ಸ್ಥಳ ಮಾಹಿತಿಯನ್ನು Google ಹೇಗೆ ಬಳಸುತ್ತದೆ

Google, ಸ್ಥಳ ಮಾಹಿತಿಯನ್ನು ಏಕೆ ಬಳಸುತ್ತದೆ?

Google ನ ಉತ್ಪನ್ನಗಳು ಮತ್ತು ಸೇವೆಗಳನ್ನು ನೀವು ಬಳಸುವಾಗ, ಸ್ಥಳ ಮಾಹಿತಿಯೂ ಸೇರಿದಂತೆ, ಮಾಹಿತಿಯನ್ನು ಯಾವ ರೀತಿಯಲ್ಲಿ ನಿರ್ವಹಿಸಲಾಗುತ್ತದೆ ಎಂಬುದನ್ನು Google ಗೌಪ್ಯತೆ ನೀತಿಯು ವಿವರಿಸುತ್ತದೆ. ನಾವು ಸಂಗ್ರಹಿಸಬಹುದಾದ ಸ್ಥಳ ಮಾಹಿತಿ ಹಾಗೂ ಅದನ್ನು ನೀವು ಹೇಗೆ ನಿಭಾಯಿಸಬಹುದು ಎಂಬುದನ್ನು ಕುರಿತು ಈ ಪುಟವು ಹೆಚ್ಚುವರಿ ಮಾಹಿತಿ ಒದಗಿಸುತ್ತದೆ.

ಉಪಯುಕ್ತ, ಅರ್ಥಪೂರ್ಣ ಅನುಭವಗಳನ್ನು ಒದಗಿಸುವುದು Google ನ ಆದ್ಯತೆಯಾಗಿದೆ ಮತ್ತು ಅದನ್ನು ಮಾಡುವ ನಿಟ್ಟಿನಲ್ಲಿ ಸ್ಥಳ ಮಾಹಿತಿಯು ಪ್ರಮುಖ ಪಾತ್ರ ವಹಿಸುತ್ತದೆ. ಡ್ರೈವಿಂಗ್ ನಿರ್ದೇಶನಗಳನ್ನು ಒದಗಿಸುವುದು, ನಿಮ್ಮ ಹುಡುಕಾಟಗಳಲ್ಲಿ ನಿಮ್ಮ ಸಮೀಪದ ಸಂಗತಿಗಳು ಒಳಗೊಂಡಿವೆ ಎಂಬುದನ್ನು ಖಚಿತಪಡಿಸುವುದು, ಒಂದು ರೆಸ್ಟಾರೆಂಟ್ ಯಾವಾಗ ಜನರಿಂದ ತುಂಬಿರುತ್ತದೆ ಎನ್ನುವುದನ್ನು ನಿಮಗೆ ತೋರಿಸುವುದು, ಇತ್ಯಾದಿ ವಿಚಾರಗಳಲ್ಲಿ ಸ್ಥಳ ಮಾಹಿತಿಯು Google ನಾದ್ಯಂತ ನಿಮ್ಮ ಅನುಭವಗಳನ್ನು ಇನ್ನಷ್ಟು ಸೂಕ್ತ ಹಾಗೂ ಉಪಯುಕ್ತಗೊಳಿಸಬಹುದು. ಸ್ಥಳ ಮಾಹಿತಿಯು, ಉತ್ಪನ್ನಕ್ಕೆ ಸಂಬಂಧಿಸಿದ ಕೆಲವೊಂದು ಪ್ರಮುಖ ಕಾರ್ಯಾಚರಣೆಗಳಲ್ಲಿಯೂ ನೆರವಾಗಬಹುದು. ಉದಾಹರಣೆಗೆ, ವೆಬ್‌ಸೈಟ್ ಅನ್ನು ಸರಿಯಾದ ಭಾಷೆಯಲ್ಲಿ ಒದಗಿಸುವುದು ಅಥವಾ Google ನ ಸೇವೆಗಳನ್ನು ಸುರಕ್ಷಿತವಾಗಿರಿಸುವುದಕ್ಕೆ ನೆರವಾಗುವುದು.

Google ನನ್ನ ಸ್ಥಳವನ್ನು ಹೇಗೆ ಕಂಡುಹಿಡಿಯುತ್ತದೆ?

ನೀವು ಬಳಸುತ್ತಿರುವ ಉತ್ಪನ್ನಗಳು ಹಾಗೂ ಆಯ್ಕೆಮಾಡಿದ ಸೆಟ್ಟಿಂಗ್‌ಗಳನ್ನು ಆಧರಿಸಿ, ಕೆಲವು ಸೇವೆಗಳು ಕೆಲಸ ಮಾಡುವುದಕ್ಕಾಗಿ ಮತ್ತು ಕೆಲವು ಸೇವೆಗಳನ್ನು ನಿಮಗೆ ಹೆಚ್ಚು ಉಪಯುಕ್ತಗೊಳಿಸುವುದಕ್ಕಾಗಿ ಬೇಕಾಗಿರುವ ಬೇರೆ ಬೇರೆ ರೀತಿಯ ಸ್ಥಳ ಮಾಹಿತಿಯನ್ನು ನೀವು Google ಗೆ ಒದಗಿಸಬಹುದು. ಸ್ಥಳ ಮಾಹಿತಿಯನ್ನು, ನಿಮ್ಮ IP ವಿಳಾಸ ಅಥವಾ ಸಾಧನದ ಸ್ಥಳದಂತಹ ನೈಜ- ಸಮಯದ ಸಿಗ್ನಲ್‌ಗಳಿಂದ ಪಡೆದುಕೊಳ್ಳಬಹುದು ಅಥವಾ ನಿಮಗೆ ಸಂದರ್ಭೋಚಿತವಾದ ಅನುಭವಗಳನ್ನು ಒದಗಿಸುವುದಕ್ಕಾಗಿ, Google ಸೈಟ್‌ಗಳು ಮತ್ತು ಸೇವೆಗಳಲ್ಲಿ ನೀವು ಈ ಹಿಂದೆ ನಡೆಸಿದ ಚಟುವಟಿಕೆಯಿಂದಲೂ ಪಡೆದುಕೊಳ್ಳಬಹುದು. ನಿಮ್ಮ ಸ್ಥಳದ ಕುರಿತು ನಾವು ಮಾಹಿತಿ ಪಡೆದುಕೊಳ್ಳಬಹುದಾದ ಪ್ರಾಥಮಿಕ ವಿಧಾನಗಳು ಈ ರೀತಿ ಇವೆ.

