ಇದು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ಪ್ರಸ್ತುತ ಆವೃತ್ತಿ ಅಥವಾ ಎಲ್ಲ ಹಿಂದಿನ ಆವೃತ್ತಿಗಳನ್ನು ವೀಕ್ಷಿಸಿ.

ಗೌಪ್ಯತಾ ನೀತಿ

ಕೊನೆಯ ಬಾರಿ ಮಾರ್ಪಡಿಸಿರುವುದು: ಡಿಸೆಂಬರ್ 18, 2017 (ಆರ್ಕೈವ್ ಮಾಡಲಾದ ಆವೃತ್ತಿಗಳನ್ನು ವೀಕ್ಷಿಸಿ)

ಮಾಹಿತಿಯನ್ನು ಹುಡುಕುವುದಕ್ಕಾಗಿ ಮತ್ತು ಹಂಚಿಕೊಳ್ಳುವುದಕ್ಕಾಗಿ, ಇತರ ಜನರೊಂದಿಗೆ ಸಂವಹಿಸುವುದಕ್ಕಾಗಿ ಅಥವಾ ಹೊಸ ವಿಷಯವನ್ನು ರಚಿಸುವುದಕ್ಕಾಗಿ – ಹೀಗೆ ನಮ್ಮ ಸೇವೆಗಳನ್ನು ಹತ್ತು ಹಲವು ಬಗೆಗಳಲ್ಲಿ ನೀವು ಬಳಸಬಹುದು. Google ಖಾತೆಯನ್ನು ರಚಿಸುವುದರ ಮೂಲಕ ಮಾಹಿತಿಯನ್ನು ನೀವು ನಮ್ಮೊಂದಿಗೆ ಹಂಚಿಕೊಂಡಾಗ,ಅಂತಹ ಸೇವೆಗಳನ್ನು ನಾವು ಇನ್ನಷ್ಟು ಉತ್ತಮಗೊಳಿಸಬಹುದು. ಉದಾಹರಣೆಗೆ, ಹೆಚ್ಚು ಸಂಬಂಧಿತ ಹುಡುಕಾಟ ಫಲಿತಾಂಶಗಳು ಮತ್ತು ಜಾಹೀರಾತುಗಳನ್ನು ನಿಮಗೆ ತೋರಿಸಲು, ಜನರೊಂದಿಗೆ ಸಂಪರ್ಕ ಸಾಧಿಸುವಲ್ಲಿ ನಿಮಗೆ ಸಹಾಯ ಮಾಡಲು ಅಥವಾ ಹಂಚಿಕೆಯನ್ನು ಇತರರೊಂದಿಗೆ ತ್ವರಿತವಾಗಿ ಮತ್ತು ಸುಲಭವಾಗಿ ಮಾಡಲು ಸಹಾಯ ಮಾಡಲು. ನೀವು ನಮ್ಮ ಸೇವೆಗಳನ್ನು ಬಳಸಿದಂತೆ, ನಾವು ಮಾಹಿತಿಯನ್ನು ಹೇಗೆ ಬಳಸುತ್ತಿದ್ದೇವೆ ಮತ್ತು ನಿಮ್ಮ ಗೌಪ್ಯತೆಗೆ ಯಾವುದೇ ರೀತಿಯ ಧಕ್ಕೆ ಬರದಂತೆ ಹೇಗೆ ನಿರ್ವಹಿಸುತ್ತೇವೆ ಎಂಬುದನ್ನು ನೀವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕೆಂಬುದು ನಮ್ಮ ಆಕಾಂಕ್ಷೆ.

ನಮ್ಮ ಗೌಪ್ಯತೆ ನೀತಿ ಈ ಎಲ್ಲಾ ಸಂಗತಿಗಳನ್ನು ವಿವರಿಸುತ್ತದೆ:

  • ನಾವು ಯಾವ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತೇವೆ ಮತ್ತು ಅದನ್ನು ಏಕೆ ಸಂಗ್ರಹಿಸಿಕೊಳ್ಳುತ್ತೇವೆ.
  • ನಾವು ಆ ಮಾಹಿತಿಯನ್ನು ಹೇಗೆ ಬಳಸುತ್ತೇವೆ.
  • ಮಾಹಿತಿಯನ್ನು ಬಳಸುವುದು ಹಾಗೂ ನವೀಕರಿಸುವುದು ಹೇಗೆ ಎಂಬುದು ಸೇರಿದಂತೆ, ನಾವು ಒದಗಿಸುವ ಆಯ್ಕೆಗಳು.

ಅದನ್ನು ಸಾಧ್ಯವಾದಷ್ಟು ಸರಳವಾಗಿರುವಂತೆ ಇರಿಸಲು ನಾವು ಪ್ರಯತ್ನಿಸಿದ್ದೇವೆ, ಆದರೆ ಕುಕೀಸ್, IP ವಿಳಾಸಗಳು, ಪಿಕ್ಸೆಲ್ ಟ್ಯಾಗ್‌ಗಳು ಹಾಗೂ ಬ್ರೌಸರ್‌ಗಳಂತಹ ಪದಗಳು ನಿಮಗೆ ಪರಿಚಯವಿಲ್ಲದಿದ್ದಲ್ಲಿ , ಮೊದಲಿಗೆ ಈ ಮುಖ್ಯ ಪದಗಳ ಕುರಿತು ಓದಿ. ನಿಮ್ಮ ಗೌಪ್ಯತೆಯು Google ಗೆ ಮುಖ್ಯವಾಗಿದೆ ಆದ್ದರಿಂದಾಗಿ ನೀವು Google ಗೆ ಹೊಸಬರಾಗಲಿ ಅಥವಾ ದೀರ್ಘಕಾಲಿಕ ಬಳಕೆದಾರರಾಗಲಿ, ದಯವಿಟ್ಟು ನಮ್ಮ ಅಭ್ಯಾಸಗಳನ್ನು ತಿಳಿದುಕೊಳ್ಳಲು ಸಮಯವನ್ನು ತೆಗೆದುಕೊಳ್ಳಿ – ಮತ್ತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ನಮ್ಮನ್ನು ಸಂಪರ್ಕಿಸಿ.

ನಾವು ಸಂಗ್ರಹಿಸುವ ಮಾಹಿತಿ

ನೀವು ಯಾವ ಭಾಷೆಯನ್ನು ಮಾತನಾಡುತ್ತೀರಿ ಎಂಬಂತಹ ಪ್ರಾಥಮಿಕ ಸಂಗತಿಯಿಂದ ಹಿಡಿದು ಮೂಲ ವಿಷಯದಿಂದ ಹಿಡಿದು, ನಿಮಗೆ ಹೆಚ್ಚು ಲಾಭದಾಯಕವಾಗುವ ಜಾಹೀರಾತುಗಳು, ಆನ್‌ಲೈನ್‌ನಲ್ಲಿ ನಿಮಗೆ ಅತ್ಯಂತ ಗಣ್ಯವಾಗಿರುವವರು, ಅಥವಾ ನೀವು ಇಷ್ಟಪಡಬಹುದಾದ YouTube ವೀಡಿಯೊಗಳಂತಹ ಹೆಚ್ಚು ಕ್ಲಿಷ್ಟಕರ ವಿಷಯಗಳನ್ನು ಹುಡುಕಲು – ನಮ್ಮ ಎಲ್ಲಾ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಲು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ.

ನಾವು ಮಾಹಿತಿಯನ್ನು ಈ ರೀತಿಗಳಲ್ಲಿ ಸಂಗ್ರಹಿಸಿಕೊಳ್ಳುತ್ತೇವೆ:

  • ನೀವು ನೀಡುವಂತಹ ಮಾಹಿತಿ. ಉದಾಹರಣೆಗೆ, ನಮ್ಮ ಬಹಳಷ್ಟು ಸೇವೆಗಳ ಬಳಕೆಗೆ ನೀವು Google ಖಾತೆಗೆ ಸೈನ್‌ ಇನ್‌ ಆಗುವುದು ಅತ್ಯವಶ್ಯಕವಾಗಿರುತ್ತದೆ. ನೀವು ಸೈನ್ ಅಪ್ ಮಾಡುವಾಗ, ನಿಮ್ಮ ಹೆಸರು, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಅಥವಾ ಕ್ರೆಡಿಟ್ ಕಾರ್ಡ್ನಂತಹ ವೈಯಕ್ತಿಕ ಮಾಹಿತಿಯನ್ನು ನಾವು ಕೇಳುತ್ತೇವೆ. ನಾವು ಒದಗಿಸುವ ಹಂಚಿಕೊಳ್ಳುವ ವೈಶಿಷ್ಟ್ಯಗಳ ಪೂರ್ಣ ಪ್ರಯೋಜನವನ್ನು ನೀವು ತೆಗೆದುಕೊಳ್ಳಲು ಬಯಸಿದ್ದಲ್ಲಿ, ಸಾರ್ವಜನಿಕವಾಗಿ ವೀಕ್ಷಿಸಬಲ್ಲ ನಿಮ್ಮ ಹೆಸರು ಹಾಗೂ ಫೋಟೋವನ್ನು ಒಳಗೊಂಡಿರಬಹುದಾದ Google ಪ್ರೊಫೈಲ್ ಅನ್ನು ರಚಿಸಲು ಕೂಡ ನಾವು ನಿಮ್ಮಲ್ಲಿ ಕೇಳಿಕೊಳ್ಳಬಹುದು.

