Google ಸೇವಾ ನಿಯಮಗಳು

ಜಾರಿಗೊಳ್ಳುವುದು ಮಾರ್ಚ್ 31, 2020 | ಆರ್ಕೈವ್ ಮಾಡಿರುವ ಆವೃತ್ತಿಗಳು | PDF ಡೌನ್‌ಲೋಡ್ ಮಾಡಿ

ದೇಶದ ಆವೃತ್ತಿ: ಯುನೈಟೆಡ್ ಸ್ಟೇಟ್ಸ್

ಈ ನಿಯಮಗಳು ಏನನ್ನೆಲ್ಲಾ ಒಳಗೊಂಡಿವೆ

ಈ ಸೇವಾ ನಿಯಮಗಳನ್ನು ಸ್ಕಿಪ್ ಮಾಡಬೇಕೆಂದು ಗಾಢವಾಗಿ ಅನ್ನಿಸುತ್ತಿರಬಹುದು. ಆದರೆ ನೀವು Google ಸೇವೆಗಳನ್ನು ಬಳಸುವಾಗ ನಮ್ಮಿಂದ ನೀವು ಹಾಗೂ ನಿಮ್ಮಿಂದ ನಾವು ಏನನ್ನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಇದನ್ನು ಓದುವುದು ಅತ್ಯವಶ್ಯಕ.

ಈ ಸೇವಾ ನಿಯಮಗಳು Google ನ ವ್ಯವಹಾರ ನಡೆಯು ಬಗೆ, ನಮ್ಮ ಕಂಪನಿಗೆ ಅನ್ವಯವಾಗುವ ಕಾನೂನುಗಳು ಮತ್ತು ನಾವು ಯಾವಾಗಲೂ ನಿಜವೆಂದು ನಂಬಿರುವ ಕೆಲವೊಂದು ವಿಷಯಗಳಿಗೆ ಕನ್ನಡಿ ಹಿಡಿಯುತ್ತವೆ. ಇದರ ಫಲವಾಗಿ, ನೀವು ನಮ್ಮ ಸೇವೆಗಳೊಂದಿಗೆ ಸಂವಹನ ನಡೆಸುವಾಗ ನಿಮ್ಮೊಂದಿಗಿನ Google ನ ಸಂಬಂಧವನ್ನು ರೂಪಿಸಲು ಈ ಸೇವಾ ನಿಯಮಗಳು ಸಹಾಯ ಮಾಡುತ್ತವೆ. ಉದಾಹರಣೆಗೆ, ಈ ನಿಯಮಗಳು ಈ ಕೆಳಗಿನ ವಿಷಯದ ಶೀರ್ಷಿಕೆಗಳನ್ನು ಒಳಗೊಂಡಿವೆ:

ಈ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ ಏಕೆಂದರೆ, ನಮ್ಮ ಸೇವೆಗಳನ್ನು ಬಳಸುವ ಮೂಲಕ, ನೀವು ಈ ನಿಯಮಗಳನ್ನು ಒಪ್ಪುತ್ತೀರಿ.

ಈ ನಿಯಮಗಳನ್ನಷ್ಟೇ ಅಲ್ಲದೇ, ನಾವು ಗೌಪ್ಯತೆ ನೀತಿಯನ್ನು ಸಹ ಪ್ರಕಟಿಸುತ್ತೇವೆ. ಇದು ಈ ನಿಯಮಗಳ ಭಾಗವಾಗಿರದಿದ್ದರೂ, ನೀವು ನಿಮ್ಮ ಮಾಹಿತಿಯನ್ನು ಹೇಗೆ ಅಪ್‌ಡೇಟ್ ಮಾಡಬಹುದು, ನಿರ್ವಹಿಸಬಹುದು, ರಫ್ತು ಮಾಡಬಹುದು ಮತ್ತು ಅಳಿಸಬಹುದು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಲು ಅದನ್ನು ಓದಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಸೇವೆ ಪೂರೈಕೆದಾರರು

ಈ ಕೆಳಗಿನವರು Google ಸೇವೆಗಳನ್ನು ಒದಗಿಸಿದವರು, ಮತ್ತು ಇವರೊಂದಿಗೆ ನೀವು ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ:

Google LLC
ಡೆಲವೇರ್, USA ಯ ರಾಜ್ಯದ ಕಾನೂನುಗಳ ಅಡಿಯಲ್ಲಿ ಆಯೋಜಿಸಲಾಗಿದೆ ಮತ್ತು USA ಯ ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ

1600 Amphitheatre Parkway
Mountain View, California 94043
USA

ನಿರ್ದಿಷ್ಟ ವಯಸ್ಸಿನ ಅಗತ್ಯಗಳು

ನಿಮ್ಮ ಸ್ವಂತ Google ಖಾತೆಯನ್ನು ನಿರ್ವಹಿಸಲು ಅಗತ್ಯವಿರುವ ವಯಸ್ಸಿಗಿಂತ ನೀವು ಕಡಿಮೆ ವಯಸ್ಸಿನವರಾಗಿದ್ದರೆ, Google ಖಾತೆಯನ್ನು ಬಳಸಲು ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರ ಅನುಮತಿಯನ್ನು ನೀವು ಹೊಂದಿರಬೇಕು. ಈ ನಿಯಮಗಳನ್ನು ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರೊಂದಿಗೆ ಓದಿ.

ನೀವು ಪೋಷಕರು ಅಥವಾ ಕಾನೂನುಬದ್ಧ ಪೋಷಕರಾಗಿದ್ದರೆ, ಮತ್ತು ನಿಮ್ಮ ಮಗುವಿಗೆ ಸೇವೆಗಳನ್ನು ಬಳಸಲು ನೀವು ಅನುಮತಿಸಿದರೆ, ಈ ನಿಯಮಗಳು ನಿಮಗೆ ಅನ್ವಯಿಸುತ್ತವೆ ಮತ್ತು ಸೇವೆಗಳಲ್ಲಿನ ನಿಮ್ಮ ಮಗುವಿನ ಚಟುವಟಿಕೆಗೆ ನೀವು ಜವಾಬ್ದಾರರಾಗಿರುತ್ತೀರಿ.

ಕೆಲವು Google ಸೇವೆಗಳು ತಮ್ಮ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ನೀತಿಗಳಲ್ಲಿ ವಿವರಿಸಿದಂತೆ, ಹೆಚ್ಚುವರಿ "ನಿರ್ದಿಷ್ಟ ವಯಸ್ಸಿನ ಅಗತ್ಯಗಳನ್ನು" ಹೊಂದಿವೆ.

Google ಜೊತೆಗಿನ ನಿಮ್ಮ ಸಂಬಂಧ

ಈ ನಿಯಮಗಳು ನಿಮ್ಮ ಮತ್ತು Google ನಡುವಿನ ಸಂಬಂಧವನ್ನು ವ್ಯಾಖ್ಯಾನಿಸಲು ಸಹಾಯ ಮಾಡುತ್ತವೆ. ವಿವರವಾಗಿ ಹೇಳುವುದಾದರೆ, Google ನ ವ್ಯವಹಾರ ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ನಾವು ಹೇಗೆ ಹಣ ಗಳಿಸುತ್ತೇವೆ ಎಂಬುದನ್ನು ವಿವರಿಸುವ ಈ ನಿಯಮಗಳನ್ನು ಅನುಸರಿಸಲು ನೀವು ಒಪ್ಪಿದರೆ, ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ಅನುಮತಿ ನೀಡುತ್ತೇವೆ. ನಾವು “Google,” “ನಾವು”, “ನಮಗೆ” ಮತ್ತು “ನಮ್ಮ” ಎಂದು ಹೇಳಿದಾಗ, ನಾವು ಎಂದರೆ Google LLC ಮತ್ತು ಅದರ ಅಫಿಲಿಯೇಟ್‌ಗಳು.

ನೀವು ನಮ್ಮಿಂದ ಏನನ್ನು ನಿರೀಕ್ಷಿಸಬಹುದು

ಹಲವು ಬಗೆಯ ಉಪಯುಕ್ತ ಸೇವೆಗಳನ್ನು ಒದಗಿಸುವುದು

ಈ ನಿಯಮಗಳಿಗೆ ಅನುಸಾರವಾಗಿ, ನಾವು ಹೆಚ್ಚಿನ ವ್ಯಾಪ್ತಿಯಲ್ಲಿ ಸೇವೆಗಳನ್ನು ಒದಗಿಸುತ್ತೇವೆ, ಅವುಗಳೆಂದರೆ:
  • ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾ, ಹುಡುಕಾಟ ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (ಉದಾ, Google Play)
  • ಸಂಯೋಜಿತ ಸೇವೆಗಳು (ಉದಾ, ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು (ಉದಾ, Google Home)

ನಮ್ಮ ಸೇವೆಗಳನ್ನು ಒಟ್ಟಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ನೀವು ಒಂದು ಚಟುವಟಿಕೆಯಿಂದ ಇನ್ನೊಂದಕ್ಕೆ ಹೋಗುವುದು ಸುಲಭವಾಗುತ್ತದೆ. ಉದಾಹರಣೆಗೆ, ನಿಮ್ಮ Google ಕ್ಯಾಲೆಂಡರ್‌ನಲ್ಲಿ ಕಂಡುಬರುವ ಅಪಾಯಿಂಟ್‌ಮೆಂಟ್‌ಗಾಗಿ ತೆರಳಲು Maps ನಿಮಗೆ ನೆನಪಿಸುತ್ತವೆ.

Google ಸೇವೆಗಳ ಸುಧಾರಣೆ

ನಮ್ಮ ಸೇವೆಗಳನ್ನು ಸುಧಾರಿಸಲು ನಾವು ಹೊಸ ತಂತ್ರಜ್ಞಾನಗಳು ಮತ್ತು ಫೀಚರ್‌ಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿರುತ್ತೇವೆ. ಉದಾಹರಣೆಗೆ, ಮಷಿನ್ ಲರ್ನಿಂಗ್ ಬಳಸುವ ಮೂಲಕ ಸ್ಪ್ಯಾಮ್‌‌ ಮತ್ತು ಮಾಲ್‌ವೇರ್‌ಗಳನ್ನು ಪತ್ತೆಹಚ್ಚಲು ಹಾಗೂ ನಿರ್ಬಂಧಿಸಲು ಮತ್ತು ಏಕಕಾಲಿಕ ಅನುವಾದಗಳಂತಹ ನವೀನ ಫೀಚರ್‌ಗಳನ್ನು ಒದಗಿಸಲು ನಾವು ಕೃತಕ ಬುದ್ದಿಮತ್ತೆಯಲ್ಲಿ ಹೂಡಿಕೆ ಮಾಡುತ್ತೇವೆ. ಈ ನಿರಂತರ ಸುಧಾರಣೆಯ ಭಾಗವಾಗಿ, ನಾವು ಕೆಲವೊಮ್ಮೆ ಫೀಚರ್‌ಗಳು ಮತ್ತು ಕಾರ್ಯಗಳನ್ನು ಸೇರಿಸುತ್ತಿರುತ್ತೇವೆ ಅಥವಾ ತೆಗೆದುಹಾಕುತ್ತಿರುತ್ತೇವೆ, ನಮ್ಮ ಸೇವೆಗಳ ಮಿತಿಗಳನ್ನು ಹೆಚ್ಚಿಸುತ್ತಿರುತ್ತೇವೆ ಅಥವಾ ಕಡಿಮೆ ಮಾಡುತ್ತಿರುತ್ತೇವೆ. ಹಾಗೂ, ಹೊಸ ಸೇವೆಗಳನ್ನು ಆಫರ್ ಮಾಡುತ್ತಿರುತ್ತೇವೆ ಅಥವಾ ಹಳೆಯ ಆಫರ್‌ಗಳನ್ನು ನಿಲ್ಲಿಸುತ್ತಿರುತ್ತೇವೆ.

