ನಾವು ಸಂಗ್ರಹಿಸುವ ಡೇಟಾವನ್ನು Google ಹೇಗೆ ಉಳಿಸಿಕೊಳ್ಳುತ್ತದೆ

ನೀವು Google ಸೇವೆಗಳನ್ನು ಬಳಸುವಾಗ, ನಾವು ಡೇಟಾವನ್ನು ಸಂಗ್ರಹಿಸುತ್ತೇವೆ. ನಾವು ಏನನ್ನು ಸಂಗ್ರಹಿಸುತ್ತೇವೆ, ಯಾಕೆ ಸಂಗ್ರಹಿಸುತ್ತೇವೆ ಮತ್ತು ನಿಮ್ಮ ಮಾಹಿತಿಯನ್ನು ನೀವು ಹೇಗೆ ನಿರ್ವಹಿಸಬಹುದು ಎಂಬ ಮಾಹಿತಿಯನ್ನು ನಮ್ಮ ಗೌಪ್ಯತೆ ನೀತಿಯಲ್ಲಿ ವಿವರಿಸಲಾಗಿದೆ. ಬೇರೆ ಬೇರೆ ರೀತಿಯ ಡೇಟಾವನ್ನು ಬೇರೆ ಬೇರೆ ಅವಧಿಗೆ ಯಾಕೆ ಉಳಿಸಿಕೊಳ್ಳುತ್ತೇವೆ ಎಂಬುದನ್ನು ಈ ಉಳಿಸಿಕೊಳ್ಳುವಿಕೆ ಕಾರ್ಯನೀತಿಯು ವಿವರಿಸುತ್ತದೆ.

ಕೆಲವು ಡೇಟಾವನ್ನು ನಿಮ್ಮ ಇಚ್ಛೆಯಂತೆ ನೀವು ಅಳಿಸಬಹುದು, ಕೆಲವು ಡೇಟಾವನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ ಮತ್ತು ಅಗತ್ಯವಿದ್ದಾಗ, ಕೆಲವು ಡೇಟಾವನ್ನು ಇನ್ನೂ ದೀರ್ಘ ಕಾಲ ಉಳಿಸಿಕೊಳ್ಳುತ್ತೇವೆ. ನೀವು ಡೇಟಾವನ್ನು ಅಳಿಸಿದಾಗ, ನಮ್ಮ ಸರ್ವರ್‌ಗಳಿಂದ ನಿಮ್ಮ ಡೇಟಾವನ್ನು ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಅಥವಾ ಅನಾಮಿಕ ರೂಪದಲ್ಲಿ ಮಾತ್ರ ಉಳಿಸಿಕೊಳ್ಳಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಅಳಿಸುವಿಕೆ ಕಾರ್ಯನೀತಿಯನ್ನು ಪಾಲಿಸುತ್ತೇವೆ. ಡೇಟಾವನ್ನು Google ಹೇಗೆ ಅನಾಮಧೇಯಗೊಳಿಸುತ್ತದೆ

ನೀವು ತೆಗೆದುಹಾಕುವವರೆಗೆ ಉಳಿಸಿಕೊಳ್ಳುವ ಮಾಹಿತಿ

ನಿಮ್ಮ Google ಖಾತೆಯಲ್ಲಿ ಸಂಗ್ರಹಣೆ ಮಾಡಿರುವ ಡೇಟಾವನ್ನು ಸರಿಪಡಿಸಲು ಅಥವಾ ಅಳಿಸಲು ನಾವು ವಿವಿಧ ಸೇವೆಗಳನ್ನು ಒದಗಿಸುತ್ತೇವೆ. ಉದಾಹರಣೆಗೆ, ನೀವು:

ನೀವು ಈ ಡೇಟಾವನ್ನು ತೆಗೆದುಹಾಕಲು ಆಯ್ಕೆ ಮಾಡುವವರೆಗೆ ಅದನ್ನು ನಿಮ್ಮ Google ಖಾತೆಯಲ್ಲಿ ಇರಿಸುತ್ತೇವೆ. ನೀವು Google ಖಾತೆಗೆ ಸೈನ್ ಇನ್ ಮಾಡದೆ ನಮ್ಮ ಸೇವೆಗಳನ್ನು ಬಳಸಿದರೆ, ನಮ್ಮ ಸೇವೆಗಳಿಗೆ ಪ್ರವೇಶ ಪಡೆಯಲು ನೀವು ಬಳಸುವ ಸಾಧನ, ಬ್ರೌಸರ್ ಅಥವಾ ಅಪ್ಲಿಕೇಶನ್‌ನಂಥವುಗಳಿಗೆ ಲಿಂಕ್ ಮಾಡಿರುವ ಕೆಲವೊಂದು ಮಾಹಿತಿಯನ್ನು ಅಳಿಸಲು ನಾವು ಅವಕಾಶ ನೀಡುತ್ತೇವೆ.