  • ನಮ್ಮ ಸೇವೆಗಳ ನಿಮ್ಮ ಬಳಕೆಯಿಂದ ನಾವು ಸಂಗ್ರಹಿಸುವ ಮಾಹಿತಿ. ನೀವು YouTube ನಲ್ಲಿ ವೀಡಿಯೊ ವೀಕ್ಷಿಸುವಾಗ, ನಮ್ಮ ಜಾಹೀರಾತು ಸೇವೆಗಳನ್ನು ಬಳಸುವ ವೆಬ್‌ಸೈಟ್‌ಗೆ ಭೇಟಿ ನೀಡುವುದು ಅಥವಾ ನೀವು ನಮ್ಮ ಜಾಹೀರಾತುಗಳನ್ನು ವೀಕ್ಷಿಸುವಾಗ ಮತ್ತು ಸಂವಹನ ನಡೆಸುವಾಗ ಹಾಗೂ ವಿಷಯದ ಕುರಿತು ನೀವು ಬಳಸುವ ಸೇವೆಗಳು ಮತ್ತು ಅವುಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದರ ಕುರಿತು ನಾವು ಮಾಹಿತಿ ಸಂಗ್ರಹಿಸುತ್ತೇವೆ. ಈ ಮಾಹಿತಿಯು ಇವೆಲ್ಲವನ್ನೂ ಒಳಗೊಂಡಿವೆ:

    • ಸಾಧನದ ಮಾಹಿತಿ

      ನಾವು (ನಿಮ್ಮ ಹಾರ್ಡ್‌ವೇರ್ ಮಾದರಿ, ಆಪರೇಟಿಂಗ್ ಸಿಸ್ಟಮ್ ಆವೃತ್ತಿ, ನಿರ್ದಿಷ್ಟ ಸಾಧನ ಗುರುತಿಸುವಿಕೆಗಳು, ಮತ್ತು ಫೋನ್ ಸಂಖ್ಯೆ ಸೇರಿದಂತೆ ಮೊಬೈಲ್ ನೆಟ್‌ವರ್ಕ್ ಮಾಹಿತಿಯಂತಹ) ಸಾಧನ-ನಿರ್ದಿಷ್ಟ ಮಾಹಿತಿ ಸಂಗ್ರಹಿಸುತ್ತೇವೆ. ನಿಮ್ಮ Google ಖಾತೆಯೊಂದಿಗೆ ನಿಮ್ಮ ಸಾಧನ ಗುರುತಿಸುವಿಕೆಗಳು ಅಥವಾ ಫೋನ್ ಸಂಖ್ಯೆಯನ್ನು Google ಸಂಯೋಜಿಸಬಹುದು.

    • ಲಾಗ್ ಮಾಹಿತಿ

      ನಮ್ಮ ಸೇವೆಗಳನ್ನು ನೀವು ಬಳಸಿದಾಗ ಅಥವಾ Google ಒದಗಿಸಿದ ವಿಷಯವನ್ನು ವೀಕ್ಷಿಸಿದಾಗ, ನಾವು ಕೆಲವು ಮಾಹಿತಿಯನ್ನು ಸ್ವಯಂಚಾಲಿತವಾಗಿ ಸರ್ವರ್ ಲಾಗ್‌ಗಳಲ್ಲಿ ಶೇಖರಿಸುತ್ತೇವೆ ಮತ್ತು ಸಂಗ್ರಹಿಸುತ್ತೇವೆ. ಅದು ಇವೆಲ್ಲವನ್ನೂ ಒಳಗೊಂಡಿರುತ್ತದೆ:

      • ನಮ್ಮ ಸೇವೆಗಳನ್ನು ನೀವು ಹೇಗೆ ಬಳಸಿರುವಿರಿ ಎಂಬುದರ ಕುರಿತ ವಿವರಗಳು, ಅಂದರೆ ನಿಮ್ಮ ಹುಡುಕಾಟದ ಪ್ರಶ್ನೆಗಳು.
      • ನಿಮ್ಮ ಫೋನ್ ಸಂಖ್ಯೆ, ಕರೆ ಮಾಡುವ-ವ್ಯಕ್ತಿಯ ಸಂಖ್ಯೆ, ಫಾರ್ವರ್ಡಿಂಗ್ ಸಂಖ್ಯೆಗಳು, ಕರೆಗಳ ಸಮಯ ಮತ್ತು ದಿನಾಂಕ, ಕರೆಗಳ ಕಾಲಾವಧಿ, SMS ರೂಟಿಂಗ್ ಮಾಹಿತಿ ಮತ್ತು ಕರೆಗಳ ಪ್ರಕಾರದಂತಹ ದೂರವಾಣಿ ಲಾಗ್‌ ಮಾಹಿತಿ.
      • ಇಂಟರ್ನೆಟ್ ಪ್ರೊಟೋಕಾಲ್ ವಿಳಾಸ.
      • ಕ್ರ್ಯಾಶ್‌ಗಳು, ಸಿಸ್ಟಂ ಚಟುವಟಿಕೆ, ಹಾರ್ಡ್‌ವೇರ್ ಸೆಟ್ಟಿಂಗ್‌ಗಳು, ಬ್ರೌಸರ್ ಪ್ರಕಾರ, ಬ್ರೌಸರ್ ಭಾಷೆ, ನಿಮ್ಮ ವಿನಂತಿಯ ದಿನಾಂಕ ಮತ್ತು ಸಮಯ ಹಾಗೂ ಉಲ್ಲೇಖ URL ರೀತಿಯ ಸಾಧನದ ಈವೆಂಟ್ ಮಾಹಿತಿ.
      • ನಿಮ್ಮ ಬ್ರೌಸರ್ ಮಾಹಿತಿ ಅಥವಾ ನಿಮ್ಮ Google ಖಾತೆಯನ್ನು ಅನನ್ಯವಾಗಿ ಗುರುತಿಸುವಂತಹ ಕುಕೀಗಳು.
    • ಸ್ಥಳದ ಮಾಹಿತಿ

      ನೀವು Google ಸೇವೆಗಳನ್ನು ಬಳಸಿದಾಗ, ನಾವು ನಿಮ್ಮ ನೈಜವಾದ ಸ್ಥಳದ ಕುರಿತು ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು. IP ವಿಳಾಸ, GPS, ಮತ್ತು ಇತರ ಸಂವೇದಕಗಳು ಉದಾಹರಣೆಗೆ, ಹತ್ತಿರದ ಸಾಧನಗಳ ಕುರಿತು Google ಗೆ ಮಾಹಿತಿಯನ್ನು ಒದಗಿಸುವ, ವೈ-ಫೈ ಪ್ರವೇಶ ಕೇಂದ್ರಗಳು ಮತ್ತು ಸೆಲ್ ಟವರ್‌ಗಳು ಸೇರಿದಂತೆ ಸ್ಥಳವನ್ನು ದೃಢೀಕರಿಸಲು ನಾವು ಹಲವಾರು ತಂತ್ರಜ್ಞಾನಗಳನ್ನು ಬಳಸುತ್ತೇವೆ.

    • ಅನನ್ಯ ಅಪ್ಲಿಕೇಶನ್ ಸಂಖ್ಯೆಗಳು

      ಕೆಲವು ಸೇವೆಗಳು ಅನನ್ಯ ಅಪ್ಲಿಕೇಶನ್ ಸಂಖ್ಯೆಯನ್ನು ಹೊಂದಿರುತ್ತವೆ. ನೀವು ಆ ಸೇವೆಯನ್ನು ಸ್ಥಾಪನೆ ಅಥವಾ ಅಸ್ಥಾಪನೆ ಮಾಡಿದಾಗ ಇಲ್ಲವೇ ಆ ಸೇವೆಯು ಕಾಲಕ್ರಮೇಣ ಸ್ವಯಂಚಾಲಿತ ನವೀಕರಣಗಳಿಗಾಗಿ ನಮ್ಮ ಸರ್ವರ್‌ಗಳನ್ನು ಸಂಪರ್ಕಿಸಿದಾಗ, ಈ ಸಂಖ್ಯೆ ಮತ್ತು ನಿಮ್ಮ ಸ್ಥಾಪನೆಯ ಕುರಿತ ಮಾಹಿತಿಯನ್ನು (ಉದಾಹರಣೆಗೆ, ಆಪರೇಟಿಂಗ್ ಸಿಸ್ಟಂ ಪ್ರಕಾರ ಮತ್ತು ಅಪ್ಲಿಕೇಶನ್ ಆವೃತ್ತಿ ಸಂಖ್ಯೆ) Google ಗೆ ಕಳುಹಿಸಲಾಗುತ್ತದೆ.

