ಗೌಪ್ಯತಾ ನೀತಿ
ನಾವು ಯಾವ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತೇವೆ, ಏಕೆ ಸಂಗ್ರಹಿಸಿಕೊಳ್ಳುತ್ತೇವೆ, ಅದನ್ನು ನಾವು ಹೇಗೆ ಬಳಸುತ್ತೇವೆ, ಅದನ್ನು ಹೇಗೆ ಪರಿಶೀಲಿಸಬೇಕು ಹಾಗೂ ಅದನ್ನು ಹೇಗೆ ನವೀಕರಿಸಬೇಕು ಎಂಬುದನ್ನು ವಿವರಿಸುತ್ತದೆ.
ಸೇವಾ ನಿಯಮಗಳು
ನಮ್ಮ ಸೇವೆಗಳನ್ನು ಬಳಸುತ್ತಿರುವಾಗ ನೀವು ಒಪ್ಪುವ ನಿಯಮಗಳನ್ನು ವಿವರಿಸುತ್ತವೆ.
Google ಸುರಕ್ಷತಾ ಕೇಂದ್ರ
ಎಲ್ಲರಿಗಾಗಿ ಉತ್ಪನ್ನಗಳನ್ನು ತಯಾರಿಸುವುದು ಎಂದರೆ ಅವುಗಳನ್ನು ಬಳಸುವ ಎಲ್ಲರಿಗೂ ಸುರಕ್ಷತೆಯನ್ನು ಒದಗಿಸುವುದು ಎಂದರ್ಥ. ನಿಮ್ಮ ಕುಟುಂಬಕ್ಕಾಗಿ ಆನ್‌ಲೈನ್‌ನಲ್ಲಿ ಮೂಲಭೂತ ಡಿಜಿಟಲ್ ನಿಯಮಗಳನ್ನು ಸೆಟ್ ಮಾಡುವುದಕ್ಕೆ ಸಹಾಯ ಮಾಡುವುದಕ್ಕಾಗಿ ನಮ್ಮ ಅಂತರ್ನಿರ್ಮಿತ ಸುರಕ್ಷತೆ, ಗೌಪ್ಯತಾ ನಿಯಂತ್ರಣಗಳು ಹಾಗೂ ಪರಿಕರಗಳ ಕುರಿತು ಇನ್ನಷ್ಟು ತಿಳಿದುಕೊಳ್ಳುವುದಕ್ಕಾಗಿ safety.google ಗೆ ಭೇಟಿ ನೀಡಿ.
ನಿಮ್ಮನ್ನು ಸುರಕ್ಷಿತವಾಗಿರಿಸಲು ಯಾವ ರೀತಿಯ ಸಹಾಯ ಮಾಡುತ್ತೇವೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಿ.
Google ಖಾತೆ
ನಿಮ್ಮ ಖಾತೆಯನ್ನು ನಿಯಂತ್ರಿಸಿ, ರಕ್ಷಿಸಿ ಮತ್ತು ಭದ್ರತೆ ನೀಡಿ, ಎಲ್ಲವೂ ಒಂದೇ ಸ್ಥಳದಲ್ಲಿ. ನಿಮ್ಮ Google ಖಾತೆ ಯು ನಿಮ್ಮ ಡೇಟಾಗೆ ರಕ್ಷಣಾ ಕ್ರಮ ಕೈಗೊಳ್ಳಲು ಮತ್ತು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಅನುಮತಿಸುವ ಸೆಟ್ಟಿಂಗ್‌ಗಳು ಹಾಗೂ ಪರಿಕರಗಳಿಗೆ ನಿಮಗೆ ತ್ವರಿತ ಪ್ರವೇಶವನ್ನು ನೀಡುತ್ತದೆ.
ನಮ್ಮ ಗೌಪ್ಯತೆ ಮತ್ತು ಸುರಕ್ಷತಾ ತತ್ವಗಳು
ಎಲ್ಲರಿಗೂ ಸರಿಹೊಂದುವಂತಹ ಗೌಪ್ಯತೆಯನ್ನು ನಾವು ರಚಿಸುತ್ತೇವೆ. ಪ್ರತಿಯೊಬ್ಬರೂ ಆ್ಯಕ್ಸೆಸ್ ಮಾಡಬಹುದಾದ ಉತ್ಪನ್ನಗಳು ಹಾಗೂ ಸೇವೆಗಳನ್ನು ರಚಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಬಳಕೆದಾರರ ಡೇಟಾವನ್ನು ಖಾಸಗಿಯಾಗಿ, ಸುರಕ್ಷಿತವಾಗಿ ಮತ್ತು ಸುಭದ್ರವಾಗಿರಿಸುವ ಸಲುವಾಗಿ ನಮ್ಮ ಉತ್ಪನ್ನಗಳು, ನಮ್ಮ ಪ್ರಕ್ರಿಯೆಗಳು ಮತ್ತು ನಮ್ಮ ಜನರಿಗೆ ಮಾರ್ಗದರ್ಶನ ನೀಡಲು ನಾವು ಈ ಮೂಲತತ್ವಗಳತ್ತ ಗಮನಹರಿಸುತ್ತೇವೆ.
Google ಉತ್ಪನ್ನ ಗೌಪ್ಯತೆ ಮಾರ್ಗದರ್ಶಿ
ನೀವು Google ಮೂಲಕ Gmail, ಹುಡುಕಾಟ, YouTube ಹಾಗೂ ಇತರ ಉತ್ಪನ್ನಗಳನ್ನು ಬಳಸುವ ಕಾರಣ, ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಬಳಕೆಯ ಇತಿಹಾಸವನ್ನು ನಿಯಂತ್ರಿಸಲು ನಿಮಗೆ ಪೂರ್ಣ ಅಧಿಕಾರವಿರುತ್ತದೆ. Google ಉತ್ಪನ್ನ ಗೌಪ್ಯತೆ ಮಾರ್ಗದರ್ಶಿಯು Google ನ ಉತ್ಪನ್ನಗಳಲ್ಲಿ ರಚಿಸಲಾದ ಕೆಲವು ವೈಶಿಷ್ಟ್ಯಗಳನ್ನು ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳಲು ನಿಮಗೆ ಸಹಾಯ ಮಾಡಬಹುದು.