ಹದಿಹರೆಯದವರ ಗೌಪ್ಯತಾ ಮಾರ್ಗದರ್ಶಿ

Google ನಲ್ಲಿನ ನಿಮ್ಮ ಗೌಪ್ಯತೆ

ಗೌಪ್ಯತೆಯ ಬಗ್ಗೆ ನಮಗೆ ಕೇಳಲಾಗುವ ಕೆಲವು ಪ್ರಮುಖ ಪ್ರಶ್ನೆಗಳಿಗೆ ನೀವು ಇಲ್ಲಿ ಉತ್ತರಗಳನ್ನು ಪಡೆಯಬಹುದು, ಉದಾಹರಣೆಗೆ ಡೇಟಾ ಎಂದರೇನು? ನೀವು ಇನ್ನಷ್ಟು ತಿಳಿಯಲು ಬಯಸಿದರೆ, ಗೌಪ್ಯತೆ ನೀತಿಯನ್ನು ಸಹ ನೋಡಿ.

ನಿಮ್ಮ ಸ್ಥಳ

Google ಗೆ ನನ್ನ ಸ್ಥಳದ ಬಗ್ಗೆ ಮಾಹಿತಿ ಇದೆಯೇ?

ನೀವು ಇಂಟರ್ನೆಟ್ ಅನ್ನು ಬಳಸುವಾಗ, ಆ್ಯಪ್‌ಗಳು ಮತ್ತು ಸೈಟ್‌ಗಳು ನೀವು ಎಲ್ಲಿದ್ದೀರಿ ಎಂಬುದನ್ನು ಅಂದಾಜು ಮಾಡುತ್ತವೆ ಮತ್ತು ಇದು Google ಗೆ ಸಹ ಅನ್ವಯಿಸುತ್ತದೆ. ನಿಮ್ಮ ಸಾಧನ ಸೆಟ್ಟಿಂಗ್‌ಗಳನ್ನು ಆಧರಿಸಿ Google ನಿಮ್ಮ ನಿಖರವಾದ ಸ್ಥಳದ ಮಾಹಿತಿಯನ್ನು ಸಹ ತಿಳಿದುಕೊಳ್ಳಬಹುದು. (ನನ್ನ ಸ್ಥಳದ ಮಾಹಿತಿ ಎಷ್ಟು ನಿಖರವಾಗಿರುತ್ತದೆ? ಎಂಬುದನ್ನು ನೋಡಿ)

ನೀವು Search, Maps, ಅಥವಾ Google Assistant ಬಳಸಿಕೊಂಡು Google ನಲ್ಲಿ ಹುಡುಕಾಟ ನಡೆಸಿದಾಗ, ನಿಮಗೆ ಇನ್ನಷ್ಟು ಉಪಯುಕ್ತವಾಗುವ ಫಲಿತಾಂಶಗಳನ್ನು ನೀಡಲು ನಿಮ್ಮ ಪ್ರಸ್ತುತ ಸ್ಥಳದ ಮಾಹಿತಿಯನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ, ನೀವು ರೆಸ್ಟೋರೆಂಟ್‌ಗಳನ್ನು ಹುಡುಕಿದರೆ, ನೀವಿರುವ ಸ್ಥಳದ ಸಮೀಪದಲ್ಲಿನ ರೆಸ್ಟೋರೆಂಟ್‌ಗಳು ಬಹುಶಃ ಹೆಚ್ಚು ಉಪಯುಕ್ತ ಫಲಿತಾಂಶಗಳಾಗಿರಬಹುದು.

ನಿಮ್ಮ ಸ್ಥಳದ ಮಾಹಿತಿಯನ್ನು ನೀವು ಹೇಗೆ ನಿರ್ವಹಿಸಬಹುದು ಎಂಬುದನ್ನು ನೋಡಿ

ನಾನು ಸ್ಥಳದ ಮಾಹಿತಿಯನ್ನು ಆನ್ ಅಥವಾ ಆಫ್ ಮಾಡುವುದು ಹೇಗೆ?

ನೀವು Google ನಲ್ಲಿ ಹುಡುಕಾಟ ನಡೆಸಿದಾಗ, ನೀವು ಯಾವ ಸಾಮಾನ್ಯ ಪ್ರದೇಶದಿಂದ ಹುಡುಕಾಟ ನಡೆಸುತ್ತಿದ್ದೀರಿ ಎಂಬುದನ್ನು Google ಯಾವಾಗಲೂ ಅಂದಾಜು ಮಾಡುತ್ತದೆ. ನೀವು ಬಳಸುವ, ಇಂಟರ್ನೆಟ್‌ಗೆ ಕನೆಕ್ಟ್ ಆಗುವ ಯಾವುದೇ ಆ್ಯಪ್ ಅಥವಾ ವೆಬ್‌ಸೈಟ್‌ನ ಹಾಗೆಯೇ Google ಸಹ, ನಿಮ್ಮ ಸಾಧನದ IP ವಿಳಾಸವನ್ನು ಆಧರಿಸಿ ನಿಮ್ಮ ಸ್ಥಳದ ಮಾಹಿತಿಯನ್ನು ಅಂದಾಜು ಮಾಡಬಲ್ಲದು. ಇನ್ನಷ್ಟು ತಿಳಿಯಲು, ನಾನು ಎಲ್ಲಿದ್ದೇನೆ ಎಂಬುದು Google ಗೆ ಹೇಗೆ ತಿಳಿಯುತ್ತದೆ? ಎಂಬುದನ್ನು ನೋಡಿ

ನೀವು Google ಅನ್ನು ಬಳಸುವಾಗ ನಿಮ್ಮ ನಿಖರವಾದ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆಮಾಡಲು, ನೀವು ಪ್ರತ್ಯೇಕ ಆ್ಯಪ್‌ಗಳು, ಸೈಟ್‌ಗಳು ಮತ್ತು ನಿಮ್ಮ ಸಾಧನದಲ್ಲಿ ಸ್ಥಳ ಅನುಮತಿಗಳನ್ನು ಆನ್ ಅಥವಾ ಆಫ್ ಮಾಡಬಹುದು.

ಒಂದು ವೇಳೆ ನೀವು ಮನೆ ಅಥವಾ ಕೆಲಸದ ಸ್ಥಳಗಳನ್ನು ಸೆಟ್ ಮಾಡಿದ್ದರೆ ಮತ್ತು ನೀವು ಮನೆ ಅಥವಾ ಕೆಲಸದ ಸ್ಥಳದಲ್ಲಿದ್ದೀರಿ ಎಂಬುದನ್ನು Google ಅಂದಾಜು ಮಾಡಿದರೆ, ಆಗ ನಿಮ್ಮ ಹುಡುಕಾಟಕ್ಕಾಗಿ ನಿಖರವಾದ ವಿಳಾಸವನ್ನು ಬಳಸಲಾಗುತ್ತದೆ.

ನನ್ನ ಸ್ಥಳದ ಮಾಹಿತಿ ಎಷ್ಟು ನಿಖರವಾಗಿರುತ್ತದೆ?

ನಿಮ್ಮ ಸಾಮಾನ್ಯ ಪ್ರದೇಶ

ನೀವು Google ನಲ್ಲಿ ಹುಡುಕಾಟ ನಡೆಸಿದಾಗ, ನೀವು ಯಾವ ಸಾಮಾನ್ಯ ಪ್ರದೇಶದಿಂದ ಹುಡುಕಾಟ ನಡೆಸುತ್ತಿದ್ದೀರಿ ಎಂಬುದನ್ನು Google ಯಾವಾಗಲೂ ಅಂದಾಜು ಮಾಡುತ್ತದೆ. ಈ ರೀತಿಯಲ್ಲಿ Google ನಿಮಗೆ ಸೂಕ್ತವಾದ ಫಲಿತಾಂಶಗಳನ್ನು ನೀಡಬಲ್ಲದು ಮತ್ತು ಹೊಸ ನಗರದಿಂದ ಸೈನ್ ಇನ್ ಮಾಡುವಂತಹ ಅಸಹಜ ಚಟುವಟಿಕೆಯನ್ನು ಪತ್ತೆಹಚ್ಚುವ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಬಲ್ಲದು.