    • ಸ್ಥಳೀಯ ಸಂಗ್ರಹಣೆ

      ಬ್ರೌಸರ್ ವೆಬ್ ಸಂಗ್ರಹಣೆ (HTML 5 ಸೇರಿದಂತೆ) ಮತ್ತು ಅಪ್ಲಿಕೇಶನ್ ಡೇಟಾ ಸಂಗ್ರಹಣೆಗಳಂತಹ ಯಾಂತ್ರೀಕತೆಯನ್ನು ಬಳಸುವ ಮೂಲಕ ನಿಮ್ಮ ಸಾಧನದಲ್ಲಿ ಸ್ಥಳೀಯವಾಗಿ ನಾವು ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಶೇಖರಿಸಿಡಬಹುದು (ವೈಯಕ್ತಿಕ ಮಾಹಿತಿ ಸೇರಿದಂತೆ).

    • ಕುಕೀಗಳು ಮತ್ತು ಅದೇ ರೀತಿಯ ತಂತ್ರಜ್ಞಾನಗಳು

      ನೀವು Google ಸೇವೆಗೆ ಭೇಟಿ ನೀಡಿದಾಗ ನಾವು ಮತ್ತು ನಮ್ಮ ಪಾಲುದಾರರು ಮಾಹಿತಿಯನ್ನು ಶೇಖರಿಸಲು ಮತ್ತು ಸಂಗ್ರಹಿಸಲು ಹಲವಾರು ತಂತ್ರಜ್ಞಾನಗಳನ್ನು ಬಳಸುತ್ತೇವೆ. ಇದು ನಿಮ್ಮ ಬ್ರೌಸರ್ ಅಥವಾ ಸಾಧನವನ್ನು ಗುರುತಿಸಲು ಕುಕೀಗಳು ಅಥವಾ ಅದೇ ರೀತಿಯ ತಂತ್ರಜ್ಞಾನಗಳನ್ನು ಬಳಸುವುದನ್ನು ಒಳಗೊಂಡಿರಬಹುದು. ನಮ್ಮ ಪಾಲುದಾರರೊಂದಿಗೆ ನಾವು ಒದಗಿಸುವ ಜಾಹೀರಾತು ಸೇವೆಗಳು ಅಥವಾ ಇತರ ಸೈಟ್‌ಗಳಲ್ಲಿ ಗೋಚರಿಸುವಂತಹ Google ವೈಶಿಷ್ಟ್ಯಗಳಂತಹ ಸೇವೆಗಳೊಂದಿಗೆ ನೀವು ಸಂವಹನ ನಡೆಸಿದಾಗ ನಾವು ಮಾಹಿತಿಯನ್ನು ಶೇಖರಿಸಲು ಹಾಗೂ ಸಂಗ್ರಹಿಸಲು ಸಹ ಈ ತಂತ್ರಜ್ಞಾನಗಳನ್ನು ಬಳಸುತ್ತೇವೆ. ನಮ್ಮ Google Analytics ಉತ್ಪನ್ನವು ವ್ಯಾಪಾರಗಳು ಮತ್ತು ಸೈಟ್ ಮಾಲೀಕರಿಗೆ ತಮ್ಮ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳ ಟ್ರ್ಯಾಫಿಕ್ ಅನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ನಮ್ಮ ಜಾಹೀರಾತು ಸೇವೆಗಳೊಂದಿಗೆ ಸಂಯೋಜಿತವಾಗಿ ಬಳಸಿದಾಗ, ಅಂದರೆ DoubleClick ಕುಕೀ, Google Analytics ಗ್ರಾಹಕ ಅಥವಾ Google ಮೂಲಕ Google Analytics ಮಾಹಿತಿಯ ಬಳಕೆಯು, ಬಹು ಸೈಟ್‌ಗಳ ಭೇಟಿಗಳ ಕುರಿತ ಮಾಹಿತಿಯನ್ನು Google ತಂತ್ರಜ್ಞಾನವನ್ನು ಬಳಸಿಕೊಂಡು ಲಿಂಕ್ ಮಾಡಲಾಗಿರುತ್ತದೆ.

ನೀವು Google ಗೆ ಸೈನ್ ಇನ್ ಮಾಡಿದಾಗ ನಾವು ಸಂಗ್ರಹಿಸುವ ಮಾಹಿತಿ, ಹೆಚ್ಚುವರಿಯಾಗಿ ಪಾಲುದಾರರಿಂದ ನಿಮ್ಮ ಕುರಿತು ನಾವು ಪಡೆದುಕೊಳ್ಳುವ ಮಾಹಿತಿಯನ್ನು ನಿಮ್ಮ Google ಖಾತೆಯೊಂದಿಗೆ ಸಂಂಯೋಜಿಸಬಹುದಾಗಿರುತ್ತದೆ. ಮಾಹಿತಿಯು ನಿಮ್ಮ Google ಖಾತೆಯೊಂದಿಗೆ ಸಂಯೋಜಿತವಾಗಿರುವಾಗ, ನಾವು ಅದನ್ನು ವೈಯಕ್ತಿಕ ಮಾಹಿತಿಯಂತೆ ಪರಿಗಣಿಸುತ್ತೇವೆ. ನಿಮ್ಮ Google ಖಾತೆಯೊಂದಿಗೆ ಸಂಯೋಜಿತವಾಗಿರುವ ಮಾಹಿತಿಯನ್ನು ನೀವು ಹೇಗೆ ಪ್ರವೇಶಿಸಬಹುದು, ನಿರ್ವಹಿಸಬಹುದು ಅಥವಾ ಅಳಿಸಬಹುದು ಎಂಬುದರ ಕುರಿತು ಇನ್ನಷ್ಟು ಮಾಹಿತಿಗಾಗಿ, ಈ ನೀತಿಯ ಪಾರದರ್ಶಕತೆ ಮತ್ತು ಆಯ್ಕೆ ವಿಭಾಗಕ್ಕೆ ಭೇಟಿ ನೀಡಿ.

ನಾವು ಸಂಗ್ರಹಿಸುವ ಮಾಹಿತಿಯನ್ನು ಹೇಗೆ ಬಳಸಿಕೊಳ್ಳುತ್ತೇವೆ

ನಮ್ಮ ಎಲ್ಲ ಸೇವೆಗಳಿಂದ ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಹೊಸದನ್ನು ಅಭಿವೃದ್ಧಿಪಡಿಸಲು ಮತ್ತು Google ಹಾಗೂ ನಮ್ಮ ಬಳಕೆದಾರರನ್ನು ರಕ್ಷಿಸಲು ಅವುಗಳನ್ನು ಒದಗಿಸಲು, ನಿರ್ವಹಿಸಲು, ರಕ್ಷಿಸಲು ಹಾಗೂ ಸುಧಾರಿಸಲು ನಾವು ಬಳಸುತ್ತೇವೆ. ನಿಮ್ಮ ಅಗತ್ಯದ ವಿಷಯವನ್ನು ನೀಡಲು ಸಹ ನಾವು ಈ ಮಾಹಿತಿಯನ್ನು ಬಳಸುತ್ತೇವೆ – ಹೆಚ್ಚು ಸಂಬಂಧಿತ ಹುಡುಕಾಟ ಫಲಿತಾಂಶಗಳು ಮತ್ತು ಜಾಹೀರಾತುಗಳನ್ನು ನಿಮಗೆ ನೀಡುವುದರಂತಹದು.

