Google Voice ಹೇಗೆ ಕಾರ್ಯನಿರ್ವಹಿಸುತ್ತದೆ

Google Voice ನಿಮ್ಮ ಕರೆ ಇತಿಹಾಸವನ್ನು ಸಂಗ್ರಹಿಸುತ್ತದೆ, ಪ್ರಕ್ರಿಯೆಗೊಳಿಸುತ್ತದೆ ಮತ್ತು ನಿರ್ವಹಿಸುತ್ತದೆ (ಕರೆ ಮಾಡುವ ಫೋನ್ ಸಂಖ್ಯೆ, ಕರೆ ಮಾಡಿದ ವ್ಯಕ್ತಿಯ ಫೋನ್ ಸಂಖ್ಯೆ, ದಿನಾಂಕ, ಸಮಯ ಮತ್ತು ಕರೆಯ ಕಾಲಾವಧಿ ಸೇರಿದಂತೆ), ಧ್ವನಿಮೇಲ್ ಗ್ರೀಟಿಂಗ್ಸ್, ಧ್ವನಿಮೇಲ್ ಸಂದೇಶಗಳು, ಶಾರ್ಟ್ ಮೆಸೇಜ್ ಸರ್ವೀಸ್ (SMS) ಸಂದೇಶಗಳು, ರೆಕಾರ್ಡ್ ಮಾಡಲಾದ ಸಂವಾದಗಳು, ಮತ್ತು ನಿಮಗೆ ಸೇವೆ ಒದಗಿಸುವ ಸಲುವಾಗಿ ನಿಮ್ಮ ಖಾತೆಗೆ ಸಂಬಂಧಿಸಿದ ಇತರ ಡೇಟಾ.

ನಿಮ್ಮ ಖಾತೆಯಲ್ಲಿ ಬಿಲ್ ಮಾಡಬಹುದಾದ ಕರೆಗಳಿಗೆ ನಿಮ್ಮ ಕರೆ ಇತಿಹಾಸವು ಕಾಣಿಸುತ್ತಿದ್ದರೂ, ನಿಮ್ಮ ಕರೆ ಇತಿಹಾಸ, ಧ್ವನಿಮೇಲ್ ಗ್ರೀಟಿಂಗ್ಸ್, ಧ್ವನಿಮೇಲ್ ಸಂದೇಶಗಳು (ಆಡಿಯೊ ಮತ್ತು/ಅಥವಾ ಪ್ರತಿಲಿಪಿಗಳು), ಶಾರ್ಟ್ ಮೆಸೇಜ್ ಸರ್ವೀಸ್ (SMS) ಸಂದೇಶಗಳು ಮತ್ತು ರೆಕಾರ್ಡ್‌ ಮಾಡಲಾದ ಸಂವಾದಗಳನ್ನು ನೀವು ನಿಮ್ಮ Google Voice ಖಾತೆಯ ಮೂಲಕ ಅಳಿಸಬಹುದು. ಬಿಲ್ ಮಾಡುವಿಕೆ ಅಥವಾ ಇತರ ಉದ್ದೇಶಗಳಿಗೆ ಕೆಲವು ಮಾಹಿತಿಗಳನ್ನು ನಮ್ಮ ಸಕ್ರಿಯ ಸರ್ವರ್‌ಗಳಲ್ಲಿ ತಾತ್ಕಾಲಿಕವಾಗಿ ಇರಿಸಿಕೊಳ್ಳಲಾಗುತ್ತದೆ ಮತ್ತು ಉಳಿದ ಪ್ರತಿಗಳು ನಮ್ಮ ಬ್ಯಾಕ್‌ಅಪ್‌ ಸಿಸ್ಟಂಗಳಲ್ಲಿರುತ್ತವೆ. ನಮ್ಮ ವರದಿ ಮಾಡುವಿಕೆ ಮತ್ತು ಆಡಿಟಿಂಗ್ ಅಗತ್ಯಗಳನ್ನು ಪೂರೈಸುವುದಕ್ಕಾಗಿ, ಯಾವುದೇ ವೈಯಕ್ತಿಕವಾಗಿ ಗುರುತಿಸಬಲ್ಲಂತಹ ಮಾಹಿತಿಯನ್ನು ಹೊಂದಿಲ್ಲದ, ಕರೆ ದಾಖಲೆ ಮಾಹಿತಿಯ ಅನಾಮಧೇಯ ನಕಲುಗಳನ್ನು ನಮ್ಮ ಸಿಸ್ಟಂಗಳಲ್ಲಿ ಇರಿಸಿಕೊಳ್ಳಲಾಗುತ್ತದೆ.

Google Apps
ಪ್ರಮುಖ ಮೆನು