ನಮ್ಮ ಸೇವೆಗಳ ಕುರಿತಾದ ನಿಮ್ಮ ಬಳಕೆಯ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವಂತಹ ಭೌತಿಕ ಬದಲಾವಣೆಗಳನ್ನು ನಾವು ಮಾಡಿದರೆ ಅಥವಾ ನಾವು ಸೇವೆಯೊಂದನ್ನು ಒದಗಿಸುವುದನ್ನು ನಿಲ್ಲಿಸಿದರೆ, ನಾವು ಸಮಂಜಸವಾದ ಮುಂಚಿತ ಸೂಚನೆಯನ್ನು ಮತ್ತು ನಿಂದನೆಯನ್ನು ತಡೆಗಟ್ಟುವಂತಹ, ಕಾನೂನು ಅವಶ್ಯಕತೆಗಳಿಗೆ ಸ್ಪಂದಿಸುವಂತಹ, ಅಥವಾ ಸುರಕ್ಷತೆ ಮತ್ತು ಕಾರ್ಯಾಚರಣೆಯ ಸಮಸ್ಯೆಗಳನ್ನು ಪರಿಹರಿಸುವಂತಹ ತುರ್ತು ಸಂದರ್ಭಗಳನ್ನು ಹೊರತುಪಡಿಸಿ, Google Takeout ಅನ್ನು ಬಳಸಿ ನಿಮ್ಮ Google ಖಾತೆಯಿಂದ ನಿಮ್ಮ ವಿಷಯವನ್ನು ರಫ್ತು ಮಾಡಲು ಅವಕಾಶವನ್ನು ನಿಮಗೆ ನೀಡುತ್ತೇವೆ.

ನಿಮ್ಮಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ

ಈ ನಿಯಮಗಳು ಮತ್ತು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಅನುಸರಿಸಿ

ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ನೀಡುವ ಅನುಮತಿಯು, ಈ ಕೆಳಕಂಡವುಗಳಿಗೆ ಸಂಬಂಧಿಸಿದ ನಿಮ್ಮ ಜವಾಬ್ದಾರಿಗಳನ್ನು ನೀವು ಪೂರೈಸುವವರೆಗೂ ಮುಂದುವರಿಯುತ್ತದೆ:

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ನಮ್ಮ ಸೇವೆಗಳನ್ನು ಬಳಸುವ ಬಗ್ಗೆ ನಿರೀಕ್ಷೆಗಳನ್ನು ಹೊಂದಿಸಲು, ನಾವು ನಿಮಗೆ ವಿವಿಧ ನೀತಿಗಳು, ಸಹಾಯ ಕೇಂದ್ರಗಳು ಮತ್ತು ಇತರ ಮಾಹಿತಿಯ ಮೂಲಗಳು ಲಭ್ಯವಾಗುವಂತೆ ಮಾಡುತ್ತೇವೆ. ಈ ಮಾಹಿತಿಯ ಮೂಲಗಳಲ್ಲಿ, ನಮ್ಮ ಗೌಪ್ಯತೆ ನೀತಿ, ಕೃತಿಸ್ವಾಮ್ಯ ಸಹಾಯ ಕೇಂದ್ರ, ಸುರಕ್ಷತಾ ಕೇಂದ್ರ, ಮತ್ತು ನಮ್ಮ ನೀತಿ ಸೈಟ್‌ನಿಂದ ಪ್ರವೇಶಿಸಬಹುದಾದ ಇತರ ಪುಟಗಳು ಸೇರಿವೆ.

ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ಅನುಮತಿ ನೀಡಿದ್ದರೂ, ನಾವು ಸೇವೆಗಳಲ್ಲಿ ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳುತ್ತೇವೆ.

ಇತರರನ್ನು ಗೌರವಿಸಿ

ನಮ್ಮ ಹಲವಾರು ಸೇವೆಗಳು ಇತರರ ಜೊತೆಗೆ ಸಂವಹನ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ನಾವು ಪ್ರತಿಯೊಬ್ಬರಿಗೂ ಗೌರವಾನ್ವಿತ ವಾತಾವರಣವನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ಅಂದರೆ ನೀವು ಈ ನಡವಳಿಕೆಯ ಮೂಲ ನಿಯಮಗಳನ್ನು ಪಾಲಿಸಬೇಕು:
  • ರಫ್ತು ನಿಯಂತ್ರಣ, ನಿರ್ಬಂಧಗಳು ಮತ್ತು ಮಾನವ ಕಳ್ಳಸಾಗಣೆ ಕಾನೂನುಗಳು ಸೇರಿದಂತೆ ಅನ್ವಯವಾಗುವ ಕಾನೂನುಗಳನ್ನು ಅನುಸರಿಸುವುದು
  • ಗೌಪ್ಯತೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳು ಸೇರಿದಂತೆ ಇತರರ ಹಕ್ಕುಗಳನ್ನು ಗೌರವಿಸುವುದು
  • ಇತರರನ್ನು ದುರುಪಯೋಗಪಡಿಸಿಕೊಳ್ಳಬೇಡಿ ಅಥವಾ ಹಾನಿ ಮಾಡಬೇಡಿ ಅಥವಾ ನಿಮಗೆ ನೀವೇ ಹಾನಿ ಮಾಡಿಕೊಳ್ಳಬೇಡಿ (ಅಥವಾ ಬೆದರಿಸುವುದು ಅಥವಾ ಅಂತಹ ನಿಂದನೆ ಅಥವಾ ಹಾನಿ ಮಾಡುವುದನ್ನು ಪ್ರೋತ್ಸಾಹಿಸುವುದು) — ಉದಾಹರಣೆಗೆ, ಇತರರನ್ನು ದಾರಿತಪ್ಪಿಸುವ, ವಂಚಿಸುವ, ದೂಷಿಸುವ, ಬೆದರಿಸುವ, ಕಿರುಕುಳ ನೀಡುವ ಅಥವಾ ಹಿಂಬಾಲಿಸುವ ಮೂಲಕ
  • ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ, ಹಾನಿ ಮಾಡಬೇಡಿ, ಹಸ್ತಕ್ಷೇಪ ಮಾಡಬೇಡಿ ಅಥವಾ ಅಡ್ಡಿಪಡಿಸಬೇಡಿ

ನಮ್ಮ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ಕಾರ್ಯನೀತಿಗಳು ಆ ಸೇವೆಗಳನ್ನು ಬಳಸುವ ಪ್ರತಿಯೊಬ್ಬರೂ ಅನುಸರಿಸುವಂತಹ ಸೂಕ್ತ ನಡವಳಿಕೆಯ ಬಗ್ಗೆ ಹೆಚ್ಚುವರಿ ವಿವರಗಳನ್ನು ಒದಗಿಸುತ್ತದೆ. ಇತರರು ಈ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ನಿಮಗೆ ಕಂಡುಬಂದರೆ, ನಮ್ಮ ಅನೇಕ ಸೇವೆಗಳು ದುರುಪಯೋಗವನ್ನು ವರದಿ ಮಾಡಲು ನಿಮಗೆ ಅನುಮತಿಸುತ್ತದೆ. ದುರುಪಯೋಗದ ವರದಿಯ ಕುರಿತು ನಾವು ಕ್ರಮ ಕೈಗೊಂಡರೆ, "ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು" ವಿಭಾಗದಲ್ಲಿ ವಿವರಿಸಿದಂತೆ ನಾವು ನ್ಯಾಯಯುತ ಪ್ರಕ್ರಿಯೆಯನ್ನು ಸಹ ಒದಗಿಸುತ್ತೇವೆ.

ನಿಮ್ಮ ವಿಷಯ ಬಳಕೆಗೆ ಅನುಮತಿ

ನಮ್ಮ ಕೆಲವು ಸೇವೆಗಳನ್ನು ನಿಮ್ಮ ವಿಷಯವನ್ನು ಅಪ್‌ಲೋಡ್ ಮಾಡಲು, ಸಲ್ಲಿಸಲು, ಸಂಗ್ರಹಿಸಲು, ಕಳುಹಿಸಲು, ಸ್ವೀಕರಿಸಲು ಅಥವಾ ಹಂಚಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಮ್ಮ ಸೇವೆಗಳಿಗೆ ಯಾವುದೇ ವಿಷಯವನ್ನು ಒದಗಿಸಲು ನೀವು ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ ಮತ್ತು ನೀವು ಒದಗಿಸಲು ಬಯಸುವ ವಿಷಯವನ್ನು ನೀವು ಮುಕ್ತವಾಗಿ ಆಯ್ಕೆಮಾಡಬಹುದು. ನೀವು ವಿಷಯವನ್ನು ಅಪ್‌ಲೋಡ್ ಮಾಡಲು ಅಥವಾ ಹಂಚಿಕೊಳ್ಳಲು ಆಯ್ಕೆಮಾಡಿದ್ದರೆ, ನೀವು ಹಾಗೆ ಮಾಡಲು ಅಗತ್ಯವಾದ ಹಕ್ಕುಗಳನ್ನು ಹೊಂದಿದ್ದೀರಿ ಮತ್ತು ವಿಷಯವು ಕಾನೂನುಬದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪರವಾನಗಿ

ನಿಮ್ಮ ವಿಷಯ ನಿಮ್ಮದಾಗಿದೆ, ನಿಮ್ಮ ವಿಷಯದಲ್ಲಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀವು ಉಳಿಸಿಕೊಳ್ಳುತ್ತೀರಿ. ಉದಾಹರಣೆಗೆ, ನೀವು ಸೃಷ್ಟಿಸುವ ಸೃಜನಾತ್ಮಕ ವಿಷಯಕ್ಕೆ ನೀವು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿರುತ್ತೀರಿ, ಉದಾಹರಣೆಗೆ ನೀವು ಬರೆಯುವ ವಿಮರ್ಶೆಗಳು. ಅಥವಾ ಬೇರೊಬ್ಬರು ನಿಮಗೆ ಅನುಮತಿ ನೀಡಿದರೆ, ಅವರ ಸೃಜನಾತ್ಮಕ ವಿಷಯವನ್ನು ಹಂಚಿಕೊಳ್ಳಲು ನಿಮಗೆ ಹಕ್ಕಿರುತ್ತದೆ.

ನಿಮ್ಮ ವಿಷಯದ ಬಳಕೆಯನ್ನು ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳು ನಿರ್ಬಂಧಿಸಿದರೆ ನಿಮ್ಮ ಅನುಮತಿ ನಮಗೆ ಬೇಕಿದೆ. ಆ ಅನುಮತಿಯನ್ನು ನೀವು ಈ ಪರವಾನಗಿಯ ಮೂಲಕ Google ಗೆ ನೀಡುತ್ತೀರಿ.

ಏನನ್ನು ಒಳಗೊಂಡಿದೆ

ಬೌದ್ಧಿಕ ಆಸ್ತಿ ಹಕ್ಕುಗಳ ಮೂಲಕ ನಿಮ್ಮ ವಿಷಯವನ್ನು ರಕ್ಷಿಸಿದ್ದರೆ, ಈ ಪರವಾನಗಿಯು ಆ ವಿಷಯವನ್ನು ರಕ್ಷಿಸುತ್ತದೆ.