ನಿಮ್ಮ ಇಂಟರ್ನೆಟ್ ಕನೆಕ್ಷನ್‌ನ IP ವಿಳಾಸದಿಂದ

ನಿಮ್ಮ ಇಂಟರ್ನೆಟ್ ಪೂರೈಕೆದಾರರ ಮೂಲಕ ನಿಮ್ಮ ಸಾಧನಕ್ಕೆ ಒಂದು IP ವಿಳಾಸವನ್ನು (ಇಂಟರ್ನೆಟ್ ವಿಳಾಸ ಎಂದೂ ಸಹ ಕರೆಯಲಾಗುತ್ತದೆ) ನಿಯೋಜಿಸಲಾಗುತ್ತದೆ ಮತ್ತು ಇಂಟರ್ನೆಟ್ ಬಳಸಲು ಇದು ಅವಶ್ಯಕತೆಯಾಗಿದೆ. ನಿಮ್ಮ ಸಾಧನ ಮತ್ತು ನೀವು ಬಳಸುವ ವೆಬ್‌ಸೈಟ್‌ಗಳು ಹಾಗೂ ಸೇವೆಗಳ ನಡುವಿನ ಕನೆಕ್ಷನ್ ಅನ್ನು ಮಾಡಲು IP ವಿಳಾಸಗಳನ್ನು ಬಳಸಲಾಗುತ್ತದೆ. IP ವಿಳಾಸಗಳನ್ನು ಸ್ಥೂಲವಾಗಿ ಭೌಗೋಳಿಕ ನೆಲೆಯಲ್ಲಿ ನಿಯೋಜಿಸಲಾಗುತ್ತದೆ. Google.com ಸೇರಿದಂತೆ, ನೀವು ಬಳಸುವ ಯಾವುದೇ ವೆಬ್‌ಸೈಟ್ ನಿಮ್ಮ ಸಾಮಾನ್ಯ ಪ್ರದೇಶದ ಬಗ್ಗೆ ಕೆಲವು ಮಾಹಿತಿಯನ್ನು ಪಡೆಯಬಹುದು ಎಂಬ ಅರ್ಥವನ್ನು ಹೊಂದಿದೆ.

ಇತರ ಹಲವು ಇಂಟರ್ನೆಟ್ ಸೇವೆಗಳಂತೆ, ಕೆಲವು ಮೂಲಭೂತ ಸೇವೆಗಳನ್ನು ಒದಗಿಸಲು ನೀವಿರುವ ಸಾಮಾನ್ಯ ಪ್ರದೇಶದ ಕುರಿತು Google ಮಾಹಿತಿಯನ್ನು ಬಳಸಬಹುದು. ನೀವಿರುವ ಸಾಮಾನ್ಯ ಪ್ರದೇಶವನ್ನು ಅಂದಾಜು ಮಾಡುವುದೆಂದರೆ ಉದಾಹರಣೆಗೆ, Google ನಿಮಗೆ ಸೂಕ್ತವಾದ ಫಲಿತಾಂಶಗಳನ್ನು ನೀಡಬಹುದು ಮತ್ತು ಹೊಸ ನಗರದಿಂದ ಸೈನ್ ಇನ್ ಮಾಡುವಂತಹ ಅಸಾಮಾನ್ಯ ಚಟುವಟಿಕೆಯನ್ನು ಕಂಡುಹಿಡಿಯುವ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಬಹುದು.

