ಇದು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ಪ್ರಸ್ತುತ ಆವೃತ್ತಿ ಅಥವಾ ಎಲ್ಲ ಹಿಂದಿನ ಆವೃತ್ತಿಗಳನ್ನು ವೀಕ್ಷಿಸಿ.

ಗೌಪ್ಯತಾ ನೀತಿ

ಕೊನೆಯ ಬಾರಿ ಮಾರ್ಪಡಿಸಿರುವುದು: 20 ಡಿಸೆಂಬರ್ 2013 (ಆರ್ಕೈವ್ ಮಾಡಲಾದ ಆವೃತ್ತಿಗಳನ್ನು ವೀಕ್ಷಿಸಿ)

ಮಾಹಿತಿಯನ್ನು ಹುಡುಕಲು ಮತ್ತು ಹಂಚಿಕೊಳ್ಳಲು, ಇತರರೊಂದಿಗೆ ಸಂವಹನ ನಡೆಸಲು ಅಥವಾ ಹೊಸ ವಿಷಯ ರಚಿಸಲು ನೀವು ನಮ್ಮ ಸೇವೆಗಳನ್ನು ಹತ್ತು ಹಲವು ರೀತಿಗಳಲ್ಲಿ ಬಳಸಿಕೊಳ್ಳಬಹುದು. ನೀವು ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಾಗ, ಉದಾಹರಣೆಗೆ ಒಂದು Google ಖಾತೆ ರಚಿಸುವುದು, ಇತ್ಯಾದಿ – ನಿಮಗೆ ಹೆಚ್ಚು ಸಂಬಂಧಿತ ಅಥವಾ ಪ್ರಸ್ತುತ ಹುಡುಕಾಟ ಫಲಿತಾಂಶಗಳು ಹಾಗೂ ಜಾಹೀರಾತುಗಳನ್ನು ತೋರಿಸಲು, ಇತರ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ನಿಮಗೆ ಸಹಾಯ ಮಾಡಲು, ಇತರರೊಂದಿಗೆ ತ್ವರಿತಗತಿಯಲ್ಲಿ ಹಾಗೂ ಸುಲಭವಾಗಿ ಹಂಚಿಕೊಳ್ಳುವುದು ಹೀಗೆ ಇತ್ಯಾದಿ ಸೇವೆಗಳನ್ನು ನಾವು ಇನ್ನಷ್ಟು ಉತ್ತಮಗೊಳಿಸುತ್ತೇವೆ. ನಮ್ಮ ಸೇವೆಗಳನ್ನು ನೀವು ಬಳಸಿದಂತೆಲ್ಲಾ, ನಿಮ್ಮ ಮಾಹಿತಿಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಹಾಗೂ ನಿಮ್ಮ ಗೌಪ್ಯತೆಯನ್ನು ನೀವು ಯಾವೆಲ್ಲಾ ವಿಧಾನಗಳ ಮೂಲಕ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂಬುದು ನಿಮಗೆ ಸ್ಪಷ್ಟವಾಗಬೇಕು ಎಂಬುದು ನಮ್ಮ ಅಭಿಲಾಷೆ.

ನಮ್ಮ ಗೌಪ್ಯತೆ ನೀತಿ ಈ ಎಲ್ಲಾ ಸಂಗತಿಗಳನ್ನು ವಿವರಿಸುತ್ತದೆ:

  • ನಾವು ಯಾವ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತೇವೆ ಮತ್ತು ಅದನ್ನು ಏಕೆ ಸಂಗ್ರಹಿಸಿಕೊಳ್ಳುತ್ತೇವೆ.
  • ನಾವು ಆ ಮಾಹಿತಿಯನ್ನು ಹೇಗೆ ಬಳಸುತ್ತೇವೆ.
  • ಮಾಹಿತಿಯನ್ನು ಬಳಸುವುದು ಹಾಗೂ ನವೀಕರಿಸುವುದು ಹೇಗೆ ಎಂಬುದು ಸೇರಿದಂತೆ, ನಾವು ಒದಗಿಸುವ ಆಯ್ಕೆಗಳು.

ನಾವು ಇದನ್ನು ಆದಷ್ಟು ಸರಳವಾಗಿಸಲು ಪ್ರಯತ್ನಿಸಿದ್ದೇವೆ, ಆದರೆ ಕುಕೀಗಳು, IP ವಿಳಾಸಗಳು, ಪಿಕ್ಸೆಲ್ ಟ್ಯಾಗ್‌ಗಳು ಮತ್ತು ಬ್ರೌಸರ್‌ಗಳಂತಹ ಪದಗಳ ಬಗ್ಗೆ ನಿಮಗೆ ಪರಿಚಯವಿರದಿದ್ದರೆ, ಮೊದಲು ಈ ಪ್ರಮುಖ ಪದಗಳ ಕುರಿತು ಓದಿಕೊಳ್ಳಿ. ನಿಮ್ಮ ಗೌಪ್ಯತೆಯು Google ಗೆ ತುಂಬಾ ಮುಖ್ಯ, ಹೀಗಾಗಿ ನೀವು Google ಗೆ ಹೊಸಬರಾಗಿರಲೀ ಅಥವಾ ದೀರ್ಘ-ಕಾಲದ ಬಳಕೆದಾರರರಾಗಿರಲೀ, ನಮ್ಮ ಅಭ್ಯಾಸಗಳ ಕುರಿತು ತಿಳಿದುಕೊಳ್ಳಲು ಕೊಂಚ ಸಮಯಾವಕಾಶ ತೆಗೆದುಕೊಳ್ಳಿ – ಮತ್ತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ನಮ್ಮನ್ನು ಸಂಪರ್ಕಿಸಿ

ನಾವು ಸಂಗ್ರಹಿಸುವ ಮಾಹಿತಿ

ನೀವು ಯಾವ ಭಾಷೆಯನ್ನು ಮಾತನಾಡುವಿರಿ ಎಂಬ ರೀತಿಯ ಮೂಲ ಸಂಗತಿಗಳನ್ನು ತಿಳಿದುಕೊಳ್ಳುವುದರ ಮೂಲಕ, ನೀವು ಕಂಡುಕೊಳ್ಳುವ ಅತ್ಯಂತ ಉಪಯುಕ್ತ ಜಾಹೀರಾತುಗಳು ಅಥವಾ ಆನ್‌ಲೈನ್‌ನಲ್ಲಿ ನಿಮಗೆ ಹೆಚ್ಚು ಪ್ರಿಯವಾಗಿರುವ ವ್ಯಕ್ತಿಗಳಂತಹ ಹೆಚ್ಚು ಜಟಿಲ ಸಂಗತಿಗಳಿಗಾಗಿ – ನಮ್ಮ ಎಲ್ಲಾ ಬಳಕೆದಾರರಿಗಾಗಿ ಉತ್ತಮ ಸೇವೆಗಳನ್ನು ಒದಗಿಸಲು ನಾವು ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತೇವೆ.