Google ಖಾತೆಯ ಅಗತ್ಯವಿರುವಂತಹ ನಾವು ಪೂರೈಸುವ ಎಲ್ಲಾ ಸೇವೆಗಳಾದ್ಯಂತ ನಿಮ್ಮ Google ಪ್ರೊಫೈಲ್‌ಗಾಗಿ ನೀವು ಒದಗಿಸಿರುವ ಹೆಸರನ್ನು ನಾವು ಬಳಸಬಹುದು. ಅಲ್ಲದೇ, ನಿಮ್ಮ Google ಖಾತೆಗೆ ಸಂಯೋಜಿತವಾಗಿರುವ ಹಿಂದಿನ ಹೆಸರುಗಳನ್ನು ಬದಲಿಸಬಹುದು. ಇದರಿಂದಾಗಿ ನೀವು ನಮ್ಮ ಎಲ್ಲಾ ಸೇವೆಗಳಾದ್ಯಂತ ನಿರಂತರವಾಗಿ ಕಾಣಿಸಿಕೊಳ್ಳುತ್ತೀರಿ. ಒಂದು ಇತರ ಬಳಕೆದಾರರು ಈಗಾಗಲೇ ನಿಮ್ಮ ಇಮೇಲ್ ಹೊಂದಿದ್ದರೆ, ನಾವು ನಿಮ್ಮ ಸಾರ್ವಜನಿಕವಾಗಿ ಗೋಚರಿಸುವ Google ಪ್ರೊಫೈಲ್ ಮಾಹಿತಿಯನ್ನು ಅಂದರೆ, ನಿಮ್ಮ ಹೆಸರು ಮತ್ತು ಫೋಟೋವನ್ನು ಅವರಿಗೆ ತೋರಿಸಬಹುದು.

ನೀವು Google ಖಾತೆಯನ್ನು ಹೊಂದಿದ್ದರೆ, ಜಾಹೀರಾತುಗಳು ಮತ್ತು ಇತರ ವಾಣಿಜ್ಯ ಸಂದರ್ಭಗಳಲ್ಲಿ ಪ್ರದರ್ಶಿಸುವುದೂ ಸೇರಿದಂತೆ, ನಿಮ್ಮ ಪ್ರೊಫೈಲ್ ಹೆಸರು, ಪ್ರೊಫೈಲ್ ಫೋಟೋ ಮತ್ತು Google ನಲ್ಲಿ ಅಥವಾ ನಮ್ಮ ಸೇವೆಗಳಲ್ಲಿ ನಿಮ್ಮ Google ಖಾತೆಗೆ (ಇಷ್ಟವಾದವುಗಳು, ನೀವು ಬರೆಯುವ ವಿಮರ್ಶೆಗಳು ಹಾಗೂ ನೀವು ಪೋಸ್ಟ್ ಮಾಡುವ ಕಾಮೆಂಟ್‌ಗಳಂತಹವು) ಸಂಪರ್ಕಗೊಂಡಿರುವ ಮೂರನೇ-ವ್ಯಕ್ತಿಯ ಅಪ್ಲಿಕೇಶನ್‌ಗಳಲ್ಲಿ ನೀವು ತೆಗೆದುಕೊಳ್ಳುವ ಕ್ರಮಗಳನ್ನೂ ನಾವು ತೋರಿಸಬಹುದು. ನಿಮ್ಮ Google ಖಾತೆಯಲ್ಲಿ ಹಂಚಿಕೆ ಅಥವಾ ಗೋಚರತೆ ಸೆಟ್ಟಿಂಗ್‌ಗಳನ್ನು ಮಿತಿಗೊಳಿಸುವ ನಿಮ್ಮ ನಿರ್ಧಾರಗಳನ್ನು ನಾವು ಗೌರವಿಸುತ್ತೇವೆ.

ನೀವು Google ಅನ್ನು ಸಂಪರ್ಕಿಸಿದಾಗ, ನೀವು ಎದುರಿಸುತ್ತಿರಬಹುದಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ನಿಮ್ಮ ಸಂವಹನದ ದಾಖಲೆಯೊಂದನ್ನು ನಾವು ಇರಿಸಿಕೊಳ್ಳುತ್ತೇವೆ. ನಮ್ಮ ಸೇವೆಗಳ ಕುರಿತು ನಿಮಗೆ ತಿಳಿಸುವ ಸಲುವಾಗಿ, ಅಂದರೆ ಮುಂಬರುವ ಬದಲಾವಣೆಗಳು ಅಥವಾ ಸುಧಾರಣೆಗಳ ಕುರಿತು ನಿಮಗೆ ತಿಳಿಸುವುದಕ್ಕಾಗಿ ನಿಮ್ಮ ಇಮೇಲ್ ವಿಳಾಸವನ್ನು ನಾವು ಬಳಸಬಹುದು.

ನಿಮ್ಮ ಬಳಕೆದಾರ ಅನುಭವವನ್ನು ಸುಧಾರಿಸಲು ಮತ್ತು ನಮ್ಮ ಸೇವೆಗಳ ಒಟ್ಟು ಗುಣಮಟ್ಟವನ್ನು ಸುಧಾರಿಸಲು ಪಿಕ್ಸೆಲ್ ಟ್ಯಾಗ್‌ಗಳಂತಹ ಕುಕೀಸ್ ಮತ್ತು ಇತರ ತಂತ್ರಜ್ಞಾನಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ನಾವು ಬಳಸುತ್ತೇವೆ. ಇದನ್ನು ಮಾಡಲು ನಮ್ಮ ಸೇವೆಗಳಲ್ಲಿ ನಾವು ಬಳಸುವ ಒಂದು ಉತ್ಪನ್ನವೆಂದರೆ ಅದು, Google Analytics. ಉದಾಹರಣೆಗೆ, ನಿಮ್ಮ ಭಾಷೆ ಪ್ರಾಶಸ್ತ್ಯಗಳನ್ನು ಉಳಿಸುವ ಮೂಲಕ, ನಮ್ಮ ಸೇವೆಗಳನ್ನು ನಿಮ್ಮಿಷ್ಟದ ಭಾಷೆಯಲ್ಲಿ ದೊರೆಯುವಂತೆ ನಾವು ಮಾಡಬಹುದು. ಸರಿಯಾಗಿ ಹೊಂದಿಕೆ ಮಾಡಲಾದ ಜಾಹೀರಾತುಗಳನ್ನು ನಿಮಗೆ ತೋರಿಸುವಾಗ , ಕುಲ-ಜಾತಿ, ಧರ್ಮ, ಲೈಂಗಿಕ ಪ್ರಚೋದನೆ ಅಥವಾ ಆರೋಗ್ಯದಂತಹ ಸೂಕ್ಷ್ಮ ರೀತಿಯ ವರ್ಗಗಳೊಂದಿಗೆ ಕುಕೀಗಳು ಅಥವಾ ಅದೇ ರೀತಿಯ ತಂತ್ರಜ್ಞಾನಗಳಿಂದ ನಾವು ಗುರುತಿಸುವಿಕೆಯನ್ನು ಸಂಯೋಜಿಸುವುದಿಲ್ಲ.

ಕಸ್ಟಮೈಸ್ ಮಾಡಿದ ಹುಡುಕಾಟ ಫಲಿತಾಂಶಗಳು, ಸೂಕ್ತ ಜಾಹೀರಾತು ಮತ್ತು ಸ್ಪ್ಯಾಮ್ ಹಾಗೂ ಮಾಲ್‌ವೇರ್ ಪತ್ತೆಹಚ್ಚುವಿಕೆಯ ರೀತಿಯ ವೈಯಕ್ತಿಕವಾಗಿ ಸೂಕ್ತ ಉತ್ಪನ್ನದ ವೈಶಿಷ್ಟ್ಯಗಳನ್ನು ನಿಮಗೆ ಒದಗಿಸುವ ಸಲುವಾಗಿ, ನಿಮ್ಮ ವಿಷಯವನ್ನು (ಇಮೇಲ್‌ಗಳು ಸೇರಿದಂತೆ) ನಮ್ಮ ಸ್ವಯಂಚಾಲಿತ ಸಿಸ್ಟಂಗಳು ವಿಶ್ಲೇಷಣೆ ಮಾಡಬಹುದು.

ಇತರ Google ಸೇವೆಗಳಿಂದ – ವೈಯಕ್ತಿಕ ಮಾಹಿತಿ ಸೇರಿದಂತೆ ಒಂದು ಸೇವೆಯಿಂದ ವೈಯಕ್ತಿಕ ಮಾಹಿತಿಯನ್ನು ನಾವು ಸೇರಿಸುತ್ತೇವೆ, ಉದಾಹರಣೆಗೆ ನೀವು ತಿಳಿದಿರುವಂತಹ ಜನರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವುದು ಸುಲಭ ಮಾಡುವುದು. ನಿಮ್ಮ ಖಾತೆಯ ಸೆಟ್ಟಿಂಗ್‌ಗಳನ್ನು ಅವಲಂಬಿಸಿ, Google ಮೂಲಕ ವಿತರಿಸಲಾದ Google ಸೇವೆಗಳು ಮತ್ತು ಜಾಹೀರಾತುಗಳನ್ನು ಸುಧಾರಿಸಲು ಇತರ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿನ ನಿಮ್ಮ ಚಟುವಟಿಕೆಯು ನಿಮ್ಮ ವೈಯಕ್ತಿಕ ಮಾಹಿತಿಯ ಜೊತೆಗೆ ಸಂಯೋಜಿತವಾಗಿರಬಹುದು.