ನಿಮ್ಮ ಹಿಂದಿನ ಚಟುವಟಿಕೆಯಿಂದ

ನಮ್ಮ ಸೇವೆಗಳನ್ನು ನೀವು ಬಳಸಿದಂತೆಲ್ಲಾ, ನೀವು ನಿಖರವಾಗಿ ಎಲ್ಲಿ ಇದ್ದೀರಿ ಎಂಬುದನ್ನು ನಿಮ್ಮ ಸಾಧನವು ನಮಗೆ ತಿಳಿಸದಿದ್ದರೂ ಕೂಡಾ, ನೀವು ಯಾವ ಸ್ಥಳದ ಕುರಿತು ಆಸಕ್ತಿ ಹೊಂದಿದ್ದೀರಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ, ನೀವು "ಪ್ಯಾರಿಸ್‌ನಲ್ಲಿರುವ ಕೆಫೆಗಳು" ಎಂಬುದನ್ನು ಹುಡುಕಿದರೆ, ನೀವು ಪ್ಯಾರಿಸ್‌ನ ಸಮೀಪದಲ್ಲಿರುವ ಸ್ಥಳಗಳನ್ನು ನೋಡಲು ಬಯಸುತ್ತೀರಿ ಎಂದು ನಾವು ತಿಳಿದುಕೊಳ್ಳಬಹುದು ಮತ್ತು ಅಲ್ಲಿರುವ ಕೆಫೆಗಳ ಫಲಿತಾಂಶಗಳನ್ನು ನಿಮಗೆ ತೋರಿಸಬಹುದು. ಹಿಂದಿನ ಹುಡುಕಾಟಗಳಂತಹ ನಿಮ್ಮ ಚಟುವಟಿಕೆಯಿಂದ ಕೆಲವು ಐಟಂಗಳನ್ನು ಆ ಸಮಯದಲ್ಲಿ ನೀವು ಇದ್ದಂತಹ ಸಾಮಾನ್ಯ ಪ್ರದೇಶವನ್ನು ಸಹ ಒಳಗೊಂಡಿರಬಹುದು. ನೀವು ಆನಂತರ ಇನ್ನಷ್ಟು ಹುಡುಕಾಟಗಳನ್ನು ನಡೆಸಿದಾಗ (ಉದಾಹರಣೆಗೆ, ನೀವು ಇನ್ನೂ ಪ್ಯಾರಿಸ್‌ನಲ್ಲೇ ಇದ್ದೀರಾ ಎಂಬುದನ್ನು ನಿರ್ಧರಿಸಲು), ನಿಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ, ಈ ರೀತಿಯ ಮಾಹಿತಿಯನ್ನು ನಿಮ್ಮ ಖಾತೆಯೊಂದಿಗೆ ಸಂಗ್ರಹಣೆ ಮಾಡಬಹುದು ಮತ್ತು ಇನ್‌ಪುಟ್ ಆಗಿ ಬಳಸಬಹುದು.

ನೀವು ಲೇಬಲ್ ಮಾಡಿರುವ ಸ್ಥಳಗಳಿಂದ

ನಿಮಗೆ ಮುಖ್ಯವಾದ ಸ್ಥಳಗಳ ಕುರಿತು ನಮಗೆ ನೀವು ತಿಳಿಸಬಹುದು. ಉದಾಹರಣೆಗೆ ನಿಮ್ಮ ಮನೆ ಅಥವಾ ಕಚೇರಿ. ನಿಮ್ಮ ಮನೆ ಹಾಗೂ ಕೆಲಸದ ವಿಳಾಸಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುವ ಮೂಲಕ, ತ್ವರಿತಗತಿಯಲ್ಲಿ ನಿರ್ದೇಶನಗಳನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಈ ಮಾಹಿತಿಯಿಂದ ನಾವು ನಿಮಗೆ ಒದಗಿಸುವ ಫಲಿತಾಂಶಗಳ ಮೇಲೂ ಪ್ರಭಾವ ಬೀರಬಹುದು. ಇನ್ನಷ್ಟು ತಿಳಿಯಿರಿ

ನಿಮ್ಮ ಸಾಧನಗಳಿಂದ

ಫೋನ್‌ಗಳು ಅಥವಾ ಕಂಪ್ಯೂಟರ್‌ಗಳಂತಹ ಅನೇಕ ಸಾಧನಗಳು ಅವುಗಳ ನಿಖರವಾದ ಸ್ಥಳವನ್ನು ಕಾರ್ಯನಿರ್ವಹಿಸಬಹುದು. ನಿಮ್ಮ ಸಾಧನವು ಯಾವ ಸ್ಥಳದಲ್ಲಿದೆ ಎಂಬುದನ್ನು ಆಧರಿಸಿ, ನಿಮಗೆ ಉಪಯುಕ್ತ ವೈಶಿಷ್ಟ್ಯಗಳನ್ನು ಒದಗಿಸಲು ನೀವು Google ಹಾಗೂ ಇತರ ಆ್ಯಪ್‌ಗಳಿಗೆ ಅನುಮತಿ ನೀಡಬಹುದು. ಉದಾಹರಣೆಗೆ, ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ಹೋಗುತ್ತಿರುವಾಗ ತಡವಾದರೆ, ನಿಮ್ಮ ಗಮ್ಯಸ್ಥಾನಕ್ಕೆ ಅತ್ಯಂತ ವೇಗವಾಗಿ ತಲುಪುವ ಮಾರ್ಗ ಯಾವುದು ಎಂದು ತಿಳಿದುಕೊಳ್ಳಲು ನೀವು ನ್ಯಾವಿಗೇಶನ್ ಆ್ಯಪ್ ಅನ್ನು ಬಳಸಲು ಬಯಸಬಹುದು. ತಿರುವಿನಿಂದ ತಿರುವಿಗೆ ನಿರ್ದೇಶನಗಳನ್ನು ಪಡೆದುಕೊಳ್ಳುವುದಕ್ಕಾಗಿ, ನಿಮ್ಮ ಸಾಧನದ ಸ್ಥಳವನ್ನು ಆನ್ ಮಾಡಬೇಕಾಗಬಹುದು ಮತ್ತು ಅದಕ್ಕೆ ಪ್ರವೇಶ ಪಡೆಯಲು ಆ್ಯಪ್‌ಗೆ ಅನುಮತಿ ನೀಡಬೇಕಾಗಬಹುದು. ಅಥವಾ “ಕಾಫಿ ಶಾಪ್”, “ಬಸ್ ನಿಲ್ದಾಣ” ಅಥವಾ “ಎಟಿಎಂ” ನಂತಹ ಕೆಲವು ಹುಡುಕಾಟಗಳಿಗೆ, ನಿಖರವಾದ ಸ್ಥಳ ಲಭ್ಯವಿರುವಾಗ, ಫಲಿತಾಂಶಗಳು ಸಾಮಾನ್ಯವಾಗಿ ಹೆಚ್ಚು ಉಪಯುಕ್ತವಾಗಿರುತ್ತವೆ.