ನಿರ್ದಿಷ್ಟ ಸಮಯದ ಬಳಿಕ ಅವಧಿ ಮುಕ್ತಾಯವಾಗುವ ಡೇಟಾ

ಕೆಲವು ಸಂದರ್ಭಗಳಲ್ಲಿ, ಡೇಟಾವನ್ನು ಅಳಿಸಲು ಅವಕಾಶ ನೀಡುವ ಬದಲಿಗೆ, ಅದನ್ನು ನಾವು ಪೂರ್ವನಿರ್ಧರಿತ ಸಮಯದವರೆಗೆ ಸಂಗ್ರಹಣೆ ಮಾಡುತ್ತೇವೆ. ಪ್ರತಿಯೊಂದು ಡೇಟಾವನ್ನು ಯಾವ ಕಾರಣಕ್ಕಾಗಿ ಸಂಗ್ರಹಿಸಲಾಗಿದೆ ಎಂಬುದನ್ನು ಆಧರಿಸಿ, ಅದಕ್ಕಾಗಿ ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವ ಸಮಯಾವಧಿಯನ್ನು ನಾವು ಸೆಟ್ ಮಾಡುತ್ತೇವೆ. ಉದಾಹರಣೆಗೆ, ವಿವಿಧ ರೀತಿಯ ಸಾಧನಗಳಲ್ಲಿ ನಮ್ಮ ಸೇವೆಗಳು ಸರಿಯಾಗಿ ಪ್ರದರ್ಶಿತವಾಗುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಬ್ರೌಸರ್‌ನ ಅಗಲ ಮತ್ತು ಎತ್ತರವನ್ನು ನಾವು 9 ತಿಂಗಳವರೆಗೆ ಕಾಯ್ದುಕೊಳ್ಳಬಹುದು. ನಿಗದಿತ ಸಮಯದ ಅವಧಿಯಲ್ಲಿ ನಿರ್ದಿಷ್ಟ ಡೇಟಾವನ್ನು ಅನಾಮಧೇಯಗೊಳಿಸಲು ಅಥವಾ ಅದರಲ್ಲಿ ಸ್ಯೂಡೋನಿಮ್ ಅನ್ನು ಬಳಸಲು ನಾವು ಕ್ರಮಗಳನ್ನು ಸಹ ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, 9 ತಿಂಗಳ ನಂತರ IP ವಿಳಾಸದ ಭಾಗವನ್ನು ಮತ್ತು 18 ತಿಂಗಳ ನಂತರ ಕುಕೀ ಮಾಹಿತಿಯನ್ನು ತೆಗೆದುಹಾಕುವ ಮೂಲಕ ನಾವು ಸರ್ವರ್ ಲಾಗ್‌ಗಳಲ್ಲಿ ಜಾಹೀರಾತು ಡೇಟಾವನ್ನು ಅನಾಮಧೇಯಗೊಳಿಸುತ್ತೇವೆ. ಸ್ಯೂಡೋನಿಮ್ ಅನ್ನು ಹೊಂದಿರುವ ಡೇಟಾವನ್ನು ಸಹ ನಾವು ನಿಗದಿತ ಅವಧಿಯವರೆಗೆ ಇರಿಸಿಕೊಳ್ಳಬಹುದು, ಉದಾಹರಣೆಗೆ ಬಳಕೆದಾರರ Google ಖಾತೆಗಳಿಂದ ಡಿಸ್‌ಕನೆಕ್ಟ್ ಮಾಡಲಾಗಿರುವ ಪ್ರಶ್ನೆಗಳು.