ನಾವು ಮಾಹಿತಿಯನ್ನು ಎರಡು ರೀತಿಗಳಲ್ಲಿ ಸಂಗ್ರಹಿಸಿಕೊಳ್ಳುತ್ತೇವೆ:

  • ನೀವು ನಮಗೆ ಒದಗಿಸುವ ಮಾಹಿತಿ. ಉದಾಹರಣೆ, ನಮ್ಮ ಅನೇಕ ಸೇವೆಗಳಿಗಾಗಿ ನೀವು Google ಖಾತೆಗೆ ಸೈನ್ ಅಪ್ ಮಾಡಬೇಕಾಗುತ್ತದೆ. ಹಾಗೆ ಮಾಡಿದಾಗ, ನಾವು ನಿಮ್ಮ ಹೆಸರು, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಅಥವಾ ಕ್ರೆಡಿಟ್ ಕಾರ್ಡ್ ರೀತಿಯ ವೈಯಕ್ತಿಕ ಮಾಹಿತಿ ಗಾಗಿ ನಿಮ್ಮನ್ನು ಕೇಳುತ್ತೇವೆ. ನಾವು ಪೂರೈಸುವ ಹಂಚಿಕೆ ವೈಶಿಷ್ಟ್ಯಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ನೀವು ಬಯಸಿದರೆ, ನಿಮ್ಮ ಹೆಸರು ಮತ್ತು ಫೋಟೋವನ್ನು ಹೊಂದಿರುವ, ಸಾರ್ವಜನಿಕವಾಗಿ ಗೋಚರಿಸುವ Google ಪ್ರೊಫೈಲ್ ರಚಿಸುವಂತೆ ನಿಮ್ಮನ್ನು ನಾವು ಕೇಳಿಕೊಳ್ಳಬಹುದು.

  • ನಮ್ಮ ಸೇವೆಗಳ ನಿಮ್ಮ ಬಳಕೆಯಿಂದ ನಾವು ಪಡೆದುಕೊಳ್ಳುವ ಮಾಹಿತಿ. ನಮ್ಮ ಜಾಹೀರಾತು ಸೇವೆಗಳನ್ನು ಬಳಸುವ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದಾಗ ಅಥವಾ ನೀವು ವೀಕ್ಷಿಸುವ ನಮ್ಮ ಜಾಹೀರಾತುಗಳು ಹಾಗೂ ವಿಷಯಗಳು ಹಾಗೂ ಅವುಗಳ ಜೊತೆಗೆ ಸಂವಹನ ನಡೆಸುವ ರೀತಿಯ, ನೀವು ಬಳಸುವ ಸೇವೆಗಳು ಹಾಗೂ ಅವುಗಳನ್ನು ನೀವು ಹೇಗೆ ಬಳಸಿಕೊಳ್ಳುವಿರಿ ಎಂಬುದರ ಕುರಿತ ಮಾಹಿತಿಯನ್ನು ನಾವು ಸಂಗ್ರಹಿಸಿಕೊಳ್ಳಬಹುದು. ಈ ಮಾಹಿತಿಯಲ್ಲಿ ಇದೂ ಒಳಗೊಂಡಿರುತ್ತದೆ:

    • ಸಾಧನ ಮಾಹಿತಿ

      ನಾವು ಸಾಧನದ ನಿರ್ದಿಷ್ಟ ಮಾಹಿತಿಯನ್ನೂ ಸಂಗ್ರಹಿಸಿಕೊಳ್ಳಬಹುದು (ಅಂದರೆ ನಿಮ್ಮ ಹಾರ್ಡ್‌ವೇರ್ ಮಾದರಿ, ಆಪರೇಟಿಂಗ್ ಸಿಸ್ಟಂ ಆವೃತ್ತಿ, ಅನನ್ಯ ಸಾಧನ ಗುರುತಿಸುವಿಕೆಗಳು ಮತ್ತು ಫೋನ್ ಸಂಖ್ಯೆಯನ್ನು ಒಳಗೊಂಡಿರುವ ಮೊಬೈಲ್ ನೆಟ್‌ವರ್ಕ್ ಮಾಹಿತಿ). ನಿಮ್ಮ ಸಾಧನದ ಗುರುತಿಸುವಿಕೆಗಳು ಮತ್ತು ಫೋನ್ ಸಂಖ್ಯೆಯನ್ನು ನಿಮ್ಮ Google ಖಾತೆಯ ಜೊತೆಗೆ Google ಸಂಯೋಜಿಸಬಹುದು.

    • ಲಾಗ್ ಮಾಹಿತಿ

      ನಮ್ಮ ಸೇವೆಗಳನ್ನು ನೀವು ಬಳಸುವಾಗ ಅಥವಾ Google ಒದಗಿಸಿರುವ ಮಾಹಿತಿಯನ್ನು ವೀಕ್ಷಿಸುವಾಗ, ಸರ್ವರ್ ಲಾಗ್‌ಗಳಲ್ಲಿ ನಾವು ಸ್ವಯಂಚಾಲಿತವಾಗಿ ಕೆಲವು ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬಹುದು ಮತ್ತು ಅದನ್ನು ಶೇಖರಿಸಿಡಬಹುದು. ಇದನ್ನು ಒಳಗೊಂಡಿರಬಹುದು:

      • ನಮ್ಮ ಸೇವೆಗಳನ್ನು ನೀವು ಹೇಗೆ ಬಳಸಿರುವಿರಿ ಎಂಬುದರ ಕುರಿತ ವಿವರಗಳು, ಅಂದರೆ ನಿಮ್ಮ ಹುಡುಕಾಟದ ಪ್ರಶ್ನೆಗಳು.
      • ನಿಮ್ಮ ಫೋನ್ ಸಂಖ್ಯೆ, ಕರೆ ಮಾಡುವ-ವ್ಯಕ್ತಿಯ ಸಂಖ್ಯೆ, ಫಾರ್ವರ್ಡಿಂಗ್ ಸಂಖ್ಯೆಗಳು, ಕರೆಗಳ ಸಮಯ ಮತ್ತು ದಿನಾಂಕ, ಕರೆಗಳ ಕಾಲಾವಧಿ, SMS ರೂಟಿಂಗ್ ಮಾಹಿತಿ ಮತ್ತು ಕರೆಗಳ ಪ್ರಕಾರದಂತಹ ದೂರವಾಣಿ ಲಾಗ್‌ ಮಾಹಿತಿ.
      • ಇಂಟರ್ನೆಟ್ ಪ್ರೊಟೋಕಾಲ್ ವಿಳಾಸ.
      • ಕ್ರ್ಯಾಶ್‌ಗಳು, ಸಿಸ್ಟಂ ಚಟುವಟಿಕೆ, ಹಾರ್ಡ್‌ವೇರ್ ಸೆಟ್ಟಿಂಗ್‌ಗಳು, ಬ್ರೌಸರ್ ಪ್ರಕಾರ, ಬ್ರೌಸರ್ ಭಾಷೆ, ನಿಮ್ಮ ವಿನಂತಿಯ ದಿನಾಂಕ ಮತ್ತು ಸಮಯ ಹಾಗೂ ಉಲ್ಲೇಖ URL ರೀತಿಯ ಸಾಧನದ ಈವೆಂಟ್ ಮಾಹಿತಿ.
      • ನಿಮ್ಮ ಬ್ರೌಸರ್ ಮಾಹಿತಿ ಅಥವಾ ನಿಮ್ಮ Google ಖಾತೆಯನ್ನು ಅನನ್ಯವಾಗಿ ಗುರುತಿಸುವಂತಹ ಕುಕೀಗಳು.
    • ಸ್ಥಳದ ಮಾಹಿತಿ