ಇವುಗಳನ್ನು ಒಳಗೊಂಡಿಲ್ಲ

  • ನಿಮ್ಮ ಗೌಪ್ಯತೆ ಹಕ್ಕುಗಳ ಮೇಲೆ ಈ ಪರವಾನಗಿಯು ಪರಿಣಾಮ ಬೀರುವುದಿಲ್ಲ - ಇದು ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಮಾತ್ರ ಸಂಬಂಧಿಸಿದೆ
  • ಈ ಪರವಾನಗಿಯು ಈ ಪ್ರಕಾರಗಳ ವಿಷಯವನ್ನು ಒಳಗೊಂಡಿರುವುದಿಲ್ಲ:
    • ನೀವು ಒದಗಿಸುವ ಸಾರ್ವಜನಿಕವಾಗಿ ಲಭ್ಯವಿರುವ ನಿಜವಾದ ಮಾಹಿತಿ, ಉದಾಹರಣೆಗೆ ಸ್ಥಳೀಯ ವ್ಯಾಪಾರದ ವಿಳಾಸಕ್ಕೆ ಮಾಡುವ ತಿದ್ದುಪಡಿಗಳು. ಆ ಮಾಹಿತಿಗೆ ಪರವಾನಗಿಯ ಅಗತ್ಯವಿಲ್ಲ, ಏಕೆಂದರೆ, ಅದನ್ನು ಸಾಮಾನ್ಯ ಜ್ಞಾನವೆಂದು ಪರಿಗಣಿಸಲಾಗಿದ್ದು, ಪ್ರತಿಯೊಬ್ಬರೂ ಬಳಸಲು ಸ್ವತಂತ್ರರಾಗಿರುತ್ತಾರೆ.
    • ನೀವು ನೀಡುವ ಪ್ರತಿಕ್ರಿಯೆ, ಉದಾಹರಣೆಗೆ ನಮ್ಮ ಸೇವೆಗಳನ್ನು ಸುಧಾರಿಸಲು ನೀಡುವ ಸಲಹೆಗಳು. ಸೇವೆ-ಸಂಬಂಧಿತ ಸಂವಹನಗಳು ಎಂಬ ವಿಭಾಗವು ಪ್ರತಿಕ್ರಿಯೆಯನ್ನು ಒಳಗೊಂಡಿರುತ್ತದೆ.

ವ್ಯಾಪ್ತಿ

ಈ ಪರವಾನಗಿಯು:
  • ವಿಶ್ವವ್ಯಾಪಕ, ಅಂದರೆ ವಿಶ್ವದ ಎಲ್ಲೆಡೆಯೂ ಮಾನ್ಯವಾಗಿರುತ್ತದೆ
  • ಪ್ರತ್ಯೇಕವಲ್ಲದ್ದು, ಅಂದರೆ ನೀವು ನಿಮ್ಮ ವಿಷಯಕ್ಕೆ ಇತರರಿಗೆ ಪರವಾನಗಿ ನೀಡಬಹುದು
  • ರಾಯಧನ-ರಹಿತ, ಅಂದರೆ ಈ ಪರವಾನಗಿಗೆ ಯಾವುದೇ ಶುಲ್ಕಗಳಿಲ್ಲ

ಹಕ್ಕುಗಳು

ಈ ಪರವಾನಗಿ Google ಗೆ ಇದನ್ನು ಮಾಡಲು ಅನುಮತಿಸುತ್ತದೆ:

  • ನಿಮ್ಮ ವಿಷಯವನ್ನು ಹೋಸ್ಟ್ ಮಾಡಲು, ಪುನರುತ್ಪಾದಿಸಲು, ವಿತರಿಸಲು, ಸಂವಹನ ಮಾಡಲು ಮತ್ತು ಬಳಸಲು — ಉದಾಹರಣೆಗೆ, ನಮ್ಮ ಸಿಸ್ಟಂಗಳಲ್ಲಿ ನಿಮ್ಮ ವಿಷಯವನ್ನು ಉಳಿಸಲು ಮತ್ತು ನೀವು ಎಲ್ಲಿಂದಲಾದರೂ ಅದನ್ನು ಪ್ರವೇಶಿಸಲು
  • ನಿಮ್ಮ ವಿಷಯವನ್ನು ನೀವು ಇತರರಿಗೆ ಗೋಚರಿಸುವಂತೆ ಮಾಡಿದ್ದರೆ, ಅದನ್ನು ಪ್ರಕಟಿಸಲು, ಸಾರ್ವಜನಿಕವಾಗಿ ನಿರ್ವಹಿಸಲು ಅಥವಾ ಸಾರ್ವಜನಿಕವಾಗಿ ಪ್ರದರ್ಶಿಸಲು
  • ನಿಮ್ಮ ವಿಷಯವನ್ನು ಆಧರಿಸಿ ವ್ಯುತ್ಪನ್ನಗಳನ್ನು ಮಾರ್ಪಡಿಸಲು ಮತ್ತು ರಚಿಸಲು, ಉದಾಹರಣೆಗೆ ಅದನ್ನು ಮರುರೂಪಿಸಲು ಅಥವಾ ಅನುವಾದಿಸಲು
  • ಇವರಿಗೆ ಈ ಹಕ್ಕುಗಳ ಉಪಪರವಾನಗಿ ನೀಡಿ:
    • ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸಲು ಸೇವೆಗಳಿಗೆ ಇತರ ಬಳಕೆದಾರರು ಅನುಮತಿಸಲು, ಉದಾಹರಣೆಗೆ: ನೀವು ಆಯ್ಕೆ ಮಾಡುವ ಜನರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲು ನಿಮಗೆ ಅಧಿಕಾರ ನೀಡುವುದು
    • ನಮ್ಮ ಜೊತೆಗಿನ ಒಪ್ಪಂದಗಳಿಗೆ ಸಹಿ ಹಾಕಿದ ನಮ್ಮ ಗುತ್ತಿಗೆದಾರರು, ಕೆಳಗಿನ ಉದ್ದೇಶ ವಿಭಾಗದಲ್ಲಿ ವಿವರಿಸಿದ ಸೀಮಿತ ಉದ್ದೇಶಗಳಿಗಾಗಿ ಮಾತ್ರ ಈ ನಿಯಮಗಳನ್ನು ಅನುಸರಿಸುತ್ತಾರೆ

ಉದ್ದೇಶ

ಈ ಪರವಾನಗಿಯು ಇದರ ಸೀಮಿತ ಉದ್ದೇಶಕ್ಕಾಗಿ ಇದೆ:

  • ಸೇವೆಗಳನ್ನು ನಿರ್ವಹಿಸುವುದು ಮತ್ತು ಸುಧಾರಿಸುವುದು, ಅಂದರೆ ಸೇವೆಗಳನ್ನು ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸಲು ಅನುಮತಿಸುವುದು ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ಕಾರ್ಯಾತ್ಮಕತೆಗಳನ್ನು ರಚಿಸುವುದು. ನಿಮ್ಮ ವಿಷಯವನ್ನು ವಿಶ್ಲೇಷಿಸಲು ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಅಲ್ಗಾರಿದಮ್‌ಗಳನ್ನು ಬಳಸುವುದು ಇದರಲ್ಲಿ ಸೇರಿದೆ:
    • ಸ್ಪ್ಯಾಮ್, ಮಾಲ್‌ವೇರ್ ಮತ್ತು ಕಾನೂನುಬಾಹಿರ ವಿಷಯಕ್ಕಾಗಿ
    • Google ಫೋಟೋಗಳಲ್ಲಿ ಸಂಬಂಧಿತ ಫೋಟೋಗಳನ್ನು ಒಟ್ಟಿಗೆ ಇರಿಸಲು, ಹೊಸ ಆಲ್ಬಮ್ ಅನ್ನು ಯಾವಾಗ ಸೂಚಿಸಬೇಕು ಎಂಬುದನ್ನು ನಿರ್ಧರಿಸುವಂತಹ ಡೇಟಾದಲ್ಲಿನ ಪ್ಯಾಟರ್ನ್‌ಗಳನ್ನು ಗುರುತಿಸಲು
    • ಶಿಫಾರಸುಗಳು ಮತ್ತು ವೈಯಕ್ತಿಕಗೊಳಿಸಿದ ಹುಡುಕಾಟ ಫಲಿತಾಂಶಗಳು, ವಿಷಯಗಳು ಹಾಗೂ ಜಾಹೀರಾತುಗಳನ್ನು (ನೀವು ಅವುಗಳನ್ನು ಜಾಹೀರಾತುಗಳ ಸೆಟ್ಟಿಂಗ್‌ಗಳಲ್ಲಿ ಬದಲಾಯಿಸಬಹುದು ಅಥವಾ ಆಫ್ ಮಾಡಬಹುದು) ಒದಗಿಸುವಂತಹ ನಮ್ಮ ಸೇವೆಗಳನ್ನು ನಿಮಗಾಗಿ ಕಸ್ಟಮೈಸ್ ಮಾಡುವುದು
    ಈ ವಿಶ್ಲೇಷಣೆಯು ವಿಷಯವನ್ನು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಅದನ್ನು ಸಂಗ್ರಹಿಸಿಕೊಂಡಾಗ ಸಂಭವಿಸುತ್ತದೆ.
  • ಸೇವೆಗಳನ್ನು ಪ್ರಚಾರ ಮಾಡಲು ನೀವು ಸಾರ್ವಜನಿಕವಾಗಿ ಹಂಚಿಕೊಂಡ ವಿಷಯವನ್ನು ಬಳಸುವುದು. ಉದಾಹರಣೆಗೆ, Google ಆ್ಯಪ್ ಒಂದನ್ನು ಪ್ರಚಾರ ಮಾಡಲು, ನೀವು ಬರೆದ ವಿಮರ್ಶೆಯನ್ನು ನಾವು ಉಲ್ಲೇಖಿಸಬಹುದು. ಅಥವಾ Google Play ಅನ್ನು ಪ್ರಚಾರ ಮಾಡಲು, ನೀವು Play ಸ್ಟೋರ್‌ನಲ್ಲಿ ಒದಗಿಸುವ ಆ್ಯಪ್‌ನ ಸ್ಕ್ರೀನ್‌ಶಾಟ್ ಒಂದನ್ನು ನಾವು ತೋರಿಸಬಹುದು.
  • ಈ ನಿಯಮಗಳಿಗೆ ಅನುಗುಣವಾಗಿ Google ಗೆ ಸಂಬಂಧಿಸಿದಂತೆ, ಹೊಸ ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವುದು

ಅವಧಿ

ಬೌದ್ಧಿಕ ಆಸ್ತಿ ಹಕ್ಕುಗಳು ನಿಮ್ಮ ವಿಷಯವನ್ನು ರಕ್ಷಿಸುವವರೆಗೆ ಈ ಪರವಾನಗಿ ಇರುತ್ತದೆ.