ನಿಮ್ಮ Google ಖಾತೆಯನ್ನು ಅಳಿಸುವವರೆಗೆ ಉಳಿಸಿಕೊಳ್ಳುವ ಮಾಹಿತಿ

ಬಳಕೆದಾರರು ನಮ್ಮ ಫೀಚರ್‌ಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಮತ್ತು ನಮ್ಮ ಸೇವೆಗಳನ್ನು ಹೇಗೆ ಸುಧಾರಿಸಬಹುದು ಎಂದು ಅರ್ಥಮಾಡಿಕೊಳ್ಳಲು ಸಹಾಯವಾಗುವಂತಿದ್ದರೆ, ನಿಮ್ಮ Google ಖಾತೆ ಇರುವವರೆಗೆ ಕೆಲವೊಂದು ಡೇಟಾವನ್ನು ನಾವು ಉಳಿಸಿಕೊಳ್ಳುತ್ತೇವೆ. ಉದಾಹರಣೆಗೆ, ನೀವು Google Maps ನಲ್ಲಿ ಹುಡುಕಿದ ವಿಳಾಸವೊಂದನ್ನು ನೀವು ಅಳಿಸಿದಾಗಲೂ, ನೀವು ಮಾರ್ಗ ನಿರ್ದೇಶನಗಳ ಫೀಚರ್ ಅನ್ನು ಬಳಸಿರುವಿರಿ ಎಂಬುದನ್ನು ನಿಮ್ಮ ಖಾತೆಯು ಸಂಗ್ರಹಿಸಬಹುದು. ಆ ರೀತಿ, ಭವಿಷ್ಯದಲ್ಲಿ ಮಾರ್ಗ ನಿರ್ದೇಶನಗಳ ಫೀಚರ್ ಅನ್ನು ಹೇಗೆ ಬಳಸುವುದು ಎಂಬುದನ್ನು Google Maps ನಿಮಗೆ ತೋರಿಸುವುದನ್ನು ತಪ್ಪಿಸಬಹುದು.

ಸೀಮಿತ ಉದ್ದೇಶಗಳಿಗಾಗಿ ವಿಸ್ತರಿತ ಸಮಯಾವಧಿಯವರೆಗೆ ಉಳಿಸಿಕೊಳ್ಳುವ ಮಾಹಿತಿ

ಕೆಲವೊಮ್ಮೆ, ನಿರ್ದಿಷ್ಟ ಉದ್ದೇಶಗಳಿಗಾಗಿ ಕೆಲವೊಂದು ಮಾಹಿತಿಯನ್ನು ಉಳಿಸಲು ವ್ಯಾಪಾರಗಳು ಮತ್ತು ಕಾನೂನು ಅವಶ್ಯಕತೆಗಳು ನಮ್ಮನ್ನು ಬಾಧ್ಯರನ್ನಾಗಿ ಮಾಡುತ್ತವೆ. ಉದಾಹರಣೆಗೆ, Google ನಿಮಗಾಗಿ ಪಾವತಿಯನ್ನು ಪ್ರಕ್ರಿಯೆಗೊಳಿಸುವಾಗ ಅಥವಾ ನೀವು Google ಗೆ ಪಾವತಿ ಮಾಡುವಾಗ, ತೆರಿಗೆ ಅಥವಾ ಅಕೌಂಟಿಂಗ್ ಉದ್ದೇಶಗಳಿಗೆ ಅಗತ್ಯವಿದ್ದ ಹಾಗೆ, ಈ ಡೇಟಾವನ್ನು ನಾವು ಹೆಚ್ಚು ಸಮಯದವರೆಗೆ ಉಳಿಸಿಕೊಳ್ಳುತ್ತೇವೆ. ಈ ಕಾರಣಗಳಿಂದಾಗಿ ನಾವು ಕೆಲವೊಂದು ಡೇಟಾವನ್ನು ಹೆಚ್ಚು ಸಮಯ ಉಳಿಸಿಕೊಳ್ಳಬೇಕಾಗಬಹುದು:

