ಪಾವತಿಗಳಿಗಾಗಿ Google ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ಹೇಗೆ ಬಳಸುತ್ತದೆ

Google Play ಮತ್ತು Google Pay ವಹಿವಾಟುಗಳು ಸೇರಿದಂತೆ, ಹಾಗೂ ವಂಚನೆಯನ್ನು ಕಡಿಮೆ ಮಾಡುವ ಉದ್ದೇಶಗಳಿಗಾಗಿ, ನೀವು ಮಾಡುವ ಆನ್‌ಲೈನ್ ಅಥವಾ ಆಫ್‌ಲೈನ್ ಖರೀದಿಗಳಿಗಾಗಿ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ನೀವು ಒದಗಿಸುವ ಕ್ರೆಡಿಟ್ ಕಾರ್ಡ್‌ ಮತ್ತು ಡೆಬಿಟ್ ಕಾರ್ಡ್‌ ಸಂಖ್ಯೆಗಳನ್ನು Google ಬಳಸುತ್ತದೆ. ನಾವು ಸಂಗ್ರಹಿಸುವ ಮಾಹಿತಿ ಮತ್ತು ಅದನ್ನು ನಾವು ಹೇಗೆ ಹಂಚುತ್ತೇವೆ ಎಂಬುದನ್ನು ಒಳಗೊಂಡಂತೆ, ನಿಮ್ಮ ಪಾವತಿ ಮತ್ತು ಖಾತೆ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಕುರಿತು Google ಪಾವತಿಗಳು ಗೌಪ್ಯತಾ ನೀತಿ ಯು ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. Google ಪಾವತಿಗಳ ಗೌಪ್ಯತಾ ಸೂಚನೆಯಲ್ಲಿ ವಿವರಿಸಲಾದ ಸಂದರ್ಭಗಳಲ್ಲಿ ಮಾತ್ರ ನಾವು ಮೂರನೇ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ನೀವು Google ಗೆ ಒದಗಿಸುವ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆಗಳನ್ನು ಸುರಕ್ಷಿತ ಸ್ಥಳದಲ್ಲಿ ಸುರಕ್ಷಿತ ಸರ್ವರ್‌ಗಳಲ್ಲಿ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ.

Google Apps
ಪ್ರಮುಖ ಮೆನು