ಈ ಪರವಾನಗಿ ಒಳಗೊಳ್ಳುವ ಯಾವುದೇ ವಿಷಯವನ್ನು ನೀವು ನಮ್ಮ ಸೇವೆಗಳಿಂದ ತೆಗೆದುಹಾಕಿದರೆ, ನಮ್ಮ ಸಿಸ್ಟಂಗಳು ಸಮಂಜಸವಾದ ಸಮಯದಲ್ಲಿ ಆ ವಿಷಯವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವುದನ್ನು ನಿಲ್ಲಿಸುತ್ತವೆ. ಎರಡು ವಿನಾಯಿತಿಗಳಿವೆ:

  • ನಿಮ್ಮ ವಿಷಯವನ್ನು ತೆಗೆದುಹಾಕುವ ಮೊದಲು ನೀವು ಈಗಾಗಲೇ ಅದನ್ನು ಇತರರ ಜೊತೆಗೆ ಹಂಚಿಕೊಂಡಿದ್ದರೆ. ಉದಾಹರಣೆಗೆ, ನೀವು ಫೋಟೋವೊಂದನ್ನು ಸ್ನೇಹಿತರ ಜೊತೆಗೆ ಹಂಚಿಕೊಂಡಿದ್ದು, ಅವರು ಅದರ ನಕಲನ್ನು ಮಾಡಿದ್ದರೆ ಅಥವಾ ಅದನ್ನು ಪುನಃ ಹಂಚಿಕೊಂಡಿದ್ದರೆ, ನೀವು ಆ ಫೋಟೋವನ್ನು ನಿಮ್ಮ Google ಖಾತೆಯಿಂದ ತೆಗೆದುಹಾಕಿದ ನಂತರವೂ, ಅದು ನಿಮ್ಮ ಸ್ನೇಹಿತರ Google ಖಾತೆಯಲ್ಲಿ ಕಾಣಿಸಿಕೊಳ್ಳಬಹುದು.
  • ನಿಮ್ಮ ವಿಷಯವನ್ನು ಇತರ ಕಂಪನಿಗಳ ಸೇವೆಗಳ ಮೂಲಕ ಲಭ್ಯವಾಗುವಂತೆ ನೀವು ಮಾಡಿದರೆ, Google ಹುಡುಕಾಟವೂ ಸೇರಿದಂತೆ, ಹುಡುಕಾಟ ಎಂಜಿನ್‌ಗಳು ಅವುಗಳ ಹುಡುಕಾಟ ಫಲಿತಾಂಶಗಳ ಭಾಗವಾಗಿ ನಿಮ್ಮ ವಿಷಯವನ್ನು ಹುಡುಕಲು ಮತ್ತು ಪ್ರದರ್ಶಿಸಲು ಮುಂದುವರಿಯುತ್ತವೆ.

Google ಸೇವೆಗಳನ್ನು ಬಳಸುವುದು

ನಿಮ್ಮ Google ಖಾತೆ

ನೀವು ಈ ನಿರ್ದಿಷ್ಟ ವಯಸ್ಸಿನ ಅಗತ್ಯಗಳನ್ನು ಪೂರೈಸಿದರೆ ನಿಮ್ಮ ಅನುಕೂಲಕ್ಕಾಗಿ ನೀವು Google ಖಾತೆಯೊಂದನ್ನು ರಚಿಸಬಹುದು. ಕೆಲವು ಸೇವೆಗಳು ಕಾರ್ಯ ಮಾಡಲು, ನೀವು Google ಖಾತೆಯೊಂದನ್ನು ಹೊಂದಿರಬೇಕು - ಉದಾಹರಣೆಗೆ, Gmail ಬಳಸಲು, ನಿಮಗೆ Google ಖಾತೆಯೊಂದರ ಅಗತ್ಯವಿರುತ್ತದೆ ಇದರಿಂದ ನಿಮ್ಮ ಇಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ಒಂದು ಸ್ಥಳವಿರುತ್ತದೆ.

ನಿಮ್ಮ Google ಖಾತೆಯನ್ನು ಸುರಕ್ಷಿತವಾಗಿರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದೂ ಸೇರಿದಂತೆ, ನಿಮ್ಮ Google ಖಾತೆಯನ್ನು ಹೇಗೆ ಬಳಸುತ್ತೀರಿ ಎಂಬುದಕ್ಕೂ ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಭದ್ರತಾ ಪರಿಶೀಲನೆಯನ್ನು ನಿಯಮಿತವಾಗಿ ಬಳಸಲು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.

ಸಂಸ್ಥೆಯ ಪರವಾಗಿ Google ಸೇವೆಗಳ ಬಳಕೆ

ವ್ಯಾಪಾರಗಳು, ಲಾಭರಹಿತ ಸಂಸ್ಥೆಗಳು ಮತ್ತು ಶಾಲೆಗಳಂತಹ ಹಲವಾರು ಸಂಸ್ಥೆಗಳು ನಮ್ಮ ಸೇವೆಗಳ ಲಾಭವನ್ನು ಪಡೆದುಕೊಳ್ಳುತ್ತವೆ. ಸಂಸ್ಥೆಯೊಂದರ ಪರವಾಗಿ ನಮ್ಮ ಸೇವೆಗಳನ್ನು ಬಳಸಲು:
  • ಆ ಸಂಸ್ಥೆಯ ಅಧಿಕೃತ ಪ್ರತಿನಿಧಿಯೊಬ್ಬರು ಈ ನಿಯಮಗಳನ್ನು ಒಪ್ಪಿಕೊಳ್ಳಬೇಕು
  • ನಿಮ್ಮ ಸಂಸ್ಥೆಯ ನಿರ್ವಾಹಕರು ನಿಮಗೆ Google ಖಾತೆಯೊಂದನ್ನು ನಿಯೋಜಿಸಬಹುದು. ಆ ನಿರ್ವಾಹಕರಿಗಾಗಿ ನೀವು ಹೆಚ್ಚುವರಿ ನಿಯಮಗಳನ್ನು ಪಾಲಿಸಬೇಕಾಗಬಹುದು ಮತ್ತು ನಿಮ್ಮ Google ಖಾತೆಯನ್ನು ಪ್ರವೇಶಿಸಲು ಅಥವಾ ನಿಷ್ಕ್ರಿಯಗೊಳಿಸಲು ಅವರಿಗೆ ಸಾಧ್ಯವಾಗಬಹುದು.

ಸೇವೆಗೆ ಸಂಬಂಧಿಸಿದ ಸಂವಹನಗಳು

ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು, ನಾವು ಕೆಲವೊಮ್ಮೆ ನಿಮಗೆ ಸೇವಾ ಪ್ರಕಟಣೆಗಳು ಮತ್ತು ಇತರ ಮಾಹಿತಿಯನ್ನು ಕಳುಹಿಸುತ್ತೇವೆ. ನಾವು ನಿಮ್ಮ ಜೊತೆಗೆ ಹೇಗೆ ಸಂವಹನ ಮಾಡುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಲು, Google ನ ಗೌಪ್ಯತೆ ನೀತಿಯನ್ನು ನೋಡಿ.

ನಮ್ಮ ಸೇವೆಗಳನ್ನು ಸುಧಾರಿಸುವುದಕ್ಕೆ ನೀವು ಸಲಹೆಗಳ ರೂಪದಲ್ಲಿ ನಮಗೆ ಪ್ರತಿಕ್ರಿಯೆಯನ್ನು ನೀಡಲು ಆಯ್ಕೆಮಾಡಿದರೆ, ನಿಮಗೆ ತಿಳಿಸದೆಯೇ ನಾವು ನಿಮ್ಮ ಪ್ರತಿಕ್ರಿಯೆಯ ಮೇಲೆ ಕಾರ್ಯನಿರ್ವಹಿಸಬಹುದು.

Google ಸೇವೆಗಳಲ್ಲಿರುವ ವಿಷಯ

ನಿಮ್ಮ ವಿಷಯ

ನಿಮ್ಮ ವಿಷಯವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು, ನಮ್ಮ ಕೆಲವು ಸೇವೆಗಳು ನಿಮಗೆ ಅವಕಾಶ ನೀಡುತ್ತವೆ - ಉದಾಹರಣೆಗೆ, ನೀವು ಬರೆದ ಉತ್ಪನ್ನ ಅಥವಾ ರೆಸ್ಟೋರೆಂಟ್ ಕುರಿತಾದ ವಿಮರ್ಶೆಯನ್ನು ನೀವು ಪೋಸ್ಟ್ ಮಾಡಬಹುದು, ಅಥವಾ ನೀವು ರಚಿಸಿದ ಬ್ಲಾಗ್ ಪೋಸ್ಟ್ ಒಂದನ್ನು ನೀವು ಅಪ್‌ಲೋಡ್ ಮಾಡಬಹುದು.

ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಯಾರಾದರೂ ಉಲ್ಲಂಘಿಸುತ್ತಿದ್ದಾರೆಂದು ನಿಮಗೆ ಅನಿಸಿದರೆ, ನೀವು ಉಲ್ಲಂಘನೆಯ ಕುರಿತಾದ ಸೂಚನೆಯನ್ನು ನಮಗೆ ಕಳುಹಿಸಬಹುದು ಮತ್ತು ನಾವು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ನಮ್ಮ ಹಕ್ಕುಸ್ವಾಮ್ಯ ಸಹಾಯ ಕೇಂದ್ರದಲ್ಲಿ ವಿವರಿಸಿದಂತೆ, ಪದೇ ಪದೇ ಹಕ್ಕುಸ್ವಾಮ್ಯ ಉಲ್ಲಂಘಿಸುವವರ Google ಖಾತೆಗಳನ್ನು ನಾವು ಅಮಾನತುಗೊಳಿಸುತ್ತೇವೆ ಅಥವಾ ಮುಚ್ಚುತ್ತೇವೆ.

Google ವಿಷಯ

ನಮ್ಮ ಕೆಲವು ಸೇವೆಗಳು Google ಗೆ ಸೇರಿದ ವಿಷಯವನ್ನು ಒಳಗೊಂಡಿವೆ - ಉದಾಹರಣೆಗೆ, Google Maps ನಲ್ಲಿ ನಿಮಗೆ ಕಾಣುವ ಹಲವಾರು ದೃಶ್ಯ ವಿವರಣೆಗಳು. ಈ ನಿಯಮಗಳು ಮತ್ತು ಯಾವುದೇ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಮೂಲಕ ಅನುಮತಿಸಲಾಗಿರುವಂತೆ, ನೀವು Google ನ ವಿಷಯವನ್ನು ಬಳಸಬಹುದು, ಆದರೆ ನಮ್ಮ ವಿಷಯದಲ್ಲಿ ನಾವು ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ನಮ್ಮ ಯಾವುದೇ ಬ್ರ್ಯಾಂಡಿಂಗ್, ಲೋಗೋಗಳು ಅಥವಾ ಕಾನೂನು ನೊಟೀಸ್‌ಗಳನ್ನು ತೆಗೆದುಹಾಕಬೇಡಿ, ಅಸ್ಪಷ್ಟಗೊಳಿಸಬೇಡಿ ಅಥವಾ ಬದಲಾಯಿಸಬೇಡಿ. ನಮ್ಮ ಬ್ರ್ಯಾಂಡಿಂಗ್ ಅಥವಾ ಲೋಗೋಗಳನ್ನು ಬಳಸಲು ನೀವು ಬಯಸಿದರೆ, Google ಬ್ರ್ಯಾಂಡ್ ಅನುಮತಿಗಳ ಪುಟವನ್ನು ನೋಡಿ.

ಇತರ ವಿಷಯ

ಅಂತಿಮವಾಗಿ, ನಮ್ಮ ಕೆಲವು ಸೇವೆಗಳು ಇತರ ಜನರಿಗೆ ಅಥವಾ ಸಂಸ್ಥೆಗಳಿಗೆ ಸೇರಿದ ವಿಷಯಕ್ಕೆ ಪ್ರವೇಶವನ್ನು ನೀಡುತ್ತದೆ — ಉದಾಹರಣೆಗೆ, ಅಂಗಡಿಯ ಮಾಲೀಕರದ್ದೇ ವ್ಯಾಪಾರದ ವಿವರಣೆ ಅಥವಾ Google News ನಲ್ಲಿ ಪ್ರದರ್ಶಿಸಲಾದ ಪತ್ರಿಕೆಯ ಲೇಖನ. ನೀವು ಈ ವಿಷಯವನ್ನು ಆ ವ್ಯಕ್ತಿಯ ಅಥವಾ ಸಂಸ್ಥೆಯ ಅನುಮತಿಯಿಲ್ಲದೆ ಅಥವಾ ಕಾನೂನಿನ ಪ್ರಕಾರ ಅನುಮತಿಸದ ಹೊರತು ಬಳಸಬಾರದು. ಇತರ ಜನರ ಅಥವಾ ಸಂಸ್ಥೆಗಳ ವಿಷಯದಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳು ಅವರದ್ದಾಗಿದ್ದು ಮತ್ತು Google ವೀಕ್ಷಣೆಗಳನ್ನು ಪ್ರತಿಬಿಂಬಿಸುವುದಿಲ್ಲ.