ಸಾಮಾನ್ಯ ಪ್ರದೇಶವು 3 ಚದರ ಕಿ.ಮೀ ಗಿಂತ ದೊಡ್ಡದಾಗಿರುತ್ತದೆ ಮತ್ತು ಕನಿಷ್ಠ 1,000 ಬಳಕೆದಾರರನ್ನು ಒಳಗೊಂಡಿರುತ್ತದೆ, ಇದರಿಂದಾಗಿ ನಿಮ್ಮ ಹುಡುಕಾಟದ ಸ್ಥಳದ ಮೂಲಕ ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ ಹಾಗೂ ಇದು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ನಿಮ್ಮ ನಿಖರವಾದ ಸ್ಥಳ

ನೀವು ಅನುಮತಿ ನೀಡಿದರೆ, Google ನಿಮ್ಮ ನಿಖರವಾದ ಸ್ಥಳದ ಮಾಹಿತಿಯನ್ನು ಬಳಸಬಲ್ಲದು. ಉದಾಹರಣೆಗೆ, “ನನ್ನ ಹತ್ತಿರದ ಐಸ್ ಕ್ರೀಮ್” ಅಥವಾ ಸ್ಟೋರ್‌ವೊಂದಕ್ಕೆ ತೆರಳಲು ತಿರುವಿನಿಂದ ತಿರುವಿಗೆ ನಡಿಗೆ ಮಾರ್ಗಗಳು ಎಂಬಂತಹ ಹುಡುಕಾಟಗಳನ್ನು ನಡೆಸಿದಾಗ, ನಿಮಗೆ ಅತ್ಯಂತ ಸೂಕ್ತವಾದ ಫಲಿತಾಂಶಗಳನ್ನು ನೀಡಲು Google ಗೆ ನಿಮ್ಮ ನಿಖರವಾದ ಸ್ಥಳದ ಮಾಹಿತಿ ಅಗತ್ಯವಿರುತ್ತದೆ.

ನಿಖರವಾದ ಸ್ಥಳದ ಮಾಹಿತಿ ಎಂದರೆ ನೀವು ಇರುವ ನಿಖರವಾದ ಜಾಗ ಎಂದರ್ಥ, ಉದಾಹರಣೆಗೆ ಒಂದು ನಿರ್ದಿಷ್ಟ ವಿಳಾಸ.

Google ನನ್ನ ಸ್ಥಳವನ್ನು ಹೇಗೆ ಕಂಡುಹಿಡಿಯುತ್ತದೆ?

ನಿಮ್ಮ ಸ್ಥಳದ ಮಾಹಿತಿಯು ವಿವಿಧ ಮೂಲಗಳಿಂದ ಲಭ್ಯವಾಗುತ್ತದೆ ಮತ್ತು ನೀವು ಎಲ್ಲಿದ್ದೀರಿ ಎಂಬುದನ್ನು ಅಂದಾಜಿಸಲು ಇವೆಲ್ಲವನ್ನೂ ಒಟ್ಟಾಗಿ ಬಳಸಲಾಗುತ್ತದೆ.

ನಿಮ್ಮ ಸಾಧನದ IP ವಿಳಾಸ

ಫೋನ್ ಸಂಖ್ಯೆಯ ಪ್ರದೇಶ ಕೋಡ್‌ಗಳ ಹಾಗೆಯೇ, IP ವಿಳಾಸಗಳು ಕೂಡ ಸ್ಥೂಲವಾಗಿ ಭೌಗೋಳಿಕ ಪ್ರದೇಶಗಳನ್ನು ಆಧರಿಸಿರುತ್ತವೆ. ಇದರರ್ಥ, ನಿಮ್ಮ IP ವಿಳಾಸದ ಸಹಾಯದಿಂದ google.com ಸೇರಿದಂತೆ ನೀವು ಬಳಸುವ ಯಾವುದೇ ಆ್ಯಪ್ ಅಥವಾ ವೆಬ್‌ಸೈಟ್‌ಗೆ ನೀವು ಇರುವ ಸಾಮಾನ್ಯ ಪ್ರದೇಶವನ್ನು ಅಂದಾಜಿಸಲು ಸಾಧ್ಯವಾಗುತ್ತದೆ. ನಿಮ್ಮ ಇಂಟರ್ನೆಟ್ ಸೇವೆ ಒದಗಿಸುವವರು ನಿಮ್ಮ ಸಾಧನಕ್ಕೆ IP ವಿಳಾಸವನ್ನು ನಿಯೋಜಿಸುತ್ತಾರೆ ಮತ್ತು ಇಂಟರ್ನೆಟ್ ಬಳಸಲು ಇದು ಅತ್ಯಗತ್ಯವಾಗಿದೆ.

ಇನ್ನಷ್ಟು ತಿಳಿಯಿರಿ

ನಿಮ್ಮ ಸಾಧನದ ಸ್ಥಳ

ನಿಮ್ಮ ಸಾಧನದ ಸ್ಥಳದ ಮಾಹಿತಿಯನ್ನು ಬಳಸಲು ನೀವು Google ಆ್ಯಪ್ ಅಥವಾ ಸೈಟ್‌ಗೆ ಅನುಮತಿ ನೀಡಿದರೆ, ನೀವು ಎಲ್ಲಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗಲು ಆ ಮಾಹಿತಿಯನ್ನು ಬಳಸಬಹುದು. ಬಹುತೇಕ ಎಲ್ಲಾ ಸಾಧನಗಳ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಸ್ಥಳದ ಸೆಟ್ಟಿಂಗ್ ಇರುತ್ತದೆ, ಇದನ್ನು ಸಾಮಾನ್ಯವಾಗಿ 'ಸೆಟ್ಟಿಂಗ್‌ಗಳು' ಎಂಬ ವಿಭಾಗದಲ್ಲಿ ಕಾಣಬಹುದು.

ಇನ್ನಷ್ಟು ತಿಳಿಯಿರಿ

Google ನಲ್ಲಿನ ನಿಮ್ಮ ಚಟುವಟಿಕೆ

ನಿಮ್ಮ ಹಿಂದಿನ Google ಹುಡುಕಾಟಗಳನ್ನು ಆಧರಿಸಿ Google ನೀವು ಇರುವ ಸಾಮಾನ್ಯ ಪ್ರದೇಶವನ್ನು ಅಂದಾಜು ಮಾಡಬಲ್ಲದು. ಉದಾಹರಣೆಗೆ, ನೀವು ಮುಂಬೈನಲ್ಲಿ ಪಿಜ್ಜಾ ಕುರಿತು ಆಗಾಗ ಹುಡುಕಾಟ ನಡೆಸುತ್ತಿದ್ದರೆ, ನೀವು ಮುಂಬೈಗೆ ಸಂಬಂಧಿಸಿದ ಫಲಿತಾಂಶಗಳನ್ನೇ ನಿರೀಕ್ಷಿಸುತ್ತೀರಿ ಎಂದು ಭಾವಿಸಬಹುದು.

ಇನ್ನಷ್ಟು ತಿಳಿಯಿರಿ

ನಿಮ್ಮ ಲೇಬಲ್ ಮಾಡಿದ ಸ್ಥಳಗಳು

ನಿಮ್ಮ ಮನೆ ಅಥವಾ ಕೆಲಸದ ಸ್ಥಳವನ್ನು ನೀವು ಸೆಟ್ ಮಾಡಿದರೆ, ನೀವು ಎಲ್ಲಿದ್ದೀರಿ ಎಂಬುದನ್ನು ಅಂದಾಜು ಮಾಡಲು Google ಅವುಗಳನ್ನು ಬಳಸಬಲ್ಲದು. ಉದಾಹರಣೆಗೆ, ಒಂದು ವೇಳೆ ನಿಮ್ಮ ಮನೆ ವಿಳಾಸವನ್ನು ನೀವು ಸೆಟ್ ಮಾಡಿದರೆ, ನಿಮ್ಮ IP ವಿಳಾಸ, ಹಿಂದಿನ ಚಟುವಟಿಕೆ ಅಥವಾ ಸ್ಥಳದ ಮಾಹಿತಿಯ ಇತರ ಮೂಲಗಳು ನೀವು ಮನೆಯ ಹತ್ತಿರ ಇರಬಹುದು ಎಂದು ಸೂಚಿಸಿದರೆ, ಆಗ ನೀವು ಎಲ್ಲಿದ್ದೀರಿ ಎಂಬುದನ್ನು ಅಂದಾಜು ಮಾಡಲು ನಾವು ನಿಮ್ಮ ಮನೆಯ ಸ್ಥಳದ ಮಾಹಿತಿಯನ್ನು ಬಳಸುತ್ತೇವೆ.

ಇನ್ನಷ್ಟು ತಿಳಿಯಿರಿ

ನನ್ನ ಸ್ಥಳದ ಮಾಹಿತಿಯನ್ನು ಯಾರು ನೋಡಬಹುದು?

ಇದು ನಿಮಗೆ ಬಿಟ್ಟ ವಿಷಯ. ನೀವು Google ಸ್ಥಳ ಹಂಚಿಕೊಳ್ಳುವಿಕೆಯನ್ನು ಬಳಸಿದರೆ, Google ಸೇವೆಗಳಾದ್ಯಂತ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಜೊತೆ ನಿಮ್ಮ ನೈಜ ಸಮಯದ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳಬಹುದು.

ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತಿದ್ದೀರಾ ಎಂದು ಪರಿಶೀಲಿಸಿ

ಸ್ಥಳ ಹಂಚಿಕೊಳ್ಳುವಿಕೆಯು ಡೀಫಾಲ್ಟ್ ಆಗಿ ಆಫ್ ಆಗಿರುತ್ತದೆ. ನಿಮ್ಮ ನೈಜ ಸಮಯದ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳಲು ನೀವು ಬಯಸಿದರೆ, ಯಾರ ಜೊತೆ ಮತ್ತು ಎಷ್ಟು ಅವಧಿಯವರೆಗೆ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಬೇಕಾಗುತ್ತದೆ ಮತ್ತು ಖಚಿತಪಡಿಸಬೇಕಾಗುತ್ತದೆ. ನಿಮ್ಮ ಸ್ಥಳದ ಮಾಹಿತಿ ಹಂಚಿಕೊಳ್ಳುವಿಕೆಯನ್ನು ಯಾವಾಗ ಬೇಕಾದರೂ ನೀವು ನಿಲ್ಲಿಸಬಹುದು.

ನಿಮ್ಮ ನೈಜ ಸಮಯದ ಸ್ಥಳದ ಮಾಹಿತಿಯನ್ನು ಇತರರ ಜೊತೆ ಹಂಚಿಕೊಳ್ಳುವುದು ಎಂಬುದನ್ನು ನೋಡಿ

Google ನಲ್ಲಿ ಹಂಚಿಕೊಳ್ಳುವುದು

ನಾನು Google ನಲ್ಲಿ ಹಂಚಿಕೊಂಡಾಗ ಇತರ ಜನರು ಏನನ್ನು ನೋಡಬಹುದು?

Google ಸೇವೆಗಳಲ್ಲಿ ಇತರ ಜನರು ನಿಮ್ಮ ಬಗ್ಗೆ ಏನನ್ನು ನೋಡಬಹುದು ಎಂಬುದು ನೀವು ಏನನ್ನು ಮತ್ತು ಹೇಗೆ ಹಂಚಿಕೊಳ್ಳುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ:

ಸಾರ್ವಜನಿಕವಾಗಿ ಹಂಚಿಕೊಳ್ಳುವುದು

Google Maps ನಂತಹ ಆ್ಯಪ್‌ಗಳಿಗೆ ನೀವು ಕೊಡುಗೆ ನೀಡಿದರೆ, ಇತರ ಜನರು ನಿಮ್ಮ ಹೆಸರು ಮತ್ತು ಚಿತ್ರವನ್ನು ನೋಡಬಹುದು. ಉದಾಹರಣೆಗೆ, ನಿಮ್ಮ ಮೆಚ್ಚಿನ ಐಸ್ ಕ್ರೀಮ್ ಸ್ಟೋರ್‌ಗೆ ನೀವು ರೇಟಿಂಗ್ ನೀಡಿದರೆ, ಇತರರು Google Maps ನಲ್ಲಿ ಆ ಸ್ಟೋರ್ ಅನ್ನು ಎಕ್ಸ್‌ಪ್ಲೋರ್ ಮಾಡಿದಾಗ ಅವರು ನಿಮ್ಮ ರೇಟಿಂಗ್, ಹೆಸರು ಮತ್ತು ಚಿತ್ರವನ್ನು ನೋಡಬಹುದು.

ಖಾಸಗಿಯಾಗಿ ಹಂಚಿಕೊಳ್ಳುವುದು

ನೀವು ಇತರರ ಜೊತೆ ಫೋಟೋಗಳು, ವೀಡಿಯೊಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಹಂಚಿಕೊಂಡಾಗ, ನೀವು ಹಂಚಿಕೊಳ್ಳುವ ವಿಷಯದ ಜೊತೆಗೆ ನಿಮ್ಮ ಹೆಸರು ಮತ್ತು ಚಿತ್ರವೂ ಅವರಿಗೆ ಕಾಣಿಸುತ್ತದೆ.

ಇತರರ ಜೊತೆ ಹಂಚಿಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಮತ್ತು ನೀವು ಯಾವ ಹಂತದ ಆ್ಯಕ್ಸೆಸ್ ನೀಡುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಉದಾಹರಣೆಗೆ, Google Drive ನಲ್ಲಿ ಇರುವ ಫೋಲ್ಡರ್‌ಗಳಿಗೆ ಅಥವಾ Google Photos ನಲ್ಲಿ ಇರುವ ಆಲ್ಬಮ್‌ಗಳಿಗೆ ಆ್ಯಕ್ಸೆಸ್ ಹಂಚಿಕೊಳ್ಳುವಾಗ, ನೀವು ಹೊಸ ಕಂಟೆಂಟ್ ಸೇರಿಸಿದಂತೆಲ್ಲಾ ಅವರಿಗೆ ಆ್ಯಕ್ಸೆಸ್ ದೊರೆಯುವುದು ಮುಂದುವರಿಯಬಹುದು.

ನಾನು ಹಂಚಿಕೊಳ್ಳುವ ಸಂಗತಿಗಳಾದ ಫೋಟೋಗಳು, ವೀಡಿಯೊಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಯಾರು ನೋಡಬಹುದು?

ನೀವು ಬಳಸುವ Google ಸೇವೆಗಳಲ್ಲಿ ನಿರ್ದಿಷ್ಟ ಕಂಟೆಂಟ್ ಅನ್ನು ಇತರ ಜನರ ಜೊತೆ ಹಂಚಿಕೊಳ್ಳುವ ಆಯ್ಕೆಯನ್ನು ನೀವು ಮಾಡಬಹುದು.

ನೀವು ಹಂಚಿಕೊಂಡಾಗ, ಇತರ ಜನರಿಗೆ ಆ್ಯಪ್‌ಗಳಲ್ಲಿ ಮತ್ತು Google ನ ಹೊರಗಿನ ಸೈಟ್‌ಗಳಲ್ಲಿ ಕೂಡ ಮರುಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ನೆನಪಿಡಿ.

ನೀವು ಯಾವಾಗ ಬೇಕಾದರೂ ನಿಮ್ಮ ಸ್ವಂತ ಕಂಟೆಂಟ್ ಅನ್ನು ನಿಮ್ಮ ಖಾತೆಯಿಂದ ಅಳಿಸಬಹುದು, ಆದರೆ ಇದು ನೀವು ಈಗಾಗಲೇ ಹಂಚಿಕೊಂಡಿರುವ ನಕಲುಗಳನ್ನು ಅಳಿಸುವುದಿಲ್ಲ.

ನೀವು ಏನನ್ನು ಹಂಚಿಕೊಳ್ಳುತ್ತೀರಿ ಎಂಬುದರ ಕುರಿತು ಜಾಗರೂಕರಾಗಿರಿ ಮತ್ತು ನಿಮಗೆ ವಿಶ್ವಾಸವಿರುವ ಜನರ ಜೊತೆ ಮಾತ್ರ ಹಂಚಿಕೊಳ್ಳಿ.

ನನ್ನ ವೈಯಕ್ತಿಕ ಮಾಹಿತಿಯನ್ನು Google ಎಂದಾದರೂ ಇತರರ ಜೊತೆ ಹಂಚಿಕೊಳ್ಳುತ್ತದೆಯೇ?

ನಾವು ಕಾನೂನುಬದ್ಧವಾಗಿ ಅಗತ್ಯವಿರುವಂತಹ ಸೀಮಿತ ಸಂದರ್ಭಗಳನ್ನು ಹೊರತುಪಡಿಸಿ, Google ನ ಹೊರಗಿನ ಕಂಪನಿಗಳು, ಸಂಸ್ಥೆಗಳು ಅಥವಾ ವ್ಯಕ್ತಿಗಳ ಜೊತೆ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ.

ನಿಮ್ಮ ಶಾಲೆಯ ಮೂಲಕ ನೀವು Google ಖಾತೆಯನ್ನು ಹೊಂದಿದ್ದರೆ (Google Workspace for Education ಖಾತೆ), ನಿಮ್ಮ ಖಾತೆಯನ್ನು ನಿರ್ವಹಿಸುವ ಶಾಲೆಯ ನಿರ್ವಾಹಕರು ನಿಮ್ಮ ಮಾಹಿತಿಗೆ ಆ್ಯಕ್ಸೆಸ್ ಹೊಂದಿರುತ್ತಾರೆ.

