ತಂತ್ರಜ್ಞಾನಗಳು

Google ನಲ್ಲಿ, ನಾವು ಹೊಸ ವಿಚಾರಧಾರೆ ಹಾಗೂ ಉತ್ಪನ್ನಗಳನ್ನು ಬಳಸಿಕೊಂಡು ಸದ್ಯಕ್ಕೆ ಅಸ್ತಿತ್ವದಲ್ಲಿರುವ ತಂತ್ರಜ್ಞಾನದ ಕ್ಷಿತಿಜವನ್ನು ಸಾಧ್ಯಾಂತ ವಿಸ್ತರಿಸಲು ಪ್ರಯತ್ನಿಸುತ್ತೇವೆ. ಒಂದು ಜವಾಬ್ದಾರಿಯುತ ಕಂಪನಿಯಾಗಿ, ಯಾವುದೇ ಹೊಸ ಆವಿಷ್ಕಾರವು ಸೂಕ್ತ ರೀತಿಯ ಗೌಪ್ಯತೆ ಹಾಗೂ ಸುರಕ್ಷತೆಯೊಂದಿಗೆ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ನಾವು ಶ್ರಮವಹಿಸುತ್ತೇವೆ. ನಮ್ಮ ಕಂಪನಿಯ ಎಲ್ಲಾ ಮಟ್ಟದಲ್ಲೂ ತೆಗೆದುಕೊಳ್ಳಲಾಗುವ ನಿರ್ಧಾರಗಳಿಗೆ ಒತ್ತಾಸೆಯಾಗಿರುವುದು ನಮ್ಮ ಗೌಪ್ಯತೆ ನಿಯಮಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮೂಲಕ ನಾವು, ಜಾಗತಿಕ ಮಾಹಿತಿಯನ್ನು ಒಗ್ಗೂಡಿಸುವಿಕೆಯ ಕುರಿತು ಈಗಾಗಲೇ ಜಾರಿಯಲ್ಲಿರುವ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ನಾವು ನಮ್ಮ ಬಳಕೆದಾರರನ್ನು ಸುರಕ್ಷಿತವಾಗಿಡುವ, ಅವರಿಗೆ ಸಹಾಯ ಮಾಡುವ ಹಾಗೂ ಅವರನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ನಾವು ಅವರಿಗೆ ನಮ್ಮ ಕೈಲಾದ ಸಹಾಯ ಮಾಡಬಹುದು.

Google Apps
ಪ್ರಮುಖ ಮೆನು