ಸುರಕ್ಷಿತ ಮತ್ತು ಸಂಪೂರ್ಣ ಅಳಿಸುವಿಕೆಯನ್ನು ಸಾಧ್ಯಗೊಳಿಸಲು

ನಿಮ್ಮ Google ಖಾತೆಯ ಡೇಟಾವನ್ನು ನೀವು ಅಳಿಸಿದರೆ, ಅದನ್ನು ಉತ್ಪನ್ನದಿಂದ ಮತ್ತು ನಮ್ಮ ಸಿಸ್ಟಮ್‌ಗಳಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ನಾವು ತಕ್ಷಣ ಪ್ರಾರಂಭಿಸುತ್ತೇವೆ. ಮೊದಲಿಗೆ ಅದನ್ನು ವೀಕ್ಷಣೆಯಿಂದ ತೆಗೆದುಹಾಕುವುದು ನಮ್ಮ ಗುರಿಯಾಗಿರುತ್ತದೆ ಮತ್ತು ಆನಂತರ ನಿಮ್ಮ Google ಅನುಭವವನ್ನು ವೈಯಕ್ತೀಕರಿಸಲು ಆ ಡೇಟಾವನ್ನು ಬಳಸಲಾಗುವುದಿಲ್ಲ. ಉದಾಹರಣೆಗೆ, ನನ್ನ ಚಟುವಟಿಕೆ ಡ್ಯಾಶ್‌ಬೋರ್ಡ್‌ನಿಂದ ನೀವು ವೀಕ್ಷಿಸಿದ ಒಂದು ವೀಡಿಯೊವನ್ನು ನೀವು ಅಳಿಸಿದರೆ, ಆ ವೀಡಿಯೊಗಾಗಿ ನಿಮ್ಮ ವೀಕ್ಷಣೆಯ ಪ್ರಗತಿಯನ್ನು ತೋರಿಸುವುದನ್ನು YouTube ತಕ್ಷಣವೇ ನಿಲ್ಲಿಸುತ್ತದೆ.

ಆನಂತರ, ನಮ್ಮ ಸಂಗ್ರಹಣೆ ಸಿಸ್ಟಮ್‌ಗಳಿಂದ ನಿಮ್ಮ ಡೇಟಾವನ್ನು ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗಿ ಅಳಿಸಿಹಾಕಲು ವಿನ್ಯಾಸಗೊಳಿಸಿರುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸುತ್ತೇವೆ. ಆಕಸ್ಮಿಕ ಡೇಟಾ ನಷ್ಟದಿಂದ ನಮ್ಮ ಬಳಕೆದಾರರು ಮತ್ತು ಗ್ರಾಹಕರನ್ನು ರಕ್ಷಿಸಲು ಸುರಕ್ಷಿತ ಅಳಿಸುವಿಕೆಯು ಮುಖ್ಯವಾಗಿದೆ. ಬಳಕೆದಾರರ ಮನಶ್ಶಾಂತಿಗಾಗಿ, ನಮ್ಮ ಸರ್ವರ್‌ಗಳಿಂದ ಡೇಟಾವನ್ನು ಸಂಪೂರ್ಣವಾಗಿ ಅಳಿಸುವುದು ಮುಖ್ಯವಾಗಿದೆ. ಈ ಪ್ರಕ್ರಿಯೆಗಾಗಿ, ಅಳಿಸುವಿಕೆಯ ನಂತರ ಸುಮಾರು 2 ತಿಂಗಳಿನಷ್ಟು ಕಾಲಾವಕಾಶ ಬೇಕಾಗುತ್ತದೆ. ಒಂದು ವೇಳೆ ಡೇಟಾವನ್ನು ಅನುದ್ದೇಶಿತವಾಗಿ ತೆಗೆದುಹಾಕಿದ್ದರೆ, ಒಂದು ತಿಂಗಳ ಮರುಪಡೆಯುವಿಕೆ ಅವಧಿಯೂ ಇದರಲ್ಲಿ ಸೇರಿರುತ್ತದೆ.

ಯಾವ Google ಸಂಗ್ರಹಣೆ ಸಿಸ್ಟಮ್‌ನಿಂದ ಡೇಟಾವನ್ನು ಅಳಿಸಲಾಗುತ್ತದೆಯೋ, ಸುರಕ್ಷಿತ ಮತ್ತು ಸಂಪೂರ್ಣ ಅಳಿಸುವಿಕೆಗಾಗಿ ಆ ಸಿಸ್ಟಮ್ ತನ್ನದೇ ಆದ ವಿವರವಾದ ಪ್ರಕ್ರಿಯೆಯನ್ನು ಹೊಂದಿರುತ್ತದೆ. ಎಲ್ಲಾ ಡೇಟಾವನ್ನು ಅಳಿಸಲಾಗಿದೆ ಎಂಬುದನ್ನು ಖಚಿತಪಡಿಸುವುದಕ್ಕಾಗಿ ಸಿಸ್ಟಮ್ ಮೂಲಕ ಮತ್ತೆ ಮತ್ತೆ ರವಾನಿಸಬೇಕಾಗಬಹುದು ಅಥವಾ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಸಣ್ಣ ಮಟ್ಟಿನ ವಿಳಂಬ ಉಂಟಾಗಬಹುದು. ಇದರಿಂದಾಗಿ, ಡೇಟಾವನ್ನು ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗಿ ಅಳಿಸಲು ಹೆಚ್ಚುವರಿ ಸಮಯ ಬೇಕಾದರೆ, ಅಳಿಸುವಿಕೆಗಾಗಿ ಇನ್ನೂ ಹೆಚ್ಚು ಸಮಯ ಬೇಕಾಗಬಹುದು.