ಶಾಲೆಯ ನಿರ್ವಾಹಕರಿಗೆ ಇರುವ ಆ್ಯಕ್ಸೆಸ್

ನಿಮ್ಮ ಶಾಲೆಯ ನಿರ್ವಾಹಕರಿಗೆ ನಿಮ್ಮ Google Workspace for Education ಖಾತೆಯಲ್ಲಿರುವ ಈ ಕೆಳಗಿನ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗಬಹುದು:

  • ನಿಮ್ಮ ಖಾತೆಯಲ್ಲಿ ಸಂಗ್ರಹಣೆ ಮಾಡಿರುವ, ಇಮೇಲ್‌ನಂತಹ ಮಾಹಿತಿಗೆ ಪ್ರವೇಶ ಪಡೆಯುವುದು ಮತ್ತು ಅದನ್ನು ಉಳಿಸಿಕೊಳ್ಳುವುದು
  • ನಿಮ್ಮ ಖಾತೆಯ ಕುರಿತು ಅಂಕಿಅಂಶಗಳನ್ನು ವೀಕ್ಷಿಸುವುದು, ಉದಾಹರಣೆಗೆ, ನೀವು ಎಷ್ಟು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡುತ್ತೀರಿ.
  • ನಿಮ್ಮ ಖಾತೆಯ ಪಾಸ್‌ವರ್ಡ್ ಬದಲಿಸುವುದು
  • ನಿಮ್ಮ ಖಾತೆಗೆ ಪ್ರವೇಶವನ್ನು ಅಮಾನತುಗೊಳಿಸುವುದು ಅಥವಾ ಕೊನೆಗೊಳಿಸುವುದು
  • ಅನ್ವಯವಾಗುವ ಕಾನೂನು, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಜಾರಿಗೊಳಿಸಬಹುದಾದ ಸರಕಾರಿ ವಿನಂತಿಯನ್ನು ಪೂರೈಸುವ ಸಲುವಾಗಿ ನಿಮ್ಮ ಖಾತೆಯ ಮಾಹಿತಿಯನ್ನು ಸ್ವೀಕರಿಸಬಹುದು.
  • ನಿಮ್ಮ ಮಾಹಿತಿ ಅಥವಾ ನಿಮ್ಮ ಗೌಪ್ಯತೆ ಸೆಟ್ಟಿಂಗ್ಗಳನ್ನು ಅಳಿಸುವ ಅಥವಾ ಎಡಿಟ್ ಮಾಡುವ ನಿಮ್ಮ ಸಾಮರ್ಥ್ಯವನ್ನು ನಿರ್ಬಂಧಿಸುವುದು

Google ನಿಮ್ಮ ಮಾಹಿತಿಯನ್ನು ಏಕೆ ಹಂಚಿಕೊಳ್ಳಬಹುದು

ನೀವು ನಮಗೆ ಅನುಮತಿ ನೀಡಿದಾಗ

ಉದಾಹರಣೆಗೆ, ಪಿಜ್ಜಾ ಅನ್ನು ಆರ್ಡರ್ ಮಾಡಲು ನೀವು Google Assistant ಅನ್ನು ಬಳಸಿದರೆ, ನಿಮ್ಮ ಹೆಸರು ಅಥವಾ ಫೋನ್ ಸಂಖ್ಯೆಯನ್ನು ರೆಸ್ಟೋರೆಂಟ್ ಜೊತೆ ಹಂಚಿಕೊಳ್ಳುವುದಕ್ಕೂ ಮೊದಲು ನಾವು ನಿಮ್ಮ ಅನುಮತಿಯನ್ನು ಪಡೆದುಕೊಳ್ಳುತ್ತೇವೆ. ಥರ್ಡ್ ಪಾರ್ಟಿ ಆ್ಯಪ್‌ಗಳು ಹಾಗೂ ಸೇವೆಗಳ ಜೊತೆ ಡೇಟಾವನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು Google ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ತಿಳಿದುಕೊಳ್ಳಿ

ಮೇಲೆ ತಿಳಿಸಿರುವ ಹಾಗೆ, ಡೊಮೇನ್ ನಿರ್ವಾಹಕರ ಜೊತೆ.

ಬಾಹ್ಯವಾಗಿ ಪ್ರಕ್ರಿಯೆಗೊಳಿಸಲು, ನಾವು ನೀಡುವ ಸೂಚನೆಗಳನ್ನು ಆಧರಿಸಿ ಡೇಟಾ ಪ್ರಕ್ರಿಯೆಗೊಳಿಸಲು ನಮ್ಮ ಜೊತೆ ಕೆಲಸ ಮಾಡುವ ಕಂಪನಿಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸುತ್ತೇವೆ. ಉದಾಹರಣೆಗೆ, ಗ್ರಾಹಕರ ಬೆಂಬಲಕ್ಕೆ ಸಂಬಂಧಿಸಿದ ಹಾಗೆ ನಮಗೆ ಸಹಾಯ ಮಾಡಲು ನಾವು ಬಾಹ್ಯ ಕಂಪನಿಗಳನ್ನು ಬಳಸುತ್ತೇವೆ ಮತ್ತು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಲು ಆ ಕಂಪನಿಯ ಜೊತೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ.

ಕಾನೂನು ಕಾರಣಗಳಿಗಾಗಿ

ವೈಯಕ್ತಿಕ ಮಾಹಿತಿಯನ್ನು ಒದಗಿಸುವುದು ಅವಶ್ಯಕವಿರಬಹುದು ಎಂದು ನಾವು ಭಾವಿಸಿದರೆ, ನಾವು ಅದನ್ನು ಈ ಕೆಳಗಿನ ಉದ್ದೇಶಗಳಿಗಾಗಿ Google ನ ಹೊರಗೆ ಹಂಚಿಕೊಳ್ಳುತ್ತೇವೆ:

  • ಯಾವುದೇ ಅನ್ವಯವಾಗುವ ಕಾನೂನು, ನಿಯಂತ್ರಣ, ಕಾನೂನು ಪ್ರಕ್ರಿಯೆ ಅಥವಾ ಜಾರಿಗೊಳಿಸಬಹುದಾದ ಸರ್ಕಾರಿ ವಿನಂತಿಯನ್ನು ಪೂರೈಸಲು.
  • ಸಂಭಾವ್ಯ ಉಲ್ಲಂಘನೆಗಳ ಕುರಿತಾದ ತನಿಖೆಯೂ ಸೇರಿದಂತೆ ಅನ್ವಯಿಸುವ ಸೇವಾ ನಿಯಮಗಳನ್ನು ಜಾರಿಗೊಳಿಸಲು.
  • ವಂಚನೆ, ಸುರಕ್ಷತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪತ್ತೆಹಚ್ಚಲು, ತಡೆಗಟ್ಟಲು ಇಲ್ಲವೇ ಬಗೆಹರಿಸಲು.
  • ಕಾನೂನಿನ ಆವಶ್ಯಕತೆಯ ಮೇರೆಗೆ ಅಥವಾ ಅನುಮತಿಯ ಮೇರೆಗೆ, Google, ನಮ್ಮ ಬಳಕೆದಾರರು ಅಥವಾ ಸಾರ್ವಜನಿಕರ ಹಕ್ಕುಗಳು, ಆಸ್ತಿ ಅಥವಾ ಸುರಕ್ಷತೆಗೆ ಹಾನಿಯಾಗದಂತೆ ಸಂರಕ್ಷಿಸಲು.

ಡೇಟಾ ಮತ್ತು ವೈಯಕ್ತೀಕರಣ

ನನ್ನ ಬಗೆಗಿನ ಯಾವ ಡೇಟಾವನ್ನು Google ಸಂಗ್ರಹಿಸುತ್ತದೆ?

ನೀವು Google ಸೇವೆಗಳನ್ನು ಬಳಸುವಾಗ, ಆ ಸೇವೆಗಳನ್ನು ನಿಮಗೆ ಒದಗಿಸಲು, ಅವುಗಳನ್ನು ಇನ್ನಷ್ಟು ಉಪಯುಕ್ತವಾಗಿಸಲು ಮತ್ತು Google ಏಕೆ ಡೇಟಾವನ್ನು ಸಂಗ್ರಹಿಸುತ್ತದೆ? ಎಂಬಲ್ಲಿ ವಿವರಿಸಿರುವ ಇತರ ಕಾರಣಗಳಿಗಾಗಿ ನಮಗೆ ಅಗತ್ಯವಿರುವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.

ನಿಮ್ಮ ಸೆಟ್ಟಿಂಗ್‌ಗಳ ಮೂಲಕ, ನಾವು ಸಂಗ್ರಹಿಸುವ ಡೇಟಾವನ್ನು ಮತ್ತು ಆ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನೀವು ಮಿತಿಗೊಳಿಸಬಹುದು. ಉದಾಹರಣೆಗೆ, ನಿಮ್ಮ YouTube ಇತಿಹಾಸವನ್ನು ನಿಮ್ಮ Google ಖಾತೆಯಲ್ಲಿ ನಾವು ಸೇವ್ ಮಾಡಬಾರದು ಎಂದು ನೀವು ಬಯಸಿದರೆ, ನೀವು YouTube ಇತಿಹಾಸವನ್ನು ಆಫ್ ಮಾಡಬಹುದು. Google ಏನನ್ನು ಸೇವ್ ಮಾಡಬೇಕು ಎಂಬುದನ್ನು ನಾನು ಹೇಗೆ ನಿರ್ಧರಿಸಬಹುದು? ಎಂಬುದನ್ನು ನೋಡಿ

ಡೇಟಾ ಎಂದರೇನು?