      ನೀವು ಸ್ಥಳ-ಸಕ್ರಿಯಗೊಳಿಸಿರುವ Google ಸೇವೆಯನ್ನು ಬಳಸುವಾಗ, ಮೊಬೈಲ್ ಸಾಧನದ ಮೂಲಕ ಕಳುಹಿಸಿರುವ GPS ಸಂಕೇತಗಳ ರೀತಿಯಲ್ಲಿ ನಿಮ್ಮ ವಾಸ್ತವಿಕ ಸ್ಥಳವನ್ನು ನಾವು ಸಂಗ್ರಹಿಸಿಕೊಳ್ಳಬಹುದು ಹಾಗೂ ಪ್ರಕ್ರಿಯೆಗೊಳಿಸಬಹುದು. ಹಾಗೆಯೇ, ಸ್ಥಳವನ್ನು ಪತ್ತೆಹಚ್ಚಲು ನಾವು ಹಲವಾರು ತಂತ್ರಜ್ಞಾನಗಳನ್ನು ಬಳಸಬಹುದು. ಅಂದರೆ, ಸಮೀಪದ Wi-Fi ಪ್ರವೇಶ ಕೇಂದ್ರಗಳು ಮತ್ತು ಸೆಲ್ ಟವರ್‌ಗಳ ಕುರಿತ ಮಾಹಿತಿಯನ್ನು ಒದಗಿಸುವಂತಹ ನಿಮ್ಮ ಸಾಧನದಿಂದ ಪಡೆದ ಸೆನ್ಸಾರ್ ಡೇಟಾ.

    • ಅನನ್ಯ ಅಪ್ಲಿಕೇಶನ್ ಸಂಖ್ಯೆಗಳು

      ಕೆಲವು ಸೇವೆಗಳು ಅನನ್ಯ ಅಪ್ಲಿಕೇಶನ್ ಸಂಖ್ಯೆಯನ್ನು ಹೊಂದಿರುತ್ತವೆ. ನೀವು ಆ ಸೇವೆಯನ್ನು ಸ್ಥಾಪನೆ ಅಥವಾ ಅಸ್ಥಾಪನೆ ಮಾಡಿದಾಗ ಇಲ್ಲವೇ ಆ ಸೇವೆಯು ಕಾಲಕ್ರಮೇಣ ಸ್ವಯಂಚಾಲಿತ ನವೀಕರಣಗಳಿಗಾಗಿ ನಮ್ಮ ಸರ್ವರ್‌ಗಳನ್ನು ಸಂಪರ್ಕಿಸಿದಾಗ, ಈ ಸಂಖ್ಯೆ ಮತ್ತು ನಿಮ್ಮ ಸ್ಥಾಪನೆಯ ಕುರಿತ ಮಾಹಿತಿಯನ್ನು (ಉದಾಹರಣೆಗೆ, ಆಪರೇಟಿಂಗ್ ಸಿಸ್ಟಂ ಪ್ರಕಾರ ಮತ್ತು ಅಪ್ಲಿಕೇಶನ್ ಆವೃತ್ತಿ ಸಂಖ್ಯೆ) Google ಗೆ ಕಳುಹಿಸಲಾಗುತ್ತದೆ.

    • ಸ್ಥಳೀಯ ಸಂಗ್ರಹಣೆ

      ನಾವು ಬ್ರೌಸರ್ ವೆಬ್ ಸಂಗ್ರಹಣೆ (HTML 5 ಸೇರಿದಂತೆ) ಮತ್ತು ಅಪ್ಲಿಕೇಶನ್ ಡೇಟಾ ಸಂಗ್ರಹಗಳಂತಹ ಕಾರ್ಯವಿಧಾನಗಳನ್ನು ಬಳಸಿಕೊಂಡು ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬಹುದು (ವೈಯಕ್ತಿಕ ಮಾಹಿತಿ ಸೇರಿದಂತೆ) ಹಾಗೂ ಸ್ಥಳೀಯವಾಗಿ ನಿಮ್ಮ ಸಾಧನದಲ್ಲಿ ಶೇಖರಿಸಿಡಬಹುದು.

    • ಕುಕೀಗಳು ಮತ್ತು ಅನಾಮಧೇಯ ಗುರುತಿಸುವಿಕೆಗಳು

      ನೀವು Google ಸೇವೆಗೆ ಭೇಟಿ ನೀಡಿದಾಗ, ಮಾಹಿತಿಯನ್ನು ಸಂಗ್ರಹಿಸಲು ಮತ್ತು ಶೇಖರಿಸಿಕೊಳ್ಳಲು ನಾವು ವಿವಿಧ ತಂತ್ರಜ್ಞಾನಗಳನ್ನು ಬಳಸುತ್ತೇವೆ ಮತ್ತು ನಿಮ್ಮ ಸಾಧನಕ್ಕೆ ಒಂದು ಅಥವಾ ಅದಕ್ಕಿಂತ ಹೆಚ್ಚು ಕುಕೀಗಳು ಅಥವಾ ಅನಾಮಧೇಯ ಗುರುತಿಸುವಿಕೆಗಳನ್ನು ಕಳುಹಿಸುವುದನ್ನು ಇದು ಒಳಗೊಂಡಿರಬಹುದು. ನಾವು ನಮ್ಮ ಪಾಲುದಾರರಿಗೆ ಪೂರೈಸುವ ಸೇವೆಗಳು ಅಂದರೆ ಜಾಹೀರಾತು ಸೇವೆಗಳು ಅಥವಾ ಇತರ ಸೈಟ್‌ಗಳಲ್ಲಿ ಕಾಣಿಸಿಕೊಳ್ಳುವ Google ವೈಶಿಷ್ಟ್ಯಗಳ ಮೂಲಕ ನೀವು ಸಂವಹನ ನಡೆಸಿದಾಗಲೂ ಸಹ ನಾವು ಕುಕೀಗಳು ಮತ್ತು ಅನಾಮಧೇಯ ಗುರುತಿಸುವಿಕೆಗಳನ್ನು ಬಳಸುತ್ತೇವೆ.

ನಾವು ಸಂಗ್ರಹಿಸುವ ಮಾಹಿತಿಯನ್ನು ಹೇಗೆ ಬಳಸಿಕೊಳ್ಳುತ್ತೇವೆ

ನಾವು ನಮ್ಮ ಎಲ್ಲಾ ಸೇವೆಗಳಿಂದ ಸಂಗ್ರಹಿಕೊಳ್ಳುವ ಮಾಹಿತಿಯನ್ನು ಆ ಸೇವೆಗಳನ್ನು ಒದಗಿಸಲು, ನಿರ್ವಹಿಸಲು, ಸಂರಕ್ಷಿಸಲು ಮತ್ತು ಅವುಗಳನ್ನು ಸುಧಾರಿಸಲು, ಹೊಸದನ್ನು ಅಭಿವೃದ್ಧಿಪಡಿಸಲು ಹಾಗೂ Google ಮತ್ತು ನಮ್ಮ ಬಳಕೆದಾರರನ್ನು ಸಂರಕ್ಷಿಸಲು ಬಳಸಿಕೊಳ್ಳುತ್ತೇವೆ. ಹಾಗೆಯೇ, ಹೆಚ್ಚು ಸಂಬಂಧಿತ ಹುಟುಕಾಟದ ಫಲಿತಾಂಶಗಳು ಮತ್ತು ಜಾಹೀರಾತುಗಳನ್ನು ನಿಮಗೆ ಒದಗಿಸುವ ರೀತಿಯಲ್ಲಿಯೇ – ಸೂಕ್ತವಾದ ವಿಷಯವನ್ನು ನಿಮಗೆ ಪೂರೈಸುವ ಸಲುವಾಗಿ ಈ ಮಾಹಿತಿಯನ್ನು ನಾವು ಬಳಸುತ್ತೇವೆ.