ಸಂಭಾವ್ಯ ಅನಾಹುತಗಳಿಂದ ಚೇತರಿಸಿಕೊಳ್ಳುವುದಕ್ಕಾಗಿ, ನಮ್ಮ ಸೇವೆಗಳು ಬ್ಯಾಕಪ್ ಸಂಗ್ರಹಣೆಯನ್ನು ಮತ್ತೊಂದು ಹಂತದ ರಕ್ಷಣೆಯನ್ನಾಗಿ ಬಳಸುತ್ತವೆ. ಈ ಸಿಸ್ಟಮ್‌ಗಳಲ್ಲಿ ಡೇಟಾವನ್ನು 6 ತಿಂಗಳ ಕಾಲ ಉಳಿಸಬಹುದು.

ಯಾವುದೇ ಅಳಿಸುವಿಕೆ ಪ್ರಕ್ರಿಯೆಯಲ್ಲಿರುವಂತೆ, ವಾಡಿಕೆಯ ಮೈಂಟೆನೆನ್ಸ್, ಅನಿರೀಕ್ಷಿತವಾಗಿ ಸ್ಥಗಿತಗೊಳ್ಳುವುದು, ಬಗ್‌ಗಳು ಅಥವಾ ನಮ್ಮ ಪ್ರೊಟೊಕಾಲ್‌ಗಳಲ್ಲಿನ ವೈಫಲ್ಯಗಳು, ಈ ಲೇಖನದಲ್ಲಿ ವಿವರಿಸಿರುವ ಪ್ರಕ್ರಿಯೆಗಳು ಹಾಗೂ ಸಮಯಾವಧಿಗಳಲ್ಲಿ ವಿಳಂಬವನ್ನು ಉಂಟುಮಾಡಬಹುದು. ಇಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ರೂಪಿಸಲಾಗಿರುವ ಸಿಸ್ಟಮ್‌ಗಳನ್ನು ನಾವು ನಿರ್ವಹಿಸುತ್ತೇವೆ.

ಸುರಕ್ಷತೆ, ವಂಚನೆ ಮತ್ತು ದುರ್ಬಳಕೆಯನ್ನು ತಡೆಯಲು

ವಿವರಣೆ

ನಿಮ್ಮನ್ನು, ಇತರ ಜನರನ್ನು ಮತ್ತು Google ಅನ್ನು ವಂಚನೆ, ದುರ್ಬಳಕೆ ಮತ್ತು ಅನಧಿಕೃತ ಪ್ರವೇಶದಿಂದ ರಕ್ಷಿಸಲು.

ಸನ್ನಿವೇಶಗಳು

ಉದಾಹರಣೆಗೆ, ಯಾರೋ ಒಬ್ಬರು ಜಾಹೀರಾತು ವಂಚನೆಯನ್ನು ಎಸಗುತ್ತಿದ್ದಾರೆ ಎಂದು Google ಗೆ ಸಂಶಯವಿರುವಾಗ.

ಹಣಕಾಸಿನ ಲೆಕ್ಕಾಚಾರಗಳನ್ನು ನಿರ್ವಹಿಸಲು

ವಿವರಣೆ

ನಿಮ್ಮ ಪಾವತಿಯನ್ನು Google ಪ್ರಕ್ರಿಯೆಗೊಳಿಸುವ ಸಂದರ್ಭ ಅಥವಾ ನೀವು Google ಗೆ ಪಾವತಿಸುವ ಸಂದರ್ಭಗಳನ್ನು ಒಳಗೊಂಡಂತೆ, Google ಒಂದು ಹಣಕಾಸು ವ್ಯವಹಾರದ ಭಾಗವಾಗಿರುವಾಗ. ಅಕೌಂಟಿಂಗ್, ವ್ಯಾಜ್ಯ ಪರಿಹಾರ ಮತ್ತು ತೆರಿಗೆ, ವಾರಸುದಾರರಿಲ್ಲದ ಆಸ್ತಿಯ ನಿರ್ವಹಣೆ, ಅಕ್ರಮ ಹಣ ವರ್ಗಾವಣೆ-ನಿರೋಧಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಇತರ ಆರ್ಥಿಕ ನಿಯಮಗಳ ಪಾಲನೆಗಾಗಿ, ಹೆಚ್ಚಾಗಿ ಈ ಮಾಹಿತಿಯನ್ನು ದೀರ್ಘ ಕಾಲ ಉಳಿಸಿಕೊಳ್ಳಬೇಕಾಗುತ್ತದೆ.