ಈ ಗೌಪ್ಯತಾ ನೀತಿಯಲ್ಲಿ ಹೊಂದಿಸದ ಹೊರತು ಬೇರೆ ಉದ್ದೇಶಕ್ಕಾಗಿ ಆ ಮಾಹಿತಿಯನ್ನು ಬಳಸುವ ಮೊದಲು ನಿಮ್ಮ ಸಮ್ಮತಿಯನ್ನು ನಾವು ಕೇಳುತ್ತೇವೆ.

Google ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿನ ನಮ್ಮ ಸರ್ವರ್‌ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಸಂಸ್ಕರಿಸುತ್ತದೆ. ನೀವು ವಾಸಿಸುತ್ತಿರುವ ದೇಶದ ಹೊರಗಿನ ಸರ್ವರ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸಂಸ್ಕರಿಸಬಹುದು.

ಪಾರದರ್ಶಕತೆ ಮತ್ತು ಆಯ್ಕೆ

ಜನರು ವಿಭಿನ್ನ ಗೌಪ್ಯತೆ ಆಲೋಚನೆಗಳನ್ನು ಹೊಂದಿರುತ್ತಾರೆ. ನಾವು ಸಂಗ್ರಹಿಸಿಕೊಳ್ಳುವ ಮಾಹಿತಿಯ ಕುರಿತು ಸ್ಪಷ್ಟವಾಗಿರುವುದೇ ನಮ್ಮ ಗುರಿಯಾಗಿದೆ, ಇದರಿಂದಾಗಿ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಕುರಿತು ಅರ್ಥಪೂರ್ಣ ಆಯ್ಕೆಗಳನ್ನು ನೀವು ಮಾಡಬಹುದಾಗಿದೆ. ಉದಾಹರಣೆಗೆ, ನೀವು:

  • ನೀವು Google ಸೇವೆಗಳನ್ನು ಬಳಸಿದಾಗ ನಿಮ್ಮ ಖಾತೆಯೊಂದಿಗೆ ನೀವು ಉಳಿಸಲು ಬಯಸುವ ನೀವು YouTube ನಲ್ಲಿ ವೀಕ್ಷಿಸಿದ ವೀಡಿಯೊಗಳು ಅಥವಾ ಹಳೆಯ ಹುಡುಕಾಟಗಳಂತಹ ಡೇಟಾದ ಪ್ರಕಾರಗಳನ್ನು ನಿರ್ಧರಿಸಲು ನಿಮ್ಮ Google ಚಟುವಟಿಕೆ ನಿಯಂತ್ರಣಗಳನ್ನು ಪರಿಶೀಲಿಸಿ ಮತ್ತು ಅಪ್‌ಡೇಟ್ ಮಾಡಿ. ನಿಮ್ಮ ಖಾತೆಯಿಂದ ನೀವು ಸೈನ್-ಔಟ್ ಮಾಡಿದ ಸಂದರ್ಭದಲ್ಲಿ ನಮ್ಮ ಸೇವೆಗಳನ್ನು ನೀವು ಬಳಸುವಾಗ ಕುಕೀ ಅಥವಾ ಅಂತಹುದೇ ತಂತ್ರಜ್ಞಾನದಲ್ಲಿ ಕೆಲವು ಚಟುವಟಿಕೆಯನ್ನು ಸಂಗ್ರಹಿಸುವುದನ್ನು ನಿರ್ವಹಣೆ ಮಾಡಲು ಈ ನಿಯಂತ್ರಣಗಳಿಗೆ ಸಹ ನೀವು ಭೇಟಿ ನೀಡಬಹುದು.
  • Google ಡ್ಯಾಶ್‌ಬೋರ್ಡ್ ಬಳಸಿಕೊಂಡು ನಿಮ್ಮ Google ಖಾತೆಗೆ ಬಂಧಿಸಲಾಗಿರುವ ನಿರ್ದಿಷ್ಟ ಪ್ರಕಾರದ ಮಾಹಿತಿಯನ್ನು ವಿಮರ್ಶಿಸಬಹುದು ಮತ್ತು ನಿಯಂತ್ರಿಸಬಹುದು.
  • Google ನಲ್ಲಿ ಮತ್ತು ವೆಬ್‌ನಾದ್ಯಂತ ನಿಮಗೆ ತೋರಿಸಲಾಗುವ Google ಜಾಹೀರಾತುಗಳ ಕುರಿತ ನಿಮ್ಮ ಪ್ರಾಶಸ್ತ್ಯಗಳನ್ನು ವೀಕ್ಷಿಸಿ ಮತ್ತು ಸಂಪಾದಿಸಿ. ಜಾಹೀರಾತು ಸೆಟ್ಟಿಂಗ್‌ಗಳನ್ನು ಬಳಸಿಕೊಂಡು ನಿಮಗೆ ಯಾವ ವರ್ಗಗಳು ಆಸಕ್ತಿದಾಯಕವಾಗಿರುತ್ತವೆ ಎಂಬಂಥವುಗಳನ್ನು ಇದು ಒಳಗೊಂಡಿರುತ್ತದೆ. ಹಾಗೆಯೇ ನೀವು ನಿರ್ದಿಷ್ಟ Google ಜಾಹೀರಾತು ಸೇವೆಗಳ ಆಯ್ಕೆಯಿಂದ ಹೊರಗುಳಿಯಲು ಆ ಪುಟಕ್ಕೆ ಭೇಟಿ ನೀಡಬಹುದು.
  • ನಿಮ್ಮ Google ಖಾತೆಯ ಜೊತೆಗೆ ಸಂಯೋಜಿತವಾಗಿರುವ ಪ್ರೊಫೈಲ್ ಇತರರಿಗೆ ಹೇಗೆ ಗೋಚರಿಸುತ್ತದೆ ಎಂಬುದನ್ನು ಹೊಂದಿಸಿ.
  • ನಿಮ್ಮ Google ಖಾತೆಯ ಮೂಲಕ ಮಾಹಿತಿಯನ್ನು ನೀವು ಯಾರಿಗೆ ಹಂಚಬೇಕು ಎಂಬುದರ ಕುರಿತು ನಿಯಂತ್ರಿಸಿ.
  • ನಮ್ಮ ಹಲವಾರು ಸೇವೆಗಳ ಕುರಿತು ನಿಮ್ಮ Google ಖಾತೆಯ ಜೊತೆಗೆ ಸಂಯೋಜಿತವಾಗಿರುವ ಮಾಹಿತಿಯನ್ನು ತೆಗೆದುಕೊಳ್ಳಿ.
  • ಜಾಹೀರಾತುಗಳಲ್ಲಿ ಕಂಡುಬರುವ ನಿಮ್ಮ ಪ್ರೊಫೈಲ್ ಹೆಸರು ಮತ್ತು ಪ್ರೊಫೈಲ್ ಫೋಟೋ ಹಂಚಿಕೊಳ್ಳಲಾದ ಜಾಹೀರಾತು ಒಪ್ಪಂದಗಳಲ್ಲಿ ಕಾಣಿಸಿಕೊಳ್ಳುತ್ತಿದೆಯೇ ಎಂಬುದನ್ನು ಆರಿಸಿ.

ನಮ್ಮ ಸೇವೆಗಳೊಂದಿಗೆ ಗುರುತಿಸಿಕೊಂಡಿರುವ ಕುಕೀಗಳನ್ನೂ ಒಳಗೊಂಡಂತೆ ಎಲ್ಲಾ ರೀತಿಯ ಕುಕೀಗಳನ್ನು ನಿರ್ಬಂಧಿಸುವಂತೆ ಹಾಗೂ ನಮ್ಮಿಂದ ಹೊಂದಿಸಲಾದ ಕುಕೀಯೊಂದನ್ನು ಸೂಚಿಸುವಂತೆಯೂ ನಿಮ್ಮ ಬ್ರೌಸರ್‌ ಅನ್ನು ಹೊಂದಿಸಬಹುದು. ಅದಾಗ್ಯೂ, ನಿಮ್ಮ ಕುಕೀಸ್ ನಿಷ್ಕ್ರಿಯವಾದಲ್ಲಿ ನಮ್ಮ ಹಲವಾರು ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. ಉದಾಹರಣೆಗೆ, ನಿಮ್ಮ ಭಾಷೆಯ ಪ್ರಾಶಸ್ತ್ಯಗಳನ್ನು ನಾವು ಮರೆತುಬಿಡಬಹುದು.