Google ಖಾತೆಯ ಅಗತ್ಯವಿರುವಂತಹ ನಾವು ಪೂರೈಸುವ ಎಲ್ಲಾ ಸೇವೆಗಳಾದ್ಯಂತ ನಿಮ್ಮ Google ಪ್ರೊಫೈಲ್‌ಗಾಗಿ ನೀವು ಒದಗಿಸಿರುವ ಹೆಸರನ್ನು ನಾವು ಬಳಸಬಹುದು. ಅಲ್ಲದೇ, ನಿಮ್ಮ Google ಖಾತೆಗೆ ಸಂಯೋಜಿತವಾಗಿರುವ ಹಿಂದಿನ ಹೆಸರುಗಳನ್ನು ಬದಲಿಸಬಹುದು. ಇದರಿಂದಾಗಿ ನೀವು ನಮ್ಮ ಎಲ್ಲಾ ಸೇವೆಗಳಾದ್ಯಂತ ನಿರಂತರವಾಗಿ ಕಾಣಿಸಿಕೊಳ್ಳುತ್ತೀರಿ. ಒಂದು ಇತರ ಬಳಕೆದಾರರು ಈಗಾಗಲೇ ನಿಮ್ಮ ಇಮೇಲ್ ಹೊಂದಿದ್ದರೆ, ನಾವು ನಿಮ್ಮ ಸಾರ್ವಜನಿಕವಾಗಿ ಗೋಚರಿಸುವ Google ಪ್ರೊಫೈಲ್ ಮಾಹಿತಿಯನ್ನು ಅಂದರೆ, ನಿಮ್ಮ ಹೆಸರು ಮತ್ತು ಫೋಟೋವನ್ನು ಅವರಿಗೆ ತೋರಿಸಬಹುದು.

ನೀವು Google ಸಂಪರ್ಕಿಸಿದಾಗ, ನೀವು ಎದುರಿಸಬಹುದಾದ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲು ನಿಮ್ಮ ಸಂವಹನದ ದಾಖಲೆಯನ್ನು ನಾವು ಇರಿಸಿಕೊಳ್ಳಬಹುದು. ನಮ್ಮ ಸೇವೆಗಳ ಕುರಿತು ನಿಮಗೆ ತಿಳಿಸುವ ಸಲುವಾಗಿ, ಅಂದರೆ ಮುಂಬರುವ ಬದಲಾವಣೆಗಳು ಅಥವಾ ಸುಧಾರಣೆಗಳ ಕುರಿತು ನಿಮಗೆ ತಿಳಿಸುವುದಕ್ಕಾಗಿ ನಿಮ್ಮ ಇಮೇಲ್ ವಿಳಾಸವನ್ನು ನಾವು ಬಳಸಬಹುದು.

ನಿಮ್ಮ ಬಳಕೆದಾರ ಅನುಭವವನ್ನು ಮತ್ತು ನಮ್ಮ ಸೇವೆಗಳ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸಲು ಕುಕೀಗಳು ಮತ್ತು ಪಿಕ್ಸೆಲ್ ಟ್ಯಾಗ್‌ಗಳ ರೀತಿಯ ಇತರ ತಂತ್ರಜ್ಞಾನಗಳಿಂದ ಸಂಗ್ರಹಿಸಿಕೊಂಡಿರುವ ಮಾಹಿತಿಯನ್ನು ನಾವು ಬಳಸುತ್ತೇವೆ. ಉದಾಹರಣೆಗೆ, ನಿಮ್ಮ ಭಾಷೆ ಆದ್ಯತೆಗಳನ್ನು ಉಳಿಸುವುದರಿಂದ, ನೀವು ಆದ್ಯತೆ ನೀಡುವ ಭಾಷೆಯಲ್ಲಿ ನಮ್ಮ ಸೇವೆಗಳನ್ನು ಗೋಚರಿಸುವಂತೆ ಮಾಡಲು ನಮಗೆ ಸಾಧ್ಯವಾಗುತ್ತದೆ. ನಿಮಗೆ ಸೂಕ್ತವಾದ ಜಾಹೀರಾತುಗಳನ್ನು ನಾವು ತೋರಿಸುತ್ತಿರುವಾಗ, ನಾವು ಜನಾಂಗ, ಧರ್ಮ, ಲೈಂಗಿಕ ಪ್ರಚೋದನೆ ಅಥವಾ ಆರೋಗ್ಯದಂತಹ ಸೂಕ್ಷ್ಮ ವರ್ಗಗಳೊಂದಿಗೆ ಕುಕೀ ಅಥವಾ ಅನಾಮಧೇಯ ಗುರುತಿಸುವಿಕೆಯನ್ನು ಸಂಯೋಜಿಸುವುದಿಲ್ಲ.

ಇತರ Google ಸೇವೆಗಳಿಂದ ವೈಯಕ್ತಿಕ ಮಾಹಿತಿ ಸೇರಿದಂತೆ, ಮಾಹಿತಿಯ ಜೊತೆಗೆ ಒಂದು ಸೇವೆಯ ಮೂಲಕ ವೈಯಕ್ತಿಕ ಮಾಹಿತಿಯನ್ನು ನಾವು ಸಂಯೋಜಿಸಬಹುದು – ಉದಾಹರಣೆಗೆ ನಿಮಗೆ ತಿಳಿದಿರುವ ಜನರೊಂದಿಗೆ ಸಂಗತಿಗಳನ್ನು ಹಂಚಿಕೊಳ್ಳುವುದನ್ನು ಸುಲಭಗೊಳಿಸಲು. ನಿಮ್ಮ ಆಯ್ಕೆಯ ಸಮ್ಮತಿ ಇಲ್ಲದ ಹೊರತು ವೈಯಕ್ತಿಕವಾಗಿ ಗುರುತಿಸಬಲ್ಲಂತಹ ಮಾಹಿತಿಯೊಂದಿಗೆ DoubleClick ಕುಕೀ ಮಾಹಿತಿಯನ್ನು ನಾವು ಸಂಯೋಜಿಸುವುದಿಲ್ಲ.

ಈ ಗೌಪ್ಯತಾ ನೀತಿಯಲ್ಲಿ ಹೊಂದಿಸದ ಹೊರತು ಬೇರೆ ಉದ್ದೇಶಕ್ಕಾಗಿ ಆ ಮಾಹಿತಿಯನ್ನು ಬಳಸುವ ಮೊದಲು ನಿಮ್ಮ ಸಮ್ಮತಿಯನ್ನು ನಾವು ಕೇಳುತ್ತೇವೆ.

Google ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿನ ನಮ್ಮ ಸರ್ವರ್‌ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಸಂಸ್ಕರಿಸುತ್ತದೆ. ನೀವು ವಾಸಿಸುತ್ತಿರುವ ದೇಶದ ಹೊರಗಿನ ಸರ್ವರ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸಂಸ್ಕರಿಸಬಹುದು.