ಸನ್ನಿವೇಶಗಳು

ಉದಾಹರಣೆಗೆ, ನೀವು Play ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಖರೀದಿಸುವಾಗ ಅಥವಾ Google Store ನಿಂದ ಉತ್ಪನ್ನಗಳನ್ನು ಖರೀದಿಸುವಾಗ.

ಕಾನೂನು ಅಥವಾ ನಿಯಂತ್ರಕ ಆವಶ್ಯಕತೆಗಳನ್ನು ಅನುಸರಿಸಲು

ವಿವರಣೆ

ಅನ್ವಯಿಸುವ ಯಾವುದೇ ಕಾನೂನು, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಜಾರಿಗೊಳಿಸಬಹುದಾದ ಸರಕಾರಿ ಕೋರಿಕೆಯನ್ನು ಪೂರೈಸಲು ಅಥವಾ ಸಂಭಾವ್ಯ ಉಲ್ಲಂಘನೆಗಳ ತನಿಖೆಯೂ ಸೇರಿದಂತೆ ಅನ್ವಯಿಸುವ ಸೇವಾ ನಿಯಮಗಳನ್ನು ಜಾರಿಗೊಳಿಸಲು.

ಸನ್ನಿವೇಶಗಳು

ಉದಾಹರಣೆಗೆ, Google ಕಾನೂನುಬದ್ಧ ಸಪೀನಾವನ್ನು ಸ್ವೀಕರಿಸಿದರೆ.

ನಮ್ಮ ಸೇವೆಗಳನ್ನು ನಿರಂತರವಾಗಿ ಒದಗಿಸಲು

ವಿವರಣೆ

ನಿಮಗೆ ಮತ್ತು ಇತರ ಬಳಕೆದಾರರಿಗೆ ನಿರಂತರವಾಗಿ ಸೇವೆ ಒದಗಿಸಲು.

ಸನ್ನಿವೇಶಗಳು

ಉದಾಹರಣೆಗೆ, ನೀವು ಇತರ ಬಳಕೆದಾರರೊಂದಿಗೆ ಮಾಹಿತಿಯನ್ನು ಹಂಚಿಕೊಂಡಾಗ (ನೀವು ಇತರರಿಗೆ ಇಮೇಲ್ ಕಳುಹಿಸಿದಂತಹ ಸಂದರ್ಭಗಳು), ಅದನ್ನು ನಿಮ್ಮ Google ಖಾತೆಯಿಂದ ಅಳಿಸಿದರೂ, ಸ್ವೀಕೃತಿದಾರರು ಉಳಿಸಿಕೊಂಡಿರುವ ನಕಲುಗಳು ಅಳಿಸಿಹೋಗುವುದಿಲ್ಲ.

Google ನೊಂದಿಗೆ ನೇರವಾಗಿ ಸಂವಹಿಸಲು

ವಿವರಣೆ

ಗ್ರಾಹಕ ಬೆಂಬಲ ಚಾನಲ್, ಪ್ರತಿಕ್ರಿಯೆ ಫಾರ್ಮ್ ಅಥವಾ ಬಗ್ ವರದಿ ಮಾಡುವಿಕೆಯ ಮೂಲಕ ನೀವು Google ನೊಂದಿಗೆ ನೇರವಾಗಿ ಸಂವಹಿಸಿದ್ದರೆ, ಆ ಸಂವಹನಗಳ ಸೂಕ್ತ ದಾಖಲೆಗಳನ್ನು Google ಉಳಿಸಿಕೊಳ್ಳಬಹುದು.

ಸನ್ನಿವೇಶಗಳು

ಉದಾಹರಣೆಗೆ, Gmail ಅಥವಾ ಡ್ರೈವ್‌ನಂತಹ Google ಅಪ್ಲಿಕೇಶನ್‌ನಿಂದ ನೀವು ಪ್ರತಿಕ್ರಿಯೆಯನ್ನು ಕಳುಹಿಸಿದಾಗ.

Google Apps
ಪ್ರಮುಖ ಮೆನು