ನೀವು ಹಂಚಿಕೊಳ್ಳುವ ಮಾಹಿತಿ

ನಮ್ಮ ಹಲವಾರು ಸೇವೆಗಳು ಇತರರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ನೀಡುತ್ತವೆ. ನೀವು ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗ, Google ಸೇರಿದಂತೆ ಅದನ್ನು ಹುಡುಕಾಟ ಎಂಜಿನ್‌ಗಳಿಂದ ಇಂಡೆಕ್ಸ್ ಮಾಡಬಹುದಾಗಿದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ. ನಿಮ್ಮ ವಿಷಯವನ್ನು ತೆಗೆದುಹಾಕಲು ಮತ್ತು ಹಂಚುವಿಕೆಗಾಗಿ ನಮ್ಮ ಸೇವೆಗಳು ನಿಮಗೆ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸುವುದು ಮತ್ತು ನವೀಕರಿಸುವುದು

ನಮ್ಮ ಸೇವೆಗಳನ್ನು ನೀವು ಬಳಸಿದಾಗಲೆಲ್ಲ, ನಿಮ್ಮ ವೈಯಕ್ತಿಕ ಮಾಹಿತಿಗೆ ಪ್ರವೇಶ ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಆ ಮಾಹಿತಿಯು ತಪ್ಪಾಗಿದ್ದಲ್ಲಿ, ಅದನ್ನು ತ್ವರಿತಗತಿಯಲ್ಲಿ ನವೀಕರಿಸಲು ಅಥವಾ ಅದನ್ನು ಅಳಿಸಲು ನಿಮಗೆ ಅನುಕೂಲ ಕಲ್ಪಿಸಲು ನಾವು ಶ್ರಮಿಸುತ್ತೇವೆ – ಇಲ್ಲದಿದ್ದಲ್ಲಿ ನಾವು ಆ ಮಾಹಿತಿಯನ್ನು ಕ್ರಮಬದ್ಧವಾದ ವ್ಯಾಪಾರ ಅಥವಾ ಕಾನೂನು ಉದ್ದೇಶಗಳಿಗಾಗಿ ಇರಿಸಬೇಕಾಗುತ್ತದೆ.

ಆಕಸ್ಮಿಕವಾಗಿ ಅಥವಾ ದುರುದ್ದೇಶಪೂರಿತ ಅವಘಡಗಳಿಂದ ಮಾಹಿತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಸೇವೆಗಳನ್ನು ನಿರ್ವಹಿಸುವುದೇ ನಮ್ಮ ಗುರಿಯಾಗಿರುತ್ತದೆ. ಈ ಕಾರಣದಿಂದಾಗಿ, ನೀವು ಮಾಹಿತಿಯನ್ನು ನಮ್ಮ ಸೇವೆಗಳಿಂದ ಅಳಿಸಿದ ನಂತರ, ನಾವು ತಕ್ಷಣವೇ ನಮ್ಮ ಸಕ್ರಿಯ ಸರ್ವರ್‌ಗಳಿಂದ ಉಳಿದ ನಕಲುಗಳನ್ನು ಅಳಿಸದೇ ಇರಬಹುದು ಅಥವಾ ನಮ್ಮ ಬ್ಯಾಕಪ್ ಸಿಸ್ಟಂಗಳಿಂದ ಮಾಹಿತಿಯನ್ನು ತೆಗೆದುಹಾಕದಿರಬಹುದು.

ನಾವು ಹಂಚಿಕೊಳ್ಳುವ ಮಾಹಿತಿ

ಕೆಳಗಿನ ಸಂದರ್ಭಗಳ ಹೊರತಾಗಿ ನಾವು ಯಾವ ಕಾರಣಕ್ಕೂ ವೈಯಕ್ತಿಕ ಮಾಹಿತಿಯನ್ನು Google ಗೆ ಹೊರತಾದ ಕಂಪೆನಿಗಳೊಂದಿಗೆ, ಸಂಸ್ಥೆಗಳೊಂದಿಗೆ ಮತ್ತು ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ:

  • ನಿಮ್ಮ ಸಮ್ಮತಿಯೊಂದಿಗೆ

    ನೀವು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ನಮಗೆ ಸಮ್ಮತಿಸಿದಾಗ, ನಾವು ಅದನ್ನು ಕಂಪನಿಗಳು, ಸಂಸ್ಥೆಗಳು ಅಥವಾ Google ಹೊರಗಿನ ವ್ಯಕ್ತಿಗಳ ಜೊತೆಗೆ ಹಂಚಿಕೊಳ್ಳುತ್ತೇವೆ. ಯಾವುದೇ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ನಮಗೆ ಆಯ್ಕೆ ಸಮ್ಮತಿಯ ಅಗತ್ಯವಿದೆ.

  • ಡೊಮೇನ್ ನಿರ್ವಾಹಕರೊಂದಿಗೆ

    ನಿಮ್ಮ Google ಖಾತೆಯನ್ನು ಒಬ್ಬ ಡೊಮೇನ್ ನಿರ್ವಾಹಕರು ನಿಮ್ಮ ಪರವಾಗಿ ನಿರ್ವಹಿಸುತ್ತಿದ್ದರೆ (ಉದಾಹರಣೆಗೆ, G Suite ಬಳಕೆದಾರರಿಗಾಗಿ), ನಿಮ್ಮ ಡೊಮೇನ್ ನಿರ್ವಾಹಕರಿಗೆ ಮತ್ತು ನಿಮ್ಮ ಸಂಸ್ಥೆಗೆ ಬಳಕೆದಾರ ಬೆಂಬಲವನ್ನು ಒದಗಿಸುವ ಮರುಮಾರಾಟಗಾರರಿಗೆ ನಿಮ್ಮ Google ಖಾತೆ ಮಾಹಿತಿಗೆ (ನಿಮ್ಮ ಇಮೇಲ್ ಮತ್ತು ಇತರ ಡೇಟಾ ಸೇರಿದಂತೆ) ಪ್ರವೇಶಿಸಲು ಸಾಧ್ಯವಾಗುತ್ತದೆ. ನಿಮ್ಮ ಡೊಮೇನ್ ನಿರ್ವಾಹಕರಿಗೆ ಹೀಗೆ ಮಾಡಲು ಸಾಧ್ಯವಾಗುತ್ತದೆ:

    • ನೀವು ಸ್ಥಾಪಿಸುವ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಅಂಕಿಅಂಶಗಳಂತಹ ನಿಮ್ಮ ಖಾತೆಗೆ ಸಂಬಂಧಿಸಿರುವ ಅಂಕಿಅಂಶಗಳನ್ನು ವೀಕ್ಷಿಸಬಹುದು.
    • ನಿಮ್ಮ ಖಾತೆಯ ಪಾಸ್‌ವರ್ಡ್ ಬದಲಿಸಬಹುದು.
    • ನಿಮ್ಮ ಖಾತೆಯ ಪ್ರವೇಶವನ್ನು ಅಮಾನತುಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.
    • ನಿಮ್ಮ ಖಾತೆಯ ಭಾಗವೆಂಬಂತೆ ಸಂಗ್ರಹಿಸಿದ ಮಾಹಿತಿಯನ್ನು ಪ್ರವೇಶಿಸಬಹುದು ಅಥವಾ ಉಳಿಸಿಕೊಳ್ಳಬಹುದು.
    • ಅನ್ವಯವಾಗುವಂತಹ ಕಾನೂನು, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಅನುಷ್ಠಾನಗೊಳಿಸಬೇಕಾದಂತಹ ಸರ್ಕಾರಿ ವಿನಂತಿಯನ್ನು ಪೂರೈಸಲು ನಿಮ್ಮ ಖಾತೆ ಮಾಹಿತಿಯನ್ನು ಸ್ವೀಕರಿಸಿ.
    • ಮಾಹಿತಿ ಅಥವಾ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಅಳಿಸುವ ಇಲ್ಲವೇ ಸಂಪಾದಿಸುವ ನಿಮ್ಮ ಸಾಮರ್ಥ್ಯವನ್ನು ನಿರ್ಬಂಧಿಸಬಹುದು.

    ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ಡೊಮೇನ್ ನಿರ್ವಾಹಕರ ಗೌಪ್ಯತೆ ನೀತಿಯನ್ನು ಉಲ್ಲೇಖಿಸಿ.

  • ಬಾಹ್ಯ ಪ್ರಕ್ರಿಯೆಗಾಗಿ

    ನಮ್ಮ ಸೂಚನೆಗಳನ್ನು ಆಧರಿಸಿ ಮತ್ತು ನಮ್ಮ ಗೌಪ್ಯತೆ ನೀತಿ ಮತ್ತು ಯಾವುದೇ ಇತರೆ ಸೂಕ್ತವಾದ ಗೌಪ್ಯತೆ ಮತ್ತು ಭದ್ರತೆ ಕ್ರಮಗಳೊಂದಿಗೆ ಅನುಸರಣೆಯಾಗಿ ನಮ್ಮ ಅಂಗಸಂಸ್ಥೆಗಳು ಅಥವಾ ಇತರ ನಂಬಿಕೆಯ ವ್ಯಾಪಾರಗಳು ಅಥವಾ ವ್ಯಕ್ತಿಗಳಿಗೆ ಇದನ್ನು ಪ್ರಕ್ರಿಯೆಗೊಳಿಸುವಂತೆ ನಾವು ವೈಯಕ್ತಿಕ ಮಾಹಿತಿಯನ್ನು ಒದಗಿಸುತ್ತೇವೆ.