ಪಾರದರ್ಶಕತೆ ಮತ್ತು ಆಯ್ಕೆ

ಜನರು ವಿಭಿನ್ನ ಗೌಪ್ಯತೆ ಆಲೋಚನೆಗಳನ್ನು ಹೊಂದಿರುತ್ತಾರೆ. ನಾವು ಸಂಗ್ರಹಿಸಿಕೊಳ್ಳುವ ಮಾಹಿತಿಯ ಕುರಿತು ಸ್ಪಷ್ಟವಾಗಿರುವುದೇ ನಮ್ಮ ಗುರಿಯಾಗಿದೆ, ಇದರಿಂದಾಗಿ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಕುರಿತು ಅರ್ಥಪೂರ್ಣ ಆಯ್ಕೆಗಳನ್ನು ನೀವು ಮಾಡಬಹುದಾಗಿದೆ. ಉದಾಹರಣೆಗೆ, ನೀವು:

ಹಾಗೆಯೇ, ನಮ್ಮ ಸೇವೆಗಳಿಗೆ ಸಂಬಂಧಿಸಿದ ಕುಕೀಗಳು ಸೇರಿದಂತೆ, ಎಲ್ಲಾ ಕುಕೀಗಳನ್ನು ನಿರ್ಬಂಧಿಸಲು ಅಥವಾ ನಾವು ಕುಕೀಯನ್ನು ಹೊಂದಿಸುತ್ತಿರುವಾಗ ಸೂಚಿಸಲು ನಿಮ್ಮ ಬ್ರೌಸರ್ ಅನ್ನು ನೀವು ಹೊಂದಿಸಬಹುದು. ಆದಾಗ್ಯೂ, ನಿಮ್ಮ ಕುಕೀಗಳು ನಿಷ್ಕ್ರಿಯಗೊಂಡಿದ್ದರೆ, ನಮ್ಮ ಕೆಲವು ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ನಿಮ್ಮ ಗಮನದಲ್ಲಿರಲಿ. ಉದಾಹರಣೆಗೆ, ನಾವು ನಿಮ್ಮ ಭಾಷೆಯ ಪ್ರಾಶಸ್ತ್ಯಗಳನ್ನು ಮರೆತುಬಿಡಬಹುದು.

ನೀವು ಹಂಚಿಕೊಳ್ಳುವ ಮಾಹಿತಿ

ನಮ್ಮ ಹಲವಾರು ಸೇವೆಗಳು ನಿಮ್ಮ ಮಾಹಿತಿಯನ್ನು ಇತರರ ಜೊತೆಗೆ ಹಂಚಿಕೊಳ್ಳಲು ನಿಮಗೆ ಅವಕಾಶ ನೀಡುತ್ತವೆ. ನೀವು ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗ Google ಸಹ ಸೇರಿದಂತೆ, ಹುಡುಕಾಟ ಎಂಜಿನ್‌ಗಳ ಮೂಲಕ ಅದನ್ನು ಸೂಚಿಸಲು ಸಾಧ್ಯವಾಗುತ್ತದೆ ಎಂಬುದು ನೆನಪಿನಲ್ಲಿರಲಿ. ನಮ್ಮ ಸೇವೆಗಳು ನಿಮ್ಮ ವಿಷಯವನ್ನು ಹಂಚಿಕೊಳ್ಳುವುದರ ಮತ್ತು ತೆಗೆದುಹಾಕುವುದರ ಕುರಿತು ವಿವಿಧ ಆಯ್ಕೆಗಳನ್ನು ನಿಮಗೆ ಒದಗಿಸುತ್ತವೆ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸುವುದು ಮತ್ತು ನವೀಕರಿಸುವುದು

ನಮ್ಮ ಸೇವೆಗಳನ್ನು ನೀವು ಬಳಸಿದಾಗಲೆಲ್ಲಾ, ನಿಮ್ಮ ವೈಯಕ್ತಿಕ ಮಾಹಿತಿಗೆ ಪ್ರವೇಶದ ಮೂಲಕ ನಿಮಗೆ ಒದಗಿಸುವುದೇ ನಮ್ಮ ಗುರಿಯಾಗಿರುತ್ತದೆ. ಒಂದು ವೇಳೆ ಆ ಮಾಹಿತಿ ತಪ್ಪಾಗಿದ್ದರೆ, ಆ ಮಾಹಿತಿಯನ್ನು ನಾವು ಕ್ರಮಬದ್ಧ ವ್ಯಾಪಾರ ಅಥವಾ ಕಾನೂನು ಉದ್ದೇಶಗಳಿಗಾಗಿ ಇರಿಸಿಕೊಳ್ಳದ ಹೊರತು – ಅದನ್ನು ತ್ವರಿತವಾಗಿ ನವೀಕರಿಸಲು ಇಲ್ಲವೇ ಅಳಿಸಿಹಾಕಲು ನಿಮಗೆ ಮಾರ್ಗಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನವೀಕರಿಸುತ್ತಿರುವಾಗ, ನಿಮ್ಮ ವಿನಂತಿಯ ಕುರಿತು ಪ್ರತಿಕ್ರಿಯಿಸುವ ಮೊದಲು ನಿಮ್ಮ ಗುರುತಿಸುವಿಕೆಯನ್ನು ಪರಿಶೀಲಿಸುವಂತೆ ನಿಮ್ಮನ್ನು ನಾವು ಕೇಳಿಕೊಳ್ಳಬಹುದು.

ಕಾರಣವಿಲ್ಲದೆ ಪುನರಾವರ್ತನೆಯಾಗುವಂತಹ, ಸಮವಲ್ಲದ ತಾಂತ್ರಿಕ ಪರಿಶ್ರಮದ ಅಗತ್ಯವಿರುವಂತಹ (ಉದಾಹರಣೆಗೆ, ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದು ಅಥವಾ ಪ್ರಸ್ತುತ ಅಭ್ಯಾಸವನ್ನು ಮೂಲಭೂತವಾಗಿ ಬದಲಾಯಿಸುವುದು), ಇತರರ ಗೌಪ್ಯತೆಗೆ ಅಪಾಯ, ಅಥವಾ ತೀವ್ರವಾಗಿ ಕಾರ್ಯಸಾಧ್ಯವಲ್ಲದ್ದಾಗಿರುವುದಂತಹ (ಉದಾಹರಣೆಗೆ, ಬ್ಯಾಕಪ್ ಟೇಪ್‌ಗಳಲ್ಲಿರುವ ಮಾಹಿತಿಯ ಕುರಿತು ವಿನಂತಿಗಳು) ವಿನಂತಿಗಳನ್ನು ನಾವು ತಿರಸ್ಕರಿಸಬಹುದು.

ನಾವು ಮಾಹಿತಿಗೆ ಪ್ರವೇಶ ಮತ್ತು ತಿದ್ದುಪಡಿಯನ್ನು ಒದಗಿಸುವಲ್ಲಿ, ವಿಷಮ ಪ್ರಮಾಣದ ಪರಿಶ್ರಮದ ಅಗತ್ಯತೆಯನ್ನು ಹೊರತುಪಡಿಸಿ ನಾವು ಅದನ್ನು ಉಚಿತವಾಗಿ ಮಾಡುತ್ತೇವೆ. ಆಕಸ್ಮಿಕವಾಗಿ ಅಥವಾ ದುರುದ್ದೇಶಪೂರಿತ ಅವಘಡಗಳಿಂದ ಮಾಹಿತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಸೇವೆಗಳನ್ನು ನಿರ್ವಹಿಸುವುದೇ ನಮ್ಮ ಗುರಿಯಾಗಿರುತ್ತದೆ. ಈ ಕಾರಣದಿಂದಾಗಿ, ನೀವು ಮಾಹಿತಿಯನ್ನು ನಮ್ಮ ಸೇವೆಗಳಿಂದ ಅಳಿಸಿದ ನಂತರ, ನಾವು ತಕ್ಷಣವೇ ನಮ್ಮ ಸಕ್ರಿಯ ಸರ್ವರ್‌ಗಳಿಂದ ಉಳಿದ ನಕಲುಗಳನ್ನು ಅಳಿಸದೇ ಇರಬಹುದು ಅಥವಾ ನಮ್ಮ ಬ್ಯಾಕಪ್ ಸಿಸ್ಟಂಗಳಿಂದ ಮಾಹಿತಿಯನ್ನು ತೆಗೆದುಹಾಕದಿರಬಹುದು.