ನಿಮ್ಮ Android ಸಾಧನದಲ್ಲಿ ನಿಮ್ಮ ಸಾಧನದ ಸ್ಥಳವನ್ನು ಆನ್ ಮಾಡಿದರೆ, ನ್ಯಾವಿಗೇಶನ್‌ನಂತಹ ವೈಶಿಷ್ಟ್ಯಗಳನ್ನು ನೀವು ಬಳಸಬಹುದು ಮತ್ತು ಈ ಮೂಲಕ ನಿಮ್ಮ ಪ್ರಸ್ತುತ ಸ್ಥಳದ ಮಾಹಿತಿಗೆ ಪ್ರವೇಶಿಸಲು ಆ್ಯಪ್‌ಗೆ ಅನುಮತಿ ನೀಡಬಹುದು ಅಥವಾ ನಿಮ್ಮ ಫೋನ್ ಅನ್ನು ಹುಡುಕಬಹುದು. ಪ್ರತ್ಯೇಕ ಆ್ಯಪ್‌ಗಳಿಗಾಗಿ ಅನುಮತಿಯನ್ನು ಆನ್ ಅಥವಾ ಆಫ್ ಮಾಡಲು ನಿಮಗೆ ಅವಕಾಶ ನೀಡುವ ಸರಳ ನಿಯಂತ್ರಣಗಳ ಮೂಲಕ, ನಿಮ್ಮ ಸಾಧನದ ಸ್ಥಳವನ್ನು ಬಳಸಲು ಯಾವ ಆ್ಯಪ್‌ಗಳಿಗೆ ಅನುಮತಿ ಇದೆ ಎಂಬುದನ್ನು ಸಹ ನೀವು ಆಯ್ಕೆ ಮಾಡಬಹುದು. Android ನಲ್ಲಿ, ನಿಮ್ಮ ಸ್ಕ್ರೀನ್‌ನ ಮೇಲ್ಭಾಗದಲ್ಲಿ ಸ್ಥಳ ಕಂಡುಬಂದಾಗ, ನಿಮ್ಮ ಫೋನ್‌ನ GPS-ಆಧಾರಿತ ಸ್ಥಳವನ್ನು ಬಳಸಲು ಆ್ಯಪ್ ಯಾವಾಗ ವಿನಂತಿಸುತ್ತಿದೆ ಎನ್ನುವುದನ್ನು ನೀವು ನೋಡಬಹುದು. ಇನ್ನಷ್ಟು ತಿಳಿಯಿರಿ

Google ಸ್ಥಳ ಸೇವೆಗಳು

ಹೆಚ್ಚಿನ Android ಸಾಧನಗಳಲ್ಲಿ, Google, ನೆಟ್‌ವರ್ಕ್ ಸ್ಥಳ ಪೂರೈಕೆದಾರರಾಗಿ, Google ಸ್ಥಳ ಸೇವೆಗಳು (GLS) ಎಂಬ ಸ್ಥಳ ಸೇವೆಯನ್ನು ಒದಗಿಸುತ್ತದೆ. Android 9 ಮತ್ತು ನಂತರದ ಆವೃತ್ತಿಗಳಲ್ಲಿ ಇದನ್ನು Google ಸ್ಥಳ ನಿಖರತೆ ಎಂದು ಕರೆಯಲಾಗುತ್ತದೆ. ಈ ಸೇವೆಯು ಸಾಧನದ ಸ್ಥಳದ ಕುರಿತು ಹೆಚ್ಚು ನಿಖರವಾದ ಮಾಹಿತಿ ಒದಗಿಸುವ ಮತ್ತು ಸ್ಥಳದ ನಿಖರತೆಯನ್ನು ಸಾಮಾನ್ಯ ರೀತಿಯಲ್ಲಿ ಸುಧಾರಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಮೊಬೈಲ್ ಫೋನ್‌ಗಳು GPS ಸೌಲಭ್ಯ ಹೊಂದಿರುತ್ತವೆ. ಸಾಧನದ ಸ್ಥಳವನ್ನು ತೀರ್ಮಾನಿಸಲು, ಇದು ಉಪಗ್ರಹಗಳ ಸಿಗ್ನಲ್‌ಗಳನ್ನು ಬಳಸುತ್ತದೆ - ಆದರೆ, Google ಸ್ಥಳ ಸೇವೆಗಳಲ್ಲಿ, ನಿಮ್ಮ ಸಾಧನದ ಸ್ಥಳವನ್ನು ತೀರ್ಮಾನಿಸುವುದಕ್ಕಾಗಿ, ಸಮೀಪದ ವೈ-ಫೈ, ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಸಾಧನದ ಸೆನ್ಸರ್‌ಗಳಂತಹ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ನಿಮ್ಮ ಸಾಧನದಿಂದ ನಿಯಮಿತವಾಗಿ ಸ್ಥಳ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಮತ್ತು ಸ್ಥಳದ ನಿಖರತೆಯನ್ನು ಸುಧಾರಿಸಲು, ಅದನ್ನು ಅನಾಮಧೇಯ ರೀತಿಯಲ್ಲಿ ಬಳಸುವ ಮೂಲಕ, ಇದು ಈ ಕಾರ್ಯವನ್ನು ಸಾಧಿಸುತ್ತದೆ.

