮಗ್ರಿಗಳನ್ನು ಖರೀದಿಸುವಂತೆ ನಿಮ್ಮನ್ನು ಉತ್ತೇಜಿಸುವ ಜಾಹೀರಾತನ್ನು ನಿಮಗೆ ಪೂರೈಸಲು ನಾವು ಆ ಕುಕೀಯನ್ನು ಬಳಸಿಕೊಳ್ಳಬಹುದು.

Google ನಲ್ಲಿ ಗಾಲ್ಫ್‌ ಕ್ಲಬ್‌‌ಗಳಿಗೆ ನೀವು ನಂತರದಲ್ಲಿ ಹುಡುಕಲು ನಿಮ್ಮ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸಲು Google ಮೂಲಕ ನಿಮ್ಮ ಭೇಟಿ ಮಾಡುವ ಗಾಲ್ಫಿಂಗ್ ಸೈಟ್‌‌ ಬಳಸಬಹುದು.

ನಮ್ಮಲ್ಲಿ ಈ ಪ್ರಕಾರದ ಜಾಹೀರಾತಿನ ಮೇಲೆ ನಿರ್ಬಂಧಗಳಿವೆ. ಉದಾಹರಣೆಗೆ, ಆರೋಗ್ಯದ ಮಾಹಿತಿ ಅಥವಾ ಧಾರ್ಮಿಕ ನಂಬಿಕೆಗಳಂತಹ ಸೂಕ್ಷ್ಮ ಮಾಹಿತಿಯನ್ನು ಆಧರಿಸಿ ಜಾಹೀರಾತು ನೀಡುವ ಜಾಹೀರಾತುದಾರರ ಮೇಲೆ ಪ್ರೇಕ್ಷಕರ ಆಯ್ಕೆಯನ್ನು ಆಧರಿಸಿ ಮಾಡದಂತೆ ನಿಷೇಧ ಹೇರುತ್ತೇವೆ.

Google ಜಾಹೀರಾತುಗಳು ಕುರಿತು ಇನ್ನಷ್ಟು ತಿಳಿಯಿರಿ.

Google Apps
ಪ್ರಮುಖ ಮೆನು