  • ಕಾನೂನು ಕಾರಣಗಳಿಗಾಗಿ

    ನಾವು ಪ್ರವೇಶ, ಬಳಕೆ, ಮಾಹಿತಿಯ ಸಂರಕ್ಷಣೆ ಅಥವಾ ಮಾಹಿತಿ ಬಹಿರಂಗಪಡಿಸುವಿಕೆಯು ಈ ಮುಂದಿನದಕ್ಕೆ ಸಮಂಜಸವಾಗಿ ಅಗತ್ಯವಿದೆ ಎಂಬ ಉತ್ತಮ ನಂಬಿಕೆಯನ್ನು ಹೊಂದಿದ್ದರೆ, ನಾವು ಕಂಪನಿಗಳು, ಸಂಸ್ಥೆಗಳು ಅಥವಾ Google ಹೊರಗಿನ ವ್ಯಕ್ತಿಗಳ ಜೊತೆಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.

    • ಯಾವುದೇ ಅನ್ವಯವಾಗುವ ನೀತಿ, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಕಾನೂನು ಜಾರಿಗೊಳಿಸುವಂತಹ ಸರ್ಕಾರಿ ವಿನಂತಿಯನ್ನು ಪೂರೈಸಿ.
    • ಸಂಭಾವ್ಯ ಉಲ್ಲಂಘನೆಗಳ ತನಿಖೆ ಸೇರಿದಂತೆ, ಅನ್ವಯವಾಗುವ ಸೇವಾ ನಿಯಮಗಳನ್ನು ಜಾರಿಗೊಳಿಸಲು.
    • ವಂಚನೆ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪತ್ತೆಹಚ್ಚಲು, ತಡೆಗಟ್ಟಲು ಇಲ್ಲವೇ ಕಂಡುಹಿಡಿಯಲು.
    • ಕಾನೂನಿನ ಮೂಲಕ ಅಗತ್ಯವಿರುವ ಅಥವಾ ಅನುಮತಿ ಪಡೆದಿರುವ Google ನ, ನಮ್ಮ ಬಳಕೆದಾರರ ಇಲ್ಲವೇ ಸಾರ್ವಜನಿಕರ ಹಕ್ಕುಗಳು, ಆಸ್ತಿ ಅಥವಾ ಸುರಕ್ಷತೆಯ ಧಕ್ಕೆಗೆ ವಿರುದ್ದವಾಗಿ ಸಂರಕ್ಷಿಸಲು.

ನಾವು ವೈಯಕ್ತಿಕವಾಗಿ ಗುರುತಿಸಲಾಗದ ಮಾಹಿತಿಯನ್ನು ಸಾರ್ವಜನಿಕವಾಗಿ ಹಾಗೂ ಪ್ರಕಾಶಕರು, ಜಾಹೀರಾತುದಾರರು ಅಥವಾ ಸಂಪರ್ಕಿಸಲಾದ ಸೈಟ್‌ಗಳಂತಹ ನಮ್ಮ ಪಾಲುದಾರರೊಂದಿಗೆ ಹಂಚಿಕೊಳ್ಳಬಹುದು. ಉದಾಹರಣೆಗೆ, ನಮ್ಮ ಸೇವೆಗಳಿಗೆ ಸಂಬಂಧಿಸಿದ ಸಹಜ ಟ್ರೆಂಡ್‌‌ಗಳನ್ನು ಪರಿಚಯಿಸುವ ಸಂದರ್ಭದಲ್ಲಿ ನಾವು ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಹುದು.

ಒಂದು ವೇಳೆ Google, ವಿಲೀನ, ಸ್ವಾಧೀನ ಅಥವಾ ಸ್ವತ್ತು ಮಾರಾಟದಲ್ಲಿ ಭಾಗಿಯಾಗಿದ್ದರೆ, ನಾವು ಯಾವುದೇ ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಖಚಿತಪಡಿಸಲು ಮುಂದುವರಿಯುತ್ತೇವೆ ಹಾಗೂ ವೈಯಕ್ತಿಕ ಮಾಹಿತಿಯನ್ನು ವರ್ಗಾಯಿಸುವುದಕ್ಕೂ ಮೊದಲು ಅಥವಾ ಬೇರೊಂದು ಗೌಪ್ಯತೆ ನೀತಿಗೆ ಒಳಪಡಿಸುವುದಕ್ಕೂ ಮೊದಲು, ತೊಂದರೆಗೊಳಗಾದ ಬಳಕೆದಾರರ ಗಮನಕ್ಕೆ ತರುತ್ತೇವೆ.

ಮಾಹಿತಿಯ ಸುರಕ್ಷತೆ

ನಾವು ಹೊಂದಿರುವ ಮಾಹಿತಿಯ ಅನಧಿಕೃತ ಪ್ರವೇಶ ಅಥವಾ ಅನಧಿಕೃತ ಮಾರ್ಪಾಡು, ಬಹಿರಂಗಪಡಿಸುವುದು ಅಥವಾ ನಾಶಪಡಿಸುವುದರಿಂದ Google ಮತ್ತು ನಮ್ಮ ಬಳಕೆದಾರರನ್ನು ಸಂರಕ್ಷಿಸಲು ನಾವು ಶ್ರಮಿಸುತ್ತೇವೆ. ನಿರ್ದಿಷ್ಟವಾಗಿ:

  • SSL ಬಳಸಿಕೊಂಡು ನಮ್ಮ ಹಲವಾರು ಸೇವೆಗಳನ್ನು ನಾವು ಎನ್‌ಕ್ರಿಪ್ಟ್ ಮಾಡುತ್ತೇವೆ.
  • ನಿಮ್ಮ Google ಖಾತೆಗೆ ಪ್ರವೇಶಿಸಿದಾಗ, ನಿಮಗೆ ಎರಡನೇ ಹಂತದ ಪರಿಶೀಲನೆಯನ್ನು ನಾವು ಒದಗಿಸುತ್ತೇವೆ ಮತ್ತು Google Chrome ನಲ್ಲಿ ಸುರಕ್ಷಿತ ಬ್ರೌಸಿಂಗ್ ವೈಶಿಷ್ಟ್ಯವನ್ನು ಒದಗಿಸುತ್ತೇವೆ.
  • ಸಿಸ್ಟಂಗಳಿಗೆ ಅನಧಿಕೃತ ಪ್ರವೇಶವನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಾವು ಭೌತಿಕ ಭದ್ರತೆ ಕ್ರಮಗಳು ಸೇರಿದಂತೆ ನಮ್ಮ ಮಾಹಿತಿ ಸಂಗ್ರಹಣೆ, ಸಂಗ್ರಹಣೆ ಮತ್ತು ಪ್ರಕ್ರಿಯೆಯ ಅಭ್ಯಾಸಗಳನ್ನು ವಿಮರ್ಶಿಸುತ್ತೇವೆ.
  • ನಮಗಾಗಿ ಇದನ್ನು ಪ್ರಕ್ರಿಯೆಗೊಳಿಸುವ ಸಲುವಾಗಿ ಆ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸುವ Google ಉದ್ಯೋಗಿಗಳು, ಗುತ್ತಿಗೆದಾರರು ಹಾಗೂ ಏಜೆಂಟ್‌ಗಳಿಗೆ ಮತ್ತು ಕಠಿಣ ಗುತ್ತಿಗೆ ಗೌಪ್ಯತೆಯ ನಿರ್ಬಂಧಗಳಿಗೆ ಒಳಪಟ್ಟಿರುವವರಿಗೆ, ವೈಯಕ್ತಿಕ ಮಾಹಿತಿಯ ಪ್ರವೇಶವನ್ನು ನಿರ್ಬಂಧಿಸಿರುತ್ತೇವೆ ಹಾಗೂ ಈ ನಿರ್ಬಂಧಗಳನ್ನು ಪೂರೈಸುವಲ್ಲಿ ಅವರು ವಿಫಲರಾದರೆ, ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬಹುದು ಇಲ್ಲವೇ ಅವರನ್ನು ರದ್ದುಮಾಡಬಹುದು.