Google ಸ್ಥಳ ಸೇವೆಗಳನ್ನು ನೀವು ಯಾವಾಗ ಬೇಕಾದರೂ ನಿಮ್ಮ ಸಾಧನದ ಸ್ಥಳ ಸೆಟ್ಟಿಂಗ್‌ಗಳಲ್ಲಿ ನಿಷ್ಕ್ರಿಯಗೊಳಿಸಬಹುದು. GLS ಅನ್ನು ಆಫ್ ಮಾಡಿದ್ದರೂ ಸಹ, ನಿಮ್ಮ ಸಾಧನದ ಸ್ಥಳವು ಕೆಲಸ ಮಾಡುವುದನ್ನು ಮುಂದುವರಿಸುತ್ತದೆ, ಆದರೆ ಅಗತ್ಯ ಅನುಮತಿಯನ್ನು ಪಡೆದುಕೊಂಡಿರುವ ಆ್ಯಪ್‌ಗಳಿಗಾಗಿ ಸಾಧನದ ಸ್ಥಳವನ್ನು ಅಂದಾಜು ಮಾಡಲು, ಸಾಧನವು GPS ಅನ್ನು ಮಾತ್ರ ಅವಲಂಬಿಸುತ್ತದೆ. Google ಸ್ಥಳ ಸೇವೆಗಳು ನಿಮ್ಮ ಸಾಧನದ ಸ್ಥಳ ಸೆಟ್ಟಿಂಗ್‌ನಿಂದ ವಿಭಿನ್ನವಾಗಿರುತ್ತವೆ. ಇನ್ನಷ್ಟು ತಿಳಿಯಿರಿ

ನೀವು ಯಾವ ಸ್ಥಳದಲ್ಲಿ ಇದ್ದೀರಿ ಮತ್ತು ಯಾವ ಆ್ಯಪ್‌ಗಳು ಆ ಸ್ಥಳದ ಮಾಹಿತಿಗೆ ಪ್ರವೇಶ ಹೊಂದಿವೆ ಎಂಬುದನ್ನು ತೀರ್ಮಾನಿಸಲು, ನಿಮ್ಮ ಸಾಧನದ ಸೆನ್ಸರ್‌ಗಳು (ಉದಾಹರಣೆಗೆ, GPS) ಅಥವಾ ನೆಟ್‌ವರ್ಕ್-ಆಧಾರಿತ ಸ್ಥಳವನ್ನು (ಉದಾಹರಣೆಗೆ, GLS) ಬಳಸಲಾಗುತ್ತದೆಯೇ ಎಂಬುದನ್ನು Android ಸೆಟ್ಟಿಂಗ್‌ಗಳು ಹಾಗೂ ಅನುಮತಿಗಳು ನಿಯಂತ್ರಿಸುತ್ತವೆ. ಅವು IP ವಿಳಾಸದ ಬಳಕೆ, ನಿಮ್ಮ ಚಟುವಟಿಕೆ ಅಥವಾ ಉಳಿಸಿದ ಸ್ಥಳಗಳ ಮೇಲೆ ಅಥವಾ ನಿಮ್ಮ ಸ್ಥಳವನ್ನು ಪತ್ತೆಹಚ್ಚಲು ಆ್ಯಪ್‌ಗಳು ಬಳಸಬಹುದಾದ ಇತರ ಸಾಂದರ್ಭಿಕ ಸಿಗ್ನಲ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಸ್ಥಳವನ್ನು Google ಖಾತೆಯಲ್ಲಿ ಹೇಗೆ ಉಳಿಸಲಾಗುತ್ತದೆ?

ನೀವು ಬಳಸುವ Google ಉತ್ಪನ್ನಗಳು ಮತ್ತು ಸೇವೆಗಳು ಹಾಗೂ ನಿಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ, Google ನಿಮ್ಮ Google ಖಾತೆಯಲ್ಲಿ ಸ್ಥಳದ ಮಾಹಿತಿಯನ್ನು ಉಳಿಸುತ್ತಿರಬಹುದು. ಈ ಮಾಹಿತಿಯನ್ನು ಉಳಿಸಬಹುದಾದ ಎರಡು ಸಾಮಾನ್ಯ ಸ್ಥಳಗಳೆಂದರೆ, ಸ್ಥಳ ಇತಿಹಾಸ ಹಾಗೂ ವೆಬ್ ಮತ್ತು ಆ್ಯಪ್ ಚಟುವಟಿಕೆ.