ನೀವು ನಮಗೆ ಒದಗಿಸುವ, ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸುವ ವಿಷಯಗಳಾದ ನಿಮ್ಮ ಹೆಸರು ಅಥವಾ ಇಮೇಲ್ ವಿಳಾಸದಂತಹವುಗಳನ್ನು ನಿಮ್ಮ ವೈಯಕ್ತಿಕ ಮಾಹಿತಿಯು ಒಳಗೊಂಡಿರುತ್ತದೆ. Google ನಿಂದ ನಿಮಗೆ ಸಮಂಜಸವಾಗಿ ಲಿಂಕ್ ಆಗಿರಬಹುದಾದ ಇತರ ಡೇಟಾವನ್ನು ಸಹ ಇದು ಒಳಗೊಂಡಿರುತ್ತದೆ, ಉದಾಹರಣೆಗೆ, ನಿಮ್ಮ Google ಖಾತೆಯಲ್ಲಿ ನಿಮ್ಮೊಂದಿಗೆ ನಾವು ಸಂಯೋಜಿಸುವ ಮಾಹಿತಿ.

ನಿಮ್ಮ ವೈಯಕ್ತಿಕ ಮಾಹಿತಿಯು ಎರಡು ಪ್ರಕಾರದ ವಿಷಯಗಳನ್ನು ಒಳಗೊಂಡಿರುತ್ತದೆ:

ನೀವು ಒದಗಿಸುವ ಅಥವಾ ರಚಿಸುವ ವಿಷಯಗಳು

ನೀವು Google ಖಾತೆಯನ್ನು ರಚಿಸಿದಾಗ, ನಿಮ್ಮ ಹೆಸರು ಮತ್ತು ಪಾಸ್‌ವರ್ಡ್‌ನಂತಹ ವೈಯಕ್ತಿಕ ಮಾಹಿತಿಯನ್ನು ನೀವು ನಮಗೆ ಒದಗಿಸಿರುತ್ತೀರಿ.

ನೀವು ರಚಿಸುವ, ಅಪ್‌ಲೋಡ್ ಮಾಡುವ ಅಥವಾ ಇತರರಿಂದ ಸ್ವೀಕರಿಸುವ ಕಂಟೆಂಟ್ ಅನ್ನು ಸಹ ನೀವು ಸೇವ್ ಮಾಡಬಹುದು, ಇಮೇಲ್ ಸಂದೇಶಗಳು ಹಾಗೂ ಫೋಟೋಗಳು.

Google ನಲ್ಲಿನ ನಿಮ್ಮ ಚಟುವಟಿಕೆಗಳು

ಅತ್ಯುತ್ತಮ ಅನುಭವವನ್ನು ಒದಗಿಸಲು, ನೀವು ಹುಡುಕುವ ಪದಗಳು ಮತ್ತು ನೀವು ವೀಕ್ಷಿಸುವ ವೀಡಿಯೊಗಳು, ನೀವು ಸಂವಹನ ನಡೆಸುವ ಅಥವಾ ಕಂಟೆಂಟ್ ಅನ್ನು ಹಂಚಿಕೊಳ್ಳುವ ಜನರು ಹಾಗೂ ನಿಮ್ಮ Chrome ಬ್ರೌಸಿಂಗ್ ಇತಿಹಾಸಗಳನ್ನು ಒಳಗೊಂಡಂತೆ ನಮ್ಮ ಸೇವೆಗಳಲ್ಲಿನ ನಿಮ್ಮ ಚಟುವಟಿಕೆಯ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ.

ನೀವು Google ಸೇವೆಗಳನ್ನು ಆ್ಯಕ್ಸೆಸ್ ಮಾಡಲು ಬಳಸುವ ಆ್ಯಪ್‌ಗಳು, ಬ್ರೌಸರ್‌ಗಳು ಮತ್ತು ಸಾಧನಗಳ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ, ಇದು ನಿಮ್ಮ ಬ್ಯಾಟರಿ ಕಡಿಮೆಯಾದರೆ ನಿಮ್ಮ ಸ್ಕ್ರೀನ್ ಅನ್ನು ಮಬ್ಬಾಗಿಸುವಂತಹ ಫೀಚರ್‌ಗಳನ್ನು ಒದಗಿಸಲು ನಮಗೆ ಸಹಾಯ ಮಾಡುತ್ತದೆ.

ನೀವು ತಿರುವಿನಿಂದ ತಿರುವಿಗೆ ಮಾರ್ಗ ನಿರ್ದೇಶನಗಳಂತಹ ಫೀಚರ್‌ಗಳನ್ನು ಬಳಸಿದಾಗ, ನಿಮ್ಮ ಸ್ಥಳವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಹೆಚ್ಚಿನ ಮಾಹಿತಿಗೆ, ಸ್ಥಳ ವಿಭಾಗವನ್ನು ನೋಡಿ.

Google ಏಕೆ ಡೇಟಾವನ್ನು ಸಂಗ್ರಹಿಸುತ್ತದೆ?

ನಮ್ಮ ಸೇವೆಗಳನ್ನು ಒದಗಿಸಲು, ಅವುಗಳನ್ನು ನಿಮಗೆ ಇನ್ನಷ್ಟು ಸಹಕಾರಿಯಾಗಿಸಲು ಮತ್ತು 'ನಾವು ಡೇಟಾವನ್ನು ಬಳಸುವ ವಿಧಾನಗಳಲ್ಲಿ' ವಿವರಿಸಿರುವ ಇತರ ಕಾರಣಗಳಿಗಾಗಿ ನಮಗೆ ಬೇಕಾದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.

ಉದಾಹರಣೆಗೆ, ನೀವು ಎಲ್ಲಿಗೆ ಹೊರಟಿದ್ದೀರೋ ಅಲ್ಲಿಗೆ ತಲುಪಲು Google Maps, ಟ್ರಾಫಿಕ್ ಅನ್ನು ತಪ್ಪಿಸಿ, ನಿಮಗೆ ಸಹಾಯ ಮಾಡಬಹುದು. ಏಕೆಂದರೆ ಅದು ನೀವು ಎಲ್ಲಿದ್ದೀರಿ ಎಂಬುದರ ಕುರಿತ ಮಾಹಿತಿಯನ್ನು (ನಿಮ್ಮ ಡೇಟಾ) ಸಾರ್ವಜನಿಕ ಡೇಟಾದೊಂದಿಗೆ ಸಂಯೋಜಿಸುತ್ತದೆ (ನಕ್ಷೆಗಳು ಮತ್ತು ಸಾರ್ವಜನಿಕ ಸ್ಥಳಗಳ ಕುರಿತ ಮಾಹಿತಿ).

ನಾವು ಡೇಟಾವನ್ನು ಬಳಸುವ ವಿಧಾನಗಳು

ನಮ್ಮ ಸೇವೆಗಳನ್ನು ಒದಗಿಸಲು

ನೀವು ಹುಡುಕುವ ಪದಗಳನ್ನು ಪ್ರಕ್ರಿಯೆಗೊಳಿಸಿ ಫಲಿತಾಂಶಗಳನ್ನು ನೀಡುವಂತಹ ಸೇವೆಗಳನ್ನು ಒದಗಿಸಲು ನಾವು ಡೇಟಾವನ್ನು ಬಳಸುತ್ತೇವೆ.

ನಮ್ಮ ಸೇವೆಗಳನ್ನು ನಿರ್ವಹಿಸುವುದು ಮತ್ತು ಸುಧಾರಿಸುವುದು

ನಮ್ಮ ಸೇವೆಗಳನ್ನು ನಿರ್ವಹಿಸಲು ಮತ್ತು ಸುಧಾರಿಸಲು ಡೇಟಾ ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ಔಟೇಜ್‌ಗಳನ್ನು ನಾವು ಟ್ರ್ಯಾಕ್ ಮಾಡಬಹುದು. ಮತ್ತು ಯಾವ ಹುಡುಕಾಟ ಪದಗಳನ್ನು ಹೆಚ್ಚಾಗಿ ತಪ್ಪಾಗಿ ಬರೆಯಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ನಮ್ಮ ಸೇವೆಗಳಲ್ಲಿ ಬಳಸಲಾಗುವ ಕಾಗುಣಿತ ಪರೀಕ್ಷೆ ಫೀಚರ್‌ಗಳನ್ನು ಸುಧಾರಿಸಲು ಸಹಾಯವಾಗುತ್ತದೆ.

ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು

ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು ಡೇಟಾ ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನಮ್ಮ ಮೊದಲ ಫೋಟೋಗಳ ಆ್ಯಪ್, Picasa ದಲ್ಲಿ ಜನರು ತಮ್ಮ ಫೋಟೋಗಳನ್ನು ಹೇಗೆ ವ್ಯವಸ್ಥಿತಗೊಳಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಯಿತು ಮತ್ತು Google Photos ಅನ್ನು ವಿನ್ಯಾಸಗೊಳಿಸಲು ಮತ್ತು ಪ್ರಾರಂಭಿಸಲು ಸಹಾಯ ಮಾಡುವುದಕ್ಕೆ ಆ ಡೇಟಾವನ್ನು ಬಳಸಿದ್ದೇವೆ. ಮತ್ತು ನಮ್ಮ ಜನರೇಟಿವ್ AI ಉತ್ಪನ್ನಗಳು ಸೇರಿದಂತೆ ನಮ್ಮ ಸೇವೆಗಳ ಜೊತೆಗಿನ ನಿಮ್ಮ ಸಂವಹನಗಳನ್ನು ಈ ಸೇವೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ನಾವು ಬಳಸಬಹುದು.