Google ಸೇವೆಗಳಲ್ಲಿರುವ ಸಾಫ್ಟ್‌ವೇರ್

ನಮ್ಮ ಕೆಲವು ಸೇವೆಗಳು ಡೌನ್‌ಲೋಡ್ ಮಾಡಬಹುದಾದ ಸಾಫ್ಟ್‌ವೇರ್ ಅನ್ನು ಒಳಗೊಂಡಿವೆ. ಸೇವೆಗಳ ಭಾಗವಾಗಿ ಆ ಸಾಫ್ಟ್‌ವೇರ್ ಅನ್ನು ಬಳಸಲು ನಾವು ನಿಮಗೆ ಅನುಮತಿಯನ್ನು ನೀಡುತ್ತೇವೆ.

ನಾವು ನಿಮಗೆ ನೀಡುವ ಪರವಾನಗಿಯು ಹೀಗಿದೆ:
  • ವಿಶ್ವವ್ಯಾಪಕ, ಅಂದರೆ ವಿಶ್ವದ ಎಲ್ಲೆಡೆಯೂ ಮಾನ್ಯವಾಗಿರುತ್ತದೆ
  • ಪ್ರತ್ಯೇಕವಲ್ಲದ್ದು, ಅಂದರೆ ನಾವು ಸಾಫ್ಟ್‌ವೇರ್ ಅನ್ನು ಇತರರಿಗೆ ಪರವಾನಗಿ ನೀಡಬಹುದು
  • ರಾಯಧನ-ರಹಿತ, ಅಂದರೆ ಈ ಪರವಾನಗಿಗೆ ಯಾವುದೇ ಶುಲ್ಕಗಳಿಲ್ಲ
  • ವೈಯಕ್ತಿಕ, ಅಂದರೆ ಅದನ್ನು ಬೇರೆಯವರಿಗೆ ವಿಸ್ತರಿಸಲಾಗುವುದಿಲ್ಲ
  • ನಿಯೋಜಿಸಲಾಗದ್ದು, ಅಂದರೆ ಪರವಾನಗಿಯನ್ನು ಬೇರೆ ಯಾರಿಗೂ ನಿಯೋಜಿಸಲು ನಿಮಗೆ ಅನುಮತಿ ಇರುವುದಿಲ್ಲ

ನಮ್ಮ ಕೆಲವು ಸೇವೆಗಳು, ನಾವು ನಿಮಗೆ ಲಭ್ಯ ಮಾಡಿಕೊಡುವ ಓಪನ್ ಸೋರ್ಸ್ ಪರವಾನಗಿ ನಿಯಮಗಳ ಅಡಿಯಲ್ಲಿ ನೀಡಲಾಗುವ ಸಾಫ್ಟ್‌ವೇರ್ ಅನ್ನು ಒಳಗೊಂಡಿವೆ. ಕೆಲವೊಮ್ಮೆ ಓಪನ್ ಸೋರ್ಸ್ ಪರವಾನಗಿಯಲ್ಲಿರುವ ಉಪಬಂಧಗಳು ಈ ನಿಯಮಗಳ ಭಾಗಗಳನ್ನು ಸ್ಪಷ್ಟವಾಗಿ ಅತಿಕ್ರಮಿಸುತ್ತವೆ, ಆದ್ದರಿಂದ ಆ ಪರವಾನಗಿಗಳನ್ನು ಓದಲು ಮರೆಯದಿರಿ.

ನಮ್ಮ ಸೇವೆಗಳು ಅಥವಾ ಸಾಫ್ಟ್‌ವೇರ್‌ನ ಯಾವುದೇ ಭಾಗವನ್ನು ನೀವು ನಕಲಿಸಲು, ಮಾರ್ಪಡಿಸಲು, ವಿತರಿಸಲು, ಮಾರಾಟ ಮಾಡಲು ಅಥವಾ ಗುತ್ತಿಗೆ ನೀಡಲು ಸಾಧ್ಯವಾಗುವುದಿಲ್ಲ. ಜೊತೆಗೆ, ನಮ್ಮ ಲಿಖಿತ ಅನುಮತಿ ಅಥವಾ ಅನ್ವಯವಾಗುವ ಕಾನೂನು ನಿಮಗೆ ಅವಕಾಶ ನೀಡದ ಹೊರತು ನೀವು ರಿವರ್ಸ್ ಎಂಜಿನಿಯರ್ ಅಥವಾ ನಮ್ಮ ಯಾವುದೇ ಮೂಲ ಕೋಡ್ ಅನ್ನು ನಕಲು ಮಾಡಲು ಪ್ರಯತ್ನಿಸಬಾರದು.

ಸೇವೆಯು ಡೌನ್‌ಲೋಡ್ ಮಾಡಬಹುದಾದ ಸಾಫ್ಟ್‌ವೇರ್‌ ಅನ್ನು ಒಳಗೊಂಡಿರುವಾಗ ಅಥವಾ ಸೇವೆಗೆ ಅದರ ಅಗತ್ಯವಿದ್ದಾಗ, ಹೊಸ ಆವೃತ್ತಿ ಅಥವಾ ಫೀಚರ್‌ ಲಭ್ಯವಾದ ನಂತರ ಆ ಸಾಫ್ಟ್‌ವೇರ್, ಕೆಲವೊಮ್ಮೆ ನಿಮ್ಮ ಸಾಧನದಲ್ಲಿ ಸ್ವಯಂಚಾಲಿತವಾಗಿ ಅಪ್‌ಡೇಟ್‌ ಆಗುತ್ತದೆ. ನಿಮ್ಮ ಸ್ವಯಂಚಾಲಿತ ಅಪ್‌ಡೇಟ್‌ ಸೆಟ್ಟಿಂಗ್‌ಗಳನ್ನು ಹೊಂದಿಸಲು ಕೆಲವು ಸೇವೆಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ.

ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳು ಎದುರಾದ ಸಂದರ್ಭದಲ್ಲಿ

ಕಾನೂನಿನ ಪ್ರಕಾರ, (1) ನಿರ್ದಿಷ್ಟ ಗುಣಮಟ್ಟದ ಸೇವೆ ಮತ್ತು (2) ವಿಷಯಗಳು ತಪ್ಪಾದಲ್ಲಿ ಸಮಸ್ಯೆಯನ್ನು ಪರಿಹರಿಸುವ ಮಾರ್ಗಗಳ ಹಕ್ಕನ್ನು ನೀವು ಹೊಂದಿರುವಿರಿ. ಈ ನಿಯಮಗಳು ಆ ಯಾವುದೇ ಹಕ್ಕುಗಳನ್ನು ಮಿತಿಗೊಳಿಸುವುದಿಲ್ಲ ಅಥವಾ ತೆಗೆದುಕೊಳ್ಳುವುದಿಲ್ಲ.ಉದಾಹರಣೆಗೆ, ನೀವು ಗ್ರಾಹಕ ನವರಾಗಿದ್ದರೆ, ಅನ್ವಯವಾಗುವ ಕಾನೂನಿನಡಿಯಲ್ಲಿ ಗ್ರಾಹಕರಿಗೆ ನೀಡಲಾದ ಎಲ್ಲಾ ಕಾನೂನು ಹಕ್ಕುಗಳನ್ನು ನೀವು ಆನಂದಿಸುತ್ತೀರಿ.

ವಾರಂಟಿ

ಸಮಂಜಸವಾದ ಕಾಳಜಿ ಮತ್ತು ಕೌಶಲ್ಯವನ್ನು ಬಳಸಿಕೊಂಡು ನಾವು ನಮ್ಮ ಸೇವೆಗಳನ್ನು ಒದಗಿಸುತ್ತೇವೆ. ಈ ವಾರಂಟಿಯಲ್ಲಿ ವಿವರಿಸಿರುವ ಗುಣಮಟ್ಟದ ಮಟ್ಟವನ್ನು ನಾವು ಪೂರೈಸದಿದ್ದರೆ, ನೀವು ನಮಗೆ ಅದನ್ನು ತಿಳಿಸಲು ಒಪ್ಪುತ್ತೀರಿ ಮತ್ತು ಸಮಸ್ಯೆಯನ್ನು ಪರಿಹರಿಸಲು ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ.

ಹಕ್ಕುನಿರಾಕರಣೆಗಳು

ನಮ್ಮ ಸೇವೆಗಳ ಕುರಿತಾಗಿ ನಾವು ಪೂರೈಸುವ ನಿರ್ದಿಷ್ಟ ಬದ್ಧತೆಗಳನ್ನು-(ಸೇವೆಗಳಲ್ಲಿನ ವಿಷಯ, ನಮ್ಮ ಸೇವೆಗಳ ನಿರ್ದಿಷ್ಟ ಕಾರ್ಯಗಳು ಅಥವಾ ಅವುಗಳ ವಿಶ್ವಾಸಾರ್ಹತೆ, ಲಭ್ಯತೆ ಅಥವಾ ನಿಮ್ಮ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಒಳಗೊಂಡಂತೆ) (1) ವಾರಂಟಿ ವಿಭಾಗದಲ್ಲಿ ವಿವರಿಸಲಾಗಿದೆ, (2) ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳಲ್ಲಿ ತಿಳಿಸಲಾಗಿದೆ, ಅಥವಾ (3) ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಒದಗಿಸಲಾಗಿದೆ. ನಮ್ಮ ಸೇವೆಗಳ ಬಗ್ಗೆ ನಾವು ಬೇರೆ ಯಾವುದೇ ಬದ್ಧತೆಗಳನ್ನು ಮಾಡಿಕೊಳ್ಳುವುದಿಲ್ಲ.

ಮತ್ತು ಕಾನೂನಿನ ಪ್ರಕಾರ ಅಗತ್ಯವಿಲ್ಲದಿದ್ದರೆ, ವಿಕ್ರಯ ಯೋಗ್ಯತೆಯ ಪರೋಕ್ಷವಾಗಿ ಸೂಚಿಸಿದ ಆಶ್ವಾಸನೆಗಳು, ನಿರ್ದಿಷ್ಟ ಉದ್ದೇಶಕ್ಕಾಗಿ ಫಿಟ್‌ನೆಸ್ ಮತ್ತು ಉಲ್ಲಂಘನೆಯಿಲ್ಲದಂತಹ ಪರೋಕ್ಷವಾಗಿ ಸೂಚಿಸಿದ ಆಶ್ವಾಸನೆಗಳನ್ನು ನಾವು ಒದಗಿಸುವುದಿಲ್ಲ.

ಬಾಧ್ಯತೆಗಳು

ಎಲ್ಲಾ ಬಳಕೆದಾರರಿಗಾಗಿ

ಅನ್ವಯವಾಗುವ ಕಾನೂನುಗಳ ಅನುಮತಿಯ ಮೇರೆಗೆ, ಈ ನಿಯಮಗಳೇ ನಮ್ಮ ಜವಾಬ್ದಾರಿಗಳನ್ನು ಸೀಮಿತಗೊಳಿಸುತ್ತವೆ. ನಿರ್ದಿಷ್ಟವಾಗಿ, ಈ ನಿಯಮಗಳು ಸಾವು ಅಥವಾ ವೈಯಕ್ತಿಕ ಹಾನಿ, ವಂಚನೆ, ವಂಚನಾತ್ಮಕ ತಪ್ಪು-ಪ್ರತಿನಿಧಿತ್ವ, ಸಂಪೂರ್ಣ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ದುರ್ನಡತೆಗಳ ಕುರಿತಂತೆ Google ನ ಬಾಧ್ಯಸ್ಥಿಕೆಯನ್ನು ಸೀಮಿತಗೊಳಿಸುವುದಿಲ್ಲ.