Google ಸ್ಥಳ ಇತಿಹಾಸ

ನೀವು ಸ್ಥಳ ಇತಿಹಾಸವನ್ನು ಬಳಸಲು ಆಯ್ಕೆ ಮಾಡಿಕೊಂಡರೆ ಮತ್ತು ನಿಮ್ಮ ಸಾಧನವು ಸ್ಥಳವನ್ನು ವರದಿ ಮಾಡುತ್ತಿದ್ದರೆ, ನೀವು Google ಉತ್ಪನ್ನ ಅಥವಾ ಸೇವೆಯನ್ನು ಸಕ್ರಿಯವಾಗಿ ಬಳಸದಿರುವಾಗಲೂ ಕೂಡಾ, ನೀವು ಸೈನ್-ಇನ್ ಮಾಡಿದ ಸಾಧನಗಳ ನಿಖರವಾದ ಸ್ಥಳವನ್ನು ಸಂಗ್ರಹಿಸಲಾಗುತ್ತದೆ ಮತ್ತು ಸಂಗ್ರಹಣೆ ಮಾಡಲಾಗುತ್ತದೆ. ಸ್ಥಳ ಇತಿಹಾಸದ ಡೇಟಾವನ್ನು ಸಂಗ್ರಹಣೆ ಮಾಡುವ ಸ್ಥಳದಲ್ಲಿ, ನಿಮ್ಮ ಟೈಮ್‌ಲೈನ್ ಅನ್ನು ರಚಿಸಲು ಇದು ನೆರವಾಗುತ್ತದೆ ಮತ್ತು Google ನಲ್ಲಿ ಭವಿಷ್ಯದ ಶಿಫಾರಸುಗಳನ್ನು ಒದಗಿಸಲು ಇದನ್ನು ಬಳಸಬಹುದು. ನಿಮ್ಮ ಟೈಮ್‌ಲೈನ್‌ನಲ್ಲಿ ಉಳಿಸಿರುವ ಮಾಹಿತಿಯನ್ನು ನೀವು ಯಾವಾಗ ಬೇಕಾದರೂ ಪರಿಶೀಲಿಸಬಹುದು, ಎಡಿಟ್ ಮಾಡಬಹುದು ಮತ್ತು ಅಳಿಸಬಹುದು.

ಸ್ಥಳ ಇತಿಹಾಸವನ್ನು ಆನ್ ಮಾಡುವುದರಿಂದರೆ,ಹೆಚ್ಚು ವೈಯಕ್ತೀಕರಿಸಿದ ಅನುಭವಗಳು Google ನಾದ್ಯಂತ ಲಭ್ಯವಾಗುತ್ತವೆ— ನೀವು ಭೇಟಿ ನೀಡಿದ ಭೋಜನ ಗೃಹಗಳ ಆಧಾರದ ಮೇಲೆ Google ನಕ್ಷೆಗಳಲ್ಲಿ ರೆಸ್ಟಾರೆಂಟ್‌ಗಳನ್ನು ಸೂಚಿಸುವುದು, ಟ್ರಾಫಿಕ್ ದಟ್ಟಣೆಯಿಂದ ಪಾರಾಗಲು ಮನೆ ಅಥವಾ ಕಚೇರಿಯಿಂದ ಹೊರಡಲು ಅತ್ಯುತ್ತಮ ಸಮಯ ಯಾವುದೆಂದು ನಿರ್ಧರಿಸಲು ನೈಜ-ಸಮಯದ ಮಾಹಿತಿ ಪಡೆಯುವುದು ಮತ್ತು ನೀವು ಭೇಟಿ ನೀಡಿರುವ ಸ್ಥಳಗಳಿಂದ, Google Photos ನಲ್ಲಿ ಆಲ್ಬಮ್‌ಗಳನ್ನು ಸ್ವಯಂಚಾಲಿತವಾಗಿ ರಚಿಸುವುದು, ಇತ್ಯಾದಿ.

ನೀವು ಸ್ಥಳ ಇತಿಹಾಸವನ್ನು ಆನ್ ಮಾಡಿದ್ದೀರಾ ಎಂದು ನೋಡಲು, ನಿಮ್ಮ ಚಟುವಟಿಕೆ ನಿಯಂತ್ರಣಗಳಿಗೆ ಭೇಟಿ ನೀಡಿ. ಸೈನ್ ಇನ್ ಮಾಡಲು ನಿಮ್ಮನ್ನು ಕೇಳಿಕೊಳ್ಳಬಹುದು ಮತ್ತು ಈ ನಿಯಂತ್ರಣವು ಆನ್ ಆಗಿದೆಯೇ ಎಂಬುದನ್ನು ನೀವು ಅಲ್ಲಿಂದ ವೀಕ್ಷಿಸಬಹುದು. ನೀವು ಹೊಸ ಸ್ಥಳ ಇತಿಹಾಸ ಡೇಟಾ ಸಂಗ್ರಹಿಸುವುದನ್ನು ವಿರಾಮಗೊಳಿಸಬಹುದು, ಆದರೆ ನಿಮ್ಮ ಈ ಹಿಂದಿನ ಸ್ಥಳ ಇತಿಹಾಸ ಡೇಟಾವನ್ನು ನೀವು ಅಳಿಸುವವರೆಗೆ, ಅದನ್ನು ಸಂಗ್ರಹಣೆ ಮಾಡುವುದನ್ನು ಮುಂದುವರಿಸಲಾಗುತ್ತದೆ. ಇನ್ನಷ್ಟು ತಿಳಿಯಿರಿ

ನಿಮ್ಮ ಸ್ಥಳ ಇತಿಹಾಸದ ಡೇಟಾವನ್ನು ನೀವು ಅಳಿಸಿದರೂ ಕೂಡಾ, ಬೇರೆಲ್ಲಾದರೂ ಸ್ಥಳ ಡೇಟಾವನ್ನು ಉಳಿಸಿರಬಹುದು - ಉದಾಹರಣೆಗೆ, ವೆಬ್ ಮತ್ತು ಆ್ಯಪ್ ಚಟುವಟಿಕೆಯಲ್ಲಿ.