ಈ ಗೌಪ್ಯತಾ ನೀತಿ ಯಾವಾಗ ಅನ್ವಯವಾಗುತ್ತದೆ

ನಮ್ಮ ಗೌಪ್ಯತೆ ನೀತಿಯು Google LLCಮತ್ತು YouTube ಸೇರಿದಂತೆ, ಅದರ ಅಂಗಸಂಸ್ಥೆಗಳು ಒದಗಿಸುವ, Android ಸಾಧನಗಳಲ್ಲಿ Google ಒದಗಿಸುವ ಸೇವೆಗಳು ಹಾಗೂ ಇತರ ಸೈಟ್‌ಗಳಲ್ಲಿ ಒದಗಿಸಲಾದ (ನಮ್ಮ ಜಾಹೀರಾತು ಸೇವೆಗಳಂತಹ) ಎಲ್ಲಾ ಸೇವೆಗಳಿಗೆ ಅನ್ವಯಿಸುತ್ತದೆ, ಆದರೆ ಪ್ರತ್ಯೇಕ ಗೌಪ್ಯತೆ ನೀತಿಗಳನ್ನು ಹೊಂದಿರುವ ಸೇವೆಗಳನ್ನು ಈ ಗೌಪ್ಯತೆ ನೀತಿಯಲ್ಲಿ ಸೇರಿಸದೆ ಪ್ರತ್ಯೇಕಿಸುತ್ತದೆ.

ಹುಡುಕಾಟದ ಫಲಿತಾಂಶಗಳಲ್ಲಿ ನಿಮಗೆ ಪ್ರದರ್ಶಿಸಲಾಗುವ ಉತ್ಪನ್ನಗಳು ಅಥವಾ ಸೈಟ್‌ಗಳು, Google ಸೇವೆಗಳನ್ನು ಒಳಗೊಂಡಿರುವ ಸೈಟ್‌ಗಳು ಅಥವಾ ನಮ್ಮ ಸೇವೆಗಳಿಂದ ಲಿಂಕ್ ಆಗಿರುವ ಸೈಟ್‌ಗಳು ಸೇರಿದಂತೆ, ಇತರ ಕಂಪನಿಗಳು ಇಲ್ಲವೇ ವ್ಯಕ್ತಿಗಳ ಮೂಲಕ ಒದಗಿಸಲಾಗುವ ಸೇವೆಗಳಿಗೆ ನಮ್ಮ ಗೌಪ್ಯತಾ ನೀತಿಯು ಅನ್ವಯಿಸುವುದಿಲ್ಲ. ನಮ್ಮ ಸೇವೆಗಳನ್ನು ಜಾಹೀರಾತು ಗೊಳಿಸುವ ಮತ್ತು ಸಂಬಂಧಿಸಿರುವ ಜಾಹೀರಾತುಗಳನ್ನು ಒದಗಿಸಲು ಮತ್ತು ಪೂರೈಸಲು ಕುಕೀಗಳು, ಪಿಕ್ಸೆಲ್ ಟ್ಯಾಗ್‌ಗಳು ಹಾಗೂ ಇತರ ತಂತ್ರಜ್ಞಾನಗಳನ್ನು ಬಳಸುವಂತಹ ಇತರ ಕಂಪನಿಗಳ ಹಾಗೂ ಸಂಸ್ಥೆಗಳ ಮಾಹಿತಿಯ ಅಭ್ಯಾಸಗಳನ್ನು ನಮ್ಮ ಗೌಪ್ಯತೆ ನೀತಿಯು ಒಳಗೊಂಡಿರುವುದಿಲ್ಲ.

ನಿಯಂತ್ರಣ ಪ್ರಾಧಿಕಾರಗಳಿಗೆ ಬದ್ಧವಾಗಿರುತ್ತದೆ ಹಾಗೂ ಸಹಕಾರ ನೀಡುತ್ತದೆ

ಗೌಪ್ಯತೆ ನೀತಿಯೊಂದಿಗಿನ ನಮ್ಮ ಅನುಸರಣೆಯನ್ನು ನಾವು ನಿಯಮಿತವಾಗಿ ಪರಿಶೀಲಿಸುತ್ತೇವೆ. ಅದಲ್ಲದೆ, EU-US ಹಾಗೂ Swiss-US Privacy Shield Frameworks ಸೇರಿದಂತೆ ನಾವು ಹಲವಾರು ಸ್ವಯಂ ನಿಯಂತ್ರಣ ಚೌಕಟ್ಟುಗಳನ್ನು ಕಡ್ಡಾಯವಾಗಿ ಪಾಲಿಸುತ್ತೇವೆ. ನಾವು ಔಪಚಾರಿಕ ಲಿಖಿತ ದೂರುಗಳನ್ನು ಸ್ವೀಕರಿಸಿದರೆ, ಅದನ್ನು ಅನುಸರಿಸುವ ಸಲುವಾಗಿ ನಾವು ದೂರು ನೀಡಿದ ವ್ಯಕ್ತಿಯನ್ನು ಸಂಪರ್ಕಿಸುತ್ತೇವೆ. ವೈಯಕ್ತಿಕ ಡೇಟಾ ವರ್ಗಾವಣೆಗೆ ಸಂಬಂಧಿಸಿದ ದೂರುಗಳನ್ನು ನಾವು ಬಳಕೆದಾರರೊಂದಿಗೆ ನೇರವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗದ ಸಂದರ್ಭಗಳಲ್ಲಿ, ಸ್ಥಳೀಯ ಡೇಟಾ ಸಂರಕ್ಷಣೆ ಪ್ರಾಧಿಕಾರಗಳೂ ಸೇರಿದಂತೆ ಸೂಕ್ತವಾದ ನಿಯಂತ್ರಣ ಪ್ರಾಧಿಕಾರಗಳ ಜೊತೆಗೆ ನಾವು ಕಾರ್ಯನಿರ್ವಹಿಸುತ್ತೇವೆ.

ಬದಲಾವಣೆಗಳು

ನಮ್ಮ ಗೌಪ್ಯತೆ ನೀತಿ ಕಾಲಕಾಲಕ್ಕೆ ಬದಲಾಗಬಹುದು. ನಾವು ನಿಮ್ಮ ಸ್ಪಷ್ಟ ಸಮ್ಮತಿ ಇಲ್ಲದೆಯೇ, ಈ ಗೌಪ್ಯತಾ ನೀತಿಯ ಅಡಿಯಲ್ಲಿ ನಿಮ್ಮ ಹಕ್ಕುಗಳನ್ನು ಮೊಟಕುಗೊಳಿಸುವುದಿಲ್ಲ. ನಾವು ಈ ಪುಟದಲ್ಲಿ ಯಾವುದೇ ಗೌಪ್ಯತೆ ನೀತಿಯ ಬದಲಾವಣೆಗಳನ್ನು ಪೋಸ್ಟ್ ಮಾಡುತ್ತೇವೆ ಮತ್ತು ಬದಲಾವಣೆಗಳು ಅರ್ಥಪೂರ್ಣವಾಗಿದ್ದರೆ, ನಾವು ಇನ್ನಷ್ಟು ಸೂಕ್ತವಾದ ಪ್ರಕಟಣೆಯನ್ನು ಒದಗಿಸುತ್ತೇವೆ (ನಿರ್ದಿಷ್ಟ ಸೇವೆಗಳು, ಗೌಪ್ಯತಾ ನೀತಿ ಬದಲಾವಣೆಗಳ ಇಮೇಲ್ ಅಧಿಸೂಚನೆ). ನಿಮ್ಮ ವಿಮರ್ಶೆಗಾಗಿ ಈ ಗೌಪ್ಯತಾ ನೀತಿಯ ಪ್ರಾಶಸ್ತ್ಯದ ಆವೃತ್ತಿಗಳನ್ನು ಒಂದು ಆರ್ಕೈವ್‌ನಲ್ಲಿ ಸಹ ನಾವು ಇರಿಸುತ್ತೇವೆ.

ನಿರ್ದಿಷ್ಟ ಉತ್ಪನ್ನದ ಅಭ್ಯಾಸಗಳು

ನೀವು ಬಳಸಬಹುದಾದ ನಿರ್ದಿಷ್ಟ Google ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಗೌಪ್ಯತೆ ಅಭ್ಯಾಸಗಳನ್ನು ಈ ಕೆಳಗಿನ ಸೂಚನೆಗಳು ವಿವರಿಸುತ್ತವೆ:

ನಮ್ಮ ಹೆಚ್ಚು ಜನಪ್ರಿಯ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು Google ಉತ್ಪನ್ನ ಗೌಪ್ಯತೆ ಮಾರ್ಗದರ್ಶಕವನ್ನು ಭೇಟಿ ನೀಡಬಹುದು.

ಮತ್ತಷ್ಟು ಉಪಯುಕ್ತ ಗೌಪ್ಯತೆ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು Google ನ ನೀತಿಗಳು ಮತ್ತು ತತ್ವಗಳ ಪುಟಗಳ ಮೂಲಕ ಹುಡುಕಬಹುದಾಗಿದೆ, ಅಂದರೆ:

Google Apps
ಪ್ರಮುಖ ಮೆನು