ವಿಷಯ ಮತ್ತು ಜಾಹೀರಾತುಗಳೂ ಸೇರಿದಂತೆ, ವೈಯಕ್ತೀಕರಿಸಿದ ಸೇವೆಗಳನ್ನು ಒದಗಿಸುವುದು

ವೈಯಕ್ತಿಕಗೊಳಿಸಿದ ಕಂಟೆಂಟ್ ಅನ್ನು ಒದಗಿಸಲು ನಾವು ಡೇಟಾವನ್ನು ಬಳಸುತ್ತೇವೆ, ಉದಾಹರಣೆಗೆ, ನೀವು ಇಷ್ಟಪಡಬಹುದಾದ ವೀಡಿಯೊಗಳಿಗಾಗಿ ಮಾಡುವ ಶಿಫಾರಸುಗಳು. ನಿಮ್ಮ ಸೆಟ್ಟಿಂಗ್‌ಗಳು ಮತ್ತು ವಯಸ್ಸನ್ನು ಆಧರಿಸಿ, ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿ ನಾವು ನಿಮಗೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸುತ್ತೇವೆ.

ಕಾರ್ಯಕ್ಷಮತೆಯನ್ನು ಮಾಪನ ಮಾಡಿ

ಪರ್ಫಾರ್ಮೆನ್ಸ್ ಅನ್ನು ಮಾಪನ ಮಾಡಲು ಮತ್ತು ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ನಾವು ಡೇಟಾವನ್ನು ಬಳಸುತ್ತೇವೆ

ನಿಮ್ಮೊಂದಿಗೆ ಸಂವಹಿಸಲು

ಒಂದು ವೇಳೆ ನಾವು ಅನುಮಾನಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಿದರೆ ನಿಮಗೆ ನೋಟಿಫಿಕೇಶನ್ ಕಳುಹಿಸಲು ನಿಮ್ಮ ಇಮೇಲ್ ವಿಳಾಸವನ್ನು ನಾವು ಬಳಸಬಹುದು

Google, ನಮ್ಮ ಬಳಕೆದಾರರು ಮತ್ತು ಸಾರ್ವಜನಿಕರನ್ನು ಸಂರಕ್ಷಿಸಲು

ವಂಚನೆಯನ್ನು ಪತ್ತೆಹಚ್ಚುವುದು ಮತ್ತು ತಡೆಗಟ್ಟುವಂತಹ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ನಾವು ಡೇಟಾವನ್ನು ಬಳಸುತ್ತೇವೆ

ವಿಷಯಗಳನ್ನು ವೈಯಕ್ತಿಕಗೊಳಿಸಲು ಡೇಟಾವನ್ನು Google ಹೇಗೆ ಬಳಸುತ್ತದೆ?

ನಾವು ಸಂಗ್ರಹಿಸುವ ಮಾಹಿತಿಯನ್ನು ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ನಿಮಗಾಗಿ ಕಸ್ಟಮೈಸ್ ಮಾಡಲು ಬಳಸುತ್ತೇವೆ, ಉದಾಹರಣೆಗೆ:

  • ನಿಮಗೆ ಇಷ್ಟವಾಗಬಹುದಾದ ವೀಡಿಯೊಗಳಿಗಾಗಿ ಶಿಫಾರಸುಗಳು
  • ನೀವು Google ಸೇವೆಗಳನ್ನು ಹೇಗೆ ಬಳಸುತ್ತೀರಿ ಎಂಬುದಕ್ಕೆ ಅಳವಡಿಸಲಾದ ಭದ್ರತಾ ಸಲಹೆಗಳು (ಭದ್ರತಾ ಪರಿಶೀಲನೆ ನೋಡಿ)

ಸೆಟ್ಟಿಂಗ್ ಆಫ್ ಆಗಿರುವಾಗ ಅಥವಾ ನಿರ್ದಿಷ್ಟ ವಯಸ್ಸಿನವರಿಗೆ ತೋರಿಸದೇ ಇರುವ ಸಂದರ್ಭಗಳನ್ನು ಹೊರತುಪಡಿಸಿ, ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ಸಹ ನಾವು ಡೇಟಾವನ್ನು ಬಳಸುತ್ತೇವೆ.

ನನಗೆ ಕಾಣಿಸುವ ಜಾಹೀರಾತುಗಳನ್ನು Google ವೈಯಕ್ತಿಕಗೊಳಿಸುತ್ತದೆಯೇ?

ನಾವು ತೋರಿಸುವ ಜಾಹೀರಾತುಗಳನ್ನು ಸಾಧ್ಯವಾದಷ್ಟು ಉಪಯುಕ್ತವಾಗಿಸಲು ಪ್ರಯತ್ನಿಸುತ್ತೇವೆ. ಆದರೆ, ನಿರ್ದಿಷ್ಟ ವಯೋಮಾನಗಳಿಗೆ ಅಥವಾ ಜಾಹೀರಾತು ವೈಯಕ್ತೀಕರಣವನ್ನು ಆಫ್ ಮಾಡಿರುವವರಿಗೆ ನಾವು ಜಾಹೀರಾತುಗಳನ್ನು ವೈಯಕ್ತಿಕಗೊಳಿಸುವುದಿಲ್ಲ.

ಜಾಹೀರಾತುಗಳನ್ನು ವೈಯಕ್ತಿಕಗೊಳಿಸದೆಯೇ ನಾವು ಅವುಗಳನ್ನು ಈಗಲೂ ಉಪಯುಕ್ತವಾಗಿಸುತ್ತೇವೆ. ಉದಾಹರಣೆಗೆ, ನೀವು “ಹೊಸ ಶೂಗಳು” ಎಂಬ ಫಲಿತಾಂಶಗಳ ಪುಟವನ್ನು ನೋಡುತ್ತಿದ್ದರೆ ನೀವು ಸ್ನೀಕರ್ ಕಂಪನಿಯೊಂದರ ಜಾಹೀರಾತನ್ನು ಸಹ ನೋಡಬಹುದು. ದಿನದ ಸಮಯ, ಸಾಮಾನ್ಯ ಸ್ಥಳ ಮತ್ತು ನೀವು ನೋಡುತ್ತಿರುವ ಪುಟದ ಕಂಟೆಂಟ್‌ನಂತಹ ಸಾಮಾನ್ಯ ಅಂಶಗಳನ್ನು ಜಾಹೀರಾತು ಆಧರಿಸಿರಬಹುದು.

ನಿಮ್ಮ ನಿಯಂತ್ರಣದಲ್ಲಿದೆ

ನನ್ನ ಖಾತೆಗೆ Google ಏನನ್ನು ಸೇವ್ ಮಾಡುತ್ತದೆ ಎಂಬುದನ್ನು ನಾನು ಹೇಗೆ ನಿರ್ಧರಿಸಬಹುದು?

ನೀವು ಫೋಟೋಗಳಂತಹ Google ಸೇವೆಯನ್ನು ಬಳಸುವಾಗ, ನಿಮ್ಮ ಫೋಟೋಗಳನ್ನು ಬ್ಯಾಕಪ್ ಮಾಡಲು ಮತ್ತು ಸಿಂಕ್ ಮಾಡಲು ಬಯಸುತ್ತೀರಾ ಎಂಬಂತಹ ವಿಷಯಗಳನ್ನು ನಿರ್ಧರಿಸಲು ನಿಮಗೆ ಅನುಮತಿಸುವ ಸೆಟ್ಟಿಂಗ್‌ಗಳು ಇರುತ್ತವೆ.

Google ಸೇವೆಗಳಲ್ಲಿನ ನಿಮ್ಮ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ನಿಮ್ಮ Google ಖಾತೆಯಲ್ಲಿ ಇತಿಹಾಸವಾಗಿ ಸೇವ್ ಮಾಡಬೇಕೇ ಮತ್ತು ನಿಮ್ಮ ಅನುಭವವನ್ನು ವೈಯಕ್ತೀಕರಿಸುವುದಕ್ಕಾಗಿ ನಿಮ್ಮ Google ಖಾತೆಯಲ್ಲಿರುವ ಮಾಹಿತಿಯನ್ನು Google ಸೇವೆಗಳು ಬಳಸಬಹುದೇ ಎಂಬುದನ್ನು ನಿರ್ಧರಿಸಲು ನಿಮಗೆ ಅವಕಾಶ ನೀಡುವ ಸೆಟ್ಟಿಂಗ್‌ಗಳು ಸಹ ಇವೆ.