ವೆಬ್ - ಆ್ಯಪ್‌ ಚಟುವಟಿಕೆ

ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಸಕ್ರಿಯಗೊಳಿಸಿದ್ದರೆ, ನಿಮ್ಮ ಹುಡುಕಾಟಗಳು ಮತ್ತು ಇತರ ಹಲವು Google ಸೇವೆಗಳಲ್ಲಿ ನೀವು ನಡೆಸಿದ ಚಟುವಟಿಕೆಯನ್ನು ನಿಮ್ಮ Google ಖಾತೆಯಲ್ಲಿ ಉಳಿಸಲಾಗುತ್ತದೆ. ವೆಬ್ ಮತ್ತು ಆ್ಯಪ್ ಚಟುವಟಿಕೆಯಲ್ಲಿ ಉಳಿಸಿದ ಚಟುವಟಿಕೆಯು ಸ್ಥಳದ ಮಾಹಿತಿಯನ್ನು ಸಹ ಒಳಗೊಂಡಿರಬಹುದು. ಉದಾಹರಣೆಗೆ, ನೀವು ಹುಡುಕಾಟದಲ್ಲಿ “ಹವಾಮಾನ” ಎಂದು ಟೈಪ್ ಮಾಡಿದರೆ ಮತ್ತು ನೀವು ಯಾವ ಸ್ಥಳದಲ್ಲಿ ಇದ್ದೀರಿ ಎಂಬುದನ್ನು ಆಧರಿಸಿ ಹವಾಮಾನದ ಕುರಿತು ಫಲಿತಾಂಶಗಳನ್ನು ಪಡೆದುಕೊಂಡರೆ, ಈ ಫಲಿತಾಂಶವನ್ನು ಒದಗಿಸಲು ಬಳಸಿದ ಸ್ಥಳ ಮಾಹಿತಿಯೂ ಒಳಗೊಂಡಂತೆ ಈ ಚಟುವಟಿಕೆಯನ್ನು ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆಯಲ್ಲಿ ಉಳಿಸಲಾಗುತ್ತದೆ. ನಿಮ್ಮ ಸಾಧನದ ಸ್ಥಳ ಸೆಟ್ಟಿಂಗ್‌ಗಳನ್ನು ಆನ್ ಮಾಡಲು ನೀವು ಆಯ್ಕೆ ಮಾಡಿಕೊಂಡಿದ್ದರೆ, ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆಯಲ್ಲಿ ಬಳಸಿದ ಮತ್ತು ಸಂಗ್ರಹಣೆ ಮಾಡಿದ ಸ್ಥಳವು, ಸಾಧನದ ಐಪಿ ವಿಳಾಸ, ನಿಮ್ಮ ಈ ಹಿಂದಿನ ಚಟುವಟಿಕೆ ಅಥವಾ ನಿಮ್ಮ ಸಾಧನದಿಂದ ಬರಬಹುದು.

ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಆನ್ ಮಾಡಿದರೆ, ನಿಮಗೆ ಹೆಚ್ಚು ಉಪಯುಕ್ತವಾದ ಹುಡುಕಾಟ ಫಲಿತಾಂಶಗಳು, ಇನ್ನಷ್ಟು ಸೂಕ್ತವಾದ ಜಾಹೀರಾತುಗಳು ಮತ್ತು ಇನ್ನಷ್ಟು ಸೂಕ್ತವಾದ ಸಲಹೆಗಳನ್ನು ತೋರಿಸಲು ಇದು ನಮಗೆ ನೆರವಾಗುತ್ತದೆ. ಉದಾಹರಣೆಗೆ, ಈ ಹಿಂದಿನ ಹುಡುಕಾಟಗಳನ್ನು ಆಧರಿಸಿ, ನಿಮ್ಮ ಹುಡುಕಾಟಗಳ ಕುರಿತು ಸ್ವಯಂಚಾಲಿತ ಸಲಹೆಗಳನ್ನು ಒದಗಿಸುವುದು. ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆಯಲ್ಲಿ ಏನಿದೆ ಎಂಬುದನ್ನು ನೀವು ಪರಿಶೀಲಿಸಬಹುದು ಮತ್ತು ಅಳಿಸಬಹುದು ಅಥವಾ ನಿಮ್ಮ Google ಖಾತೆಗಾಗಿ ಅದನ್ನು ವಿರಾಮಗೊಳಿಸಬಹುದು. ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ವಿರಾಮಗೊಳಿಸಿದರೆ, ಇತರ Google ಸೇವೆಗಳಿಂದ ನಿಮ್ಮ ಭವಿಷ್ಯದ ಹುಡುಕಾಟಗಳು ಹಾಗೂ ಚಟುವಟಿಕೆಯನ್ನು ಉಳಿಸುವುದನ್ನು ನಿಲ್ಲಿಸಲಾಗುತ್ತದೆ. ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆ ಡೇಟಾವನ್ನು ನೀವು ಅಳಿಸಿದರೂ ಕೂಡಾ, ನಿಮ್ಮ ಸ್ಥಳ ಡೇಟಾವನ್ನು ಬೇರೆ ಎಲ್ಲಿಯಾದರೂ ಉಳಿಸಿರಬಹುದು- ಉದಾಹರಣೆಗೆ, ಸ್ಥಳ ಇತಿಹಾಸದಲ್ಲಿ.

ನೀವು ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಆನ್ ಮಾಡಿದ್ದೀರಾ ಎಂಬುದನ್ನು ತಿಳಿದುಕೊಳ್ಳಲು, ಚಟುವಟಿಕೆ ನಿಯಂತ್ರಣಗಳಿಗೆ ಭೇಟಿ ನೀಡಿ. ಸೈನ್ ಇನ್ ಮಾಡಲು ನಿಮ್ಮನ್ನು ಕೇಳಿಕೊಳ್ಳಬಹುದು ಮತ್ತು ಈ ನಿಯಂತ್ರಣವು ಆನ್ ಆಗಿದೆಯೇ ಎಂಬುದನ್ನು ನೀವು ಅಲ್ಲಿಂದ ವೀಕ್ಷಿಸಬಹುದು. ಇನ್ನಷ್ಟು ತಿಳಿಯಿರಿ

ಜಾಹೀರಾತುಗಳನ್ನು ತೋರಿಸಲು ಸ್ಥಳವನ್ನು ಹೇಗೆ ಬಳಸಲಾಗುತ್ತದೆ?