ಈ ವಿಭಾಗದಲ್ಲಿ ವಿವರಿಸಿರುವ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಹೊರತುಪಡಿಸಿ (ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳು ಎದುರಾದ ಸಂದರ್ಭದಲ್ಲಿ), ಈ ನಿಯಮಗಳು ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳ ನಮ್ಮ ಉಲ್ಲಂಘನೆಯಿಂದ ಯಾವುದಾದರೂ ನಷ್ಟಗಳು ಉಂಟಾಗಿದ್ದರೆ, ಅಂತಹದ್ದನ್ನು ಹೊರತುಪಡಿಸಿ ಉಂಟಾದ ಇತರ ಬೇರೆ ಯಾವುದೇ ನಷ್ಟಗಳಿಗೆ Google ಜವಾಬ್ದಾರರಾಗಿರುವುದಿಲ್ಲ.

ವ್ಯಾಪಾರ ಬಳಕೆದಾರರು ಮತ್ತು ಸಂಸ್ಥೆಗಳಿಗಾಗಿ ಮಾತ್ರ

ನೀವೊಬ್ಬ ವ್ಯಾಪಾರ ಬಳಕೆದಾರರು ಅಥವಾ ಸಂಸ್ಥೆಯಾಗಿದ್ದರೆ, ಅನ್ವಯವಾಗುವ ಕಾನೂನಿನ ಪ್ರಕಾರ ಈ ಕೆಳಗಿನವುಗಳು ಅನುಮತಿಸಲಾಗುತ್ತವೆ:

  • ನಿಮ್ಮ ಕಾನೂನುಬಾಹಿರ ಸೇವೆಗಳ ಬಳಕೆ ಅಥವಾ ಈ ನಿಯಮಗಳ ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅಥವಾ ಸಂಬಂಧಿಸಿದ ಯಾವುದೇ ಥರ್ಡ್ ಪಾರ್ಟಿ ಕಾನೂನು ಕ್ರಮಗಳಿಗಾಗಿ (ಸರ್ಕಾರಿ ಅಧಿಕಾರಿಗಳ ಕ್ರಮಗಳು ಸೇರಿಕೊಂಡಿವೆ) ನೀವು Google ಮತ್ತು ಅದರ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಗುತ್ತಿಗೆದಾರರಿಗೆ ಪರಿಹಾರವನ್ನು ನೀಡುತ್ತೀರಿ. ಈ ಪರಿಹಾರವು ಕ್ಲೈಮ್‌ಗಳು, ನಷ್ಟಗಳು, ಹಾನಿಗಳು, ತೀರ್ಪುಗಳು, ದಂಡಗಳು, ದಾವೆ ವೆಚ್ಚಗಳು ಮತ್ತು ಕಾನೂನು ಶುಲ್ಕಗಳಿಂದ ಉಂಟಾಗುವ ಯಾವುದೇ ಹೊಣೆಗಾರಿಕೆ ಅಥವಾ ವೆಚ್ಚವನ್ನು ಒಳಗೊಂಡಿರುತ್ತದೆ.
  • ಈ ಕೆಳಗಿನ ಬಾಧ್ಯಸ್ಥಿಕೆಗಳಿಗೆ Google ಜವಾಬ್ದಾರರಾಗಿರುವುದಿಲ್ಲ:
    • ಲಾಭ, ಆದಾಯ, ವ್ಯಾಪಾರ ಅವಕಾಶಗಳು, ಸದಾಶಯ ಅಥವಾ ನಿರೀಕ್ಷಿತ ಉಳಿತಾಯಗಳ ನಷ್ಟ
    • ಪರೋಕ್ಷ ಅಥವಾ ಪರಿಣಾಮಕಾರಿ ನಷ್ಟ
    • ಶಿಕ್ಷಾರ್ಹ ಹಾನಿಗಳು
  • ಈ ನಿಯಮಗಳಿಂದ ಉಂಟಾಗುವ ಅಥವಾ ಅವುಗಳಿಗೆ ಸಂಬಂಧಿಸಿದ Google ನ ಒಟ್ಟು ಬಾಧ್ಯಸ್ಥಿಕೆಯನ್ನು, ಉಲ್ಲಂಘನೆಯ 12 ತಿಂಗಳುಗಳ ಮೊದಲು ಸಂಬಂಧಿತ ಸೇವೆಗಳನ್ನು ಬಳಸಲು ನೀವು ಪಾವತಿಸಿದ (1) US$500 ಅಥವಾ (2) 125% ಶುಲ್ಕಕ್ಕೆ (ಇವುಗಳಲ್ಲಿ ಯಾವುದು ಹೆಚ್ಚಿರುವುದೋ ಅಷ್ಟಕ್ಕೆ) ಸೀಮಿತವಾಗಿದೆ

ಪರಿಹಾರ ನೀಡುವಿಕೆಯೂ ಸೇರಿದಂತೆ, ಕೆಲವು ಜವಾಬ್ದಾರಿಗಳಿಂದ ನೀವು ಕಾನೂನುಬದ್ಧವಾಗಿ ವಿನಾಯಿತಿ ಪಡೆದಿದ್ದರೆ, ಈ ನಿಯಮಗಳ ಅಡಿಯಲ್ಲಿ ಆ ಜವಾಬ್ದಾರಿಗಳು ನಿಮಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ, ವಿಶ್ವಸಂಸ್ಥೆಯು ಕಾನೂನು ಹೊಣೆಗಾರಿಕೆಗಳಿಂದ ಕೆಲವು ವಿನಾಯಿತಿಗಳನ್ನು ಪಡೆದಿರುತ್ತದೆ ಮತ್ತು ಈ ನಿಯಮಗಳು ಆ ವಿನಾಯಿತಿಗಳನ್ನು ಅತಿಕ್ರಮಿಸುವುದಿಲ್ಲ.

ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು

ಈ ಕೆಳಗಿನವುಗಳು ಸಂಭವಿಸಿ, ನಾವು ಅದನ್ನು ಸಕಾರಣ ನಂಬದಿದ್ದರೆ, ಕೆಳಗೆ ವಿವರಿಸಿದಂತೆ ಕ್ರಮ ತೆಗೆದುಕೊಳ್ಳುವ ಮೊದಲು, ಸಾಧ್ಯವಾದಾಗ ನಾವು ನಿಮಗೆ ಮುಂಚಿತವಾಗಿ ಸೂಚನೆಯನ್ನು ನೀಡುತ್ತೇವೆ. ನಮ್ಮ ಕ್ರಮಕ್ಕೆ ಕಾರಣವನ್ನು ವಿವರಿಸುತ್ತೇವೆ ಮತ್ತು ಸಮಸ್ಯೆಯನ್ನು ಪರಿಹರಿಸಲು ನಿಮಗೆ ಅವಕಾಶ ನೀಡುತ್ತೇವೆ:

  • ಬಳಕೆದಾರ, ಮೂರನೇ ವ್ಯಕ್ತಿ ಅಥವಾ Google ಗೆ ಹಾನಿ ಅಥವಾ ಬಾಧ್ಯಸ್ಥಿಕೆಯನ್ನು ಉಂಟುಮಾಡುವುದು
  • ಕಾನೂನು ಅಥವಾ ಕಾನೂನು ಜಾರಿ ಪ್ರಾಧಿಕಾರದ ಆದೇಶವೊಂದನ್ನು ಉಲ್ಲಂಘಿಸುತ್ತದೆ
  • ತನಿಖೆಗೆ ಧಕ್ಕೆಯಾಗುತ್ತದೆ
  • ನಮ್ಮ ಸೇವೆಗಳ ಕಾರ್ಯಾಚರಣೆ, ಸಮಗ್ರತೆ ಅಥವಾ ಸುರಕ್ಷತೆಯನ್ನು ಹ್ಯಾಕ್‌ ಮಾಡುವುದು

ನಿಮ್ಮ ವಿಷಯವನ್ನು ತೆಗೆದುಹಾಕುವುದು

ಯಾವುದೇ ನಿಮ್ಮ ವಿಷಯವು, (1) ಈ ನಿಯಮಗಳು, ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಅಥವಾ ನೀತಿಗಳನ್ನು ಉಲ್ಲಂಘಿಸುತ್ತದೆ, (2) ಅನ್ವಯವಾಗುವ ಕಾನೂನನ್ನು ಉಲ್ಲಂಘಿಸುತ್ತದೆ (3) ಅಥವಾ ನಮ್ಮ ಬಳಕೆದಾರರಿಗೆ, ಥರ್ಡ್ ಪಾರ್ಟಿಗಳಿಗೆ ಅಥವಾ Google ಗೆ ಹಾನಿಯಾಗಬಹುದು ಎಂದು ನಮಗೆ ಅನಿಸಿದರೆ, ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ಕೆಲವು ಅಥವಾ ಎಲ್ಲಾ ವಿಷಯವನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಮಕ್ಕಳ ಕುರಿತಾದ ಅಶ್ಲೀಲತೆ, ಮಾನವ ಕಳ್ಳಸಾಗಣೆ ಅಥವಾ ಕಿರುಕುಳವನ್ನು ಸುಗಮಗೊಳಿಸುವ ವಿಷಯ ಮತ್ತು ಬೇರೊಬ್ಬರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅತಿಕ್ರಮಣ ಮಾಡುವ ವಿಷಯಗಳು ಉದಾಹರಣೆಗಳಲ್ಲಿ ಸೇರಿವೆ.

Google ಸೇವೆಗಳಿಗೆ ನಿಮ್ಮ ಪ್ರವೇಶವನ್ನು ಅಮಾನತುಗೊಳಿಸುವುದು ಅಥವಾ ಅಂತ್ಯಗೊಳಿಸುವುದು

ಈ ಕೆಳಗಿನವುಗಳಲ್ಲಿ ಯಾವುದಾದರೂ ಸಂಭವಿಸಿದರೆ, ಸೇವೆಗಳಿಗೆ ಇರುವ ನಿಮ್ಮ ಪ್ರವೇಶವನ್ನು ಅಮಾನತುಗೊಳಿಸುವ ಅಥವಾ ಕೊನೆಗೊಳಿಸುವ ಅಥವಾ ನಿಮ್ಮ Google ಖಾತೆಯನ್ನು ಅಳಿಸುವ ಹಕ್ಕನ್ನು Google ಹೊಂದಿದೆ:

  • ನೀವು ಈ ನಿಯಮಗಳು, ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಅಥವಾ ನೀತಿಗಳನ್ನು ಭೌತಿಕವಾಗಿ, ಪದೇ ಪದೇ ಉಲ್ಲಂಘಿಸಿದರೆ
  • ಕಾನೂನು ಅವಶ್ಯಕತೆ ಅಥವಾ ನ್ಯಾಯಾಲಯದ ಆದೇಶದ ಅನುಸಾರ
  • ನಿಮ್ಮ ನಡವಳಿಕೆಯು ಬಳಕೆದಾರರಿಗೆ, ಥರ್ಡ್ ಪಾರ್ಟಿಗೆ ಅಥವಾ Google ಗೆ ಹಾನಿಯುಂಟುಮಾಡುತ್ತದೆ ಅಥವಾ ನೀವು ಹೊಣೆಯಾಗಿದ್ದೀರಿ ಎಂಬುದು ನಮಗೆ ಖಾತ್ರಿಯಾದರೆ - ಅಂದರೆ, ಹ್ಯಾಕ್ ಮಾಡುವುದು, ಫಿಶಿಂಗ್, ಕಿರುಕುಳ ನೀಡುವುದು, ಸ್ಪ್ಯಾಮ್ ಮಾಡುವುದು, ಇತರರನ್ನು ದಾರಿ ತಪ್ಪಿಸುವುದು ಅಥವಾ ನಿಮ್ಮದಲ್ಲದ ವಿಷಯವನ್ನು ಸ್ಕ್ರ್ಯಾಪ್ ಮಾಡುವುದು ಇತ್ಯಾದಿ

ನಿಮ್ಮ Google ಖಾತೆಯನ್ನು ತಪ್ಪು ಗ್ರಹಿಕೆಯಿಂದಾಗಿ ಅಮಾನತುಗೊಳಿಸಲಾಗಿದೆ ಅಥವಾ ಕೊನೆಗೊಳಿಸಲಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.