ನಾವು ಹಂಚಿಕೊಳ್ಳುವ ಮಾಹಿತಿ

ಕೆಳಗಿನ ಸಂದರ್ಭಗಳ ಹೊರತಾಗಿ ನಾವು ಯಾವ ಕಾರಣಕ್ಕೂ ವೈಯಕ್ತಿಕ ಮಾಹಿತಿಯನ್ನು Google ಗೆ ಹೊರತಾದ ಕಂಪೆನಿಗಳೊಂದಿಗೆ, ಸಂಸ್ಥೆಗಳೊಂದಿಗೆ ಮತ್ತು ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ:

  • ನಿಮ್ಮ ಸಮ್ಮತಿಯೊಂದಿಗೆ

    ನೀವು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ನಮಗೆ ಸಮ್ಮತಿಸಿದಾಗ, ನಾವು ಅದನ್ನು ಕಂಪನಿಗಳು, ಸಂಸ್ಥೆಗಳು ಅಥವಾ Google ಹೊರಗಿನ ವ್ಯಕ್ತಿಗಳ ಜೊತೆಗೆ ಹಂಚಿಕೊಳ್ಳುತ್ತೇವೆ. ಯಾವುದೇ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ನಮಗೆ ಆಯ್ಕೆ ಸಮ್ಮತಿಯ ಅಗತ್ಯವಿದೆ.

  • ಡೊಮೇನ್ ನಿರ್ವಾಹಕರೊಂದಿಗೆ

    ನಿಮ್ಮ Google ಖಾತೆಯನ್ನು ಒಬ್ಬ ಡೊಮೇನ್ ನಿರ್ವಾಹಕರು ನಿಮ್ಮ ಪರವಾಗಿ ನಿರ್ವಹಿಸುತ್ತಿದ್ದರೆ (ಉದಾಹರಣೆಗೆ, Google Apps ಬಳಕೆದಾರರಿಗಾಗಿ), ನಿಮ್ಮ ಡೊಮೇನ್ ನಿರ್ವಾಹಕರಿಗೆ ಮತ್ತು ನಿಮ್ಮ ಸಂಸ್ಥೆಗೆ ಬಳಕೆದಾರ ಬೆಂಬಲವನ್ನು ಒದಗಿಸುವ ಮರುಮಾರಾಟಗಾರರಿಗೆ ನಿಮ್ಮ Google ಖಾತೆ ಮಾಹಿತಿಗೆ (ನಿಮ್ಮ ಇಮೇಲ್ ಮತ್ತು ಇತರ ಡೇಟಾ ಸೇರಿದಂತೆ) ಪ್ರವೇಶಿಸಲು ಸಾಧ್ಯವಾಗುತ್ತದೆ. ನಿಮ್ಮ ಡೊಮೇನ್ ನಿರ್ವಾಹಕರಿಗೆ ಹೀಗೆ ಮಾಡಲು ಸಾಧ್ಯವಾಗುತ್ತದೆ:

    • ನೀವು ಸ್ಥಾಪಿಸುವ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಅಂಕಿಅಂಶಗಳಂತಹ ನಿಮ್ಮ ಖಾತೆಗೆ ಸಂಬಂಧಿಸಿರುವ ಅಂಕಿಅಂಶಗಳನ್ನು ವೀಕ್ಷಿಸಬಹುದು.
    • ನಿಮ್ಮ ಖಾತೆಯ ಪಾಸ್‌ವರ್ಡ್ ಬದಲಿಸಬಹುದು.
    • ನಿಮ್ಮ ಖಾತೆಯ ಪ್ರವೇಶವನ್ನು ಅಮಾನತುಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.
    • ನಿಮ್ಮ ಖಾತೆಯ ಭಾಗವೆಂಬಂತೆ ಸಂಗ್ರಹಿಸಿದ ಮಾಹಿತಿಯನ್ನು ಪ್ರವೇಶಿಸಬಹುದು ಅಥವಾ ಉಳಿಸಿಕೊಳ್ಳಬಹುದು.
    • ಅನ್ವಯವಾಗುವ ನೀತಿ, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಒತ್ತಾಯಪೂರ್ವಕ ಸರ್ಕಾರಿ ವಿನಂತಿಯನ್ನು ಪೂರೈಸುವ ಸಲುವಾಗಿ ನಿಮ್ಮ ಖಾತೆಯ ಮಾಹಿತಿಯನ್ನು ಸ್ವೀಕರಿಸಬಹುದು.
    • ಮಾಹಿತಿ ಅಥವಾ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಅಳಿಸುವ ಇಲ್ಲವೇ ಸಂಪಾದಿಸುವ ನಿಮ್ಮ ಸಾಮರ್ಥ್ಯವನ್ನು ನಿರ್ಬಂಧಿಸಬಹುದು.

    ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ಡೊಮೇನ್ ನಿರ್ವಾಹಕರ ಗೌಪ್ಯತೆ ನೀತಿಯನ್ನು ಉಲ್ಲೇಖಿಸಿ.

  • ಬಾಹ್ಯ ಪ್ರಕ್ರಿಯೆಗಾಗಿ

    ನಮ್ಮ ಸೂಚನೆಗಳನ್ನು ಆಧರಿಸಿ ಮತ್ತು ನಮ್ಮ ಗೌಪ್ಯತೆ ನೀತಿ ಹಾಗೂ ಇತರ ಸಮರ್ಪಕವಾದ ಗೌಪ್ಯತೆ ಹಾಗೂ ಭದ್ರತೆ ಕ್ರಮಗಳಿಗೆ ಅನುಗುಣವಾಗಿ, ನಮಗಾಗಿ ಇದನ್ನು ಪ್ರಕ್ರಿಯೆಗೊಳಿಸುವ ನಮ್ಮ ಅಂಗಸಂಸ್ಥೆಗಳು ಅಥವಾ ವಿಶ್ವಾಸಾರ್ಹ ವ್ಯಾಪಾರಿಗಳು ಇಲ್ಲವೇ ವ್ಯಕ್ತಿಗಳಿಗೆ ವೈಯಕ್ತಿಕ ಮಾಹಿತಿಯನ್ನು ನಾವು ಒದಗಿಸುತ್ತೇವೆ.

  • ಕಾನೂನು ಕಾರಣಗಳಿಗಾಗಿ

    ನಾವು ಪ್ರವೇಶ, ಬಳಕೆ, ಮಾಹಿತಿಯ ಸಂರಕ್ಷಣೆ ಅಥವಾ ಮಾಹಿತಿ ಬಹಿರಂಗಪಡಿಸುವಿಕೆಯು ಈ ಮುಂದಿನದಕ್ಕೆ ಸಮಂಜಸವಾಗಿ ಅಗತ್ಯವಿದೆ ಎಂಬ ಉತ್ತಮ ನಂಬಿಕೆಯನ್ನು ಹೊಂದಿದ್ದರೆ, ನಾವು ಕಂಪನಿಗಳು, ಸಂಸ್ಥೆಗಳು ಅಥವಾ Google ಹೊರಗಿನ ವ್ಯಕ್ತಿಗಳ ಜೊತೆಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.