Search ಸೇವೆಗಳಲ್ಲಿ ವೈಯಕ್ತೀಕರಣಗೊಳಿಸಲಾದ ಶಿಫಾರಸುಗಳು

ನಿಮ್ಮ ಪ್ರೊಫೈಲ್ ಮಾಹಿತಿ ಮತ್ತು ಸೇವ್ ಮಾಡಲಾದ ಇತಿಹಾಸದಂತಹ ನಿಮ್ಮ Google ಖಾತೆಯಲ್ಲಿನ ಮಾಹಿತಿಯನ್ನು ಆಧರಿಸಿ Search, Maps, Shopping, Hotels, Flights, Translate ಮತ್ತು News ನಂತಹ Search ಸೇವೆಗಳು ನಿಮಗೆ ವೈಯಕ್ತೀಕರಣಗೊಳಿಸಲಾದ ಶಿಫಾರಸುಗಳನ್ನು ನೀಡಬಹುದೇ ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅವಕಾಶ ನೀಡುತ್ತದೆ. ಉದಾಹರಣೆಗೆ, ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿ AI ಪ್ರತಿಕ್ರಿಯೆಗಳನ್ನು ಒದಗಿಸಲು Search ಸೇವೆಗಳು ಆ ಮಾಹಿತಿಯನ್ನು ಬಳಸಬಹುದು.

Search ಸೇವೆಗಳ ಇತಿಹಾಸ

Search ಸೇವೆಗಳಲ್ಲಿನ ನಿಮ್ಮ ಚಟುವಟಿಕೆಯನ್ನು ಸೇವ್ ಮಾಡುತ್ತದೆ, ಉದಾಹರಣೆಗೆ ನಿಮ್ಮ ಹುಡುಕಾಟಗಳು ಮತ್ತು ನಿಮ್ಮ ಸಾಮಾನ್ಯ ಸ್ಥಳದಂತಹ ಸಂಬಂಧಿತ ಮಾಹಿತಿ. Search ಸೇವೆಗಳಲ್ಲಿ ನಿಮ್ಮ ಅನುಭವಗಳನ್ನು ಕಸ್ಟಮೈಸ್ ಮಾಡಲು ನಿಮ್ಮ ಚಟುವಟಿಕೆಯನ್ನು ಬಳಸಲಾಗುತ್ತದೆ. ಉದಾಹರಣೆಗೆ, ನೀವು ಟೈಪ್ ಮಾಡಲು ಪ್ರಾರಂಭಿಸಿದಾಗ, ಹಿಂದಿನ ಹುಡುಕಾಟಗಳು ನಿಮಗೆ ಸಲಹೆಗಳಾಗಿ ಕಾಣಿಸಬಹುದು. AI ಮಾಡಲ್‌ಗಳು ಸೇರಿದ ಹಾಗೆ, Google ಸೇವೆಗಳು ಮತ್ತು ತಂತ್ರಜ್ಞಾನಗಳನ್ನು ಸುಧಾರಿಸುವುದಕ್ಕೆ ನೆರವಾಗಲು ಮತ್ತು Google, ಅದರ ಬಳಕೆದಾರರು ಮತ್ತು ಸಾರ್ವಜನಿಕರನ್ನು ರಕ್ಷಿಸಲು Google ನಿಮ್ಮ Search ಸೇವೆಗಳ ಇತಿಹಾಸದ ಡೇಟಾವನ್ನು ಸಹ ಬಳಸುತ್ತದೆ.

Google Play ವೈಯಕ್ತಿಕಗೊಳಿಸುವಿಕೆ

ನಿಮ್ಮ ಅನುಭವವನ್ನು ಇನ್ನಷ್ಟು ವೈಯಕ್ತೀಕರಿಸಲು, Google Play Store ನಿಂದ ನೀವು ಖರೀದಿಸುವ ಮತ್ತು ಡೌನ್‌ಲೋಡ್ ಮಾಡುವ ಐಟಂಗಳಂತಹ ನಿಮ್ಮ Google ಖಾತೆಯಲ್ಲಿರುವ ಮಾಹಿತಿಯನ್ನು Google Play ಬಳಸಬಹುದೇ ಎಂಬುದನ್ನು ಆಯ್ಕೆ ಮಾಡಲು ನಿಮಗೆ ಅವಕಾಶ ನೀಡುತ್ತದೆ. ಉದಾಹರಣೆಗೆ, ನೀವು ಬಳಸುವ ಆ್ಯಪ್‌ಗಳ ಆಧಾರದ ಮೇಲೆ ನಿಮಗೆ ಆ್ಯಪ್‌ಗಳನ್ನು ಉತ್ತಮವಾಗಿ ಶಿಫಾರಸು ಮಾಡಲು Google Play ಗೆ ಸಾಧ್ಯವಾಗುತ್ತದೆ.

Google Play ಇತಿಹಾಸ

ನಿಮ್ಮ ಸಾಧನದಲ್ಲಿ ನೀವು ತೆರೆಯುವ ಆ್ಯಪ್‌ಗಳಂತಹ ನಿಮ್ಮ Google Play ಚಟುವಟಿಕೆಯನ್ನು ನಿಮ್ಮ Google ಖಾತೆಯಲ್ಲಿ ಸೇವ್ ಮಾಡುತ್ತದೆ. Google ಸೇವೆಗಳಾದ್ಯಂತ ನಿಮ್ಮ ಅನುಭವವನ್ನು ಕಸ್ಟಮೈಸ್ ಮಾಡಲು ಈ ಚಟುವಟಿಕೆಯನ್ನು ಬಳಸಬಹುದು, ಉದಾಹರಣೆಗೆ ನೀವು ಹುಡುಕುತ್ತಿರುವ ಆ್ಯಪ್‌ಗಳನ್ನು ವೇಗವಾಗಿ ಪತ್ತೆಹಚ್ಚಲು ನಿಮಗೆ ಸಹಾಯ ಮಾಡುವುದು.

ವೆಬ್ - ಆ್ಯಪ್‌ ಚಟುವಟಿಕೆ

Google TV ಯಂತಹ ಕೆಲವು Google ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿನ ನಿಮ್ಮ ಚಟುವಟಿಕೆಯನ್ನು ಸೇವ್ ಮಾಡುತ್ತದೆ ಮತ್ತು ಸ್ಥಳದಂತಹ ಸಂಬಂಧಿತ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ಸಿಂಕ್ ಮಾಡಲಾದ Chrome ಇತಿಹಾಸ ಹಾಗೂ Google ಸೇವೆಗಳನ್ನು ಬಳಸುವ ಸೈಟ್‌ಗಳು, ಆ್ಯಪ್‌ಗಳು ಮತ್ತು ಸಾಧನಗಳಲ್ಲಿನ ಚಟುವಟಿಕೆಯನ್ನು ಸಹ ಸೇವ್ ಮಾಡುತ್ತದೆ. Google ಸೇವೆಗಳಲ್ಲಿ ನಿಮಗೆ ಉತ್ತಮ ಶಿಫಾರಸುಗಳನ್ನು ನೀಡಲು ಮತ್ತು ಹೆಚ್ಚು ವೈಯಕ್ತೀಕರಿಸಿದ ಅನುಭವಗಳನ್ನು ಒದಗಿಸಲು ನಿಮ್ಮ ಚಟುವಟಿಕೆಯನ್ನು ಬಳಸಲಾಗುತ್ತದೆ.

YouTube ಇತಿಹಾಸ

ನೀವು YouTube ಬಳಸುವಾಗ ನೀವು ವೀಕ್ಷಿಸುವ ವೀಡಿಯೊಗಳು ಮತ್ತು ನೀವು ಹುಡುಕುವ ವಿಷಯಗಳನ್ನು ಸೇವ್ ಮಾಡುತ್ತದೆ. ನಿಮಗೆ ಉತ್ತಮ ಶಿಫಾರಸುಗಳನ್ನು ನೀಡಲು ಮತ್ತು ನೀವು ಎಲ್ಲಿಗೆ ನಿಲ್ಲಿಸಿದ್ದಿರೋ ಅಲ್ಲಿಂದಲೇ ಮುಂದುವರಿಸಲು ನಿಮಗೆ ನೆರವಾಗುವುದಕ್ಕಾಗಿ ನಿಮ್ಮ YouTube ಇತಿಹಾಸವನ್ನು ಬಳಸಲಾಗುತ್ತದೆ.