ಖಂಡಿತವಾಗಿ, ನಮ್ಮ ಸೇವೆಗಳ ಬಳಕೆಯನ್ನು ನೀವು ಯಾವಾಗ ಬೇಕಾದರೂ ನಿಲ್ಲಿಸಬಹುದು. ನೀವು ಸೇವೆಯ ಬಳಕೆಯನ್ನು ನಿಲ್ಲಿಸಿದರೆ, ನಾವು ಅದರ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತೇವೆ, ಇದರಿಂದಾಗಿ ನಾವು ನಮ್ಮ ಸೇವೆಗಳನ್ನು ಸುಧಾರಿಸಲು ಮುಂದುವರಿಸಬಹುದು.

ವಿವಾದಗಳು, ಆಡಳಿತಾತ್ಮಕ ಕಾನೂನು ಮತ್ತು ನ್ಯಾಯಾಲಯ ಪ್ರಕರಣಗಳನ್ನು ಬಗೆಹರಿಸುವುದು

Google ಅನ್ನು ಸಂಪರ್ಕಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಂಪರ್ಕದ ಪುಟಕ್ಕೆ ಭೇಟಿ ನೀಡಿ.

ಈ ನಿಯಮಗಳು, ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು, ಅಥವಾ ಯಾವುದೇ ಸಂಬಂಧಿತ ಸೇವೆಗಳಿಂದ ಉದ್ಭವಿಸುವ ಅಥವಾ ಅವುಗಳಿಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು, ಕಾನೂನು ನಿಯಮಗಳ ಸಂಘರ್ಷವನ್ನು ಲೆಕ್ಕಿಸದೆ ಕ್ಯಾಲಿಫೋರ್ನಿಯಾ ಕಾನೂನು ನಿಯಂತ್ರಿಸುತ್ತದೆ. ಈ ವಿವಾದಗಳನ್ನು USA ಗೆ ಸೇರಿದ ಕ್ಯಾಲಿಫೋರ್ನಿಯಾದಲ್ಲಿರುವ ಸಾಂತಾ ಕ್ಲಾರಾ ಕೌಂಟಿಯಲ್ಲಿನ ಸಂಯುಕ್ತ ಅಥವಾ ರಾಜ್ಯ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ಪರಿಹರಿಸಲಾಗುವುದು ಮತ್ತು ಆ ನ್ಯಾಯಾಲಯಗಳಲ್ಲಿನ ವೈಯಕ್ತಿಕ ನ್ಯಾಯವ್ಯಾಪ್ತಿಗೆ ನೀವು ಮತ್ತು Google ಸಮ್ಮತಿಸುತ್ತೀರಿ.

ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿಅನ್ವಯವಾಗುವ ಮಟ್ಟಿಗೆ ಸ್ಥಳೀಯ ಕಾನೂನು ಕೆಲವು ವಿವಾದಗಳನ್ನು ಪರಿಹರಿಸುವುದನ್ನು ತಡೆಯುತ್ತದೆ, ನಂತರದಲ್ಲಿ ನೀವು ಆ ವಿವಾದಗಳನ್ನು ನಿಮ್ಮ ಸ್ಥಳೀಯ ನ್ಯಾಯಾಲಯಗಳಲ್ಲಿ ಸಲ್ಲಿಸಬಹುದು. ಅಂತೆಯೇ, ಈ ವಿವಾದಗಳನ್ನು ಪರಿಹರಿಸಲು ನಿಮ್ಮ ಸ್ಥಳೀಯ ನ್ಯಾಯಾಲಯವು ಕ್ಯಾಲಿಫೋರ್ನಿಯಾ ಕಾನೂನನ್ನು ಅನ್ವಯಿಸುವುದನ್ನು ಸ್ಥಳೀಯ ಕಾನೂನು ತಡೆಯುತ್ತಿದ್ದರೆ, ನಂತರ ಈ ವಿವಾದಗಳನ್ನು ನಿಮ್ಮ ದೇಶ, ರಾಜ್ಯ ಅಥವಾ ಇತರ ವಾಸಸ್ಥಳದ ಸ್ಥಳೀಯ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ.

ಈ ಸೇವೆಗಳ ಕುರಿತು

ಕಾನೂನಿನ ಪ್ರಕಾರ, ಈ ಸೇವಾ ನಿಯಮಗಳಂತಹ ಒಪ್ಪಂದದಿಂದ ಸೀಮಿತಗೊಳಿಸಲಾಗದ ಕೆಲವು ಹಕ್ಕುಗಳನ್ನು ನೀವು ಹೊಂದಿದ್ದೀರಿ. ಈ ನಿಯಮಗಳು ಯಾವುದೇ ರೀತಿಯಿಂದಲೂ ಆ ಹಕ್ಕುಗಳನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿಲ್ಲ.

ನಿಮ್ಮ ಮತ್ತು Google ನಡುವಿನ ಸಂಬಂಧವನ್ನು ಈ ನಿಯಮಗಳು ವಿವರಿಸುತ್ತವೆ. ಈ ನಿಯಮಗಳ ಅಡಿಯಲ್ಲಿ ಆ ಸಂಬಂಧದಿಂದಾಗಿ ಇತರರು ಪ್ರಯೋಜನ ಪಡೆದರೂ ಸಹ, ಅವರು ಇತರ ಜನರಿಗಾಗಿ ಅಥವಾ ಸಂಸ್ಥೆಗಳಿಗಾಗಿ ಯಾವುದೇ ಕಾನೂನು ಹಕ್ಕುಗಳನ್ನು ರಚಿಸುವುದಿಲ್ಲ.

ಈ ನಿಯಮಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದ ನಾವು ನಮ್ಮ ಸೇವೆಗಳಿಂದ ಉದಾಹರಣೆಗಳನ್ನು ಬಳಸಿದ್ದೇವೆ. ಆದರೆ ಪ್ರಸ್ತಾಪಿಸಲಾದ ಎಲ್ಲಾ ಸೇವೆಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು.

ಈ ನಿಯಮಗಳು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಜೊತೆಗೆ ಸಂಘರ್ಷಗೊಂಡರೆ, ಹೆಚ್ಚುವರಿ ನಿಯಮಗಳು ಆ ಸೇವೆಯನ್ನು ನಿಯಂತ್ರಿಸುತ್ತವೆ.

ನಿರ್ದಿಷ್ಟ ನಿಯಮವು ಮಾನ್ಯವಾಗಿಲ್ಲ ಅಥವಾ ಜಾರಿ ಮಾಡಲಾಗುವುದಿಲ್ಲ ಎಂದು ಸಾಬೀತಾದಲ್ಲಿ, ಇತರ ಯಾವುದೇ ನಿಯಮಗಳ ಮೇಲೆ ಅದು ಪರಿಣಾಮ ಬೀರುವುದಿಲ್ಲ.

ನೀವು ಈ ನಿಯಮಗಳು ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಅನುಸರಿಸದಿದ್ದರೆ ಮತ್ತು ನಾವು ತಕ್ಷಣವೇ ಕ್ರಮವನ್ನು ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಕ್ರಮ ತೆಗೆದುಕೊಳ್ಳುವಂತಹ ಯಾವುದೇ ಹಕ್ಕುಗಳನ್ನು ನಾವು ಬಿಟ್ಟುಕೊಡುತ್ತಿದ್ದೇವೆ ಎಂದಲ್ಲ.

ಈ ನಿಯಮಗಳು ಮತ್ತು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಮುಂದಿನ ಕಾರಣಗಳಿಗಾಗಿ ನಾವು ಅಪ್‌ಡೇಟ್ ಮಾಡಬಹುದು (1) ಹೊಸ ಸೇವೆಗಳು, ಫೀಚರ್‌ಗಳು, ತಂತ್ರಜ್ಞಾನಗಳು, ದರ ಅಥವಾ ಪ್ರಯೋಜನಗಳನ್ನು ಸೇರಿಸಿದಂತಹ (ಅಥವಾ ಹಳೆಯದ್ದನ್ನು ತೆಗೆದುಹಾಕಿದಾಗ) ಸಂದರ್ಭದಲ್ಲಿ, ನಮ್ಮ ಸೇವೆಗಳಲ್ಲಿನ ಬದಲಾವಣೆಯನ್ನು ಅಥವಾ ನಾವು ವ್ಯಾಪಾರವನ್ನು ಹೇಗೆ ಮಾಡುತ್ತೇವೆ ಎಂಬುದನ್ನು ತೋರಿಸಲು, (2) ಕಾನೂನು, ನಿಯಂತ್ರಣ ಅಥವಾ ಭದ್ರತಾ ಕಾರಣಗಳಿಗಾಗಿ, ಅಥವಾ (3) ನಿಂದನೆ ಅಥವಾ ಹಾನಿಯನ್ನು ತಡೆಯಲು.

ನಾವು ಈ ನಿಯಮಗಳನ್ನು ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಭೌತಿಕವಾಗಿ ಬದಲಾಯಿಸಿದರೆ, ನಾವು ನಿಮಗೆ ಸಮಂಜಸವಾದ ಮುಂಗಡ ಸೂಚನೆಯನ್ನು ಮತ್ತು ಬದಲಾವಣೆಗಳನ್ನು ಪರಿಶೀಲಿಸುವ ಅವಕಾಶವನ್ನು ಒದಗಿಸುತ್ತೇವೆ, ಹೊರತುಪಡಿಸಿ (1) ನಾವು ಹೊಸ ಸೇವೆ ಅಥವಾ ವೈಶಿಷ್ಟ್ಯವನ್ನು ಪ್ರಾರಂಭಿಸಿದಾಗ ಅಥವಾ (2) ತುರ್ತು ನಡೆಯುತ್ತಿರುವ ನಿಂದನೆಯನ್ನು ತಡೆಗಟ್ಟುವುದು ಅಥವಾ ಕಾನೂನು ಅವಶ್ಯಕತೆಗಳಿಗೆ ಪ್ರತಿಕ್ರಿಯಿಸುವುದು ಮುಂತಾದ ಸಂದರ್ಭಗಳು. ನೀವು ಹೊಸ ನಿಯಮಗಳಿಗೆ ಸಮ್ಮತಿಸದಿದ್ದರೆ, ನಿಮ್ಮ ವಿಷಯವನ್ನು ನೀವು ತೆಗೆದುಹಾಕಬೇಕು ಮತ್ತು ಸೇವೆಗಳನ್ನು ಬಳಸುವುದನ್ನು ನಿಲ್ಲಿಸಬೇಕು. ನಿಮ್ಮ Google ಖಾತೆಯನ್ನು ಮುಚ್ಚುವ ನೀವು ಯಾವಾಗ ಬೇಕಾದರೂ ನಮ್ಮ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಬಹುದು..