    • ಯಾವುದೇ ಅನ್ವಯವಾಗುವ ನೀತಿ, ನಿಯಮ, ಕಾನೂನು ಪ್ರಕ್ರಿಯೆ ಅಥವಾ ವಿಷಮ ಪ್ರಮಾಣದ ಸರ್ಕಾರಿ ವಿನಂತಿಯನ್ನು ಪೂರೈಸಲು.
    • ಸಂಭಾವ್ಯ ಉಲ್ಲಂಘನೆಗಳ ತನಿಖೆ ಸೇರಿದಂತೆ, ಅನ್ವಯವಾಗುವ ಸೇವಾ ನಿಯಮಗಳನ್ನು ಜಾರಿಗೊಳಿಸಲು.
    • ವಂಚನೆ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪತ್ತೆಹಚ್ಚಲು, ತಡೆಗಟ್ಟಲು ಇಲ್ಲವೇ ಕಂಡುಹಿಡಿಯಲು.
    • ಕಾನೂನಿನ ಮೂಲಕ ಅಗತ್ಯವಿರುವ ಅಥವಾ ಅನುಮತಿ ಪಡೆದಿರುವ Google ನ, ನಮ್ಮ ಬಳಕೆದಾರರ ಇಲ್ಲವೇ ಸಾರ್ವಜನಿಕರ ಹಕ್ಕುಗಳು, ಆಸ್ತಿ ಅಥವಾ ಸುರಕ್ಷತೆಯ ಧಕ್ಕೆಗೆ ವಿರುದ್ದವಾಗಿ ಸಂರಕ್ಷಿಸಲು.

ನಾವು ಒಟ್ಟುಗೂಡಿಸಿರುವ ವೈಯಕ್ತಿಕವಾಗಿ ಗುರುತಿಸದ ಮಾಹಿತಿಯನ್ನು ಸಾರ್ವಜನಿಕವಾಗಿ ಮತ್ತು – ಪ್ರಕಾಶಕರು, ಜಾಹೀರಾತುದಾರರು ಅಥವಾ ಸಂಪರ್ಕಿತ ಸೈಟ್‌ಗಳಂತಹ ನಮ್ಮ ಪಾಲುದಾರರೊಂದಿಗೆ ಹಂಚಿಕೊಳ್ಳಬಹುದು. ಉದಾಹರಣೆಗೆ, ನಮ್ಮ ಸೇವೆಗಳ ಸಾಮಾನ್ಯ ಬಳಕೆಯ ಕುರಿತ ಪ್ರವೃತ್ತಿಗಳನ್ನು ತೋರಿಸಲು ನಾವು ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು.

ಒಂದು ವೇಳೆ Google, ವಿಲೀನ, ಸ್ವಾಧೀನ ಅಥವಾ ಸ್ವತ್ತು ಮಾರಾಟದಲ್ಲಿ ಭಾಗಿಯಾಗಿದ್ದರೆ, ನಾವು ಯಾವುದೇ ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಖಚಿತಪಡಿಸಲು ಮುಂದುವರಿಯುತ್ತೇವೆ ಹಾಗೂ ವೈಯಕ್ತಿಕ ಮಾಹಿತಿಯನ್ನು ವರ್ಗಾಯಿಸುವುದಕ್ಕೂ ಮೊದಲು ಅಥವಾ ಬೇರೊಂದು ಗೌಪ್ಯತೆ ನೀತಿಗೆ ಒಳಪಡಿಸುವುದಕ್ಕೂ ಮೊದಲು, ತೊಂದರೆಗೊಳಗಾದ ಬಳಕೆದಾರರ ಗಮನಕ್ಕೆ ತರುತ್ತೇವೆ.

ಮಾಹಿತಿಯ ಸುರಕ್ಷತೆ

ನಾವು ಹೊಂದಿರುವ ಮಾಹಿತಿಯ ಅನಧಿಕೃತ ಪ್ರವೇಶ ಅಥವಾ ಅನಧಿಕೃತ ಮಾರ್ಪಾಡು, ಬಹಿರಂಗಪಡಿಸುವುದು ಅಥವಾ ನಾಶಪಡಿಸುವುದರಿಂದ Google ಮತ್ತು ನಮ್ಮ ಬಳಕೆದಾರರನ್ನು ಸಂರಕ್ಷಿಸಲು ನಾವು ಶ್ರಮಿಸುತ್ತೇವೆ. ನಿರ್ದಿಷ್ಟವಾಗಿ:

  • SSL ಬಳಸಿಕೊಂಡು ನಮ್ಮ ಹಲವಾರು ಸೇವೆಗಳನ್ನು ನಾವು ಎನ್‌ಕ್ರಿಪ್ಟ್ ಮಾಡುತ್ತೇವೆ.
  • ನಿಮ್ಮ Google ಖಾತೆಗೆ ಪ್ರವೇಶಿಸಿದಾಗ, ನಿಮಗೆ ಎರಡನೇ ಹಂತದ ಪರಿಶೀಲನೆಯನ್ನು ನಾವು ಒದಗಿಸುತ್ತೇವೆ ಮತ್ತು Google Chrome ನಲ್ಲಿ ಸುರಕ್ಷಿತ ಬ್ರೌಸಿಂಗ್ ವೈಶಿಷ್ಟ್ಯವನ್ನು ಒದಗಿಸುತ್ತೇವೆ.
  • ಸಿಸ್ಟಂಗಳಿಗೆ ಅನಧಿಕೃತ ಪ್ರವೇಶವನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಾವು ಭೌತಿಕ ಭದ್ರತೆ ಕ್ರಮಗಳು ಸೇರಿದಂತೆ ನಮ್ಮ ಮಾಹಿತಿ ಸಂಗ್ರಹಣೆ, ಸಂಗ್ರಹಣೆ ಮತ್ತು ಪ್ರಕ್ರಿಯೆಯ ಅಭ್ಯಾಸಗಳನ್ನು ವಿಮರ್ಶಿಸುತ್ತೇವೆ.
  • ನಮಗಾಗಿ ಇದನ್ನು ಪ್ರಕ್ರಿಯೆಗೊಳಿಸುವ ಸಲುವಾಗಿ ಆ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸುವ Google ಉದ್ಯೋಗಿಗಳು, ಗುತ್ತಿಗೆದಾರರು ಹಾಗೂ ಏಜೆಂಟ್‌ಗಳಿಗೆ ಮತ್ತು ಕಠಿಣ ಗುತ್ತಿಗೆ ಗೌಪ್ಯತೆಯ ನಿರ್ಬಂಧಗಳಿಗೆ ಒಳಪಟ್ಟಿರುವವರಿಗೆ, ವೈಯಕ್ತಿಕ ಮಾಹಿತಿಯ ಪ್ರವೇಶವನ್ನು ನಿರ್ಬಂಧಿಸಿರುತ್ತೇವೆ ಹಾಗೂ ಈ ನಿರ್ಬಂಧಗಳನ್ನು ಪೂರೈಸುವಲ್ಲಿ ಅವರು ವಿಫಲರಾದರೆ, ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬಹುದು ಇಲ್ಲವೇ ಅವರನ್ನು ರದ್ದುಮಾಡಬಹುದು.