Gemini ಆ್ಯಪ್‌ಗಳ ಚಟುವಟಿಕೆ

AI ಮಾಡಲ್‌ಗಳು ಸೇರಿದ ಹಾಗೆ Google ಸೇವೆಗಳನ್ನು ಸುಧಾರಿಸುವುದಕ್ಕಾಗಿ ನೆರವಾಗಲು, ನಿಮ್ಮ ಚಾಟ್‌ಗಳು ಮತ್ತು ನೀವು Gemini ಜೊತೆ ಹಂಚಿಕೊಳ್ಳುವ ವಿಷಯಗಳಂತಹ (ಉದಾಹರಣೆಗೆ ಫೈಲ್‌ಗಳು ಮತ್ತು ಫೋಟೋಗಳು) ನಿಮ್ಮ Gemini ಚಟುವಟಿಕೆಯನ್ನು Google ಬಳಸಬಹುದೇ ಎಂಬುದನ್ನು ಆಯ್ಕೆಮಾಡಲು ನಿಮಗೆ ಅವಕಾಶ ನೀಡುತ್ತದೆ. ನಿಮ್ಮ Gemini ಆ್ಯಪ್‌ಗಳ ಚಟುವಟಿಕೆಯನ್ನು ನಿಮ್ಮ ಚಾಟ್‌ಗಳನ್ನು ನೀವು ಎಲ್ಲಿಗೆ ನಿಲ್ಲಿಸಿದ್ದಿರೋ ಅಲ್ಲಿಂದಲೇ ಯಾವಾಗ ಬೇಕಾದರೂ ಮುಂದುವರಿಸಲು ನೆರವಾಗುವಂತಹ ಕೆಲಸಗಳಿಗೂ ಸಹ ಬಳಸಲಾಗುತ್ತದೆ.

ನನ್ನ ಡೇಟಾವನ್ನು ನಾನು ಅಳಿಸುವುದು ಹೇಗೆ?

ನಿಮ್ಮ Google ಖಾತೆಯಲ್ಲಿ ಸೇವ್ ಮಾಡಲಾದ ಡೇಟಾವನ್ನು ನೀವು ಅಳಿಸಬಹುದು. ನೀವು ಶಾಶ್ವತವಾಗಿ ಅಳಿಸಲು ಆಯ್ಕೆ ಮಾಡಿದ ಡೇಟಾವನ್ನು ನಮ್ಮ ಸಿಸ್ಟಂಗಳಿಂದ ತೆಗೆದುಹಾಕಲಾಗುತ್ತದೆ. ಈ ಡೇಟಾವನ್ನು ನಮ್ಮ ಸರ್ವರ್‌ಗಳಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಅಥವಾ ನಿಮಗೆ ಸಂಯೋಜಿಸಲಾಗದ ರೂಪದಲ್ಲಿ ಮಾತ್ರ ಇರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಎಚ್ಚರಿಕೆಯ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ.

ನೀವು ನಮೂದಿಸಿದ ಪ್ರಾಂಪ್ಟ್‌ಗಳು ಮತ್ತು ನೀವು ಹುಡುಕಿದ, ಓದಿದ ಮತ್ತು ವೀಕ್ಷಿಸಿದ ವಿಷಯಗಳಂತಹ ನಿಮ್ಮ Google ಖಾತೆಯಲ್ಲಿ ಸೇವ್ ಮಾಡಲಾದ ಚಟುವಟಿಕೆಯನ್ನು ಪರಿಶೀಲಿಸಲು ನನ್ನ ಚಟುವಟಿಕೆ ಎಂಬುದಕ್ಕೆ ಭೇಟಿ ನೀಡಿ. ನಿರ್ದಿಷ್ಟ ಟೈಮ್ ರೇಂಜ್‌ನ ಚಟುವಟಿಕೆಯ ನಿರ್ದಿಷ್ಟ ಭಾಗಗಳನ್ನು ಅಥವಾ ನಿಮ್ಮ ಎಲ್ಲಾ ಚಟುವಟಿಕೆಯನ್ನು ನೀವು ಅಳಿಸಬಹುದು.

ನಿಮ್ಮ ಚಟುವಟಿಕೆಯನ್ನು ಸ್ವಯಂಚಾಲಿತವಾಗಿ ಅಳಿಸಲು ಸಹ ನೀವು ಆಯ್ಕೆ ಮಾಡಬಹುದು.

ನನ್ನ ಕಂಟೆಂಟ್ ಅನ್ನು ನಾನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ನಿಮ್ಮ ಕಂಟೆಂಟ್ ಇಮೇಲ್‌ಗಳು, ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು, ಶೀಟ್‌ಗಳು, ಕಾಮೆಂಟ್‌ಗಳು, ಸಂಪರ್ಕಗಳು ಮತ್ತು ಕ್ಯಾಲೆಂಡರ್ ಈವೆಂಟ್‌ಗಳಂತಹ ವಿಷಯಗಳನ್ನು ಒಳಗೊಂಡಿರುತ್ತದೆ.

ನಿಮ್ಮ ಕಂಟೆಂಟ್‌ನ ಆರ್ಕೈವ್ ಅನ್ನು ರಚಿಸಲು — ಅದನ್ನು ಬ್ಯಾಕಪ್ ಮಾಡಲು ಅಥವಾ ಒಂದು ವೇಳೆ ನೀವು ಬೇರೆ ಸೇವೆಯನ್ನು ಬಳಸಲು ಬಯಸಿದರೆ, ಅದನ್ನು ಬೇರೊಂದು ಕಂಪನಿಗೆ ಕೊಂಡೊಯ್ಯಲು ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿ ಎಂಬುದಕ್ಕೆ ಭೇಟಿ ನೀಡಿ.

ನಾನು ಸೈನ್ ಔಟ್ ಆದಾಗ ನನಗೆ ಯಾವ ಕಂಟ್ರೋಲ್‌ಗಳು ಲಭ್ಯವಿರುತ್ತವೆ?

ನೀವು ಸೈನ್ ಔಟ್ ಮಾಡಿದ್ದರೂ ಸಹ, Google ಅನ್ನು ಹೇಗೆ ಬಳಸುವುದು ಎಂಬುದನ್ನು ಆಯ್ಕೆಮಾಡಲು ನಿಮಗೆ ಅನುಮತಿಸುವ ಕಂಟ್ರೋಲ್‌ಗಳನ್ನು ನೀವು ಹೊಂದಿದ್ದೀರಿ. ನೀವು ಸೈನ್ ಔಟ್ ಆಗಿರುವಾಗ, ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಲು g.co/privacytools ಗೆ ಭೇಟಿ ಕೊಡಿ:

ಹುಡುಕಾಟ ಕಸ್ಟಮೈಸ್ ಮಾಡುವಿಕೆ

ಇನ್ನಷ್ಟು ಪ್ರಸ್ತುತ ಫಲಿತಾಂಶಗಳು ಮತ್ತು ಶಿಫಾರಸುಗಳಿಗಾಗಿ ಈ ಬ್ರೌಸರ್‌ನಿಂದ ನಿಮ್ಮ Google ಹುಡುಕಾಟಗಳನ್ನು ಬಳಸುತ್ತದೆ.

YouTube ಹುಡುಕಾಟ ಮತ್ತು ವೀಕ್ಷಣೆ ಇತಿಹಾಸ

ನಿಮಗೆ YouTube ಅನ್ನು ವೈಯಕ್ತಿಕಗೊಳಿಸಲು, ನೀವು ವೀಕ್ಷಿಸುವ ವೀಡಿಯೊಗಳು ಮತ್ತು ನೀವು ಹುಡುಕುವ ವಿಷಯಗಳಂತಹ YouTube ನಲ್ಲಿನ ನಿಮ್ಮ ಚಟುವಟಿಕೆಯನ್ನು ಬಳಸುತ್ತದೆ.

ನಿಮ್ಮ ಬ್ರೌಸರ್‌ನಲ್ಲಿ ನೀವು ಕೆಲವು ಅಥವಾ ಎಲ್ಲಾ ಕುಕಿಗಳನ್ನು ನಿರ್ಬಂಧಿಸಬಹುದು, ಆದರೆ ಇದು ವೆಬ್‌ನಾದ್ಯಂತ ಕೆಲವು ಫೀಚರ್‌ಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುವುದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ನೀವು ಸೈನ್ ಇನ್ ಮಾಡಲು ಬಯಸಿದಾಗ ಅನೇಕ ವೆಬ್‌ಸೈಟ್‌ಗಳಿಗೆ ಕುಕಿಗಳನ್ನು ಆನ್ ಮಾಡಬೇಕಾಗುತ್ತದೆ.

ಸೈನ್ ಔಟ್ ಆಗಿರುವ ಬಳಕೆದಾರರು ಸಹ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಅವರು ನೋಡಲು ಬಯಸುತ್ತಾರೆಯೇ ಎಂಬುದನ್ನು ಆಯ್ಕೆ ಮಾಡಬಹುದು, ಯಾಕೆಂದರೆ ನಾವು ನಿರ್ದಿಷ್ಟ ವಯೋಮಾನಗಳಿಗೆ ಜಾಹೀರಾತುಗಳನ್ನು ವೈಯಕ್ತಿಕಗೊಳಿಸುವುದಿಲ್ಲ.

ಹೊಸ ಟ್ಯಾಬ್‌ನಲ್ಲಿ ತೆರೆಯುತ್ತದೆ(ಅಡಿಟಿಪ್ಪಣಿ ತೆರೆಯುತ್ತದೆ)