ನಿಮ್ಮ ಸಾಮಾನ್ಯ ಸ್ಥಳವನ್ನು ಆಧರಿಸಿ, ಜಾಹೀರಾತುಗಳನ್ನು ಒದಗಿಸಬಹುದು. ಸಾಧನದ ಐಪಿ ವಿಳಾಸದಿಂದ ಪಡೆದುಕೊಂಡಿರುವ ಸ್ಥಳದ ಮಾಹಿತಿ ಕೂಡಾ ಇದರಲ್ಲಿ ಸೇರಿರಬಹುದು. ನಿಮ್ಮ ಜಾಹೀರಾತುಗಳ ವೈಯಕ್ತೀಕರಣ ಸೆಟ್ಟಿಂಗ್‌ಗಳನ್ನು ಆಧರಿಸಿ, ನಿಮ್ಮ Google ಖಾತೆಯಲ್ಲಿನ ಚಟುವಟಿಕೆಯನ್ನು ಆಧರಿಸಿದ ಜಾಹೀರಾತುಗಳನ್ನು ಸಹ ನೀವು ನೋಡಬಹುದು. ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆಯಲ್ಲಿ ಸಂಗ್ರಹಣೆ ಮಾಡಿರುವ ಚಟುವಟಿಕೆ ಕೂಡಾ ಇದರಲ್ಲಿ ಸೇರಿರುತ್ತದೆ ಮತ್ತು ಹೆಚ್ಚು ಉಪಯುಕ್ತವಾದ ಜಾಹೀರಾತುಗಳನ್ನು ಒದಗಿಸಲು ಇದನ್ನು ಬಳಸಬಹುದಾಗಿದೆ. ಮತ್ತೊಂದು ಉದಾಹರಣೆಯೆಂದರೆ, ನೀವು ಸ್ಥಳ ಇತಿಹಾಸವನ್ನು ಸಕ್ರಿಯಗೊಳಿಸಿದ್ದರೆ ಮತ್ತು ಸ್ಕೀ ರಿಸಾರ್ಟ್‍ಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರೆ, ಆನಂತರ ನೀವು YouTube ನಲ್ಲಿ ಯಾವುದಾದರೂ ವೀಡಿಯೊವನ್ನು ವೀಕ್ಷಿಸುವಾಗ, ಸ್ಕೀ ಮಾಡುವ ಉಪಕರಣದ ಜಾಹೀರಾತನ್ನು ನೋಡಬಹುದು. ಈ ವೈಶಿಷ್ಟ್ಯವನ್ನು ಬಳಸಲು ಆಯ್ಕೆ ಮಾಡಿರುವ ಬಳಕೆದಾರರಿಗಾಗಿ Google, ಸ್ಥಳ ಇತಿಹಾಸವನ್ನು ಅನಾಮಧೇಯ ಹಾಗೂ ಸಮಗ್ರ ರೀತಿಯಲ್ಲಿ ಸಹ ಬಳಸುತ್ತದೆ ಮತ್ತು ಆನ್‌ಲೈನ್ ಜಾಹೀರಾತು ಅಭಿಯಾನವು ಭೌತಿಕ ಅಂಗಡಿಗಳಿಗೆ ಅಥವಾ ಮಳಿಗೆಗಳಿಗೆ ಜನರು ಭೇಟಿ ನೀಡುವಂತೆ ಮಾಡುವಲ್ಲಿ ಎಷ್ಟರ ಮಟ್ಟಿಗೆ ನೆರವಾಗುತ್ತದೆ ಎಂಬುದನ್ನು ಜಾಹೀರಾತುದಾರರು ಅಳೆಯಲು, ಇದು ಸಹಾಯ ಮಾಡುತ್ತದೆ. ನಾವು ಜಾಹೀರಾತುದಾರರೊಂದಿಗೆ ಸ್ಥಳ ಇತಿಹಾಸವನ್ನು ಅಥವಾ ಗುರುತಿಗೆ ಸಂಬಂಧಿಸಿದ ಇತರ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ.

ನಿಮ್ಮ Google ಖಾತೆಯಲ್ಲಿ ಸಂಗ್ರಹಣೆ ಮಾಡಿರುವ ಡೇಟಾದ ಮೇಲೆ ನಿಮಗೆ ನಿಯಂತ್ರಣವಿದೆ ಮತ್ತು ನೀವು ಯಾವಾಗ ಬೇಕಾದರೂ ವೈಯಕ್ತೀಕರಿಸಿದ ಜಾಹೀರಾತುಗಳನ್ನು ಆಫ್ ಮಾಡಬಹುದು. ಜಾಹೀರಾತುಗಳ ವೈಯಕ್ತೀಕರಣವು ಆಫ್ ಆಗಿದ್ದಾಗ, ನಿಮಗೆ ಹೆಚ್ಚು ಸೂಕ್ತವಾದ ಜಾಹೀರಾತುಗಳನ್ನು ಒದಗಿಸುವುದಕ್ಕಾಗಿ, ನಿಮ್ಮ Google ಖಾತೆಯಲ್ಲಿ ಸಂಗ್ರಹಣೆ ಮಾಡಿರುವ ಡೇಟಾವನ್ನು Google ಬಳಸುವುದಿಲ್ಲ.

Google Apps
ಪ್ರಮುಖ ಮೆನು