ಅನ್ವಯಿಸುವಿಕೆ

ನಮ್ಮ ಗೌಪ್ಯತೆ ನೀತಿಯು Google Inc. ಮತ್ತು ಅದರ ಅಂಗಸಂಸ್ಥೆಗಳ ಮೂಲಕ ಒದಗಿಸಿರುವ ಎಲ್ಲಾ ಸೇವೆಗಳಿಗೂ ಅನ್ವಯಿಸುತ್ತದೆ. ಇದರಲ್ಲಿ ಇತರ ಸೈಟ್‌ಗಳಲ್ಲಿ ಒದಗಿಸಿರುವ ಸೇವೆಗಳು ಸೇರಿರುತ್ತವೆ (ಅಂದರೆ ನಮ್ಮ ಜಾಹೀರಾತು ಸೇವೆಗಳು), ಆದರೆ ಈ ಗೌಪ್ಯತೆ ನೀತಿಯೊಂದಿಗೆ ಸಂಯೋಜನೆಗೊಳ್ಳದಿರುವಂತಹ ಪ್ರತ್ಯೇಕ ಗೌಪ್ಯತೆ ನೀತಿಗಳನ್ನು ಹೊಂದಿರುವಂತಹ ಸೇವೆಗಳು ಇದರಿಂದ ಹೊರತಾಗಿರುತ್ತವೆ.

ಹುಡುಕಾಟದ ಫಲಿತಾಂಶಗಳಲ್ಲಿ ನಿಮಗೆ ಪ್ರದರ್ಶಿಸಲಾಗುವ ಉತ್ಪನ್ನಗಳು ಅಥವಾ ಸೈಟ್‌ಗಳು, Google ಸೇವೆಗಳನ್ನು ಒಳಗೊಂಡಿರುವ ಸೈಟ್‌ಗಳು ಅಥವಾ ನಮ್ಮ ಸೇವೆಗಳಿಂದ ಲಿಂಕ್ ಆಗಿರುವ ಸೈಟ್‌ಗಳು ಸೇರಿದಂತೆ, ಇತರ ಕಂಪನಿಗಳು ಇಲ್ಲವೇ ವ್ಯಕ್ತಿಗಳ ಮೂಲಕ ಒದಗಿಸಲಾಗುವ ಸೇವೆಗಳಿಗೆ ನಮ್ಮ ಗೌಪ್ಯತಾ ನೀತಿಯು ಅನ್ವಯಿಸುವುದಿಲ್ಲ. ನಮ್ಮ ಸೇವೆಗಳನ್ನು ಜಾಹೀರಾತು ಗೊಳಿಸುವ ಮತ್ತು ಸಂಬಂಧಿಸಿರುವ ಜಾಹೀರಾತುಗಳನ್ನು ಒದಗಿಸಲು ಮತ್ತು ಪೂರೈಸಲು ಕುಕೀಗಳು, ಪಿಕ್ಸೆಲ್ ಟ್ಯಾಗ್‌ಗಳು ಹಾಗೂ ಇತರ ತಂತ್ರಜ್ಞಾನಗಳನ್ನು ಬಳಸುವಂತಹ ಇತರ ಕಂಪನಿಗಳ ಹಾಗೂ ಸಂಸ್ಥೆಗಳ ಮಾಹಿತಿಯ ಅಭ್ಯಾಸಗಳನ್ನು ನಮ್ಮ ಗೌಪ್ಯತೆ ನೀತಿಯು ಒಳಗೊಂಡಿರುವುದಿಲ್ಲ.

ಜಾರಿಗೊಳಿಸುವಿಕೆ

ನಾವು ನಿಯಮಿತವಾಗಿ ನಮ್ಮ ಗೌಪ್ಯತೆ ನೀತಿಯೊಂದಿಗಿನ ಅನುಸರಣೆಯನ್ನು ಪರಿಶೀಲಿಸುತ್ತೇವೆ. ಹಾಗೆಯೇ ಹಲವಾರು ಸ್ವಯಂ ನಿಯಂತ್ರಣದ ಫ್ರೇಮ್‌ ಕಾರ್ಯಗಳಿಗೆ ಬದ್ದರಾಗಿರುತ್ತೇವೆ. ನಾವು ಔಪಚಾರಿಕವಾಗಿ ಲಿಖಿತ ದೂರುಗಳನ್ನು ಸ್ವೀಕರಿಸಿದರೆ, ನಾವು ಅದನ್ನು ಅನುಸರಿಸುವ ಸಲುವಾಗಿ ದೂರು ನೀಡಿದ ವ್ಯಕ್ತಿಯನ್ನು ಸಂಪರ್ಕಿಸುತ್ತೇವೆ. ನಾವು ನೇರವಾಗಿ ನಮ್ಮ ಬಳಕೆದಾರರೊಂದಿಗೆ ಪರಿಹರಿಸಲು ಸಾಧ್ಯವಿಲ್ಲದಂತಹ ವೈಯಕ್ತಿಕ ಡೇಟಾ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಪರಿಹರಿಸಲು ಸ್ಥಳೀಯ ಡೇಟಾ ರಕ್ಷಣೆ ಪ್ರಾಧಿಕಾರಗಳು ಸೇರಿದಂತೆ, ಸೂಕ್ತವಾದ ನಿಯಂತ್ರಣ ಪ್ರಾಧಿಕಾರಗಳ ಜೊತೆಗೆ ಕಾರ್ಯನಿರ್ವಹಿಸುತ್ತೇವೆ.

ಬದಲಾವಣೆಗಳು

ನಮ್ಮ ಗೌಪ್ಯತೆ ನೀತಿ ಕಾಲಕಾಲಕ್ಕೆ ಬದಲಾಗಬಹುದು. ನಾವು ನಿಮ್ಮ ಸ್ಪಷ್ಟ ಸಮ್ಮತಿ ಇಲ್ಲದೆಯೇ, ಈ ಗೌಪ್ಯತಾ ನೀತಿಯ ಅಡಿಯಲ್ಲಿ ನಿಮ್ಮ ಹಕ್ಕುಗಳನ್ನು ಮೊಟಕುಗೊಳಿಸುವುದಿಲ್ಲ. ನಾವು ಈ ಪುಟದಲ್ಲಿ ಯಾವುದೇ ಗೌಪ್ಯತೆ ನೀತಿಯ ಬದಲಾವಣೆಗಳನ್ನು ಪೋಸ್ಟ್ ಮಾಡುತ್ತೇವೆ ಮತ್ತು ಬದಲಾವಣೆಗಳು ಅರ್ಥಪೂರ್ಣವಾಗಿದ್ದರೆ, ನಾವು ಇನ್ನಷ್ಟು ಸೂಕ್ತವಾದ ಪ್ರಕಟಣೆಯನ್ನು ಒದಗಿಸುತ್ತೇವೆ (ನಿರ್ದಿಷ್ಟ ಸೇವೆಗಳು, ಗೌಪ್ಯತಾ ನೀತಿ ಬದಲಾವಣೆಗಳ ಇಮೇಲ್ ಅಧಿಸೂಚನೆ). ನಿಮ್ಮ ವಿಮರ್ಶೆಗಾಗಿ ಈ ಗೌಪ್ಯತಾ ನೀತಿಯ ಪ್ರಾಶಸ್ತ್ಯದ ಆವೃತ್ತಿಗಳನ್ನು ಒಂದು ಆರ್ಕೈವ್‌ನಲ್ಲಿ ಸಹ ನಾವು ಇರಿಸುತ್ತೇವೆ.

ನಿರ್ದಿಷ್ಟ ಉತ್ಪನ್ನದ ಅಭ್ಯಾಸಗಳು

ನೀವು ಬಳಸಬಹುದಾದ ನಿರ್ದಿಷ್ಟ Google ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಗೌಪ್ಯತೆ ಅಭ್ಯಾಸಗಳನ್ನು ಈ ಕೆಳಗಿನ ಸೂಚನೆಗಳು ವಿವರಿಸುತ್ತವೆ:

Google Apps
ಪ್ರಮುಖ ಮೆನು