ವ್ಯಾಖ್ಯಾನಗಳು

ಅಫಿಲಿಯೇಟ್

Google ಕಂಪೆನಿಗಳ ಗುಂಪಿಗೆ ಸೇರಿದ ಒಂದು ಘಟಕ, ಅಂದರೆ Google LLC ಮತ್ತು ಅದರ ಅಧೀನ ಸಂಸ್ಥೆಗಳು, EU ನಲ್ಲಿ ಗ್ರಾಹಕ ಸೇವೆಗಳನ್ನು ಒದಗಿಸುವ ಕೆಳಗಿನ ಕಂಪನಿಗಳೂ ಸೇರಿದಂತೆ: Google Ireland Limited, Google Commerce Ltd, and Google Dialer Inc.

ಮೂಲ ಕೃತಿಯನ್ನು 1) ಇತರರು ಹೇಗೆ ಬಳಸಬಹುದು ಮತ್ತು 2) ಬಳಸಬಹುದೇ ಎಂಬುದನ್ನು ಮೂಲ ಕೃತಿಯ (ಬ್ಲಾಗ್ ಪೋಸ್ಟ್, ಫೋಟೋ, ಅಥವಾ ವೀಡಿಯೊ) ರಚನೆಕಾರರಿಗೆ ನಿರ್ಧರಿಸಲು ಅನುಮತಿಸುವ ಒಂದು ಕಾನೂನುಬದ್ಧ ಹಕ್ಕು.

ಗ್ರಾಹಕರು

ತಮ್ಮ ಟ್ರೇಡ್, ವ್ಯಾಪಾರ, ಕ್ರಾಫ್ಟ್ ಅಥವಾ ವೃತ್ತಿಯ ಹೊರತಾಗಿ ವೈಯಕ್ತಿಕ, ವಾಣಿಜ್ಯೇತರ ಉದ್ದೇಶಗಳಿಗಾಗಿ Google ಸೇವೆಗಳನ್ನು ಬಳಸುವ ಒಬ್ಬ ವ್ಯಕ್ತಿ. (ವ್ಯಾಪಾರ ಬಳಕೆದಾರರನ್ನು ನೋಡಿ)

ಟ್ರೇಡ್‌ಮಾರ್ಕ್‌

ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸರಕುಗಳನ್ನು ಅಥವಾ ಸೇವೆಗಳನ್ನು ಒಬ್ಬರಿಂದೊಬ್ಬರಿಗೆ ಪ್ರತ್ಯೇಕಿಸಲು ಸಮರ್ಥವಾಗಿವೆ.

ದೇಶದ ಆವೃತ್ತಿ

ನೀವು Google ಖಾತೆಯನ್ನು ಹೊಂದಿದ್ದರೆ, ನಿಮ್ಮ ಖಾತೆಯನ್ನು ನಾವು ದೇಶದ (ಅಥವಾ ಪ್ರದೇಶ) ಜೊತೆಗೆ ಸಂಯೋಜಿಸುತ್ತೇವೆ, ಇದರಿಂದ ನಾವು ಕೆಳಗಿನವುಗಳ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು:

  • ನಿಮಗೆ ಸೇವೆಗಳನ್ನು ಒದಗಿಸುವ ಮತ್ತು ನೀವು ಸೇವೆಗಳನ್ನು ಬಳಸಿದಂತೆಲ್ಲಾ ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ Google ನ ಅಫಿಲಿಯೇಟ್
  • ನಿಯಮಗಳ ಆವೃತ್ತಿಯು ನಮ್ಮ ಸಂಬಂಧವನ್ನು ನಿಯಂತ್ರಿಸುತ್ತದೆ

ನೀವು ಸೈನ್ ಔಟ್ ಮಾಡಿದಾಗ, ನೀವು Google ಸೇವೆಗಳನ್ನು ಯಾವ ಸ್ಥಳದಲ್ಲಿ ಬಳಸುತ್ತಿರುವಿರಿ ಎಂಬುದರ ಆಧಾರದ ಮೇಲೆ ನಿಮ್ಮ ದೇಶದ ಆವೃತ್ತಿಯನ್ನು ನಿರ್ಧರಿಸಲಾಗುತ್ತದೆ. ನೀವು ಖಾತೆಯನ್ನು ಹೊಂದಿದ್ದರೆ, ಅದರ ಜೊತೆಗೆ ಸಂಯೋಜಿತವಾಗಿರುವ ದೇಶವನ್ನು ನೋಡಲು ನೀವು ಸೈನ್ ಇನ್ ಮಾಡಬಹುದು ಮತ್ತು ಈ ನಿಯಮಗಳನ್ನು ವೀಕ್ಷಿಸಬಹುದು.

ನಷ್ಟ ಪರಿಹಾರ ಅಥವಾ ಪರಿಹಾರ

ಮೊಕದ್ದಮೆಗಳಂತಹ ಕಾನೂನು ಕ್ರಮಗಳ ಸಹಾಯದಿಂದ ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದಾಗಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ವ್ಯಕ್ತಿ ಅಥವಾ ಸಂಸ್ಥೆಯ ಒಪ್ಪಂದದ ಬಾಧ್ಯತೆ.

ನಿಮ್ಮ ವಿಷಯ

ನಮ್ಮ ಸೇವೆಗಳನ್ನು ಬಳಸಿಕೊಂಡು Google ನೊಂದಿಗೆ ನೀವು ಬರೆಯುವ, ಅಪ್‌ಲೋಡ್ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ, ಸ್ವೀಕರಿಸುವ ಅಥವಾ ಹಂಚಿಕೊಳ್ಳುವ ವಿಷಯಗಳು, ಉದಾಹರಣೆಗೆ:

  • ನೀವು ರಚಿಸುವ ಡಾಕ್‌ಗಳು, ಶೀಟ್‌ಗಳು ಮತ್ತು ಸ್ಲೈಡ್‌ಗಳು
  • Blogger ಮೂಲಕ ನೀವು ಅಪ್‌ಲೋಡ್ ಮಾಡುವ ಬ್ಲಾಗ್ ಪೋಸ್ಟ್‌ಗಳು
  • Maps ನಲ್ಲಿ ನೀವು ಸಲ್ಲಿಸಿದ ವಿಮರ್ಶೆಗಳು
  • ಡ್ರೈವ್‌ನಲ್ಲಿ ನೀವು ಸಂಗ್ರಹಿಸಿದ ವೀಡಿಯೊಗಳು
  • Gmail ಮೂಲಕ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು
  • ಫೋಟೋಗಳು ಮೂಲಕ ಸ್ನೇಹಿತರ ಜೊತೆಗೆ ನೀವು ಹಂಚಿಕೊಳ್ಳುವ ಚಿತ್ರಗಳು
  • ನೀವು Google ಜೊತೆಗೆ ಹಂಚಿಕೊಳ್ಳುವ ಪ್ರಯಾಣದ ರೂಪುರೇಷೆಗಳು

ಬಾಧ್ಯಸ್ಥಿಕೆ

ಯಾವುದೇ ರೀತಿಯ ಕಾನೂನು ದಾವೆಯಿಂದ ಉಂಟಾಗುವ ನಷ್ಟಗಳು, ಆ ದಾವೆ ಒಪ್ಪಂದ, ಟಾರ್ಟ್‌ (ನಿರ್ಲಕ್ಷ್ಯವೂ ಸೇರಿದಂತೆ), ಅಥವಾ ಇತರ ಕಾರಣವನ್ನು ಆಧರಿಸಿರಬಹುದು ಮತ್ತು ಆ ನಷ್ಟಗಳನ್ನು ಸಮಂಜಸವಾಗಿ ನಿರೀಕ್ಷಿಸಿರಬಹುದು ಅಥವಾ ಪೂರ್ವಭಾವಿಯಾಗಿ ತಿಳಿದಿರಬಹುದು ಅಥವಾ ಇಲ್ಲದಿರಬಹುದು.

ಬೌದ್ಧಿಕ ಆಸ್ತಿ ಹಕ್ಕುಗಳು (IP ಹಕ್ಕುಗಳು)

ಆವಿಷ್ಕಾರಗಳು (ಸ್ವಾಮ್ಯದ ಹಕ್ಕುಗಳು); ಸಾಹಿತ್ಯ ಮತ್ತು ಕಲಾತ್ಮಕ ಕೃತಿಗಳು (ಹಕ್ಕುಸ್ವಾಮ್ಯ); ವಿನ್ಯಾಸಗಳು (ವಿನ್ಯಾಸ ಹಕ್ಕುಗಳು); ಮತ್ತು ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳಂತಹ (ಟ್ರೇಡ್‌ಮಾರ್ಕ್‌ಗಳು) ವ್ಯಕ್ತಿಯ ಬುದ್ದಿಶಕ್ತಿಯಿಂದ ಕಂಡುಹಿಡಿದ ಸೃಷ್ಟಿಗಳ ಮೇಲಿನ ಹಕ್ಕುಗಳು. IP ಹಕ್ಕುಗಳು ನಿಮಗೆ, ಬೇರೊಬ್ಬ ವ್ಯಕ್ತಿಗೆ ಅಥವಾ ಸಂಸ್ಥೆಯೊಂದಕ್ಕೆ ಸೇರಿರಬಹುದು.

ವಾರೆಂಟಿ

ಒಂದು ಉತ್ಪನ್ನ ಅಥವಾ ಸೇವೆಯು ಒಂದು ನಿರ್ದಿಷ್ಟ ಮಾನದಂಡದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆ.

ವ್ಯಾಪಾರ ಬಳಕೆದಾರರು

ಗ್ರಾಹಕರಲ್ಲದ (ಗ್ರಾಹಕರ ಹಾಗೆ ಕಾಣುವ) ವ್ಯಕ್ತಿ ಅಥವಾ ಘಟಕ.

ಸಂಸ್ಥೆ

ಒಂದು ಕಾನೂನು ಘಟಕ (ಉದಾಹರಣೆಗೆ ನಿಗಮ, ಲಾಭರಹಿತ ಅಥವಾ ಶಾಲೆ) ಆದರೆ ಪ್ರತ್ಯೇಕ ವ್ಯಕ್ತಿಯಲ್ಲ.

ಸೇವೆಗಳು

ಈ ನಿಯಮಗಳಿಗೆ ಅನುಸಾರವಾಗಿರುವ Google ಸೇವೆಗಳು https://policies.google.com/terms/service-specific ನಲ್ಲಿ ಪಟ್ಟಿ ಮಾಡಲಾಗಿರುವ ಉತ್ಪನ್ನಗಳು ಮತ್ತು ಸೇವೆಗಳಾಗಿದ್ದು, ಇವುಗಳನ್ನು ಒಳಗೊಂಡಿವೆ:

  • Google ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾಹರಣೆಗೆ ಹುಡುಕಾಟ ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (Google Play ತರಹದ್ದು)
  • ಸಂಯೋಜಿತ ಸೇವೆಗಳು (ಉದಾ, ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು (ಉದಾಹರಣೆಗೆ Google Home)

ಹಕ್ಕುನಿರಾಕರಣೆ

ಇನ್ನೊಬ್ಬರ ಕಾನೂನು ಜವಾಬ್ದಾರಿಗಳನ್ನು ಸೀಮಿತಗೊಳಿಸುವ ಹೇಳಿಕೆ.

EU ವ್ಯಾಪಾರಕ್ಕೆ ಪ್ಲ್ಯಾಟ್‌ಫಾರ್ಮ್ ಕಾಯಿದೆ

ಆನ್‌ಲೈನ್ ಮಧ್ಯವರ್ತಿ ಸೇವೆಗಳ ವ್ಯಾಪಾರ ಬಳಕೆದಾರರಿಗಾಗಿ ನ್ಯಾಯಸಮ್ಮತ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ಕುರಿತಾದ ಕಾಯಿದೆ (EU) 2019/1150.

Google Apps
ಪ್ರಮುಖ ಮೆನು